Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್‌ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ! - Vistara News

ವಿದೇಶ

Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್‌ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ!

ಜಪಾನ್‌ನಲ್ಲಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರಿಗೆ ಇಲಾಖೆ 9 ಲಕ್ಷ ರೂ. ದಂಡ ವಿಧಿಸಿದೆ. ಕೆಲಸದ ಅವಧಿಯಲ್ಲಿ ಸಿಗರೇಟ್‌ ಸೇದಿದ ಕಾರಣಕ್ಕೆ ಈ ದಂಡ (Viral News) ವಿಧಿಸಲಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟೋಕಿಯೊ: ಭಾರತದಲ್ಲಿ ಕೆಲಸದ ವೇಳೆ ವಿರಾಮ ತೆಗೆದುಕೊಳ್ಳುವುದು ದೊಡ್ಡ ವಿಚಾರವೇನಲ್ಲ. ಎಷ್ಟೋ ಮಂದಿ ಕೆಲಸದ ಮಧ್ಯೆಯೇ ಗಂಟೆಗಳ ಕಾಲ ವಿರಾಮ ತೆಗೆದುಕೊಳ್ಳುವವರೂ ಇದ್ದಾರೆ. ಆದರೆ ಜಪಾನ್‌ನಲ್ಲಿ ಹಾಗಿಲ್ಲ. ಕೆಲಸದ ಅವಧಿಯಲ್ಲಿ ಸಿಗರೇಟ್‌ ಸೇದುವುದು ಆ ದೇಶದಲ್ಲಿ ಅಕ್ಷಮ್ಯ ಅಪರಾಧವಿದ್ದಂತೆ. ಅದನ್ನೂ ಲೆಕ್ಕಿಸದೆ ಸಿಗರೇಟ್‌ ಸೇದಿದ್ದ ಉದ್ಯೋಗಿ ಇದೀಗ ಭಾರೀ ಮೊತ್ತದ ದಂಡ ತೆರಬೇಕಾದ ಪರಿಸ್ಥಿತಿ (Viral News) ಬಂದೊದಗಿದೆ.

ಇದನ್ನೂ ಓದಿ: Viral Video: ಇದು ಕುದುರೆ ಸವಾರಿಯಲ್ಲ, ಮೊಸಳೆ ಸವಾರಿ! ಭಯ ತರಿಸುವ ವಿಡಿಯೊ
ಜಪಾನ್‌ನ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 61 ವರ್ಷದ ವ್ಯಕ್ತಿಗೆ ಇದೀಗ ಇಲಾಖೆ ಬರೋಬ್ಬರಿ 9 ಲಕ್ಷ ರೂ. ದಂಡ ವಿಧಿಸಿದೆ. ಅದಕ್ಕೆ ಕಾರಣ ಸಿಗರೇಟ್‌ ಸೇದಿರುವುದು. ಹೌದು. ಈ ವ್ಯಕ್ತಿ ಕಳೆದ 14 ವರ್ಷಗಳಲ್ಲಿ ಸಿಗರೇಟ್‌ ಸೇದುವುದಕ್ಕೆಂದೇ 4,500 ಬಾರಿ ವಿರಾಮ ತೆಗೆದುಕೊಂಡಿದ್ದಾರೆ. ಬರೋಬ್ಬರಿ 355 ಗಂಟೆ ಮತ್ತು 19 ನಿಮಿಷಗಳನ್ನು ಸಿಗರೇಟ್‌ ಸೇದುವುದರಲ್ಲೇ ಕಳೆದಿದ್ದಾರೆ. ಇವರ ಜತೆಗೆ ಇವರಿಬ್ಬರು ಸ್ನೇಹಿತರೂ ಕೂಡ ಹಲವಾರು ಗಂಟೆ ಸಿಗರೇಟ್‌ ಸೇದುವುದಕ್ಕೆ ಕಳೆದಿದ್ದಾರೆ. ಮೂರು ಉದ್ಯೋಗಿಗಳಿಗೆ ಇಲಾಖೆ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದೆ.

ಎಷ್ಟು ಬಾರಿ ಎಚ್ಚರಿಕೆ ಕೊಟ್ಟರ ಎಚೆತ್ತುಕ್ಕೊಳ್ಳದ ಈ ಮೂರು ಉದ್ಯೋಗಿಗಳ ವಿರುದ್ಧ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತನಿಖೆ ಆರಂಭಿಸಲಾಗಿದೆ. ತನಿಖಾ ವರದಿ ಬಂದ ನಂತರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. 61 ವರ್ಷದ ವ್ಯಕ್ತಿಯು ನಿರ್ದೇಶಕರ ಮಟ್ಟದ ಹುದ್ದೆಯಲ್ಲಿದ್ದು, ಅವರಿಗೆ ಒಟ್ಟು 9 ಲಕ್ಷ ರೂ. ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೆ ಮುಂದಿನ ಆರು ತಿಂಗಳ ಕಾಲ ಅವರ ಸಂಬಳದಲ್ಲಿ ಶೇ.10ನ್ನು ಕಡಿತ ಮಾಡಿರುವುದಾಗಿಯೂ ಹೇಳಲಾಗಿದೆ.

ಇದನ್ನೂ ಓದಿ: Viral Video: ಭಾರತದಲ್ಲಿ ವಿಶ್ವದಲ್ಲೇ ಎತ್ತರದ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ, ಇಲ್ಲಿದೆ ವಿಡಿಯೊ
ಜಪಾನ್‌ ಕೆಲಸದ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಾದ ದೇಶ. ಅಲ್ಲಿ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವ ಹಾಗೂ ಕೆಲಸದಿಂದ ಮನೆಗೆ ತೆರಳುವ ಸಮಯವನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಕೇವಲ ಮೂರು ನಿಮಿಷ ಬೇಗ ಮನೆಗೆ ಹೋದರು ಎನ್ನುವ ಕಾರಣಕ್ಕೇ ಉದ್ಯೋಗಿಗಳಿಗೆ ದಂಡ ವಿಧಿಸಿದ ಘಟನೆಗಳೂ ಜಪಾನ್‌ನಲ್ಲಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

Maldives Tourism: ಆಡಬಾರದ್ದನ್ನು ಆಡಿದರೆ ಆಗಬಾರದ್ದು ಆಗುತ್ತದೆ ಎನ್ನುವ ಮಾತು ಈಗ ಮಾಲ್ದೀವ್ಸ್‌ನ ಪಾಲಿಗೆ ನಿಜ ಎನಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದನ್ನು ಲೇವಡಿ ಮಾಡಿದ ಪರಿಣಾಮವನ್ನು ಈ ದ್ವೀಪ ರಾಷ್ಟ್ರ ಈಗ ಅನುಭವಿಸುತ್ತಿದೆ. ಇಲ್ಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್‌ಗೆ ಇದು ಬಹು ದೊಡ್ಡ ಹೊಡೆತ ಎಂದೇ ಪರಿಗಣಿಸಲಾಗುತ್ತಿದೆ.

VISTARANEWS.COM


on

Maldives Tourism
Koo

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಕೆಲವು ತಿಂಗಳ ಹಿಂದೆ ಲಕ್ಷದ್ವೀಪ (Lakshadweep)ಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದರು. ಅದಕ್ಕೆ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ನ ಪ್ರವಾಸೋದ್ಯಮ (Maldives Tourism)ಕ್ಕೆ ಈಗ ಭಾರಿ ಹೊಡೆತ ಬಿದ್ದಿದೆ. ಈ ವರ್ಷದ ಜನವರಿಯಿಂದ ಮಾರ್ಚ್‌ ತನಕ ದ್ವೀಪ ರಾಷ್ಟ್ರಕ್ಕೆ ಕೇವಲ 34,847 ಮಂದಿ ಭೇಟಿ ನೀಡಿದ್ದಾರೆ. ಅದೇ ಕಳೆದ ವರ್ಷ ಈ ಅವಧಿಯಲ್ಲಿ ಮಾಲ್ಡೀವ್ಸ್‌ಗೆ 56,208 ಭಾರತೀಯರು ತೆರಳಿದ್ದರು ಎಂದು ಅಂಕಿ-ಅಂಶಗಳು ತಿಳಿಸಿವೆ. ಭಾರತ ಹಾಗೂ ಮೋದಿ ಕುರಿತು ಅಸಮಾಧಾನದ ಹೇಳಿಕೆ ನೀಡಿದ್ದ ಮಾಲ್ಡೀವ್ಸ್‌ ಈಗ ಅದಕ್ಕೆ ತಕ್ಕ ಪರಿಣಾಮ ಎದುರಿಸುತ್ತಿದೆ.

ʼʼಕಳೆದ ವರ್ಷಕ್ಕೆ ಹೋಲಿಸಿದರೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 38ರಷ್ಟು ಕುಸಿತವಾಗಿದೆ. ಮತ್ತು ಇದು 2019ರ ಮೊದಲ ತ್ರೈ ಮಾಸಿಕದಲ್ಲಿ ಭೇಟಿ ನೀಡಿದ್ದ 36,053 ಭಾರತೀಯ ಪ್ರಯಾಣಿಕರ ಸಂಖ್ಯೆಗಿಂತಲೂ ಕಡಿಮೆʼʼ ಎಂದು ಮೂಲಗಳು ತಿಳಿಸಿವೆ.

ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ʼಇಂಡಿಯಾ ಔಟ್ʼ ಅಭಿಯಾನ ಮತ್ತು ಅದರ ನಂತರ ಭಾರತೀಯರು ಮಾಲ್ಡೀವ್ಸ್ ಬಹಿಷ್ಕಾರದ ಕರೆ ನೀಡಿದ್ದರಿಂದ ಈ ಕುಸಿತ ಕಂಡು ಬಂದಿದೆ. ಕೆಲವು ದಿನಗಳ ಹಿಂದೆ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ಬಳಿಕ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ʼಮಾಲ್ಡೀವ್ಸ್ ಬಹಿಷ್ಕಾರʼ ಕೂಗಿನ ಜತೆಗೆ ʼಲಕ್ಷದ್ವೀಪಕ್ಕೆ ಭೇಟಿ ನೀಡಿʼ ಎಂಬ ಅಭಿಯಾನ ಆರಂಭವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಳಿಕ ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿಕೊಂಡಿದ್ದರು. ಅದರ ಪರಿಣಾಮ ಈಗ ಅಂಕಿ-ಅಂಶದಲ್ಲಿ ಪ್ರತಿಫಲಿಸಿದೆ.

ಸದ್ಯ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರ ಪೈಕಿ ಚೀನಾದವರು ಅಗ್ರ ಸ್ಥಾನದಲ್ಲಿದ್ದಾರೆ. ಕೋವಿಡ್‌ ಪೂರ್ವದಲ್ಲಿ ಚೀನಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಇದೀಗ ಮತ್ತೆ ಈ ಪಟ್ಟವನ್ನು ಚೀನಾ ಪಡೆದುಕೊಂಡಿದೆ. 2024ರ ಏಪ್ರಿಲ್‌ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬ್ರಿಟನ್‌, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ.

ಅಂಕಿ-ಅಂಶ ಏನು ಹೇಳುತ್ತದೆ?

ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ 2018ರಲ್ಲಿ 1 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯ ಭಾರತೀಯರು ಭೇಟಿ ನೀಡಿದ್ದರೆ 2.83 ಲಕ್ಷ ಚೀನೀ ಪ್ರವಾಸಿಗರು ತೆರಳಿದ್ದರು. ಇನ್ನು 2019ರಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 1.6 ಲಕ್ಷಕ್ಕೆ ಏರಿತ್ತು. 2021ರಲ್ಲಿ ದಾಖಲೆಯ 2.91 ಲಕ್ಷ ಭಾರತೀಯರು ಮಾಲ್ಡೀವ್ಸ್‌ಗೆ ತೆರಳಿದ್ದರು. ಕೋವಿಡ್‌ ನಿರ್ಬಂಧದ ಕಾರಣ ಆ ವರ್ಷ ಕೇವಲ 2,238 ಚೀನೀಯರು ಭೇಟಿ ನೀಡಿದ್ದರು.

ಇದನ್ನೂ ಓದಿ: ಮೋದಿ ಏಟಿಗೆ ತಬ್ಬಿಬ್ಬು; ಪ್ರವಾಸಿಗರ ಸೆಳೆಯಲು ಭಾರತದಲ್ಲಿ ರೋಡ್‌ಶೋಗೆ ಮಾಲ್ಡೀವ್ಸ್‌ ನಿರ್ಧಾರ!

ಇತರ ಕಾರಣಗಳು

ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಕುಸಿಯಲು ಇನ್ನೂ ಕೆಲವು ಕಾರಣಗಳಿವೆ. ವಿಯೆಟ್ನಾಂ ಮತ್ತು ಇಂಡೋನೇಷ್ಯಾಕ್ಕೆ ಸುಲಭ ಪ್ರವೇಶ, ನೇರ ಸಂಪರ್ಕ ಮತ್ತು ಥೈಲ್ಯಾಂಡ್ ಮತ್ತು ಮಲೇಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ ಇತ್ಯಾದಿ ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಮಾಲ್ಡೀವ್ಸ್‌ನ ಜನಪ್ರಿಯತೆ ಈಗ ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಜತೆಗೆ ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಮಾಲ್ಡೀವ್ಸ್‌ ದುಬಾರಿ ಎನಿಸಿಕೊಂಡಿದೆ. ಇದೆಲ್ಲವೂ ಪರಿಣಾಮ ಬೀರಿದೆ.

Continue Reading

ಸಿನಿಮಾ

Banned Film: ಈ 9 ಹಾಲಿವುಡ್ ಚಿತ್ರಗಳು ಭಾರತದಲ್ಲಿ ಬ್ಯಾನ್!

Banned Film: ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವ ಒಂದಷ್ಟು ಹಾಲಿವುಡ್ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಿಲ್ಲ. ಭಾರತದಲ್ಲಿ ಪ್ರದರ್ಶನಗೊಳ್ಳದ ಆ ಸಿನಿಮಾಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

VISTARANEWS.COM


on

Banned Films
Koo

ಬೆಂಗಳೂರು: ಭಾರತದಲ್ಲಿ ಯಾವುದೇ ಚಲನಚಿತ್ರಗಳು ಪ್ರದರ್ಶನ ಕಾಣಬೇಕೆಂದರೆ ಮೊದಲು ಭಾರತೀಯ ಸೆನ್ಸಾರ್ ಮಂಡಳಿಯ ಅನುಮತಿ ಪಡೆಯಬೇಕು.  ಭಾರತೀಯ ಸೆನ್ಸಾರ್ ಮಂಡಳಿಯು ಉತ್ತಮವಾದ ಚಲನಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಅಶ್ಲೀಲ ದೃಶ್ಯಾವಳಿ, ಕೆಟ್ಟ ಬೈಗುಳ ಪದಗಳಿರುವಂತಹ ಚಿತ್ರಗಳನ್ನು ಬ್ಯಾನ್ (Banned Film) ಮಾಡಲಾಗುತ್ತದೆ. ಇಂತಹ ಚಿತ್ರಗಳು ಜನರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಸೆನ್ಸಾರ್ ಮಂಡಳಿ ಅನುಮತಿ ನೀಡುವುದಿಲ್ಲ.

ಒಟಿಟಿ ಅಥವಾ ವಿದೇಶಿ ಮಾರುಕಟ್ಟೆಗಳಲ್ಲಿ ದೊಡ್ಡ ಹೆಸರು ಗಳಿಸಿರುವಂತಹ ಕೆಲವೊಂದು ಚಲನಚಿತ್ರಗಳು ಭಾರತದಲ್ಲಿ ಬಿಡುಗಡೆಯಾಗಲಿಲ್ಲ. ಸೆನ್ಸಾರ್ ಮಂಡಳಿ ಇದಕ್ಕೆ ಅನುಮತಿ ನೀಡಿರಲಿಲ್ಲ. ಈ ಪ್ರಸಿದ್ಧ ಚಲನಚಿತ್ರಗಳನ್ನು ಭಾರತೀಯ ಸೆನ್ಸಾರ್ ಮಂಡಳಿಯು ಸ್ಪಷ್ಟ ವಿಷಯಗಳ ಕಾರಣದಿಂದ ಭಾರತದಲ್ಲಿ ನಿಷೇಧಿಸಿದೆ. ಅಂತಹ ಹಾಲಿವುಡ್ ಚಿತ್ರಗಳ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Banned Film

1. ಫಿಫ್ಟಿ ಶೇಡ್ಸ್ ಆಫ್ ಗ್ರೇ(Fifty Shade Of Gray)

ಈ ಚಿತ್ರದ ಕಥೆ ಅನಾ ಎಂಬ ಕಾಲೇಜು ವಿದ್ಯಾರ್ಥಿನಿಯ ಸುತ್ತ ಸುತ್ತುತ್ತದೆ. ಆಕೆ ಒಬ್ಬ ವ್ಯಾಪಾರಿ ಉದ್ಯಮಿ ಕ್ರಿಶ್ಚಿಯನ್ನೊಂದಿಗೆ ಸಂಬಂಧ ಹೊಂದುತ್ತಾಳೆ. ಈ ಚಿತ್ರದಲ್ಲಿ ಹೆಚ್ಚು ಲೈಂಗಿಕತೆಯ ಬಗ್ಗೆ ಚಿತ್ರೀಕರಿಸಲಾಗಿದೆ. ಹಾಗಾಗಿ ಈ ಚಿತ್ರವನ್ನು ಭಾರತೀಯ ಸೆನ್ಸರ್ ಮಂಡಳಿ ನಿಷೇಧಿಸಿದೆ.

Banned Film

2. ದ ಡಾ ವಿನ್ಸಿ ಕೋಡ್ (The Da Vinci Code)

ಈ ಚಿತ್ರ ಡಿ ವಿನ್ಸಿ ಕೋಡ್ ರಾಬರ್ಟ್ ಲ್ಯಾಂಗ್ಡನ್ ಎಂಬ ಸಂಕೇತಶಾಸ್ತ್ರಜ್ಞನ ಬಗ್ಗೆ ಚಿತ್ರಿಸುತ್ತದೆ. ಅವರು ಪ್ಯಾರಿಸ್ ನಿಂದ ಲಂಡನ್ ಗೆ ಒಂದು ಕೊಲೆಯ ಬಗ್ಗೆ ತಿಳಿಯಲು ಹೋಗುತ್ತಾರೆ. ಈ ಚಿತ್ರದಲ್ಲಿ ಕ್ರಿಶ್ಚಿಯನ್ ವಿರೋಧಿ ಸಂದೇಶವನ್ನು ನೀಡಲಾಗಿದೆ. ಹಾಗಾಗಿ ಈ ಚಿತ್ರವನ್ನು ನಿಷೇಧಿಸುವಂತೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬಾರತೀಯ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ಬ್ಯಾನ್ ಮಾಡಿದೆ.

3. ದ ಗರ್ಲ್ ವಿತ್ ಡ್ರ್ಯಾಗನ್ ಟ್ಯಾಟೂ (The Girl With Dragon Tattoo)

ಈ ಚಿತ್ರ ನಲವತ್ತು ವರ್ಷಗಳ ಹಿಂದೆ ನಾಪತ್ತೆಯಾದ ಮಹಿಳೆಯೊಬ್ಬಳ ಪ್ರಕರಣವನ್ನು ಭೇದಿಸಲು ಕಂಪ್ಯೂಟರ್ ಹ್ಯಾಕರ್ ಅನ್ನು ನೇಮಿಸಿಕೊಳ್ಳುವ ಪತ್ರಕರ್ತನ ಸುತ್ತ ಸುತ್ತುತ್ತದೆ. 2011ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಸೆನ್ಸರ್ ಮಂಡಳಿ ತೆಗೆದುಹಾಕುವಂತೆ ಹೇಳಿತು. ಆದರೆ ನಿರ್ದೇಶಕ ಡೇವಿಡ್ ಫಿಂಚರ್ ಇದನ್ನು ನಿರಾಕರಿಸಿದ್ದರಿಂದ ಭಾರತದಲ್ಲಿ ಈ ಚಿತ್ರ ಬಿಡುಗಡೆಯಾಗಲಿಲ್ಲ.

Banned Film

4. ಡರ್ಟಿ ಗ್ರ್ಯಾಂಡ್ ಪಾ( durty Grand pa)

ಇದು  ಯುಎಸ್ ನ ಮಿಲಿಟರಿ ಪರಿಣತರನ್ನು ಆಧರಿಸಿದ ಚಿತ್ರವಾಗಿದೆ. ಒಬ್ಬ ಅಜ್ಜ ಮೊಮ್ಮಗ ಜೇಸನ್ ಎನ್ನುವವನನ್ನು ತನ್ನ ಜೊತೆ ಪ್ಲೋರಿಡಾಕ್ಕೆ ಕರೆದೊಯ್ದರು. ಪ್ರವಾಸದ ವೇಳೆ ಅಜ್ಜನ ಸರಣಿ ದುಷ್ಕೃತ್ಯಗಳ ಬಗ್ಗೆ ಆತನಿಗೆ ತಿಳಿದಿರುವುದಿಲ್ಲ. ಈ ಚಿತ್ರದಲ್ಲಿ ಲೈಂಗಿಕತೆಯ ಬಗ್ಗೆ ಬಿಂಬಿಸಿದ ಕಾರಣ ಇದು ಭಾರತದಲ್ಲಿ ಬಿಡುಗಡೆಯಾಗಲಿಲ್ಲ.

Banned Film

5. ಬ್ಲೂ ಜಾಸ್ಮಿನ್ ( Blue Jasmine)

ಈ ಚಿತ್ರದಲ್ಲಿ ಕೆಲವು ಪಾತ್ರಗಳು ಹೆಚ್ಚು ಧೂಮಪಾನ ಮಾಡುತ್ತಿರುವುದು ಕಂಡುಬಂದ ಕಾರಣ ಅದನ್ನು ತೆಗೆಯುವಂತೆ ಸೆನ್ಸಾರ್ ಮಂಡಳಿ ತಿಳಿಸಿದ್ದು, ಇದಕ್ಕೆ ನಿರ್ದೇಶಕರು ಒಪ್ಪದ ಕಾರಣ ಈ ಚಿತ್ರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ.

6. ಐ ಸ್ಪಿಟ್ ಆನ್ ಯುವರ್ ಗ್ರೇವ್ ( I Spit On Your Grave)

ಈ ಚಿತ್ರ ವಿವಾದಾತ್ಮಕವಾಗಿದ್ದು, ಹಲವಾರು ಭಯಾನಕ ಲೈಂಗಿಕ ಕಿರುಕುಳದ ದೃಶ್ಯಗಳನ್ನು ಹೊಂದಿದೆ. ಮೀರ್ ಜಾರ್ಚಿ ನಿರ್ದೇಶನದ ಈ ಚಿತ್ರವನ್ನು ಭಾರತ ಮಾತ್ರವಲ್ಲದೇ ಯುಕೆ, ಕೆನಡಾ, ಚೀನಾ, ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಲ್ಲಿ ನಿಷೇಧಿಸಲಾಗಿದೆ.

7. ಇಂಡಿಯಾನ ಜೋನ್ಸ್ ಆ್ಯಂಡ್ ದ ಟೆಂಪಲ್ ಆಫ್ ಡೂಮ್( Indiana Jones And The Temple Of Doom)

ಆರಾಧನೆಯ ಹೆಸರಿನಲ್ಲಿ ಬಲಿಪಶುಗಳನ್ನು ಬೆಂಕಿಗೆ ಎಸೆಯುವಂತಹ ಕ್ರೂರ ದೃಶ್ಯವನ್ನು ಒಳಗೊಂಡ ಈ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲಿಲ್ಲ. ಭಾರತೀಯ ಸೆನ್ಸಾರ್ ಮಂಡಳಿ ಇದನ್ನು ಕೆಟ್ಟ ಆಚರಣೆಯ ಮನಸ್ಥಿತಿ ಎಂದು ನಿಷೇಧಿಸಿದೆ.

8. ಗೆಟ್ ಹಾರ್ಡ್(Get Hard)

ಕಾಮಿಡಿ ಥ್ರಿಲ್ಲರ್ ಜೇಮ್ಸ್ ಕಿಂಗ್ ಎಂಬ ವ್ಯಕ್ತಿಯನ್ನು ಬಗ್ಗೆ ತಿಳಿಸುತ್ತದೆ ಮತ್ತು ಅವರು ಅಪರಾಧಿ ಎಂದು ನಿರ್ಣಯಿಸಲಾಗುತ್ತದೆ. ಇದರಿಂದ ಜನರು ಆಕ್ರೋಶಗೊಳ್ಳಬಹುದು ಎಂದು ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ: Viral Video: ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!

Banned Film

9. ಮ್ಯಾಜಿಕ್ ಮೈಕ್ XXL( magic mike XXL)

ಈ ಚಿತ್ರ ಸ್ಟ್ರಿಪ್ಪರ್ ಎಂಬ ಪುರುಷನ ಜೀವನವನ್ನು ಬಿಂಬಿಸುತ್ತದೆ. ಈ ವ್ಯಕ್ತಿ ಸಮಾವೇಶಕ್ಕಾಗಿ ಮಿರ್ಟಲ್ ಬೀಚ್ ಗೆ ತಮ್ಮ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಾನೆ. ಆ ವೇಳೆ ಅವರು ತಮ್ಮ ಹಿಂದಿನ ಹಳೆಯ ನೆನಪುಗಳನ್ನು ಪುನರುಜ್ಜೀವನ ಗೊಳಿಸುತ್ತಾರೆ. ಇದರಲ್ಲಿ ಹೆಚ್ಚು ಲೈಂಗಿಕತೆಯ ಬಗ್ಗೆ ಬಿಂಬಿಸಲಾದ್ದರಿಂದ ಭಾರತದಲ್ಲಿ ಮೊದಲ ಬಾರಿಗೆ ನಿಷೇಧಗೊಂಡಿತ್ತು. ನಂತರ ಅದರಲ್ಲಿರುವ ದೃಶ್ಯವನ್ನು ಕತ್ತರಿಸಲು ಸೆನ್ಸಾರ್ ಮಂಡಳಿ ತಿಳಿಸಿದರೂ ಅದನ್ನು ನಿರಾಕರಿಸಿದ ಕಾರಣ ಅದು ಎರಡನೇ ಬಾರಿ ನಿಷೇಧಗೊಂಡಿತ್ತು. ಹಾಗಾಗಿ ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗಲಿಲ್ಲ.

Continue Reading

ವಿದೇಶ

Workers protest: ಇಸ್ರೇಲ್​ ಜತೆಗಿನ ಒಪ್ಪಂದ ವಿರೋಧಿಸಿ ಪ್ರತಿಭಟಿಸಿದ್ದ ಗೂಗಲ್​​ನ 28​ ಉದ್ಯೋಗಿಗಳ ವಜಾ

Workers protest: ಸಿಯಾಟಲ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಗೂಗಲ್ ಕಂಪೆನಿಯ ಕಚೇರಿಗಳಲ್ಲಿ ಪ್ರತಿಭಟನೆ ನಡೆಸಿದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿದ್ದು, ಇದೀಗ 28 ಮಂದಿಯನ್ನು ವಜಾಗೊಳಿಸಲಾಗಿದೆ.

VISTARANEWS.COM


on

By

Workers protest
Koo

ನ್ಯೂಯಾರ್ಕ್: ಇಸ್ರೇಲ್ ನೊಂದಿಗಿನ (Israel) ಕಂಪೆನಿ ಒಪ್ಪಂದವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ 28 ಉದ್ಯೋಗಿಗಳನ್ನು (Workers protest) ಟೆಕ್ ದೈತ್ಯ ಗೂಗಲ್ (google) ವಜಾಗೊಳಿಸಿದೆ. ಇಸ್ರೇಲ್ ಸರ್ಕಾರ ಮತ್ತು ಸೇನೆಗೆ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ ಸೇವೆಗಳನ್ನು ಒದಗಿಸಲು ಗೂಗಲ್ ಅಮೆಜಾನ್ ನೊಂದಿಗೆ (Amazon) ಸೇರಿ 1.2 ಬಿಲಿಯನ್ ಡಾಲರ್ ನ ಒಪ್ಪಂದ ಮಾಡಿಕೊಂಡಿತ್ತು.

ಇಸ್ರೇಲ್ ಸರ್ಕಾರದೊಂದಿಗೆ ಗೂಗಲ್ ಮಾಡಿರುವ 1.2 ಬಿಲಿಯನ್ ಡಾಲರ್ ಜಂಟಿ ಒಪ್ಪಂದವಾದ ಪ್ರಾಜೆಕ್ಟ್ ನಿಂಬಸ್‌ (Project Nimbus) ಅನ್ನು ವಿರೋಧಿಸಿ ಸಿಯಾಟಲ್, ನ್ಯೂಯಾರ್ಕ್ (New York) ಮತ್ತು ಕ್ಯಾಲಿಫೋರ್ನಿಯಾದ (California) ಸನ್ನಿವೇಲ್‌ನಲ್ಲಿರುವ ಕಂಪೆನಿಯ ಕಚೇರಿಗಳಲ್ಲಿ ಕಾರ್ಮಿಕರು ಏಪ್ರಿಲ್ 16 ರಂದು ಪ್ರತಿಭಟನೆ ನಡೆಸಿದ್ದರು.

ಸಿಯಾಟಲ್, ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಕಂಪನಿಯ ಕಚೇರಿಗಳಲ್ಲಿ ಮಂಗಳವಾರ ರಾತ್ರಿ ಧರಣಿ ನಡೆಸಿದ ಒಂಬತ್ತು ಉದ್ಯೋಗಿಗಳನ್ನು ಬಂಧಿಸಲಾಗಿತ್ತು. ಇದೀಗ 28 ಮಂದಿಯನ್ನು ವಜಾ ಮಾಡಲಾಗಿದೆ.

ಇದನ್ನೂ ಓದಿ: Infosys Q4 Result: ಇನ್ಫೋಸಿಸ್‌ಗೆ 7,969 ಕೋಟಿ ರೂ. ನಿವ್ವಳ ಲಾಭ; 28 ರೂ.ಗಳ ಡಿವಿಡೆಂಡ್‌ ಘೋಷಣೆ

ಒಂಬತ್ತು ಮಂದಿ ಬಂಧನ

ಪ್ರಾಜೆಕ್ಟ್ ನಿಂಬಸ್ ವಿರುದ್ಧ ನೋ ಟೆಕ್ ಫಾರ್ ಅಪಾರ್ತೀಡ್ ಸಂಘಟನೆಯ ನೇತೃತ್ವದಲ್ಲಿ ಗೂಗಲ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರ ನ್ಯೂಯಾರ್ಕ್ ಕಚೇರಿ ಹಾಗೂ ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಕಂಪೆನಿಯ ಕಚೇರಿಗಳಲ್ಲಿ ನಡೆದ ಪ್ರತಿಭಟನೆ ವೇಳೆ ಒಂಬತ್ತು ಗೂಗಲ್ ಉದ್ಯೋಗಿಗಳು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದೆ.

ಇಸ್ರೇಲ್ ಜೊತೆಗಿನ ಒಪ್ಪಂದ ಏನು ?

ಇಸ್ರೇಲ್ ಸರ್ಕಾರ ಮತ್ತು ಮಿಲಿಟರಿಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ನೀಡಲು ಗೂಗಲ್ ಮತ್ತು ಅಮೆಜಾನ್ ಜಂಟಿಯಾಗಿ 1.2 ಶತಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ ಕೃತಕ ಬುದ್ಧಿಮತ್ತೆ ಉಪಕರಣಗಳು, ಡೇಟಾ ಕೇಂದ್ರಗಳು ಮತ್ತು ಇತರ ಕ್ಲೌಡ್ ಮೂಲಸೌಕರ್ಯಗಳು ಸೇರಿವೆ.

ತನಿಖೆ ಮುಂದುವರಿಯಲಿದೆ

ಗೂಗಲ್ ಉದ್ಯೋಗಿಗಳ ಪ್ರತಿಭಟನೆ ಬಳಿಕ ಸಂದೇಶ ಕಳುಹಿಸಿರುವ ಗ್ಲೋಬಲ್ ಸೆಕ್ಯುರಿಟಿಯ ಗೂಗಲ್‌ನ ಉಪಾಧ್ಯಕ್ಷ ಕ್ರಿಸ್ ರಾಕೋವ್, ಪ್ರಕರಣದ ತನಿಖೆಯ ಬಳಿಕ ಇದೀಗ ಇಪ್ಪತ್ತೆಂಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈ ಕುರಿತು ತನಿಖೆಯನ್ನು ಮುಂದುವರಿಸುತ್ತೇವೆ ಮತ್ತು ಅಗತ್ಯವಿರುವಂತೆ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಬಂಧಿತರಾಗಿರುವ ಕೆಲವರನ್ನು ಆಡಳಿತಾತ್ಮಕ ರಜೆಯಲ್ಲಿ ಇರಿಸಲಾಗಿದೆ. ಮುಂದೆ ಅವರು ಕೆಲಸಕ್ಕೆ ಮರಳಲು ಹೆಚ್ ಆರ್ ಮೂಲಕ ಸಂಪರ್ಕಿಸುವವರೆಗೆ ಕಾಯಲು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ನಡುವೆ ನೋ ಟೆಕ್ ಫಾರ್ ವರ್ಣಭೇದ ನೀತಿಯು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಗೂಗಲ್ 28 ಮಂದಿ ಉದ್ಯೋಗಿಗಳನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಿದೆ. 10 ಗಂಟೆಗಳ ಧರಣಿಯಲ್ಲಿ ನೇರವಾಗಿ ಭಾಗವಹಿಸದೇ ಇರುವವರೂ ಇದರಲ್ಲಿ ಇದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರಾಜೆಕ್ಟ್ ನಿಂಬಸ್ ವಿರುದ್ಧ ಗುಂಪು ಸಂಘಟಿಸಲಾಗುತ್ತಿದೆ. ಅವರ ಕಾಳಜಿಗಳ ಬಗ್ಗೆ ಎಕ್ಸಿಕ್ಯೂಟಿವ್‌ನಿಂದ ಇದುವರೆಗೂ ಏನೂ ಕೇಳಿಲ್ಲ ಎಂದು ಅದು ಹೇಳಿದೆ.

ಗೂಗಲ್ ಏನು ಹೇಳಿದೆ?

ಕಚೇರಿಗಳಲ್ಲಿ ನಡೆದ ಪ್ರತಿಭಟನೆಗಳ ವರದಿಗಳ ಬಗ್ಗೆ ನೋಡಿದ್ದೀರಿ, ಕೇಳಿದ್ದೀರಿ. ದುರದೃಷ್ಟವಶಾತ್ ಹಲವಾರು ಉದ್ಯೋಗಿಗಳು ನ್ಯೂಯಾರ್ಕ್ ಮತ್ತು ಸನ್ನಿವೇಲ್‌ನಲ್ಲಿರುವ ಕಟ್ಟಡಗಳಿಗೆ ಸೇರಿದ ಆಸ್ತಿಗೆ ಹಾನಿಗೊಳಿಸಿದ್ದಾರೆ. ಇತರ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ. ಅವರ ನಡವಳಿಕೆಯು ಸ್ವೀಕಾರಾರ್ಹವಲ್ಲ. ಇದು ಇತರ ಸಹೋದ್ಯೋಗಿಗಳಲ್ಲಿ ಬೆದರಿಕೆಯನ್ನುಂಟು ಮಾಡಿತು. ಹೀಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಉದ್ಯೋಗಿಗಳನ್ನು ತನಿಖೆಯ ಅಡಿಯಲ್ಲಿ ಇರಿಸಿದ್ದೇವೆ. ನಮ್ಮ ಸಿಸ್ಟಮ್‌ಗಳಿಗೆ ಅವರ ಪ್ರವೇಶವನ್ನು ಕಡಿತಗೊಳಿಸಿದ್ದೇವೆ. ತನಿಖೆಯ ಬಳಿಕ ಇಪ್ಪತ್ತೆಂಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇನ್ನೂ ತನಿಖೆ ಮುಂದುವರಿಯಲಿದೆ. ಅಗತ್ಯವಿರುವಂತೆ ಕ್ರಮ ತೆಗೆದುಕೊಳ್ಳುತ್ತೇವೆ.

ಈ ರೀತಿಯ ವರ್ತನೆಗೆ ನಮ್ಮ ಕೆಲಸದ ಸ್ಥಳದಲ್ಲಿ ಸ್ಥಾನವಿಲ್ಲ ಮತ್ತು ನಾವು ಅದನ್ನು ಸಹಿಸುವುದಿಲ್ಲ. ನಮ್ಮ ನೀತಿ ಸಂಹಿತೆ ಮತ್ತು ಕಿರುಕುಳ, ತಾರತಮ್ಯ, ಪ್ರತೀಕಾರ, ನಡವಳಿಕೆಯ ಮಾನದಂಡಗಳು ಮತ್ತು ಕಾರ್ಯಸ್ಥಳದ ಕಾಳಜಿಗಳನ್ನು ಒಳಗೊಂಡಂತೆ ಎಲ್ಲಾ ಉದ್ಯೋಗಿಗಳು ಅನುಸರಿಸಬೇಕಾದ ಬಹು ನೀತಿಗಳನ್ನು ಇದು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ನೀತಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಂಪೆನಿಯು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ.

Continue Reading

ವೈರಲ್ ನ್ಯೂಸ್

Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Pesticide: ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಎಂದು ಸಿಂಗಾಪುರ ಹೇಳಿದೆ,

VISTARANEWS.COM


on

pesticide everest fish curry masala
Koo

ಹೊಸದಿಲ್ಲಿ: ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest) ಫಿಶ್ ಕರಿ ಮಸಾಲಾ (Fish Curry Masala) ಅನ್ನು ಹಿಂಪಡೆಯಲು ಸಿಂಗಾಪುರ (Singapore) ಆದೇಶಿಸಿದೆ. ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ (Pesticide) ಎಥಿಲೀನ್ ಆಕ್ಸೈಡ್ (Ethylene oxide) ಇದೆ ಎಂದು ಅದು ಆರೋಪಿಸಿದೆ.

ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು SFA ಹೇಳಿದೆ.

“ಸಿಂಗಾಪುರದ ಆಹಾರ ನಿಯಮಗಳ ಅಡಿಯಲ್ಲಿ, ಎಥಿಲೀನ್ ಆಕ್ಸೈಡ್ ಅನ್ನು ಮಸಾಲೆಗಳ ಸ್ಟೆರಿಲೈಸೇಶನ್‌ನಲ್ಲಿ ಮಾತ್ರ ಬಳಸಲು ಅನುಮತಿಸಲಾಗಿದೆ” ಎಂದು SFA ಹೇಳಿದೆ. ಕಡಿಮೆ ಮಟ್ಟದ ಎಥಿಲೀನ್ ಆಕ್ಸೈಡ್‌ ಸೇರಿರುವ ಆಹಾರವನ್ನು ಸೇವಿಸುವುದರಿಂದ ತಕ್ಷಣದ ಅಪಾಯವಿಲ್ಲ. ಆದರೆ ಇದರ ದೀರ್ಘಕಾಲಿಕ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸಂಸ್ಥೆ ಹೇಳಿದೆ.

“ಈ ಆಹಾರ ಸೇವನೆಯಿಂದ ತಕ್ಷಣದ ಅಪಾಯವಿಲ್ಲ. ಆದರೆ ಈ ಮಸಾಲೆಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು” ಎಂದು ಅದು ಹೇಳಿದೆ. “ಸಂಬಂಧಿತ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಅದನ್ನು ಸೇವಿಸದಂತೆ ಸೂಚಿಸಲಾಗಿದೆ. ಈ ಉತ್ಪನ್ನಗಳನ್ನು ಸೇವಿಸಿದವರು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಗ್ರಾಹಕರು ವಿಚಾರಣೆಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದು” ಎಂದು SFA ತಿಳಿಸಿದೆ.

ಮಸಾಲೆ ಉತ್ಪಾದನೆ ಸಂಸ್ಥೆ ಎವರೆಸ್ಟ್ ಈ ಬೆಳವಣಿಗೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Continue Reading
Advertisement
Chikkaballapur Lok Sabha Constituency Congress candidate Raksha Ramaiah election campaign in Yalahanka
ಬೆಂಗಳೂರು17 mins ago

Lok Sabha Election 2024: ಬಿಜೆಪಿ ಆಡಳಿತದಲ್ಲಿ ಶೇ. 5ರಷ್ಟೂ ಉದ್ಯೋಗ ಸೃಷ್ಟಿಯಾಗಿಲ್ಲ: ರಕ್ಷಾ ರಾಮಯ್ಯ

kaalnadige Jatha programme in Uttara kannada
ಉತ್ತರ ಕನ್ನಡ42 mins ago

Lok Sabha Election 2024: ಉ.ಕ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನದ ಗುರಿ; ಡಿಸಿ

Bangalore Rural Lok Sabha Constituency Congress candidate D K Suresh Election campaign
ಬೆಂಗಳೂರು ಗ್ರಾಮಾಂತರ44 mins ago

Lok Sabha Election 2024: ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ. ಸುರೇಶ್

Neha Murder Case
ಕರ್ನಾಟಕ44 mins ago

Neha Murder Case: ನನ್ನ ಮಗನಿಗೆ ಶಿಕ್ಷೆ ಆಗಬೇಕು; ಯಾರೂ ಇಂಥ ಕೃತ್ಯ ಎಸಗಬೇಡಿ ಎಂದು ಫಯಾಜ್‌ ತಂದೆ ಕಣ್ಣೀರು

IPL 2024
ಪ್ರಮುಖ ಸುದ್ದಿ47 mins ago

IPL 2024 : ಇಂಪ್ಯಾಕ್ಟ್​ ಪ್ಲೇಯರ್ ನಿಯಮಕ್ಕೆ ಆಕ್ಷೇಪ ಎತ್ತಿದ ರಿಕಿ ಪಾಂಟಿಂಗ್​

Lok Sabha Election 2024
Lok Sabha Election 202450 mins ago

Lok Sabha Election 2024: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ; ಕಾರಣ ಇದು

Day 2 of CET 2024 Exam 26 out of syllabus question KEA asks to raise objections by April 27
ಶಿಕ್ಷಣ2 hours ago

CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ

Maldives Tourism
ವಿದೇಶ2 hours ago

Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

IPL 2024
ಕ್ರೀಡೆ2 hours ago

IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

Party symbols
ರಾಜಕೀಯ2 hours ago

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ7 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ17 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌