Site icon Vistara News

Six Legged Calf: ಬಹಳ ದಿನ ಬದುಕಲ್ಲ ಎಂದಿದ್ದ ಆರು ಕಾಲಿನ ಕರು, ಈಗ ದಷ್ಟಪುಷ್ಟವಾಗಿದೆ!

Six legged calf defies death and it is too healthy

ನವದೆಹಲಿ: ಕುತ್ತಿಗೆಯಲ್ಲಿ ಜೋಡಿ ಕಾಲುಗಳೊಂದಿಗೆ ಆರು ಕಾಲುಗಳ ಆಕಳು ಕರು (Six Legged Calf) ಈಗ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದೆ. ವರ್ಷದ ಹಿಂದೆ ಜನಿಸಿದ್ದ ಈ ಕರು ಹೆಚ್ಚೆಂದರೆ ಒಂದು ವರ್ಷ ಕೂಡ ಬದುಕಲಾರದು ಎಂದು ಪಶುವೈದ್ಯರು ಹೇಳಿದ್ದರು(veterinary doctors). ಆದರೆ, ಈ ಕರು ದೊಡ್ಡದಾಗಿದ್ದು, ಆರೋಗ್ಯವಾಗಿದೆ! ಕಳೆದ ವರ್ಷ ಬ್ರೆಜಿಲ್‌ನ (Brazil) ಎಡಿಯಾದಲ್ಲಿ ರೈತ ಡಿವಿನೋ ಪಾಲೊ ಅವರ ಹೊಲದಲ್ಲಿ ಕರು ಗಂಬಿಯಾರಾ ಜನಿಸಿತ್ತು.

ರೈತ ಪೌಲೋ ತನ್ನ ಹಸುವಿನ ಕರುವೊಂದು ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದಾಗ ಅದರ ಕುತ್ತಿಗೆಯಿಂದ ಕುತ್ತಿಗೆಯಿಂದಲೂ ಮತ್ತೊಂದು ಜೋಡಿ ಕಾಲುಗಳು ಹೊರ ಬರುತ್ತಿರುವುದನ್ನು ಕಂಡರು. ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿದರು. ತಪಾಸಣೆ ನಡೆಸಿದ ವೈದ್ಯರು, ವಿಚಿತ್ರ ಪರಿಸ್ಥಿತಿಯಿಂದಾಗಿ ಈ ಕರು ತುಂಬ ದಿನ ಬದುಕಲಾರದು ಎಂದು ತಿಳಿಸಿದ್ದರು. ಆದರೆ, ಈಗ ಕರು ದೊಡ್ಡದಾಗಿದ್ದು, ಆರೋಗ್ಯವಾಗಿದೆ.

ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ರೈತ ಪೌಲೋ ತಮ್ಮ ಆರು ಕಾಲಿನ ಕರು ಅತ್ಯುತ್ತಮ ಆರೋಗ್ಯ ಸ್ಥಿತಿಯಲ್ಲಿದೆ ಮತ್ತು ಇತರ ಆಕಳುಗಳಂತೆ ಸಾಮಾನ್ಯವಾಗಿದೆ. ಅದಕ್ಕೆ ಗಂಬಿಯಾರಾ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದ್ದರು.

ಈ ಆಕಳಿನ ಸ್ಥಿತಿಯನ್ನು ಪಾಲಿಮೆಲಿಯಾ ಎಂದು ಗುರುತಿಸಲಾಗುತ್ತದೆ ಎಂದು ಫೆಡರಲ್ ಯೂನಿರ್ವಸಿಟಿ ಆಫ್ ಗೋಯಾಸ್(UFG) ಪ್ರೊಫೆಸರ್ ಪಾಲಾ ಜೋಸ್ ಬಾಸ್ಟೋಸ್ ಕ್ವಿರೋಜ್ ಅವರು ಹೇಳಿದ್ದಾರೆ.

ಪಾಲಿಮೆಲಿಯಾವು ಆನುವಂಶಿಕ ರೂಪಾಂತರಗಳಿಂದ ಮತ್ತು ಗರ್ಭಾವಸ್ಥೆಯಲ್ಲಿ ಅವಳಿಗಳ ಅಸಮರ್ಪಕ ಬೆಳವಣಿಗೆಯಿಂದ ಉಂಟಾಗಬಹುದು. ಈ ಕಾರಣಗಳು ಗರ್ಭಾವಸ್ಥೆಯಲ್ಲಿ ಭ್ರೂಣಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ರೋಗಗಳು ಅಥವಾ ಪೌಷ್ಟಿಕಾಂಶದ ಕೊರತೆಗಳೊಂದಿಗೆ ಸಂಬಂಧ ಹೊಂದಿರಬಹುದು ಎಂದು ಅವರು ಊಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Bagalkot News | ನಾಲ್ಕು ಕರುಗಳಿಗೆ ಏಕಕಾಲಕ್ಕೆ ಜನ್ಮ ನೀಡಿದ ನಾಲ್ಕು ವರ್ಷದ ಹಸು

ಗಂಬಿಯಾರಾದ ಗಂಭೀರ ಪ್ರಕರಣವಾಗಿದ್ದರೂ, ಈ ರೀತಿಯ ಉದಾಹರಣೆ ಇದೇ ಮೊದಲಲ್ಲ. 2016ರಲ್ಲಿ ಉತ್ತರ ಪ್ರದೇಶದ ಒಂದು ಹೊಲದಲ್ಲಿ ಒಂದು ಹಸು ಎರಡು ತಲೆಯ ಕರುವಿಗೆ ಜನ್ಮ ನೀಡಿ, ಗಮನ ಸೆಳೆದಿತ್ತು. ಈ ಘಟನೆಯನ್ನು ಅನೇಕರ ಅದ್ಭುತ ಘಟನೆ ಎಂದೂ, ಪವಾಡ ಎಂದೂ ಬಣ್ಣಿಸಿದ್ದರು.

ಒಂದೇ ದೇಹಕ್ಕೆ ಎರಡು ತಲೆಗಳನ್ನು ಹೊಂದಿದ್ದ ಈ ಕರು ಉತ್ತರ ಪ್ರದೇಶದ ಪನ್ನುಗಂಜ್ ಗ್ರಾಮದಲ್ಲಿ ಜನಿಸಿತ್ತು. ಆದರೆ, ಒಂದು ವಾರ ಕಾಲ ಮಾತ್ರವೇ ಅದು ಬದುಕಿತ್ತು. ಆಹಾರ ಸೇವನೆಯೇ ಅದಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿತು ಮತ್ತು ನಿಧಾನವಾಗಿ ಅದರ ಆರೋಗ್ಯ ಹಾಳಾಗಿ ತೊಡಗಿತು. ಅಂತಿಮವಾಗಿ ಕೊನೆಯುಸಿರು ಎಳೆಯಿತು. ಬ್ರೆಜಿಲ್‌ನ ಗಂಬಿಯಾರಾ ಪ್ರಕರಣದಲ್ಲೂ ಇದೇ ರೀತಿಯ ಅಂತ್ಯವನ್ನು ನಿರೀಕ್ಷಿಸಲಾಗಿತ್ತಾದರೂ, ಅದು ವರ್ಷದ ಬಳಿಕವೂ ಈಗ ಆರೋಗ್ಯವಾಗಿದೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version