ಮುಂಬೈ: ಎಂತೆಂಥದ್ದೋ ವಿಚಿತ್ರ ಕಾಯಿಲೆಗಳಿರುತ್ತವೆ. ಅದೇ ರೀತಿ ತನ್ನ ಕೂದಲನೇ ಕಿತ್ತು ತಿನ್ನುವ ವಿಚಿತ್ರ ಕಾಯಿಲೆಯಿರುವ ಬಾಲಕಿಯೊಬ್ಬಳು ಇದೀಗ ಸುದ್ದಿಯಲ್ಲಿದ್ದಾಳೆ. ಮಹಾರಾಷ್ಟ್ರದ ಈ ಬಾಲಕಿಯ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ 100 ಗ್ರಾಂ ತೂಕದ ಕೂದಲ ಉಂಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ (Viral News) ಹೊರತೆಗೆದಿದ್ದಾರೆ.
ಇದನ್ನೂ ಓದಿ: Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ!
ಕಿಯಾರಾ ಬನ್ಸಾಲ್ ಹೆಸರಿನ ಬಾಲಕಿಗೆ ಟ್ರೈಕೋಫಾಗಿಯಾಸ್ ಹೆಸರಿನ ವಿಚಿತ್ರ ಕಾಯಿಲೆ ಇತ್ತು. ಇದರಿಂದಾಗಿ ಆಕೆ ತನ್ನದೇ ಕೂದಲನ್ನು ಕಿತ್ತು ತಿನ್ನುತ್ತಿದ್ದಳು. ಆಕೆಯ ಸಮಸ್ಯೆ ಗಂಭೀರವಾದ್ದರಿಂದಾಗಿ ಇತ್ತೀಚೆಗೆ ಆಕೆಯನ್ನು ಪರೇಲ್‌ನಲ್ಲಿರುವ ಬಾಯಿ ಜೆರ್ಬೈ ವಾಡಿಯಾ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಕ್ಕಳ ಶಸ್ತ್ರಚಿಕಿತ್ಸಕ ಪರಾಗ್ ಕರ್ಕೇರಾ ಅವರು ಬಾಲಕಿಯ ವೈದ್ಯಕೀಯ ಚಿಕಿತ್ಸೆ ನಡೆಸಿದ್ದಾರೆ.
ಮೊದಲಿಗೆ ಬಾಲಕಿಯ ಹೊಟ್ಟೆಯಲ್ಲಿ ಗೆಡ್ಡೆ ಏನಾದರೂ ಬೆಳೆದಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಸಿಟಿ ಸ್ಕ್ಯಾನ್ ಮಾಡಿದಾಗ ಬಾಲಕಿಯ ಹೊಟ್ಟೆಯಲ್ಲಿ ಕೂದಲಿನ ರಾಶಿ ಇರುವುದು ಕಂಡುಬಂದಿದೆ. ಆ ಕೂದಲು ಸಣ್ಣ ಕರುಳಿನವರೆಗೂ ತಲುಪಿರುವುದು ಗೊತ್ತಾಗಿದೆ. ಕೂದಲು ಹೊಟ್ಟೆಯಲ್ಲಿ ಕರಗುವುದಿಲ್ಲವಾದ್ದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲೇ ಉಳಿದುಕೊಳ್ಳುತ್ತದೆ. ನಂತರ ಅದೇ ಒಂದು ಚೆಂಡಾಗಿ ಕಾಯಿಲೆ ಉಂಟು ಮಾಡುತ್ತದೆ. ಮಕ್ಕಳಲ್ಲಿ ಇದು ಅಪರೂಪವಾಗಿ ಕಾಣಿಸಿಕೊಳ್ಳುವ ಕಾಯಿಲೆ ಎಂದು ವೈದ್ಯರು ವಿವರಿಸಿದ್ದಾರೆ.
ಇದನ್ನೂ ಓದಿ: Viral Video: ಇದು ಕುದುರೆ ಸವಾರಿಯಲ್ಲ, ಮೊಸಳೆ ಸವಾರಿ! ಭಯ ತರಿಸುವ ವಿಡಿಯೊ
ಸತತವಾಗಿ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಬಾಲಕಿಯ ಹೊಟ್ಟೆಯಿಂದ ಕೂದಲಿನ ಉಂಡೆ ಹೊರತೆಗೆಯಲಾಗಿದೆ. ಬಾಲಕಿಗೆ ಕೂದಲು ನುಂಗುವ ಅಭ್ಯಾಸವಿದ್ದದ್ದು ಆಕೆಯ ತಂದೆ ತಾಯಿಗೇ ತಿಳಿದಿರಲಿಲ್ಲ ಎಂದು ಹೇಳಲಾಗಿದೆ.