Site icon Vistara News

Snake Bite: ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

Snake Bite


ಹಾವು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿಗಳಲ್ಲಿ ಒಂದಾಗಿದೆ. ಹಾಗಾಗಿ ಹಾವು ಕಚ್ಚಿದವರು ಚಿಕಿತ್ಸೆ ಪಡೆಯದಿದ್ದರೆ ಸಾವನಪ್ಪುವುದಂತೂ ಖಂಡಿತ. ಅದರಲ್ಲೂ ಈ ಸರ್ಪಗಳಲ್ಲಿ ಕಾಳಿಂಗ ಸರ್ಪವು ಅತ್ಯಂತ ಭಯಾನಕ ವಿಷವನ್ನು ಹೊಂದಿರುವಂತ ಹಾವಾಗಿದೆ. ಅದರ ವಿಷದಲ್ಲಿ ಒಂದು ಹನಿ ಮನುಷ್ಯ ದೇಹಕ್ಕೆ ತಗುಲಿದರೆ ನಿಮಿಷದೊಳಗೆ ಸಾಯಬಹುದು. ಅಂತಹದರಲ್ಲಿ ಇಂತಹ ಭಯಾನಕ ಕಾಳಿಂಗ ಸರ್ಪ ಹಾವು (Snake Bite) ಹಿಡಿಯುವವನನ್ನು ಕಚ್ಚಿ ನಂತರ ತಾನೇ ಜೀವ ಬಿಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ ಬೆಳಕಿಗೆ ಬಂದಿದೆ.

ಹಾವು ಕಚ್ಚಿದ ನಂತರ ಹಾವು ಹಿಡಿಯುವವನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಅವನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ನರಯವಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನೆಯ ಬಗ್ಗೆ ತಿಳಿದು ಹಾವು ಹಿಡಿಯುವವರನ್ನು ಸಂಪರ್ಕಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನಮ್ಮ ಹಿರಿಯರು ಹೇಳುವ ಪ್ರಕಾರ ಕಾಳಿಂಗ ಸರ್ಪ ಎಷ್ಟು ವಿಷಕಾರಿ ಎಂದರೆ ಅದು ಕಚ್ಚಿದರೆ ಬಲಿಪಶುವಿಗೆ ಸಾಯುವ ಮೊದಲು ನೀರು ಕೇಳುವ ಅವಕಾಶವೂ ಇರುವುದಿಲ್ಲ ಎನ್ನುತ್ತಾರೆ. ಆದರೆ ಇಲ್ಲಿ ನಡೆದ ಘಟನೆ ಮಾತ್ರ ಬಹಳ ಆಶ್ಚರ್ಯಕರವಾಗಿದೆ. ಕಾಳಿಂಗ ಸರ್ಪ ಮನುಷ್ಯನಿಗೆ ಕಚ್ಚಿದ ನಂತರ ತಾನೇ ಸಾವನಪ್ಪಿದೆ. ಈ ಘಟನೆ ಅಲ್ಲಿನ ಸಮುದಾಯದ ಸದಸ್ಯರಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ವರದಿಗಳ ಪ್ರಕಾರ, ನಾರಾಯಣಾವಳಿಯ ಸಾಗರ್-ಖುರೈ ರಸ್ತೆಯ ತಡೆಗೋಡೆಯ ಬಳಿ ಜನರು ಈ ಕಾಳಿಂಗ ಸರ್ಪವನ್ನು ನೋಡಿದ್ದಾರೆ, ನಂತರ ಅವರು ತಕ್ಷಣ ಚಂದ್ರಕುಮಾರ್ ಅಹಿರ್ವಾರ್ ಎಂಬ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ. ಅವನು ಸ್ಥಳಕ್ಕೆ ಬಂದು 5 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾನೆ. ಆಗ ಕೋಪಗೊಂಡ ಹಾವು ಚಂದ್ರಕುಮಾರನ ಎರಡೂ ಕೈ ಹೆಬ್ಬೆರಳುಗಳನ್ನು ಕಚ್ಚಿತು. ಹಾಗಾಗಿ ಚಂದ್ರಕುಮಾರ್ ಭಾಗ್ಯೋದಯ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು.

ಇದನ್ನೂ ಓದಿ: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

ಅದೃಷ್ಟವಶಾತ್, ಆತ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿ ಅವನನ್ನು ಕಚ್ಚಿದ ಅದೇ ಹಾವು ಸತ್ತು ಹೋಗಿತ್ತು. ಕಾರಣವೆನೆಂದರೆ ಅವನು ಹಾವನ್ನು ಸೆರೆ ಹಿಡಿದು ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿ ಹಾಕಿದ್ದ. ಅಲ್ಲಿ ಗಾಳಿಯಾಡಲು ಯಾವುದೇ ರಂಧ್ರಗಳಿರಲಿಲ್ಲ. ಇದರ ಪರಿಣಾಮವಾಗಿ ಹಾವು ಉಸಿರಾಡಲು ಸಾಧ್ಯವಾಗದೆ ಪ್ರಾಣ ಬಿಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಮನುಷ್ಯರ ವಿಷ ಕೆಲವೊಮ್ಮೆ ಹಾವಿನ ವಿಷಕ್ಕಿಂತ ಅಪಾಯಕಾರಿ. ಹಾವಿನ ಸಾವಿಗೆ ಇದೂ ಕಾರಣ ಇರಬಹುದು ಎಂದೂ ಸ್ಥಳೀಯ ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ!

Exit mobile version