Site icon Vistara News

Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

pesticide everest fish curry masala

ಹೊಸದಿಲ್ಲಿ: ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest) ಫಿಶ್ ಕರಿ ಮಸಾಲಾ (Fish Curry Masala) ಅನ್ನು ಹಿಂಪಡೆಯಲು ಸಿಂಗಾಪುರ (Singapore) ಆದೇಶಿಸಿದೆ. ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ (Pesticide) ಎಥಿಲೀನ್ ಆಕ್ಸೈಡ್ (Ethylene oxide) ಇದೆ ಎಂದು ಅದು ಆರೋಪಿಸಿದೆ.

ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು SFA ಹೇಳಿದೆ.

“ಸಿಂಗಾಪುರದ ಆಹಾರ ನಿಯಮಗಳ ಅಡಿಯಲ್ಲಿ, ಎಥಿಲೀನ್ ಆಕ್ಸೈಡ್ ಅನ್ನು ಮಸಾಲೆಗಳ ಸ್ಟೆರಿಲೈಸೇಶನ್‌ನಲ್ಲಿ ಮಾತ್ರ ಬಳಸಲು ಅನುಮತಿಸಲಾಗಿದೆ” ಎಂದು SFA ಹೇಳಿದೆ. ಕಡಿಮೆ ಮಟ್ಟದ ಎಥಿಲೀನ್ ಆಕ್ಸೈಡ್‌ ಸೇರಿರುವ ಆಹಾರವನ್ನು ಸೇವಿಸುವುದರಿಂದ ತಕ್ಷಣದ ಅಪಾಯವಿಲ್ಲ. ಆದರೆ ಇದರ ದೀರ್ಘಕಾಲಿಕ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸಂಸ್ಥೆ ಹೇಳಿದೆ.

“ಈ ಆಹಾರ ಸೇವನೆಯಿಂದ ತಕ್ಷಣದ ಅಪಾಯವಿಲ್ಲ. ಆದರೆ ಈ ಮಸಾಲೆಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು” ಎಂದು ಅದು ಹೇಳಿದೆ. “ಸಂಬಂಧಿತ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಅದನ್ನು ಸೇವಿಸದಂತೆ ಸೂಚಿಸಲಾಗಿದೆ. ಈ ಉತ್ಪನ್ನಗಳನ್ನು ಸೇವಿಸಿದವರು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಗ್ರಾಹಕರು ವಿಚಾರಣೆಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದು” ಎಂದು SFA ತಿಳಿಸಿದೆ.

ಮಸಾಲೆ ಉತ್ಪಾದನೆ ಸಂಸ್ಥೆ ಎವರೆಸ್ಟ್ ಈ ಬೆಳವಣಿಗೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Exit mobile version