Site icon Vistara News

ಇಂತಹ ಶಿಕ್ಷಕರೂ ಇರ್ತಾರಾ? ಹೋಮ್‌ವರ್ಕ್‌ ಮಾಡದ ವಿದ್ಯಾರ್ಥಿಯ ಹಲ್ಲು ಮುರಿಯುವಂತೆ ಹೊಡೆದ ಆಸಿಫ್‌ ಈಗ ಪೊಲೀಸ್‌ ಅತಿಥಿ

Viral News

Viral News

ಲಕ್ನೋ: ಉತ್ತರ ಪ್ರದೇಶದ ರಾಯ್‌ಬರೇಲಿ ಖಾಸಗಿ ಶಾಲೆಯೊಂದರಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು, ಶಿಕ್ಷಕ ನೀಡಿದ ಸಜೆಯಿಂದ ವಿದ್ಯಾರ್ಥಿಯೋರ್ವ ಕಂಗಾಲಾಗಿದ್ದಾನೆ. ಶಿಕ್ಷಕ ಮೊಹಮ್ಮದ್‌ ಆಸಿಫ್‌ ತೋರಿದ ಪ್ರತಾಪದಿಂದ 10ನೇ ತರಗತಿ ವಿದ್ಯಾರ್ಥಿಯ ಹಲ್ಲು ಮುರಿದಿರುವುದಲ್ಲದೆ ದೇಹದ ವಿವಿಧ ಕಡೆ ಅನೇಕ ಗಾಯಗಳಾಗಿವೆ. ಸದ್ಯ ಈ ವಿಚಾರ ವೈರಲ್‌ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ (Viral News).

ಕಾರಣ ಏನು?

ವಿದ್ಯಾರ್ಥಿ ಹೋಮ್‌ವರ್ಕ್‌ ಮಾಡದಿದ್ದುದರಿಂದ ಕೋಪಗೊಂಡ ಮೊಹಮ್ಮದ್‌ ಆಸಿಫ್‌ ಈ ರೀತಿ ವರ್ತಿಸಿದ್ದಾನೆ. ಮೊಹಮ್ಮದ್‌ ಆಸಿಫ್‌ ಎಷ್ಟು ತೀವ್ರವಾಗಿ ಥಳಿಸಿದನೆಂದರೆ ಹೊಡೆತ ತಾಳಲಾರದೆ ವಿದ್ಯಾರ್ಥಿ ಪ್ರಜ್ಞೆ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ನಂತರ ಮೊಹಮ್ಮದ್‌ ಆಸಿಫ್‌ ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಾರೆ. ನಂತರ ಅವರು ಗಾಯಗೊಂಡ ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ದರು. ಇದೀಗ ಪೊಲೀಸರು ಮೊಹಮ್ಮದ್‌ ಆಸಿಫ್‌ನನ್ನು ಬಂಧಿಸಿದ್ದಾರೆ.

ಮೊಹಮ್ಮದ್‌ ಆಸಿಫ್‌ ವಿಜ್ಞಾನ (ಕೆಮಿಸ್ಟ್ರಿ ಮತ್ತು ಫಿಸಿಕ್ಸ್‌) ಬೋಧಿಸುತ್ತಿದ್ದ. ಏಪ್ರಿಲ್‌ನ ಬೇಸಿಗೆ ರಜೆಯಲ್ಲಿ ಹೋಮ್‌ವರ್ಕ್‌ ನೀಡಲಾಗಿತ್ತು. ಮಂಗಳವಾರ ವಿದ್ಯಾರ್ಥಿಗಳ ಬಳಿ ಮೊಹಮ್ಮದ್‌ ಆಸಿಫ್‌ ಹೋಮ್‌ವರ್ಕ್‌ ತೋರಿಸುವಂತೆ ಕೇಳಿದ್ದ ಎಂದು ಸಲೋನ್ ಸ್ಟೇಷನ್ ಹೌಸ್ ಆಫೀಸರ್ (SHO) ಜೆ.ಪಿ.ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿ, “ಕೆಲವು ವೈಯಕ್ತಿಕ ಸಮಸ್ಯೆಗಳಿಂದಾಗಿ ಹೋಮ್‌ವರ್ಕ್‌ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿ ತಿಳಿಸಿದ್ದ. ತಾಳ್ಮೆ ಕಳೆದುಕೊಂಡು ಆಸಿಫ್‌ ಮೊದಲು ಕೋಲಿನಿಂದ ಥಳಿಸಿದ್ದ. ಪರಿಣಾಮವಾಗಿ ಬಾಲಕ ಪ್ರಜ್ಞೆ ತಪ್ಪಿ ಬಿದ್ದ. ಆತನ ಬಾಯಿ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ” ಎಂದು ಹೇಳಿದ್ದಾರೆ. ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ʼʼಗಂಭೀರ ಗಾಯಗೊಂಡ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತ ಚೇತರಿಸಿಕೊಂಡಿದ್ದು, ಡಿಸ್‌ಚಾರ್ಜ್‌ ಮಾಡಲಾಗಿದೆ. ಕ್ರೂರವಾಗಿ ನಡೆದುಕೊಂಡ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಬೇಕುʼʼ ಎಂದು ಬಾಲಕನ ತಂದೆ ತಿಳಿಸಿದ್ದಾರೆ. ಶಾಲೆಯು ಶಿಕ್ಷಕನ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಿದೆ ಎಂದು ಎಸ್ಎಚ್ಒ ಮಾಹಿತಿ ನೀಡಿದ್ದಾರೆ.

ನೆಟ್ಟಿಗರಿಂದ ಆಕ್ರೋಶ

ಸದ್ಯ ಈ ವಿಚಾರ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಹಲವರು ಶಿಕ್ಷಕನ ವರ್ತನೆಗೆ ಛೀಮಾರಿ ಹಾಕಿದ್ದಾರೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಶಿಕ್ಷೆ ನೀಡುತ್ತಿದ್ದರು. ಆದರೆ ಈ ರೀತಿ ಕ್ರೂರವಾಗಿ ನಡೆದುಕೊಳ್ಳುತ್ತಿರಲಿಲ್ಲ. ಮನದಟ್ಟು ಮಾಡುವ ಹಾಗೆ ಹೇಳಿಕೊಡುತ್ತಿದ್ದರೇ ವಿನಃ ಈ ರೀತಿ ಹಲ್ಲೆ ನಡೆಸುತ್ತಿರಲಿಲ್ಲ ಎಂದು ಹಲವರು ತಿಳಿಸಿದ್ದಾರೆ. ಶಿಕ್ಷಕನ ವಿರುದ್ದ ಕ್ರಮ ಕೈಗೊಳ್ಳಬೇಕು

ಇದನ್ನೂ ಓದಿ: School Teacher: ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಶಿಕ್ಷಕಿ ಪುಂಡಾಟ; ನೆರೆಮನೆಯವರ ಮೇಲೂ ಹಲ್ಲೆ

ಶಿಕ್ಷಕರ ಮೇಲೆಯೇ ಚಪ್ಪಲಿಯಿಂದ ಹಲ್ಲೆ ಮಾಡಿದ ವಿದ್ಯಾರ್ಥಿ!

ಕೆಲವು ತಿಂಗಳ ಹಿಂದೆ ವಿದ್ಯಾರ್ಥಿಯೊಬ್ಬ ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವ ವಿಡಿಯೊ ವೈರಲ್‌ ಆಗಿತ್ತು. ಲೈವ್‌ ಕ್ಲಾಸ್‌ ನಡೆಯುತ್ತಿದ್ದ ಸಮಯದಲ್ಲೇ ಏಕಾಏಕಿ ಬಂದ ಆಗಮಿಸಿದ ವಿದ್ಯಾರ್ಥಿ ಶಿಕ್ಷಕರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.

Exit mobile version