Uorfi Javed : ಟೊಮೆಟೋ ಸಿಗದ ಕಾಲದಲ್ಲಿ ಅದನ್ನೇ ಓಲೆ ಮಾಡಿಕೊಂಡ ಉರ್ಫಿ! ನೆಟ್ಟಿಗರು ಏನಂದಿದ್ದಾರೆ ನೋಡಿ! - Vistara News

ವೈರಲ್ ನ್ಯೂಸ್

Uorfi Javed : ಟೊಮೆಟೋ ಸಿಗದ ಕಾಲದಲ್ಲಿ ಅದನ್ನೇ ಓಲೆ ಮಾಡಿಕೊಂಡ ಉರ್ಫಿ! ನೆಟ್ಟಿಗರು ಏನಂದಿದ್ದಾರೆ ನೋಡಿ!

ಬಾಲಿವುಡ್‌ ಕಿರುತೆರೆ ನಟಿ ಉರ್ಫಿ ಜಾವೇದ್‌ (Uorfi Javed) ಅವರು ಟೊಮೆಟೊ ಅನ್ನೇ ಕಿವಿಯ ಓಲೆಯಾಗಿ ಧರಿಸಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅದರಲ್ಲಿನ ಅವರ ಉಡುಗೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

VISTARANEWS.COM


on

Uorfi Javed tomato video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಉರ್ಫಿ ಜಾವೇದ್‌ (Uorfi Javed) ಬಾಲಿವುಡ್‌ ಕಿರುತೆರೆ ನಟಿಯಾದರೂ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ದೇಶ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಬಿಗ್‌ ಬಾಸ್‌ ಒಟಿಟಿಯ ಮಾಜಿ ಸ್ಪರ್ಧಿಯಾಗಿರುವ ಉರ್ಫಿ ಚಿತ್ರ ವಿಚಿತ್ರ ರೀತಿಯಲ್ಲಿ ಉಡುಗೆ ವಿನ್ಯಾಸ ಮಾಡಿಕೊಂಡು ಅದನ್ನು ತಾವೇ ತೊಟ್ಟುಕೊಂಡು ಮೆರೆಯುವುದರಲ್ಲಿ ಫೇಮಸ್‌. ಇದೀಗ ಅವರು ಮಾರುಕಟ್ಟೆಯಲ್ಲಿ ಅತ್ಯಂತ ಬೆಲೆ ಬಾಳುವ ತರಕಾರಿಯನ್ನೇ ತಮ್ಮ ಕಿವಿಯ ಓಲೆ ಮಾಡಿಕೊಂಡಿದ್ದಾರೆ.

ಹೌದು. ಉರ್ಫಿ ಅವರು ಟೊಮೆಟೊ ಹಣ್ಣನ್ನೇ ತಮ್ಮ ಕಿವಿಯ ಓಲೆ ಮಾಡಿಕೊಂಡಿದ್ದಾರೆ. ಅದಲ್ಲದೆ ಟೊಮೆಟೊ ಹಿಡಿದು ಕ್ಯಾಮೆರಾಕ್ಕೆ ಫೋಸ್‌ ಕೊಟ್ಟಿದ್ದಾರೆ ಕೂಡ. ಟೊಮೆಟೊ ಅನ್ನು ತಿನ್ನುವ ವಿಡಿಯೊವನ್ನೂ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಆರ್‌ ಮಾಧವನ್‌ ಅವರು ಟೊಮೆಟೊ ಬೆಲೆ ಹೆಚ್ಚಾಗಿರುವುದರಿಂದ ಕಡಿಮೆ ಟೊಮೆಟೊ ತಿನ್ನುತ್ತಿದ್ದೇನೆ ಎಂದಿದ್ದ ಫೋಟೋ ಮತ್ತು ಮಹಾರಾಷ್ಟ್ರದ ರೈತನೊಬ್ಬ ಟೊಮೆಟೊ ಮಾರಿ ಒಂದೇ ತಿಂಗಳಲ್ಲಿ ಕೋಟ್ಯಧಿಪತಿಯಾದ ಸುದ್ದಿಯ ಫೋಟೋವನ್ನೂ ನಟಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral News : 5 ಕೋಟಿ ರೂಪಾಯಿ ಮೌಲ್ಯದ ರೈಲು ಎಂಜಿನ್​ ಅನ್ನೇ ಕದ್ದೊಯ್ದ ಕಳ್ಳರು!
ಉರ್ಫಿ ತಮ್ಮ ಈ ಪೋಸ್ಟ್‌ಗೆ “ಟೊಮೆಟೋಗಳು ಹೊಸ ಬಂಗಾರ” ಎಂದು ಬರೆದುಕೊಂಡಿದ್ದಾರೆ. ನಟಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಕೂಡ ವಿಚಿತ್ರವಾದ ಉಡುಗೆಯನ್ನೇ ತೊಟ್ಟಿದ್ದಾರೆ. ಅರ್ಧ ಎದೆಯನ್ನು ಮಾತ್ರವೇ ಮುಚ್ಚುವಂತಹ ಟಾಪ್‌ ತೊಟ್ಟಿದ್ದು, ಎಡಗೈನಿಂದ ಇನ್ನರ್ಧ ಎದೆಯನ್ನು ಮುಚ್ಚಿಕೊಂಡಿದ್ದಾರೆ. ಕಪ್ಪು ಬಣ್ಣದ ಶಾರ್ಟ್‌ ಸ್ಕರ್ಟ್‌ ಅನ್ನು ಧರಿಸಿದ್ದಾರೆ.


ಉರ್ಫಿ ಈ ಪೋಸ್ಟ್‌ ಅನ್ನು ಮಂಗಳವಾರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 1.26 ಲಕ್ಷಕ್ಕೂ ಅಧಿಕ ಮಂದಿ ಪೋಸ್ಟ್‌ಗೆ ಲೈಕ್‌ ಮಾಡಿದ್ದಾರೆ. ಸಾವಿರಾರು ಮಂದಿ ಈ ಪೋಸ್ಟ್‌ ಅನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ.

ಇದನ್ನೂ ಓದಿ: Video Viral : ರಾಯಚೂರು YTPS ಬಳಿ ಕಂಡ ಅನಕೊಂಡ ಮಾದರಿಯ ಹೆಬ್ಬಾವು!
ಈ ಪೋಸ್ಟ್‌ ಬಗ್ಗೆ ನೆಟ್ಟಿಗರು ಕಿಡಿ ಕಾರಲಾರಂಭಿಸಿದ್ದಾರೆ. ನಿಮಗೆ ಮೈ ತುಂಬ ಬಟ್ಟೆ ಹಾಕಿಕೊಳ್ಳಲು ಏನು ಸಮಸ್ಯೆ ಎಂದು ಪ್ರಶ್ನಿಸಲಾರಂಭಿಸಿದ್ದಾರೆ. “ಒಂದು ಕೆಲಸ ಮಾಡಿ. ನಿಮ್ಮ ದೇಹದಲ್ಲಿ ಮುಚ್ಚಿಕೊಳ್ಳಬೇಕು ಎಂದು ನಿಮಗೆನಿಸುವ ಅಂಗವನ್ನು ಆಪರೇಷನ್‌ ಮಾಡಿಸಿ ತೆಗೆಸಿಬಿಡಿ. ಆಗ ಬಟ್ಟೆಯೂ ಬೇಡ ಈ ರೀತಿ ಕೈ ಇಟ್ಟುಕೊಳ್ಳುವ ಸಮಸ್ಯೆಯೂ ಇರುವುದಿಲ್ಲ” ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಇನ್‌ಸ್ಟಾಗ್ರಾಂನಲ್ಲಿ ಡಿಸ್‌ಲೈಕ್‌ ಬಟನ್‌ ಇಲ್ಲ, ಇದ್ದಿದ್ದರೆ ಅದನ್ನೇ ಒತ್ತುತ್ತಿದ್ದೆವು ಎಂದು ಅನೇಕರು ಕಮೆಂಟ್‌ನಲ್ಲು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

Viral Video: ಜಿರಳೆ ತಿನ್ನುವುದು, ಕಪ್ಪೆ ತಿನ್ನುವುದು, ಹಲ್ಲಿ ತಿನ್ನುವುದು ಇಂತಹ ವಿಡಿಯೊಗಳನ್ನು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ನೋಡಿರುತ್ತೇವೆ. ಈಗ ದಕ್ಷಿಣ ಕೊರಿಯಾದ ಹುಡುಗಿಯೊಬ್ಬಳು ಹಾವನ್ನು ತರಕಾರಿಗಳ ಜೊತೆಗೆ ಸೇರಿಸಿ ಕಚ್ಚಿ ಕಚ್ಚಿ ತಿನ್ನುತ್ತಿರುವ ವಿಡಿಯೊವೊಂದು ನೋಡುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕೆಲವರಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಈ ವಿಡಿಯೊ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು ಎಲ್ಲೆಡೆ ಸಖತ್ ವೈರಲ್ ಆಗಿದೆ. ತನ್ನ ಮುಂದೆ ಇರುವ ಪ್ಲೇಟ್‌ನಲ್ಲಿ ತರಕಾರಿಗಳ ಜೊತೆಗೆ ಹಾವುಗಳನ್ನು ಇಟ್ಟುಕೊಂಡ ಹುಡುಗಿ ಅದರಲ್ಲಿ ಒಂದು ಹಾವನ್ನು ತನ್ನ ಎರಡು ಕೈಗಳಿಂದ ಹಿಡಿದು ತಿನ್ನಲು ಶುರುಮಾಡಿದ್ದಾಳೆ.

VISTARANEWS.COM


on

Viral Video
Koo

ಹಾವೆಂದರೆ ಎಲ್ಲರೂ ಹೌಹಾರುತ್ತಾರೆ. ಅದರಲ್ಲೂ ಹುಡುಗಿಯರಂತೂ ಹಾವನ್ನು ಕಂಡರೆ ಕಿರುಚುತ್ತಾ ಎಲ್ಲೆಂದರಲ್ಲಿ ಓಡಿಹೋಗುತ್ತಾರೆ. ಇನ್ನು ಹಿಂದೂಗಳು ಹಾವನ್ನು ದೇವರೆಂದು ಪೂಜಿಸುತ್ತಾರೆ. ನಾಗರ ಪಂಚಮಿಯ ದಿನ ಹಾವಿಗೆ ಹಾಲೆರೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಹಾಗಾಗಿ ಕೆಲವರು ಹಾವನ್ನು ಕಂಡು ಹೆದರಿದರೆ ಇನ್ನು ಕೆಲವರು ಹಾವನ್ನು ದೇವರೆಂದು ಪೂಜಿಸುತ್ತಾರೆ. ಇದೆಲ್ಲ ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ಚೀನಾ, ವಿಯೆಟ್ನಾದಂತಹ ದೇಶಗಳಲ್ಲಿ ಹಾವನ್ನು ಮಸಾಲೆ ಜೊತೆಗೆ ಹುರಿದು, ಇಲ್ಲವಾದರೆ ಜೀವಂತ ಹಾವನ್ನೇ ನುಂಗಿ ಬಿಡುತ್ತಾರೆ. ಅಂತಹದೊಂದು ಭಯಾನಕ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ದಕ್ಷಿಣ ಕೊರಿಯಾದ ಹುಡುಗಿಯೊಬ್ಬಳು ಹಾವನ್ನು ತರಕಾರಿಗಳ ಜೊತೆಗೆ ಸೇರಿಸಿ ಕಚ್ಚಿ ಕಚ್ಚಿ ತಿನ್ನುತ್ತಿರುವ ವಿಡಿಯೊವೊಂದು ನೋಡುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕೆಲವರಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಈ ವಿಡಿಯೊ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ದಕ್ಷಿಣ ಕೊರಿಯಾದ ಹುಡುಗಿ ತನ್ನ ಮುಂದೆ ಇರುವ ಪ್ಲೇಟ್‌ನಲ್ಲಿ ತರಕಾರಿಗಳ ಜೊತೆಗೆ ಹಾವುಗಳನ್ನು ಇಟ್ಟುಕೊಂಡಿದ್ದಾಳೆ. ನಂತರ ಅದರಲ್ಲಿ ಒಂದು ಹಾವನ್ನು ತನ್ನ ಎರಡು ಕೈಗಳಿಂದ ಹಿಡಿದು ತಿನ್ನಲು ಶುರುಮಾಡಿದ್ದಾಳೆ. ಒಮ್ಮೆ ಹಾವಿನ ತಲೆ, ಒಮ್ಮೆ ಮಧ್ಯಭಾಗ, ಒಮ್ಮೆ ಬಾಲದ ಹಸಿ ಮಾಂಸವನ್ನು ಜಗಿದು ಸವಿಯುವ ಅವಳ ಮುಖವನ್ನು ನೋಡಿದ್ದರೆ ವೀಕ್ಷಕರಿಗೆ ದಿಗ್ಭ್ರಮೆಯಾಗುತ್ತದೆ.

ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, ಅನೇಕರು ಇದನ್ನು ಕಂಡು ಅಸಹ್ಯ ಪಟ್ಟಿದ್ದಾರೆ. ಕೆಲವರು ಈ ಕೃತ್ಯವನ್ನು ಟೀಕಿಸಿದ್ದಾರೆ. ಇನ್ನೂ ಕೆಲವರು ನಾವು ಭಾರತದಲ್ಲಿ ಜನಿಸಿರುವುದು ಒಳ್ಳೆಯದು ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡಿದ್ದಾರೆ. ಹಾಗೇ ಇನ್ನೊಬ್ಬ ಬಳಕೆದಾರ, ಚೀನೀ ಜನರು ತೃಪ್ತರಾಗಲು ಇವುಗಳನ್ನು ತಿನ್ನುತ್ತಾರೆ. ಅವರ ಈ ಹೊಸ ಆಹಾರ ಪದ್ಧತಿಯಿಂದ ಹೊಸ ವೈರಸ್‌ಗಳು ಜಗತ್ತಿಗೆ ಬರುತ್ತಿವೆ ಎಂದು ಕಿಡಿಕಾರಿದ್ದಾರೆ.

ಈ ವಿಡಿಯೊ @asmrmukbangworld ಎಂಬ ಪ್ಲಾಟ್ ಫಾರ್ಮ್ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ 15 ಮಿಲಿಯನ್ ವೀವ್ಸ್ ಮತ್ತು 1 ದಶಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

Continue Reading

ವೈರಲ್ ನ್ಯೂಸ್

Narendra Modi: ನಗು ನಗುತ್ತಾ ಸೆಲ್ಫಿಗೆ ಪೋಸ್‌ ಕೊಟ್ಟ ಮೋದಿ, ಮೆಲೋನಿ; ಸೋಷಿಯಲ್‌ ಮೀಡಿಯಾದಲ್ಲಿ ʼಮೆಲೋಡಿʼಯದ್ದೇ ಸದ್ದು

Narendra Modi: ಇಟಲಿಯಲ್ಲಿ ನಡೆದ 50ನೇ ಆವೃತ್ತಿಯ ಜಿ 7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಈ ವೇಳೆ ಇಟಲಿ ಪ್ರಧಾನಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಸೆಲ್ಫಿಗೆ ಪೋಸ್‌ ನೀಡಿದ್ದಾರೆ. ಸದ್ಯ ಈ ವಿಡಿಯೊ, ಫೋಟೊ ಭಾರಿ ಸದ್ದು ಮಾಡುತ್ತಿದೆ. ನರೇಂದ್ರ ಮೋದಿ ಅವರೊಂದಿಗೆ ನಿಂತಿರುವ ವಿಡಿಯೊವನ್ನು ಮಲೋನಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ʼHello from the Melodi teamʼ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ನಗು ನಗುತ್ತಾ ಮೋದಿ ಪೋಸ್‌ ನೀಡುತ್ತಿರುವುದು ಕಂಡು ಬಂದಿದ್ದು, ನೆಟ್ಟಿಗರ ಗಮನ ಸೆಳೆದಿದೆ.

VISTARANEWS.COM


on

Narendra Modi
Koo

ರೋಮ್:‌ ಇಟಲಿಯಲ್ಲಿ ನಡೆದ 50ನೇ ಆವೃತ್ತಿಯ ಜಿ 7 ಶೃಂಗಸಭೆಯಲ್ಲಿ (G 7 Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದ್ದಾರೆ. ಈ ವೇಳೆ ಮೋದಿ ಮತ್ತು ಇಟಲಿ ಪ್ರಧಾನಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಜತೆಯಾಗಿ ಸೆಲ್ಫಿಗೆ ಪೋಸ್‌ ನೀಡಿದ್ದು, ಸದ್ಯ ಈ ವಿಡಿಯೊ, ಫೋಟೊ ಭಾರಿ ಸದ್ದು ಮಾಡುತ್ತಿದೆ (Viral News). ಮೋದಿ ಹಾಗೂ ಮೆಲೋನಿ ಅವರು ಹಿಂದಿನಿಂದಲೂ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರ ಹೆಸರನ್ನು ಸೇರಿಸಿ ಮೆಲೋಡಿ (Melodi) ಎಂದೇ ನೆಟ್ಟಿಗರು ಸಂಬೋಧಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೆಲೋಡಿ ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿದೆ.

ನರೇಂದ್ರ ಮೋದಿ ಅವರೊಂದಿಗೆ ನಿಂತಿರುವ ವಿಡಿಯೊವನ್ನು ಮಲೋನಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ʼHello from the Melodi teamʼ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ನಗು ನಗುತ್ತಾ ಮೋದಿ ಪೋಸ್‌ ನೀಡುತ್ತಿರುವುದು ಕಂಡು ಬಂದಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಇದಕ್ಕೂ ಮುನ್ನ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಇಬ್ಬರೂ ಸೆಲ್ಫಿ ಕ್ಲಿಕ್ಕಿಸುತ್ತಿರುವ ಫೋಟೊ ಕೂಡ ವೈರಲ್ ಆಗಿತ್ತು. ಮೆಲೋನಿ ಫೋಟೊ ಕ್ಲಿಕ್ಕಿಸುತ್ತಿದ್ದಂತೆ ಇಬ್ಬರು ನಾಯಕರು ನಗುತ್ತ ಕ್ಯಾಮೆರಾದತ್ತ ಮುಖ ಮಾಡುತ್ತಿರುವುದು ಕಂಡು ಬಂದಿತ್ತು.

ಭಾರತ ಜಿ 7ಯ ಸದಸ್ಯ ರಾಷ್ಟ್ರವಲ್ಲದಿದ್ದರೂ ಮೆಲೋನಿ ಅವರ ವಿಶೇಷ ಆಹ್ವಾನದ ಮೇರೆಗೆ ಮೋದಿ ಇಟಲಿಗೆ ತೆರಳಿದ್ದರು. ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೋದಿ ಅವರ ಮೊದಲ ವಿದೇಶ ಪ್ರವಾಸ ಇದಾಗಿತ್ತು. ಶೃಂಗಸಭೆ ನಡೆಯುವ ಸ್ಥಳಕ್ಕೆ ತೆರಳಿದ ನರೇಂದ್ರ ಮೋದಿ ಅವರಿಗೆ ಮೆಲೋನಿ ಅವರು ನಮಸ್ತೆ ಎಂದು ಕೈಮುಗಿದು ಭಾರತದ ಸಂಪ್ರದಾಯದಂತೆ ಸ್ವಾಗತ ಕೋರಿದ್ದರು.

ಮಹತ್ವದ ಮಾತುಕತೆ

ಈ ವೇಳೆ ಮೋದಿ ಮತ್ತು ಮೆಲೋನಿ ಅವರು ರಕ್ಷಣಾ ಮತ್ತು ಭದ್ರತಾ ಸಹಕಾರದ ಬಗ್ಗೆ ಚರ್ಚೆ ನಡೆಸಿದರು. ಇಟಲಿಯ ಮಾಂಟೋನ್‌ನಲ್ಲಿರುವ ಯಶವಂತ್ ಘಡ್ಗೆ ಸ್ಮಾರಕವನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದರು. ಎರಡೂ ದೇಶಗಳ ನಡುವೆ ಬೆಳೆಯುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸಹಯೋಗದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಉಭಯ ನಾಯಕರು, ಇಂಧನ, ಉತ್ಪಾದನೆ, ಬಾಹ್ಯಾಕಾಶ, ಟೆಲಿಕಾಂ, ಎಐ ಮುಂತಾದ ಕ್ಷೇತ್ರಗಳಲ್ಲಿ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸಯವ ಬಗ್ಗೆ ಮಾತುಕತೆ ನಡೆಸಿದರು.

“ವಾಣಿಜ್ಯ, ಇಂಧನ, ರಕ್ಷಣೆ, ಟೆಲಿಕಾಂ ಮತ್ತಿತರ ಕ್ಷೇತ್ರಗಳಲ್ಲಿ ಭಾರತ-ಇಟಲಿ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಜೈವಿಕ ಇಂಧನಗಳು, ಆಹಾರ ಸಂಸ್ಕರಣೆ ಮತ್ತು ನಿರ್ಣಾಯಕ ಖನಿಜಗಳಂತಹ ಭವಿಷ್ಯದ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಲಿದ್ದೇವೆʼʼ ಎಂದು ಮೋದಿ ತಿಳಿಸಿದ್ದಾರೆ.

ಈ ಬಾರಿಯ ಜಿ 7 ಶೃಂಗಸಭೆಯಲ್ಲಿ ಯುರೋಪಿಯನ್ ಯೂನಿಯನ್ ಜತೆಗೆ ಅಮೆರಿಕ, ಇಂಗ್ಲೆಂಡ್‌, ಕೆನಡಾ, ಜರ್ಮನಿ, ಇಟಲಿ, ಜಪಾನ್ ಮತ್ತು ಫ್ರಾನ್ಸ್‌ನ ನಾಯಕರು ಭಾಗವಹಿಸಿದ್ದರು. ಇದು ಜಿ 7 ಶೃಂಗಸಭೆಯಲ್ಲಿ ಭಾರತದ 11ನೇ ಮತ್ತು ಪ್ರಧಾನಿ ಮೋದಿ ಅವರ ಸತತ ಐದನೇ ಭಾಗವಹಿಸುವಿಕೆ ಎನಿಸಿಕೊಂಡಿದೆ.

2023ರ ಡಿಸೆಂಬರ್‌ 2ರಂದು ಯುಎಇ ದೇಶದ ರಾಜಧಾನಿ ದುಬೈನಲ್ಲಿ ನಡೆದ 28ನೇ ಕಾನ್ಫರೆನ್ಸ್‌ ಆಫ್‌ ದಿ ಪಾರ್ಟೀಸ್‌ (COP28) ಶೃಂಗಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದೇ ವೇಳೆ ಜಾರ್ಜಿಯಾ ಮೆಲೋನಿ ಅವರು ನರೇಂದ್ರ ಮೋದಿ ಅವರ ಜತೆ ಸೆಲ್ಫಿ ತೆಗೆಸಿಕೊಂಡಿದ್ದರು. “ಸಿಒಪಿ28 ಸಭೆಯಲ್ಲಿ ಆತ್ಮೀಯ ಸ್ನೇಹಿತರು” ಎಂದು ಒಕ್ಕಣೆ ಬರೆದಿದ್ದರು. ಅಷ್ಟೇ ಅಲ್ಲ, ಮೆಲೋನಿ+ಮೋದಿ= ಮೆಲೋಡಿ ಎಂಬ ಅರ್ಥ ಬರುವ ಕಾರಣ ಮೆಲೋಡಿ ಎಂಬ ಹ್ಯಾಶ್‌ ಟ್ಯಾಗ್‌ ಬಳಸಿದ್ದರು. ಈ ಫೋಟೊ ಭಾರಿ ವೈರಲ್‌ ಆಗಿದ್ದು, ಸಾವಿರಾರು ಜನ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: Narendra Modi: ಸ್ನೇಹಿತ ಮೋದಿಯನ್ನು ಕೈಮುಗಿದು ಆತ್ಮೀಯವಾಗಿ ಸ್ವಾಗತಿಸಿದ ಇಟಲಿ ಪ್ರಧಾನಿ ಮೆಲೋನಿ; Video ಇದೆ

Continue Reading

ಕ್ರಿಕೆಟ್

Viral Video: ಪಾಕ್​ ಕ್ರಿಕೆಟಿಗ ವಾಸಿಂ ಅಕ್ರಮ್ ಜತೆ​ ಬ್ರೇಕ್​ ಡ್ಯಾನ್ಸ್​ ಮಾಡಿದ ಸುನಿಲ್ ಗಾವಸ್ಕರ್

Viral Video: ಗವಾಸ್ಕರ್​ ಮತ್ತು ಅಕ್ರಮ್​ ಉತ್ತಮ ಸ್ನೇಹಿತರಾಗಿದ್ದಾರೆ. ಕಾಮೆಂಟ್ರಿ ವೇಳೆಯೂ ಆಗಾಗ ಪರಸ್ಪರ ಕಾಲೆಳೆಯುತ್ತಿರುತ್ತಾರೆ. ಅದರಲ್ಲೂ ಭಾರತ ಮತ್ತು ಪಾಕ್​ ಪಂದ್ಯ ಇರುವ ಸಂದರ್ಭದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

VISTARANEWS.COM


on

Viral Video
Koo

ನ್ಯೂಯಾರ್ಕ್​: ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್(T20 World Cup)​ ಟೂರ್ನಿಯಲ್ಲಿ ಕಾಮೆಂಟ್ರಿ ಮಾಡುತ್ತಿರುವ ಮಾಜಿ ಆಟಗಾರರಾದ ಪಾಕಿಸ್ತಾನ ವಾಸಿಂ ಅಕ್ರಮ್​(Wasim Akram) ಮತ್ತು ಭಾರತದ ಸುನಿಲ್​ ಗವಾಸ್ಕರ್​(Sunil Gavaskar) ಅವರು ಜತೆಯಾಗಿ ಡ್ಯಾನ್ಸ್​ ಮಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ. ಈ ವಿಡಿಯೊಗೆ ನೆಟ್ಟಿಗರು ಹಲವು ಹಾಡುಗಳನ್ನು ಎಡಿಟ್​ ಮಾಡಿ ಶೇರ್​ ಮಾಡಿದ್ದಾರೆ.

ಗವಾಸ್ಕರ್​ ಮತ್ತು ಅಕ್ರಮ್​ ಉತ್ತಮ ಸ್ನೇಹಿತರಾಗಿದ್ದಾರೆ. ಕಾಮೆಂಟ್ರಿ ವೇಳೆಯೂ ಆಗಾಗ ಪರಸ್ಪರ ಕಾಲೆಳೆಯುತ್ತಿರುತ್ತಾರೆ. ಅದರಲ್ಲೂ ಭಾರತ ಮತ್ತು ಪಾಕ್​ ಪಂದ್ಯ ಇರುವ ಸಂದರ್ಭದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

ಇದನ್ನೂ ಓದಿ RSA vs NEP: ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್​ ರೋಚಕ ಜಯ; ಗೆಲುವಿನ ಖಾತೆ ತೆರೆದ ಕಿವೀಸ್​

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಇನ್ನು, ನಾಲ್ಕು ಪಾಯಿಂಟ್ ಹೊಂದಿದ್ದ ಅಮೆರಿಕ ತಂಡವು ಐರ್ಲೆಂಡ್‌ ವಿರುದ್ಧ ಸೋತು, ಜೂನ್‌ 16ರಂದು ಐರ್ಲೆಂಡ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಬರ್‌ ಅಜಂ ಬಳಗ ಗೆದ್ದರೆ ಮಾತ್ರ ಸೂಪರ್‌ 8ಕ್ಕೆ ಅರ್ಹತೆ ಪಡೆಯುತ್ತಿತ್ತು. ಆದರೆ, ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾದವು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.

ಟೂರ್ನಿಯಿಂದ ಹೊರಬಿದ್ದಿರುವ ಪಾಕ್​ ತಂಡದ ಪ್ರದರ್ಶನದ ಬಗ್ಗೆ ವಾಸಿಂ ಅಕ್ರಮ್ ಸೇರಿ ಅನೇಕ ಮಾಜಿ ಆಟಗಾರರು ಆಕ್ರೋಶ ಹೊರಹಾಕಿದ್ದಾರೆ. ಕ್ರಿಕೆಟ್​ ಅಭ್ಯಾಸ ಮಾಡುವುದನ್ನು ಬಿಟ್ಟು ಶೋಕಿಗಾಗಿ ಸೇನೆಯಲ್ಲಿ ಫಿಟ್​ನೆಸ್​ ತರಬೇತಿ ಪಡೆದು ಸಮಯ ವ್ಯರ್ಥ ಮಾಡಿದ್ದು ಈ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡವನ್ನು(Pakistan Team Troll) ಸ್ವತಃ ತವರಿನ ಅಭಿಮಾನಿಗಳು ಸೇರಿ ಭಾರತೀಯ(India fans troll Pakistan cricket team) ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಹಲವು ಮಿಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮತ್ತೆ ಬಾಬರ್​ ತಲೆದಂಡ?

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲಿ ಪಾಕ್​ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಮತ್ತೆ ಬಾಬರ್​ ಅವರ ತಲೆದಂಡವಾಗುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗಿದೆ.

Continue Reading

Latest

Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

Viral News: ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರೆ. ಆದರೆ ಚೀನಾದ ಈ ಜೋಡಿ ಪ್ರೀತಿಗೆ ವಯಸ್ಸಿನ ಹಂಗು ಕೂಡ ಇಲ್ಲ ಎಂದು ಸಾಬೀತು ಮಾಡಿದ್ದಾರೆ. 23 ವರ್ಷದ ಯುವತಿಯೊಬ್ಬಳು 80 ವರ್ಷದ ವೃದ್ಧನ ಜೊತೆ ವಿವಾಹವಾಗಿ ಹೊಸ ಬದುಕಿಗೆ ಕಾಲಿಟ್ಟಿದ್ದಾಳೆ. ವೃದ್ಧನ ಪ್ರಬುದ್ಧತೆ , ಸ್ಥಿರತೆ ಮತ್ತು ಬುದ್ಧಿವಂತಿಕೆಯನ್ನು ಕಂಡು ಮೆಚ್ಚಿದ ಹುಡುಗಿ ಮದುವೆಯಾಗಲು ನಿರ್ಧರಿಸಿದ್ದಾಳಂತೆ. ಆದರೆ ಈಕೆಯ ಈ ನಿರ್ಧಾರಕ್ಕೆ ಮನೆಯವರ ವಿರೋಧವಿದ್ದರೂ ಯಾವುದನ್ನು ಕಡೆಗಣಿಸದೇ ತನ್ನ ಪ್ರೇಮಿಯ ಕೈ ಹಿಡಿದಿದ್ದಾಳೆ.

VISTARANEWS.COM


on

Viral News
Koo

ಬೀಜಿಂಗ್‌: ಈಗಿನ ಕಾಲದಲ್ಲಿ ಮದುವೆಯ ವಯಸ್ಸಿಗೆ ಬಂದ ಯುವಕರಿಗೆ ಮದುವೆಯಾಗಲು ಹುಡುಗಿಯರು ಸಿಗುವುದೇ ಕಷ್ಟವಾಗಿದೆ. ಹುಡುಗಿ ಸಿಗದೆ ಈಗಲೂ ಅನೇಕ ಹುಡುಗರು ಬ್ರಹ್ಮಚಾರಿಗಳಾಗಿ ಜೀವನ ನಡೆಸುತ್ತಿದ್ದಾರೆ. ಅಂತಹದರಲ್ಲಿ ವಯಸ್ಸಾದ ವೃದ್ಧರನ್ನು ಹುಡುಗಿಯರನ್ನು ಮದುವೆಯಾಗುವುದನ್ನು ನೋಡಿದರೆ ಯುವಕರು ಬಾಯಿ ಬಾಯಿ ಬಡಿದುಕೊಳ್ಳುವುದಂತೂ ಖಂಡಿತ. ಅಂತಹದೊಂದು ಘಟನೆ ಇದೀಗ ಚೀನಾದಲ್ಲಿ ನಡೆದಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ (Viral News) ಆಗಿದೆ.

23ರ ಹರೆಯದ ಯುವತಿಯೊಬ್ಬಳು 80 ವರ್ಷ ವೃದ್ಧರೊಬ್ಬರನ್ನು ಮದುವೆಯಾಗಿರುವುದು ಚೀನಾದ ಹೆಬೈ ಪ್ರಾಂತ್ಯದಲ್ಲಿ ನಡೆದಿದೆ. ವೃದ್ಧಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದ ಚೀನಾದ 80 ವರ್ಷ ವ್ಯಕ್ತಿ ಶ್ರೀಲಿ ಹಾಗೂ ಅದೇ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬ ಯುವತಿಯ ನಡುವೆ ಸ್ನೇಹ ಬೆಳೆದಿದೆ. ನಂತರ ಅದು ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಆಕೆಯ ಮನೆಯವರಿಗೆ ಈ ಮದುವೆ ಇಷ್ಟವಿಲ್ಲದಿದ್ದ ಕಾರಣ ತನ್ನ ಹೆತ್ತವರ ಸಂಬಂಧ ಮುರಿದುಕೊಂಡು ಆಕೆ ಶ್ರೀಲಿಯನ್ನು ಮದುವೆಯಾಗಿದ್ದಾಳೆ. ಕ್ಸಿಯಾನ್ ಫಾಂಗ್ ಮತ್ತು ಲೀ ತಮ್ಮ ಕುಟುಂಬವನ್ನು ನಡೆಸಲು ಲೀಯ ಪಿಂಚಣಿ ಹಣವನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ ಎಂದು ಹೇಳಲಾಗಿದೆ.

ವೃದ್ಧ ಶ್ರೀಲಿ ಅವರ ಪ್ರಬುದ್ಧತೆ, ಸ್ಥಿರತೆ ಮತ್ತು ಬುದ್ಧಿವಂತಿಕೆಯನ್ನು ಕಂಡು ಮೆಚ್ಚಿದ ಹುಡುಗಿ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ ಎಂಬುದು ವರದಿಯಿಂದ ತಿಳಿದು ಬಂದಿದೆ. ಇತ್ತೀಚೆಗೆ ಈ ಜೋಡಿ ಸರಳವಾಗಿ ವಿವಾಹವಾಗಿದ್ದರು. ಆದರೆ ಈ ವಿವಾಹಕ್ಕೆ ಆಕೆಯ ಮನೆಯವರು ಹಾಗೂ ಕುಟುಂಬಸ್ಥರು ಯಾರೂ ಇರಲಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ದಂಪತಿಯ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಸಂಚಲನ ಮೂಡಿದೆ. ಇದರಲ್ಲಿ ದಂಪತಿ ಪ್ರಣಯದ ಭಾವದಲ್ಲಿ ಕ್ಯಾಮೆರಾಗೆ ಪೋಸ್ ಕೊಡುವುದನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ಅನೇಕರು ಈ ಬಗ್ಗೆ ಕಾಮೆಂಟ್ ಕೂಡ ಮಾಡಿದ್ದಾರೆ.

ಕೆಲವು ಬಳಕೆದಾರರು ಹುಡುಗಿ ವೃದ್ಧನ ಹಣಕ್ಕಾಗಿ ಆತನನ್ನು ಮದುವೆಯಾಗಿದ್ದಾಳೆ ಎಂದು ಕಾಮೆಂಟ್ ಮಾಡಿದ್ದರೆ ಕೆಲವರು ಅವಳ ಧೈರ್ಯ ಮತ್ತು ಆತನ ಮೇಲಿನ ಪ್ರೀತಿಯನ್ನು ಹೊಗಳಿದ್ದಾರೆ.

ಇದನ್ನೂ ಓದಿ: Accident Case: ಕಾರು ಡಿಕ್ಕಿ ರಭಸಕ್ಕೆ ಹತ್ತಾರು ಅಡಿ ದೂರ ಹಾರಿ ಬಿದ್ದ ಮಹಿಳೆ; ಭಯಾನಕ ವಿಡಿಯೊ

ವಯಸ್ಸಾದ ವೃದ್ಧ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾದ ಘಟನೆ ಇದೇ ಮೊದಲಲ್ಲ. ಇಂತಹ ಹಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತದೆ. ಇದಕ್ಕಿಂತ ಮೊದಲು ಮಧ್ಯಪ್ರದೇಶದಲ್ಲಿ 80 ವರ್ಷದ ವೃದ್ಧ 34 ವರ್ಷದ ಮಹಿಳೆಯನ್ನು ಮದುವೆಯಾದ ಘಟನೆ ನಡೆದಿದೆ. ಇನ್ ಸ್ಟಾಗ್ರಾಂನಲ್ಲಿ ವೃದ್ಧ ಪೋಸ್ಟ್ ಮಾಡುತ್ತಿದ್ದ ಆತನ ತಮಾಷೆಯ ವಿಡಿಯೊ ನೋಡಿ ಮಹಿಳೆ ಆಕರ್ಷಿತಳಾಗಿ ಆತನನ್ನು ಸಂಪರ್ಕಿಸಿ ನಂತರ ಮದುವೆಯಾಗಿದ್ದಳು. ಈ ತರಹದ ಹಲವಾರು ಘಟನೆಗಳು ಆಗಾಗ ನಡೆಯುತ್ತಿರುತ್ತದೆ.

Continue Reading
Advertisement
Kendra Sahitya Akademi Award
ಪ್ರಮುಖ ಸುದ್ದಿ11 mins ago

ಕರ್ನಾಟಕದ ಶ್ರುತಿ ಬಿ.ಆರ್, ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗರಿ

Period Pain Relief Food
ಆರೋಗ್ಯ19 mins ago

Period Pain Relief Food: ಪೀರಿಯಡ್‌ನ ನೋವು ನಿವಾರಣೆಗೆ ಈ ಆಹಾರಗಳು ಸೂಕ್ತ

karnataka Weather Forecast
ಮಳೆ27 mins ago

Karnataka Weather : ದಕ್ಷಿಣ ಒಳನಾಡು, ಮಲೆನಾಡಲ್ಲಿ ತಗ್ಗಿದ ಮಳೆ; ಕರಾವಳಿಯಲ್ಲಿ ಮುಂದುವರಿಯಲಿದೆ ಅಬ್ಬರ

Actor Darshan
ಕರ್ನಾಟಕ35 mins ago

Actor Darshan: ದರ್ಶನ್‌ ಗ್ಯಾಂಗ್‌ಗೆ ಮತ್ತೆ 5 ದಿನ ಪೊಲೀಸ್‌ ಕಸ್ಟಡಿ; ಜಡ್ಜ್‌ ಮುಂದೆ ಪವಿತ್ರಾ ಗೌಡ ಕಣ್ಣೀರು!

Kendra Sahitya Akademi Award
ಪ್ರಮುಖ ಸುದ್ದಿ43 mins ago

Kendra Sahitya Akademi Award: ಇಬ್ಬರು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ; ಯಾರಿವರು?

New Fashion
ಫ್ಯಾಷನ್1 hour ago

New Fashion: ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ನಲ್ಲಿ ಟ್ರೆಂಡಿಯಾದ ಜಿಪ್ಪರ್‌ ಸ್ಟೈಲ್‌

Trent Boult
ಕ್ರೀಡೆ1 hour ago

Trent Boult: ಕೊನೆಯ ಟಿ20 ವಿಶ್ವಕಪ್​ ಆಡಲು ಸಿದ್ಧರಾದ ಟ್ರೆಂಟ್​ ಬೌಲ್ಟ್

Actor Darshan pavithra gowda relationship secrete
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ ಬಲೆಗೆ ಪವಿತ್ರಾ ಗೌಡ ಬಿದ್ದಿದ್ದು ಹೇಗೆ? ಇವರು ಹೀರೋಯಿನ್‌ ಆಗಿದ್ದು ಯಾವಾಗ?

Job Alert
ಉದ್ಯೋಗ2 hours ago

Job Alert: ಗುಡ್‌ನ್ಯೂಸ್‌: ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 627 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Suresh Gopi
ದೇಶ2 hours ago

Suresh Gopi: ಇಂದಿರಾ ಗಾಂಧಿ ಭಾರತದ ಮಾತೆ ಎಂದ ಬಿಜೆಪಿ ಸಂಸದ ಸುರೇಶ್‌ ಗೋಪಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ5 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ1 day ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು1 day ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ1 day ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌