ಬಾಗಲಕೋಟೆ: ಜಿಲ್ಲೆಯಲ್ಲಿ ಮಹಿಳೆಯೊಬ್ಬರು 12 ಕಾಲ್ಬೆರಳು, 13 ಕೈಬೆರಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದ್ದು, ಇದೀಗ ಎಲ್ಲರ ಆಕರ್ಷಣೆಗೆ (Viral news) ಕೇಂದ್ರವಾಗಿದೆ.
ಈ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ನಡೆದಿದೆ. ಮಗುವಿನ ಬಲಗೈಗೆ 6, ಎಡಗೈಗೆ 7 ಮತ್ತು ಎರಡು ಕಾಲಿನಲ್ಲಿ ಕೂಡ ತಲಾ 6 ಬೆರಳುಗಳಿವೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಯಾವುದೇ ತೊಂದರೆಗಳು ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ತಾಯಿ ಗರ್ಭಿಣಿ ಆಗುವ ಸಂದರ್ಭದಲ್ಲಿ ಪಡೆಯುವ ಕ್ರೋಮೋಸೋಮ್‌ಗಳಲ್ಲಿ ಇಂತಹ ಗುಣಗಳಿದ್ದರೆ ಇಂತಹ ಮಗು ಹುಟ್ಟುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಕ್ಕಳ ಭಾಗ್ಯ ಕರುಣಿಸುವಂತೆ ಕುಂದರಗಿಯ ಭುವನೇಶ್ವರಿ ದೇವಿಗೆ ನನ್ನ ಹೆಂಡತಿ ಹರಹೆ ಹೊತ್ತಿದ್ದಳು. ಹರಕೆ ಹೊತ್ತ 4ನೇ ವಾರದಲ್ಲಿಯೇ ಗರ್ಭಿಣಿಯಾದಳು ಎಂದು ಮಗುವಿನ ತಂದೆ ಗುರಪ್ಪ ಸಂತಸ ಹಂಚಿಕೊಂಡಿದ್ದಾರೆ. ಇದೀಗ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿದಂತೆ ಈ ಮಗುವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.
ವಾಟರ್ ಟ್ಯಾಂಕ್ ಮೇಲಿನಿಂದ ಜಿಗಿದ ವಿದ್ಯಾರ್ಥಿ
ಪಂಜಾಬ್: ಇತ್ತೀಚೆಗೆ ಸಣ್ಣ-ಪುಟ್ಟ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವ ಅನೇಕ ಘಟನೆಗಳು ಆಗಾಗ ವರದಿಯಾಗುತ್ತಿರುತ್ತದೆ. ಅದರಲ್ಲೂ ಯುವಕರೇ ಹೆಚ್ಚಾಗಿ ದುಡುಕಿ ಇಂತಹ ನಿರ್ಧಾರಕ್ಕೆ ಬರುತ್ತಾರೆ. ಅಂತಹದ್ದೇ ಒಂದು ಘಟನೆ ಹರ್ಯಾಣದಲ್ಲಿ ನಡೆದಿದೆ. ಈ ಹಣಕಾಸಿನ ಸಮಸ್ಯೆಯಿಂದ ನೊಂದು 19 ವರ್ಷದ ವಿದ್ಯಾರ್ಥಿಯೊಬ್ಬ ನೀರಿನ ಟ್ಯಾಂಕ್ ಮೇಲಿನಿಂದ ಹಾರಿ ಆತ್ಮಹತ್ಯೆ (Self Harming)ಮಾಡಿಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಹರ್ಯಾಣದ ಖರಾರ್ ನ ಖಾನ್ಪುರ್ ಗ್ರಾಮದಲ್ಲಿ ಗುರುವಾರ ನಡೆದಿದ್ದು, ಈ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸುಮಿತ್ ಚಿಕ್ರಾ(19)ಎಂದು ಗುರುತಿಸಲಾಗಿದೆ. ಈತ ಪಂಜಾಬ್‍ನ ಘರುವಾನ್ ಗ್ರಾಮದ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಆತ ತನ್ನ ಹೆತ್ತವರಿಗೆ ಏಕೈಕ ಮಗ ಎನ್ನಲಾಗಿದೆ. ಆರ್ಥಿಕ ಸಮಸ್ಯೆಗಳಿಂದಾಗಿ ಒತ್ತಡವನ್ನು ಅನುಭವಿಸುತ್ತಿದ್ದ ವಿದ್ಯಾರ್ಥಿ ಈ ರೀತಿ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ನೀರಿನ ಟ್ಯಾಂಕ್‍ನಿಂದ ಜಿಗಿಯುವ ಮೊದಲು ವಿದ್ಯಾರ್ಥಿ ತನ್ನ ಕೈಯ ಮಣಿಕಟ್ಟನ್ನು ಕತ್ತರಿಸಲು ಪ್ರಯತ್ನಿಸಿದನು ಎಂಬುದಾಗಿ ತಿಳಿದುಬಂದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ಯುವಕ ನೀರಿನ ಟ್ಯಾಂಕ್ ಹತ್ತಿ ಟ್ಯಾಂಕ್‍ನ ಅಂಚಿನಲ್ಲಿ ನಿಂತಿರುವುದನ್ನು ಕಾಣಬಹುದು. ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಇಬ್ಬರು ಪುರುಷರು ನೀರಿನ ಟ್ಯಾಂಕ್‍ನ ಮೆಟ್ಟಿಲುಗಳನ್ನು ಹತ್ತುತ್ತಿರುವುದನ್ನು ಸಹ ಕಾಣಬಹುದು. ಅವರು ನೀರಿನ ಟ್ಯಾಂಕ್‍ನ ನಾಲ್ಕನೇ ಮಹಡಿಯನ್ನು ತಲುಪಿದಾಗ, ಯುವಕ ಅವರನ್ನು ಮೇಲಿನಿಂದ ಗಮನಿಸಿದನು. ನಂತರ ಅವರು ತನನ್ನು ರಕ್ಷಿಸಲು ಬರುತ್ತಿರುವುದನ್ನು ನೋಡಿ ಅವನು ಮುಂದೆ ಓಡಿ ನೀರಿನ ಟ್ಯಾಂಕ್‍ನಿಂದ ಹಾರಿದನು. ಈ ಘಟನೆಯನ್ನು ತನ್ನ ಮೊಬೈಲ್ ಪೋನಿನಲ್ಲಿ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯು ಯುವಕ ನೆಲಕ್ಕೆ ಬೀಳುತ್ತಿದ್ದಂತೆ ಆಘಾತದಿಂದ ಕಿರುಚುವುದನ್ನು ಕೇಳಬಹುದು. ಜಿಗಿತದ ಪರಿಣಾಮ ಎಷ್ಟಿತ್ತೆಂದರೆ ಯುವಕ ನೆಲದ ಮೇಲೆ ಬಿದ್ದ ನಂತರ ಮತ್ತೆ ಮೇಲೆ ಜಿಗಿದು ನಂತರ ಮತ್ತೆ ಬಿದ್ದಿದ್ದಾನೆ.
ನೆಲಕ್ಕೆ ಬಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನೀರಿನ ಟ್ಯಾಂಕ್‍ನ ಮೆಟ್ಟಿಲುಗಳನ್ನು ಏರುತ್ತಿದ್ದ ಇಬ್ಬರು ಪುರುಷರು, ಯುವಕ ಜೀವಂತವಾಗಿದ್ದಾನೆಯೇ ಎಂದು ಪರೀಕ್ಷಿಸಲು ಕೆಳಗೆ ಓಡಿ ಬರುತ್ತಿರುವುದು ಕಂಡುಬಂದಿದೆ.
ಯುವಕನನ್ನು ತಕ್ಷಣ ಖರಾರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಯುವಕನ ಎರಡೂ ಕಾಲುಗಳು ಮುರಿದು ಕಾಲುಗಳ ಮೂಳೆಗಳು ಹೊರಗೆ ಬಂದಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಇಲ್ಲಿನ ವೈದ್ಯರು ಪರೀಕ್ಷಿಸಿದಾಗ, ಅವನು ಮೃತಪಟ್ಟಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಬಿಸ್ಕೆಟ್‌ಗೆ ಆಸೆ ಪಟ್ಟು ಹೋಗಿದ್ದ ಪುಟ್ಟ ಬಾಲಕಿ ಕಾಮುಕನ ಕೈಗೆ ಸಿಕ್ಕಿ ಕೊಲೆಯಾದಳು