Site icon Vistara News

Viral Video: ಸದ್ದು ಮಾಡಬೇಡಿ… ಹುಲಿಗಳು ನಿದ್ದೆ ಮಾಡುತ್ತಿವೆ!

Tiger family taking a nap and Viral Video

ನವದೆಹಲಿ: ಕಾಡಿನಲ್ಲಿ ನಾಲ್ಕೈದು ಹುಲಿಗಳ ಕಟುಂಬವೊಂದು (Tiger Family) ಆರಾಮವಾಗಿ ನಿದ್ದೆ ಮಾಡುತ್ತಿರುವ (Taking a Nap) ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ನಿರ್ದಿಷ್ಟ ದಿನಾಂಕ ಗೊತ್ತಿಲ್ಲದ ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಮೊದಲಿಗೆ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಸಾಕಷ್ಟು ಷೇರ್ ಕಂಡಿರುವ ಈ ವಿಡಿಯೋ ಫುಲ್ ವೈರಲ್ (Viral Video) ಆಗಿದೆ.

ಪ್ರೀತಿಯ ಕುಟುಂಬವು (ಹುಲಿ) ನಮ್ಮ ಪ್ರಪಂಚದ ಕ್ಯಾನ್ವಾಸ್‌ಗೆ ಬಣ್ಣವನ್ನು ಸೇರಿಸುತ್ತದೆ (ನಮ್ಮ ಕಾಡಿನ ನೈಜ ಅನುಭವವನ್ನು ಹೊಂದಲು ಗಮನ ಇರಲಿ) ಎಂದು ಸುಶಾಂತ್ ನಂದಾ ಅವರು ವಿಡಿಯೋ ಪೋಸ್ಟ್‌ನೊಂದಿಗೆ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ರೀಪೋಸ್ಟ್ ಮಾಡಿರುವ ಐಎಫ್ಎಸ್ ಅಧಿಕಾರಿ ರಮೇಶ್ ಪಾಂಡೆ ಅವರು, ಇದು ನಿದ್ದೆ ಮಾಡುವ ಸಮಯ. ತಾಯಿ ಹುಲಿಗೆ ಮರಿಗಳನ್ನು ಸಾಕುವುದು ಕಷ್ಟದ ಕೆಲಸ. ಅವಳು ಕೇವಲ ಮತ್ತು ರಹಸ್ಯವಾಗಿ ಮರಿಗಳನ್ನು ನೋಡಿಕೊಳ್ಳುತ್ತಾಳೆ ಮತ್ತು ಬದುಕುಳಿಯುವ ಮತ್ತು ಬೇಟೆಯಾಡುವ ತಂತ್ರಗಳನ್ನು ಕಲಿಸುತ್ತಾಳೆ ಎಂದು ಬರೆದುಕೊಂಡಿದ್ದಾರೆ. ಸಾಮಾನ್ಯವಾಗಿ ಹುಲಿ ಮರಿಗಳು ಎರಡು ವರ್ಷಗಳಾಗೋವರೆಗೆ ತಾಯಿ ಹುಲಿಯ ಜತೆಗೇ ಇರುತ್ತವೆ.

ಈ ಸುದ್ದಿಯನ್ನೂ ಓದಿ: Viral Video: ಅಭ್ಯಾಸದ ವೇಳೆ ನಾಯಿ ಮರಿಯೊಂದಿಗೆ ಆಟವಾಡಿದ ವಿರಾಟ್​ ಕೊಹ್ಲಿ

ಇದೇ ರೀತಿಯ ವಿಡಿಯೊವೊಂದು 2020 ಏಪ್ರಿಲ್‌ ತಿಂಗಳಲ್ಲಿ ವರೈಲ್ ಆಗಿತ್ತು. ಅರಣ್ಯ ಅಧಿಕಾರಿ ರವೀಂದ್ರ ಮಣಿ ತ್ರಿಪಾಠಿ ಅವರು, ಅನ್‌ಡೇಟೆಡ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಎರಡು ಹುಲಿಗಳು ರಸ್ತೆ ಮಧ್ಯೆ ಕುಳಿತುಕೊಂಡಿದ್ದವು ಮತ್ತು ಇನ್ನೆರಡು ಹುಲಿಗಳು ಆರಾಮಾವಾಗಿ ಅಡ್ಡಾಡಿಕೊಂಡಿರುವುದನ್ನು ಕಾಣಬಹುದಿತ್ತು. ಮಧ್ಯ ಪ್ರದೇಶದ ಸತಪುಡಾ ಅರಣ್ಯದ ರಸ್ತೆ ಬದಿಯಲ್ಲಿ ಹುಲಿಗಳು ಕಾಣಿಸಿಕೊಂಡಿವೆ. ಇದೊಂದು ಉತ್ತಮ ಕುಟುಂಬದ ಸಂಬಂಧದ ದೃಶ್ಯ ಎಂದು ಅವರು ಬರೆದುಕೊಂಡಿದ್ದರು.

2021ರ ಜೂನ್ ತಿಂಗಳಲ್ಲಿ ಇದೇ ರೀತಿಯ ವಿಡಿಯೋ ವೈರಲ್ ಆಗಿತ್ತು. ಚೀನಾದ ಮೀಸಲು ಅರಣ್ಯದಿಂದ ತಪ್ಪಿಸಿಕೊಂಡು ಬಂದಿದ್ದ ಆನೆಯೊಂದು ಕಾಡಿನ ಮಧ್ಯೆ ಗಡದ್ದಾಗಿ ನಿದ್ದೆ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿತ್ತು. ಡ್ರೋನ್ ಮೂಲಕ ಈ ವಿಡಿಯೋವನ್ನು ಶೂಟ್ ಮಾಡಲಾಗಿತ್ತು.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version