Site icon Vistara News

Twins Died: ವೈದ್ಯಕೀಯ ಲೆಕ್ಕಾಚಾರ ಮೀರಿ ಸುದೀರ್ಘ ಕಾಲ ಬದುಕಿದ್ದ ಸಂಯಾಮಿ ಅವಳಿ ಇನ್ನಿಲ್ಲ!

twins died

ಬೆಂಗಳೂರು: ಪ್ರಪಂಚದಲ್ಲಿ ಯಾವುದೋ ಒಂದು ಶಕ್ತಿ ಇದೆ ಎಂಬುದನ್ನು ಹೆಚ್ಚಿನವರು ನಂಬುತ್ತಾರೆ. ಹಾಗೇ ಎಲ್ಲವೂ ನಾವೆಂದುಕೊಂಡ ಹಾಗೇ ಆಗುವುದಿಲ್ಲ ಎಂಬುದನ್ನು ಕೆಲವೊಂದು ಸನ್ನಿವೇಶಗಳು ತೋರಿಸುತ್ತದೆ. ಇನ್ನು ವೈದ್ಯಕೀಯ ವಲಯದಲ್ಲಿ ಹಲವಾರು ಸವಾಲುಗಳು, ಆಶ್ಚರ್ಯಕವಾದ ಘಟನೆಗಳು ನಡೆಯುತ್ತಲೇ ಇರುತ್ತವೆ. ತಲೆ ಅಂಟಿಕೊಂಡಿರುವ ಮಕ್ಕಳು, ಒಂದೇ ಕಾಲು ಎರಡು ದೇಹವಿರುವ ಮಕ್ಕಳು ಹೀಗೆ ಏನೇನೋ ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಅಂಥಹದೊಂದು ಜೋಡಿಯಲ್ಲಿ ಪ್ರಸಿದ್ಧರಾಗಿದ್ದವರು ಲೋರಿ ಮತ್ತು ಜಾರ್ಜ್ ಶಾಪೆಲ್ (Twins Died). ವೈದ್ಯಕೀಯ ಲೋಕವೇ ಬೆರಗಾಗುವಂತೆ ಮಾಡಿದ ಸಂಯಾಮಿ ಅವಳಿಗಳಾದ ಲೋರಿ ಮತ್ತು ಜಾರ್ಜ್ ಶಾಪೆಲ್ ನಿಧನರಾಗಿದ್ದಾರೆ. ಇವರಿಗೆ 62 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

ಸಾವಿಗೆ ಕಾರಣವೇನು?

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಲ್ಲಿ  ಅತ್ಯಂತ ಹಳೆಯ ಜೀವಂತ ಸಂಯಾಮಿ ಅವಳಿಗಳ ಪಟ್ಟಿಗೆ ಸೇರಿದ  ಲೋರಿ ಮತ್ತು ಜಾರ್ಜ್ ಶಾಪೆಲ್ ಏಪ್ರಿಲ್ 7ರಂದು ಪೆನ್ಸಿಲ್ವೇನಿಯಾದ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ನಿಧನರಾದರು ಎಂಬುದಾಗಿ ಹ್ಯಾಂಬರ್ಗ್ ನ ಲೀಬೆನ್ಸ್ ಪರ್ಗರ್  ಫ್ಯೂನರಲ್ ಹೋಮ್ಸ್ ನಲ್ಲಿ ಪ್ರಕಟಿಸಲಾದ ಶ್ರದ್ದಾಂಜಲಿ ಪೋಸ್ಟ್ ನಿಂದ ತಿಳಿದುಬಂದಿದೆ. ಆದರೆ ಇವರ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಲೋರಿ ಮತ್ತು ಜಾರ್ಜ್ ಶಾಪೆಲ್ ಸೆಪ್ಟೆಂಬರ್ 18, 1961 ರಲ್ಲಿ ಪೆನ್ಸಿಲ್ವೇನಿಯಾದ ವೆಸ್ಟ್ ರೀಡಿಂಗ್ ನಲ್ಲಿ ಭಾಗಶಃ ತಲೆಬುರುಡೆಗಳು ಒಂದಕ್ಕೊಂದು ಸಂಯೋಜನೆಗೊಂಡ ಸ್ಥಿತಿಯಲ್ಲಿ ಜನಿಸಿದರು. ಇವರು ವಿಭಿನ್ನ ಮೆದುಳುಗಳನ್ನು ಹೊಂದಿದ್ದರೂ ಕೂಡ  ಪ್ರಮುಖ ರಕ್ತನಾಳಗಳು ಮತ್ತು 30%ನಷ್ಟು ಮೆದುಳು ಭಾಗವನ್ನು ಹಂಚಿಕೊಂಡಿದ್ದರು ಎನ್ನಲಾಗಿದೆ.

ಇವರು ಪಬ್ಲಿಕ್ ಪ್ರೌಢಶಾಲೆಯಿಂದ ಪದವಿ ಪಡೆದು,  ಕಾಲೇಜು ಶಿಕ್ಷಣವನ್ನು ಮುಗಿಸಿದ್ದರು. ಲೋರಿ ಹಲವಾರು ವರ್ಷಗಳ ಕಾಲ ಆಸ್ಪತ್ರೆಯ ಲಾಂಡ್ರಿಯಲ್ಲಿ ಕೆಲಸ ಮಾಡಿದ್ದಾರೆ. ಹಾಗೇ ಇವರು “ಟ್ರೋಪಿ ವಿಜೇತ ಟೆನ್ ಪಿನ್ ಬೌಲರ್ ಆಗಿದ್ದರು ಎನ್ನಲಾಗಿದೆ. ಜಾರ್ಜ್ ಗಾಯಕನಾಗಿದ್ದು, ಜರ್ಮನಿ, ಜಪಾನ್ ಸೇರಿದಂತೆ ಹಲವಾರು ದೇಶಗಳಿಗೆ ಭೇಟಿ ನೀಡುವುದರ ಮೂಲಕ ಯಶಸ್ವಿ ವೃತ್ತಿ ಜೀವನವನ್ನು ಆನಂದಿಸಿದ್ದಾರೆ ಎನ್ನಲಾಗಿದೆ.

2007ರಲ್ಲಿ ಜಾರ್ಜ್ ಟ್ರಾನ್ಸ್ ಜಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಲೋರಿಯು ಒಮ್ಮೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅವರ ವರ ವಾಹನ ಅಪಘಾತದಲ್ಲಿ ಸಾವಿಗೀಡಾದರು ಎನ್ನಲಾಗಿದೆ.

ಇದನ್ನೂ ಓದಿ:Ram Charan: ನಟ ರಾಮ್‌ಚರಣ್‌ಗೆ ಗೌರವ ಡಾಕ್ಟರೇಟ್​: ಫ್ಯಾನ್ಸ್‌ ಫುಲ್‌ ಖುಷ್‌!

ಈ ಸಂಯಾಮಿ ಅವಳಿಗಳು 30 ವರ್ಷಕ್ಕಿಂತ ಹೆಚ್ಚು ಕಾಲ ಬದುಕುವುದಿಲ್ಲ ಎಂಬ ವೈದ್ಯಕೀಯ ಲೆಕ್ಕಾಚಾರ ಮೀರಿ‌ ಇವರು ಬದುಕಿದ್ದರು. ತಲೆ ಅಂಟಿಕೊಂಡಿದ್ದರೂ ಕೂಡ ಮಾನಸಿಕವಾಗಿ ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ಜೀವನ ನಡೆಸುವುದರ ಮೂಲಕ ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದರು.

Exit mobile version