Site icon Vistara News

Uorfi Javed : ಟೊಮೆಟೋ ಸಿಗದ ಕಾಲದಲ್ಲಿ ಅದನ್ನೇ ಓಲೆ ಮಾಡಿಕೊಂಡ ಉರ್ಫಿ! ನೆಟ್ಟಿಗರು ಏನಂದಿದ್ದಾರೆ ನೋಡಿ!

Uorfi Javed tomato video

ಮುಂಬೈ: ಉರ್ಫಿ ಜಾವೇದ್‌ (Uorfi Javed) ಬಾಲಿವುಡ್‌ ಕಿರುತೆರೆ ನಟಿಯಾದರೂ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ದೇಶ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಬಿಗ್‌ ಬಾಸ್‌ ಒಟಿಟಿಯ ಮಾಜಿ ಸ್ಪರ್ಧಿಯಾಗಿರುವ ಉರ್ಫಿ ಚಿತ್ರ ವಿಚಿತ್ರ ರೀತಿಯಲ್ಲಿ ಉಡುಗೆ ವಿನ್ಯಾಸ ಮಾಡಿಕೊಂಡು ಅದನ್ನು ತಾವೇ ತೊಟ್ಟುಕೊಂಡು ಮೆರೆಯುವುದರಲ್ಲಿ ಫೇಮಸ್‌. ಇದೀಗ ಅವರು ಮಾರುಕಟ್ಟೆಯಲ್ಲಿ ಅತ್ಯಂತ ಬೆಲೆ ಬಾಳುವ ತರಕಾರಿಯನ್ನೇ ತಮ್ಮ ಕಿವಿಯ ಓಲೆ ಮಾಡಿಕೊಂಡಿದ್ದಾರೆ.

ಹೌದು. ಉರ್ಫಿ ಅವರು ಟೊಮೆಟೊ ಹಣ್ಣನ್ನೇ ತಮ್ಮ ಕಿವಿಯ ಓಲೆ ಮಾಡಿಕೊಂಡಿದ್ದಾರೆ. ಅದಲ್ಲದೆ ಟೊಮೆಟೊ ಹಿಡಿದು ಕ್ಯಾಮೆರಾಕ್ಕೆ ಫೋಸ್‌ ಕೊಟ್ಟಿದ್ದಾರೆ ಕೂಡ. ಟೊಮೆಟೊ ಅನ್ನು ತಿನ್ನುವ ವಿಡಿಯೊವನ್ನೂ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಆರ್‌ ಮಾಧವನ್‌ ಅವರು ಟೊಮೆಟೊ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ಟೊಮೆಟೊ ತಿನ್ನುತ್ತಿದ್ದೇನೆ ಎಂದಿದ್ದ ಫೋಟೋ ಮತ್ತು ಮಹಾರಾಷ್ಟ್ರದ ರೈತನೊಬ್ಬ ಟೊಮೆಟೊ ಮಾರಿ ಒಂದೇ ತಿಂಗಳಲ್ಲಿ ಕೋಟ್ಯಧಿಪತಿಯಾದ ಸುದ್ದಿಯ ಫೋಟೋವನ್ನೂ ನಟಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral News : 5 ಕೋಟಿ ರೂಪಾಯಿ ಮೌಲ್ಯದ ರೈಲು ಎಂಜಿನ್​ ಅನ್ನೇ ಕದ್ದೊಯ್ದ ಕಳ್ಳರು!
ಉರ್ಫಿ ತಮ್ಮ ಈ ಪೋಸ್ಟ್‌ಗೆ “ಟೊಮೆಟೋಗಳು ಹೊಸ ಬಂಗಾರ” ಎಂದು ಬರೆದುಕೊಂಡಿದ್ದಾರೆ. ನಟಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಕೂಡ ವಿಚಿತ್ರವಾದ ಉಡುಗೆಯನ್ನೇ ತೊಟ್ಟಿದ್ದಾರೆ. ಅರ್ಧ ಎದೆಯನ್ನು ಮಾತ್ರವೇ ಮುಚ್ಚುವಂತಹ ಟಾಪ್‌ ತೊಟ್ಟಿದ್ದು, ಎಡಗೈನಿಂದ ಇನ್ನರ್ಧ ಎದೆಯನ್ನು ಮುಚ್ಚಿಕೊಂಡಿದ್ದಾರೆ. ಕಪ್ಪು ಬಣ್ಣದ ಶಾರ್ಟ್‌ ಸ್ಕರ್ಟ್‌ ಅನ್ನು ಧರಿಸಿದ್ದಾರೆ.


ಉರ್ಫಿ ಈ ಪೋಸ್ಟ್‌ ಅನ್ನು ಮಂಗಳವಾರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 1.26 ಲಕ್ಷಕ್ಕೂ ಅಧಿಕ ಮಂದಿ ಪೋಸ್ಟ್‌ಗೆ ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ಈ ಪೋಸ್ಟ್‌ ಅನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ.

ಇದನ್ನೂ ಓದಿ: Video Viral : ರಾಯಚೂರು YTPS ಬಳಿ ಕಂಡ ಅನಕೊಂಡ ಮಾದರಿಯ ಹೆಬ್ಬಾವು!
ಈ ಪೋಸ್ಟ್‌ ಬಗ್ಗೆ ನೆಟ್ಟಿಗರು ಕಿಡಿ ಕಾರಲಾರಂಭಿಸಿದ್ದಾರೆ. ನಿಮಗೆ ಮೈ ತುಂಬ ಬಟ್ಟೆ ಹಾಕಿಕೊಳ್ಳಲು ಏನು ಸಮಸ್ಯೆ ಎಂದು ಪ್ರಶ್ನಿಸಲಾರಂಭಿಸಿದ್ದಾರೆ. “ಒಂದು ಕೆಲಸ ಮಾಡಿ. ನಿಮ್ಮ ದೇಹದಲ್ಲಿ ಮುಚ್ಚಿಕೊಳ್ಳಬೇಕು ಎಂದು ನಿಮಗೆನಿಸುವ ಅಂಗವನ್ನು ಆಪರೇಷನ್‌ ಮಾಡಿಸಿ ತೆಗೆಸಿಬಿಡಿ. ಆಗ ಬಟ್ಟೆಯೂ ಬೇಡ ಈ ರೀತಿ ಕೈ ಇಟ್ಟುಕೊಳ್ಳುವ ಸಮಸ್ಯೆಯೂ ಇರುವುದಿಲ್ಲ” ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಇನ್‌ಸ್ಟಾಗ್ರಾಂನಲ್ಲಿ ಡಿಸ್‌ಲೈಕ್‌ ಬಟನ್‌ ಇಲ್ಲ, ಇದ್ದಿದ್ದರೆ ಅದನ್ನೇ ಒತ್ತುತ್ತಿದ್ದೆವು ಎಂದು ಅನೇಕರು ಕಮೆಂಟ್‌ನಲ್ಲು ಹೇಳಿದ್ದಾರೆ.

Exit mobile version