Site icon Vistara News

Viral news | ಕುರ್ಕುರೆ ಪ್ಯಾಕೆಟ್‌ಗಳಲ್ಲಿ 500 ರೂ. ನೋಟುಗಳು ಪತ್ತೆ, ಖರೀದಿಗೆ ಮುಗಿಬಿದ್ದ ಜನ!

kurkure

ರಾಯಚೂರು: ಮಕ್ಕಳ ತಿಂಡಿ ಪ್ಯಾಕೆಟ್‌ ಖರೀದಿಸಿದವರಿಗೆ ಅಚ್ಚರಿ ಕಾದಿತ್ತು. ಕುರ್ಕುರೆ ಪ್ಯಾಕೆಟ್‌ಗಳಲ್ಲಿ ಗರಿಗರಿ 500 ರೂ. ನೋಟುಗಳು ಪತ್ತೆಯಾಗಿವೆ. ಅದೂ ಒಂದೆರಡಲ್ಲ, ರಾಶಿ ರಾಶಿ !

ಇಂಥದೊಂದು ಅಚ್ಚರಿಯ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ನಡೆದಿದೆ. 5 ರೂಪಾಯಿಯ ಕುರ್ಕುರೆ ಪ್ಯಾಕೆಟ್‌ಗಳಲ್ಲಿ 500 ರೂಪಾಯಿಯ ಅಸಲಿ ನೋಟ್‌ಗಳು ಕಂಡುಬಂದಿವೆ. ಮಾಕ್ಸ್ ವಿಟ್, ಪಂಜಾಬ್ ಸೇರಿದಂತೆ ವಿವಿಧ ಕಂಪನಿಯ ಪ್ಯಾಕೆಟ್‌ಗಳಲ್ಲಿ ಇವು ಕಂಡುಬಂದಿವೆ. ಕೆಲವು ಪ್ಯಾಕೆಟ್‌ಗಳ ಒಳಗಡೆ 5-6 ನೋಟ್‌ಗಳು ಸಹ ಪತ್ತೆಯಾಗಿವೆ.

ಹುನೂರು ಗ್ರಾಮದಲ್ಲಿರುವ‌ ಬಹುತೇಕ ಅಂಗಡಿಗಳಲ್ಲಿ ಈ ಘಟನೆ ನಡೆದಿದೆ. ಇದರಿಂದ ಆಸೆಗೆ ಬಿದ್ದಿರುವ ಗ್ರಾಮಸ್ಥರು 500 ರೂ. ಸಿಗುವ ಕುರ್ಕುರೆ ಪ್ಯಾಕೆಟ್‌ಗಳಿಗಾಗಿ ಮುಗಿಬಿದ್ದಿದ್ದಾರೆ. ಮೂರು ದಿನಗಳಲ್ಲಿ ಗ್ರಾಮದಲ್ಲಿ ಕುರ್ಕುರೆ ಸ್ಟಾಕ್ ಖಾಲಿಯಾಗಿದೆ. ಇನ್ನಷ್ಟು ಕುರ್ಕುರೆ ತರುವಂತೆ ಅಂಗಡಿಯವರಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದುವರೆಗೂ ಹೀಗೆ ಪತ್ತೆಯಾದ ನೋಟುಗಳ ಮೌಲ್ಯ ಲಕ್ಷಾಂತರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಒಬ್ಬರಿಗೇ ಸುಮಾರು 12,500 ರೂಪಾಯಿ ಕೂಡ ಇದರಲ್ಲಿ ಸಿಕ್ಕಿದೆ ಎನ್ನಲಾಗಿದೆ.

ಇದನ್ನೂ ಓದಿ | Actor Rajinikanth | ಪುತ್ರಿ ಐಶ್ವರ್ಯಾ ಜತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ರಜನಿಕಾಂತ್‌: ವಿಡಿಯೊ ವೈರಲ್‌!

Exit mobile version