ಹೊಸ ದಿಲ್ಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಅಂತಿಮ ಫಲಿತಾಂಶದಲ್ಲಿ ಎಡವಟ್ಟು ಮಾಡಿಕೊಂಡಿದೆ. ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳಿಗೆ ಒಂದೇ ರೋಲ್ ನಂಬರ್ ನೀಡಿದ್ದಲ್ಲದೆ, ಒಂದೇ ಫಲಿತಾಂಶವನ್ನೂ ನೀಡಿದೆ. ಇಬ್ಬರೂ ಈಗ 44ನೇ ರ‍್ಯಾಂಕ್‌ಗೆ ಹಕ್ಕು ಸಾಧಿಸುತ್ತಿದ್ದಾರೆ.
ಆದರೆ ಇಬ್ಬರೂ ಇರುವುದು ಬೇರೆ ರಾಜ್ಯಗಳಲ್ಲಿ, 1,324 ಕಿಮೀ ಅಂತರದಲ್ಲಿ. ಇಬ್ಬರ ಹೆಸರೂ ತುಷಾರ್ ಕುಮಾರ್. ಒಬ್ಬಾತ ಹರಿಯಾಣದ ರೇವಾರಿಯವನು. ಇನ್ನೊಬ್ಬರು ಬಿಹಾರದ ಭಾಗಲ್ಪುರದವನು. ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಇದು ಬಹಿರಂಗವಾಗಿದೆ.
ಹೊಸ ದಿಲ್ಲಿಯ ಯುಪಿಎಸ್‌ಸಿ ಕಚೇರಿಯಲ್ಲಿ ಇಬ್ಬರನ್ನೂ ಏಕಕಾಲಕ್ಕೆ ಪರ್ಸನಾಲಿಟಿ ಟೆಸ್ಟ್‌ಗೆ ಕರೆಯಲಾಗಿತ್ತು. ಆಗ ಈ ವಿಚಾರ ಬೆಳಕಿಗೆ ಬಂದಿದೆ. ಈ ಎಡವಟ್ಟು ಹೇಗಾಯಿತು ಎಂದು ಯುಪಿಎಸ್‌ಸಿ ಪರಿಶೀಲಿಸುತ್ತಿದೆ. ಬಿಹಾರದ ತುಷಾರ್ ಕುಮಾರ್ ಇದೀಗ ಬಿಹಾರ ಕಮಿಷನರ್ ಬಳಿ, ಹರಿಯಾಣದ ತುಷಾರ್ ಕುಮಾರ್ ನಕಲಿ ಎಂದು ದೂರು ನೀಡಿದ್ದಾನೆ. ಹರಿಯಾಣದ ತುಷಾರ್ ಕುಮಾರ್ ಕೂಡ ತಾನೇ ಅಸಲಿ ಎಂದು ಹೇಳಿಕೊಂಡಿದ್ದಾನೆ.
ಯುಪಿಎಸ್‌ಸಿ ಪ್ರಮಾದಪೂರ್ವಕ ಇಬ್ಬರಿಗೂ ಒಂದೇ ರೋಲ್ ನಂಬರ್ ನೀಡಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಹರಿಯಾಣದ ತುಷಾರ್ ಕುಮಾರ್, ದಾಖಲೆಗಳನ್ನು ಫೋರ್ಜರಿ ಮಾಡಿದ್ದಾನೆ ಎಂದು ಬಿಹಾರದ ತುಷಾರ್ ಕುಮಾರ್ ಆರೋಪಿಸಿದ್ದಾನೆ.