ಲಕ್ನೋ: ವೃದ್ಧರಿಗೆ ಏನು ಆಸೆಯಿರುತ್ತದೆ? ಮಕ್ಕಳು, ಮೊಮ್ಮಕ್ಕಳೊಂದಿಗೆ ಸಮಯ ಕಳೆಯಬೇಕು, ತಮ್ಮ ನಿಗೆವಯಸ್ಸಿನವರೊಂದಿಗೆ ಮಾತನಾಡಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಿರುತ್ತಾರೆ. ಆದರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ 72ರ ವೃದ್ಧನೊಬ್ಬ ಹಾದಿಬೀದಿಯಲ್ಲಿ ಹೋಗುವ ಜನರನ್ನೆಲ್ಲ ಬೆತ್ತಲೆ ನೋಡುವ ಹಪಹಪಿಕೆಯಿಂದಾಗಿ ಬರೋಬ್ಬರಿ 9 ಲಕ್ಷ ರೂ. ಕಳೆದುಕೊಂಡಿದ್ದಾನೆ!
ಕಾನ್ಪುರದ ಅವಿನಾಶ್ ಕುಮಾರ್ ಶುಕ್ಲಾ ಎಂಬ ವೃದ್ಧನನ್ನು ಪಶ್ಚಿಮ ಬಂಗಾಳ ಮೂಲದ ಪಾರ್ಥ ಸಿಂಘ್ರಾಯ್, ಮೋಲಾಯ ಸರ್ಕಾರ್ ಮತ್ತು ಸುದಿಪ್ತ ಸಿನ್ಹಾ ರಾಯ್ ಪರಿಚಯ ಮಾಡಿಕೊಂಡು ಯಾಮಾರಿಸಿದ್ದಾರೆ. ತಾವು ಸಿಂಗಾಪುರದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಅದರಲ್ಲಿ ಅವರು ಎರಡು ಕೋಟಿ ರೂಪಾಯಿ ಮೌಲ್ಯದ ಮ್ಯಾಜಿಕ್ ಮಿರರ್ ಒಂದನ್ನು ಮಾರಾಟ ಮಾರುತ್ತಿರುವುದಾಗಿ ತಿಳಿಸಿದ್ದಾರೆ. ಆ ಮ್ಯಾಜಿಕ್ ಮಿರರ್‌ನಲ್ಲಿ ಯಾರನ್ನೇ ನೋಡಿದರೂ ಅವರು ಬೆತ್ತಲೆಯಾಗಿ ಕಾಣುತ್ತಾರೆ. ಹಾಗೆಯೇ ಆ ಕನ್ನಡಿ ಭವಿಷ್ಯವನ್ನೂ ಹೇಳುತ್ತದೆ ಎಂದು ನಂಬಿಸಿದ್ದಾರೆ. ಈ ಕನ್ನಡಿಯನ್ನು ಅಮೆರಿಕದ ನಾಸಾದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಬಳಸುತ್ತಿದ್ದರು ಎಂದೂ ಹೇಳಿದ್ದಾರೆ. ಅದನ್ನು ಕೊಂಡುಕೊಳ್ಳುವಂತಹ ಆಸೆಯನ್ನು ಅವಿನಾಶ್ ಅವರಲ್ಲಿ ಹುಟ್ಟಿಸಿದ್ದಾರೆ.
ಇದನ್ನೂ ಓದಿ: Viral News : ಮದುವೆಯಾದ ದಿನದಂದೇ ಮುರಿದುಬಿತ್ತು ದಾಂಪತ್ಯ! ಅದಕ್ಕೆಲ್ಲ ಕಾರಣವಾಗಿದ್ದು ಆ ಒಂದು ಕೇಕ್!
ಅದೇ ಆಸೆಯಿಂದ ಮೊದಲಿಗೆ ಅವಿನಾಶ್ 9 ಲಕ್ಷ ರೂ.ಯನ್ನು ಅವರಿಗೆ ಕೊಟ್ಟಿದ್ದಾರೆ ಕೂಡ. ನಂತರ ಇದೇ ವಿಚಾರವಾಗಿ ಮತ್ತೊಮ್ಮೆ ಭೇಟಿ ಮಾಡಬೇಕೆಂದು ಮೋಸಗಾರರು ಭುವನೇಶ್ವರದ ಹೋಟೆಲ್ ಒಂದಕ್ಕೆ ಬರುವುದಕ್ಕೆ ಕೇಳಿದ್ದಾರೆ. ಆಗ ಅವಿನಾಶ್‌ಗೆ ಅನುಮಾನ ಬಂದಿದೆ. ಹಾಗಾಗಿ ನನಗೆ ಕನ್ನಡಿ ಬೇಡ, ನಾನು ಕೊಟ್ಟಿರುವ ಹಣವನ್ನು ವಾಪಸು ಕೊಟ್ಟುಬಿಡಿ ಎಂದು ಕೇಳಿದ್ದಾನೆ.
ಈ ರೀತಿ ಕೇಳಿದಾಗ ಅವರು ಹಣ ವಾಪಸ್ ಕೊಡಲು ಒಪ್ಪದ ಕಾರಣ ಅವಿನಾಶ್ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾನೆ. ಪೊಲೀಸರಲ್ಲಿ ನಡೆದ ವಿಚಾರದಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂರು ಆರೋಪಿಗಳನ್ನೂ ಬಂಧಿಸಲಾಗಿದೆ. ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Viral Video : ಕಾರಿನ ಮೇಲೆ ಸ್ಟಂಟ್ ಮಾಡಿದವನಿಗೆ ಬಿತ್ತು ಭಾರೀ ದಂಡ!
ಇದೇ ರೀತಿಯ ಇನ್ನೊಂದು ಪ್ರಕರಣ ಇತ್ತೀಚೆಗೆ ಸುದ್ದಿಯಾಗಿತ್ತು. ಗುಜರಾತ್‌ನಲ್ಲಿರುವ ಕೆಲವೊಂದಿಷ್ಟು ಮಂದಿ ಚೀನಾ ಮೂಲಕ ನಾಗರಿಕರೊಂದಿಗೆ ಸೇರಿಕೊಂಡು ಫುಟ್‌ಬಾಲ್ ಬೆಟ್ಟಿಂಗ್ ಆಪ್ ಒಂದನ್ನು ತಯಾರಿಸಿದ್ದರು. ಆ ಆಪ್ ಮೂಲಕ ಅವರು 9 ದಿನಗಳಲ್ಲಿ ಬರೋಬ್ಬರಿ 1,200 ಜನರಿಗೆ ಮೋಸ ಮಾಡಿದ್ದರು. ಕೋಟ್ಯಂತರ ರೂ. ದೋಚಿಕೊಂಡಿದ್ದರು. ಈ ಪ್ರಕರಣ ಭೇದಿಸಲು ಪೊಲೀಸರು ವಿಶೇಷ ತಂಡವನ್ನೂ ರಚಿಸಿಕೊಂಡಿದ್ದರು.