Site icon Vistara News

Viral News: ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸುವ ಅಭ್ಯರ್ಥಿ; ವಿಶಿಷ್ಟ ಪ್ರಚಾರದ ಈ ವಿಡಿಯೊ ನೀವೂ ನೋಡಿ

Viral News

Viral News

ಲಕ್ನೋ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಯ ಕಾವು ಏರತೊಗಿದೆ. ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣಾ ಪ್ರಚಾರ ತೊಡಗಿಸಿಕೊಂಡಿವೆ. ಮತದಾರರನ್ನು ಆಕರ್ಷಿಸಲು ನಾನಾ ಕಸರತ್ತು ನಡೆಸಲಾಗುತ್ತಿದೆ. ಪ್ರಣಾಳಿಕೆ, ವಿವಿಧ ಯೋಜನೆಗಳನ್ನು ಪ್ರಕಟಿಸಿ ಮತದಾರ ಪ್ರಭುಗಳ ಗಮನ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಇದರ ಜತೆಗೆ ಕೆಲವರು ಚಿತ್ರ-ವಿಚಿತ್ರ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ಉತ್ತರ ಪ್ರದೇಶದ ಅಭ್ಯರ್ಥಿಯೊಬ್ಬರು ತಮ್ಮ ವಿಶಿಷ್ಟ ಕಾರ್ಯ ವೈಖರಿಯಿಂದ ದೇಶದ ಗಮನ ಸೆಳೆದಿದ್ದಾರೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ (Viral News).

ಸಾಮಾನ್ಯವಾಗಿ ಯಾರ ಮೇಲಾದರೂ ಸಹಿಸಲಸಾಧ್ಯ ರೋಷ ಇದ್ದರೆ ಅವರ ಮೇಲೆ ಚಪ್ಪಲಿ ಎಸೆಯುವುದನ್ನು ನೋಡಿದ್ದೇವೆ. ಇನ್ನು ಕೆಲವೊಮ್ಮೆ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳ ಪ್ರತಿಕೃತಿಗೆ ಚಪ್ಪಲಿ ಹಾರ ತೊಡಿಸಿ ಪ್ರತಿಭಟನೆ ನಡೆಸುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬರು ತಮ್ಮ ಕೊರಳಿಗೆ ತಾವೇ ಚಪ್ಪಲಿ ಹಾರ ಹಾಕಿಕೊಂಡು ಮತಯಾಚಿಸುತ್ತಿದ್ದಾರೆ! ಅದಕ್ಕೆ ಕಾರಣ ಏನು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಾರಣ ಏನು?

ಉತ್ತರ ಪ್ರದೇಶದ ಪಂಡಿತ್ ಕೇಶವ್ ದೇವ್ ಎನ್ನುವವವರೇ ಈ ವಿನೂತನ ಚುನಾವಣಾ ಪ್ರಚಾರ ನಡೆಸುತ್ತಿರುವವರು. ಪಂಡಿತ್ ಕೇಶವ್ ದೇವ್ ಅವರು ಅಲಿಘಡ್‌ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚುನಾವಣಾ ಆಯೋಗವು ಅವರಿಗೆ ಚಪ್ಪಲಿ ಚಿಹ್ನೆಯನ್ನು ನೀಡಿದೆ. ಹೀಗಾಗಿ ಅವರು ಹೂವಿನೊಂದಿಗೆ ಚಪ್ಪಲಿ ಹಾರವನ್ನು ಕೊರಳಿಗೆ ಹಾಕಿಕೊಂಡು ವೈವಿಧ್ಯಮಯ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ದಾರಕ್ಕೆ ಏಳು ಚಪ್ಪಲಿಗಳನ್ನು ಪೋಣಿಸಿದ ಹಾರ ಧರಿಸಿಕೊಂಡು ಅವರು ಜನರ ಬಳಿ ಮತ ಯಾಚಿಸುತ್ತಿದ್ದಾರೆ. ಹೀಗೆ ದೇಶಾದ್ಯಂತ ಗಮನ ಸೆಳೆದಿದ್ದಾರೆ.

ʼʼತಮ್ಮ ಚುನಾವಣಾ ಚಿಹ್ನೆಯನ್ನು ಮತದಾರರು ಚೆನ್ನಾಗಿ ನೆನಪಿಟ್ಟುಕೊಳ್ಳಲು 7 ಚಪ್ಪಲಿಗಳ ಹಾರವನ್ನು ಕೊರಳಿಗೆ ಹಾಕಿಕೊಂಡಿದ್ದಾರೆʼʼ ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಇದೀಗ ಮತದಾರರು ಈ ಹೊಸ ರೀತಿಯ ಪ್ರಚಾರವನ್ನು ಎಂಜಾಯ್‌ ಮಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಮತವಾಗಿ ಪರಿವರ್ತನೆಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಮೋದಿ ಮತ್ತೆ ಪಿಎಂ ಆಗಲೆಂದು 13 ಸಾವಿರ ಅಡಿಯಿಂದ ಸ್ಕೈ ಡೈವ್‌ ಮಾಡಿದ

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಗೆದ್ದು, ನರೇಂದ್ರ ಮೋದಿ ಅವರೇ ಮತ್ತೆ ದೇಶದ ಪ್ರಧಾನಿಯಾಗಲಿ ಎಂದು ಬಿಜೆಪಿ ಕಾರ್ಯಕರ್ತರ ಜತೆಗೆ ಮೋದಿ ಅಭಿಮಾನಿಗಳು ಕೂಡ ದೇಶಾದ್ಯಂತ ಪ್ರಚಾರ, ಸೋಷಿಯಲ್‌ ಮೀಡಿಯಾ ಮೂಲಕ ಅಭಿಯಾನ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ವಿಜಯಪುರದ ಅಭಿಮಾನಿಗಳು ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಬೇಕು ಎಂದು ವಿದೇಶದಲ್ಲಿ 13 ಸಾವಿರ ಅಡಿಯಿಂದ ಸ್ಕೈ ಡೈವ್‌ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಹೌದು, ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ಅವರ ನೇತ್ರತ್ವದಲ್ಲಿ ಬ್ಯಾಂಕಾಕ್‌ನ ಖೋಯಾಯ್‌ ಎಂಬ ಪ್ರದೇಶದಲ್ಲಿ ಯುವಕರು 13 ಸಾವಿರ ಅಡಿಯಿಂದ ಸ್ಕೈ ಡೈವ್‌ ಮಾಡಿದ್ದಾರೆ. ಔರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ ಎಂದು ಘೋಷಣೆ ಕೂಗುತ್ತ, ಯುವಕರು ಸ್ಕೈ ಡೈವ್‌ ಮಾಡಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ನಮೋ ಸ್ಕೈ ಡೈವರ್ಸ್‌ ಎಂಬ ನಾಲ್ಕು ಯುವಕರ ತಂಡವು ವಿಭಿನ್ನ ಪ್ರಯತ್ನ ಮಾಡಿದೆ. ಅಲ್ಲದೆ, ನಮೋ ಎಂದು ಬರೆದ ಬ್ಯಾನರ್‌ಗಳನ್ನೂ ಅವರು ಆಗಸದಲ್ಲೇ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ಅಂದು ಮೋದಿ ಜತೆ ವೇದಿಕೆ ಏರಲು ನಿರಾಕರಿಸಿದ್ದ ನಿತೀಶ್ ಕುಮಾರ್ ಈಗ ಮೋದಿಯ ಕಾಲು ಮುಟ್ಟಿ ನಮಸ್ಕರಿಸಿದರು!

ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ್ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾಂಶು ಸಾಬಳೆ ಅವರ ತಂಡದಿಂದ ಸ್ಕೈ ಡೈವ್‌ ಮಾಡಲಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ದೇಶಾದ್ಯಂತ ಯುವಕರು ಮದುವೆ ಆಮಂತ್ರಣ ಪತ್ರಿಕೆ ಮೇಲೆ ಮೋದಿಗೆ ಮತ ನೀಡಿ ಎಂದು ಬರೆಸಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಹಲವು ರೀತಿಯ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ವಿಜಯಪುರ ಉದ್ಯಮಿಯ ನೇತೃತ್ವದಲ್ಲಿ ಸ್ಕೈ ಡೈವ್‌ ಮೂಲಕ ವಿಭಿನ್ನವಾಗಿ ಮೋದಿ ಮೇಲಿನ ಅಭಿಮಾನವನ್ನು ಪ್ರದರ್ಶಿಸಿದ್ದಾರೆ.

Exit mobile version