ಚಂಡೀಗಢ: ಭಾರತದಲ್ಲಿನ ರಸ್ತೆಗುಂಡಿಗಳ (Road Pothole) ಬಗ್ಗೆ ಯಾವಾಗಲೂ ತಕರಾರು ಇದ್ದೇ ಇರುತ್ತದೆ. ಈ ರಸ್ತೆ ಗುಂಡಿಗಳಿಂದಾಗಿ ಎಷ್ಟೋ ಜನರು ಅಪಘಾತದಲ್ಲಿ (Accidents) ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈಗ ಅದೇ ರಸ್ತೆ ಗುಂಡಿಯಿಂದಾಗಿ ಸತ್ತಿದ್ದ ವ್ಯಕ್ತಿಯೊಬ್ಬರು ಬದುಕುಳಿದಿದ್ದಾರೆ!(Grandfather Comes Alive) ಹೌದು, ಇದು ಕೇಳಲು ಆಶ್ಚರ್ಯವಾದರೂ ಸತ್ಯ. ಹರ್ಯಾಣದ 80 ವರ್ಷದ ದರ್ಶನ್ ಸಿಂಗ್ ಬ್ರಾರ್ ಅವರು ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದ್ದರಿಂದ, ಅವರ ದೇಹವನ್ನು ಕುಟಂಬಸ್ಥರು ಪಟಿಯಾಲದ ಕರ್ನಾಲ್‌ಗೆ ಆಂಬ್ಯುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗುವಾಗ, ವಾಹನವು ರಸ್ತೆ ಗುಂಡಿಗೆ ಇಳಿದಿದೆ(Ambulance Hits Pothole). ಆ ಹೊಡೆತಕ್ಕೆ ಸತ್ತಿದ್ದಾರೆಂದು ಭಾವಿಸಲಾಗಿದ್ದ ದರ್ಶನ್ ಸಿಂಗ್ ಅವರು ತಮ್ಮ ಕೈಗಳನ್ನು ಅಲುಗಾಡಿಸಲಾರಂಭಿಸಿದ್ದಾರೆ. ಆಗಲೇ ವಾಹನದಲ್ಲಿ ಪಕ್ಕದಲ್ಲೇ ಕುಳಿತಿದ್ದ ಮೊಮ್ಮಗನಿಗೆ ಅಜ್ಜ ಬದುಕಿರುವುದು ಅರಿವಿಗೆ ಬಂದಿದೆ!(viral news)
ಬ್ರಾರ್ ಅವರ ದೇಹವಿದ್ದ ಆಂಬುಲೆನ್ಸ್‌ನಲ್ಲಿ ಅವರ ಮೊಮ್ಮಗ ಕೂಡ ಇದ್ದರು. ಬ್ರಾರ್ ಕೈಯನ್ನು ಅಲ್ಲಾಡಿಸುತ್ತಿರುವುದನ್ನು ಗಮನಿಸಿದ ಅವರು, ಕೂಡಲೇ ಹತ್ತಿರದ ಆಸ್ಪತ್ರೆಗೆ ಆಂಬುಲೆನ್ಸ್ ತಿರುಗಿಸುವಂತೆ ಡ್ರೈವರ್‌ಗೆ ಸೂಚಿಸಿದ್ದಾರೆ. ಅಲ್ಲಿನ ವೈದ್ಯರು ಬ್ರಾರ್ ಅವರನ್ನು ಪರೀಕ್ಷಿಸಿ, ಬದುಕಿದ್ದಾರೆಂದು ಘೋಷಿಸಿದ್ದಾರೆ.
80 ವರ್ಷದ ಹೃದ್ರೋಗಿ ಬ್ರಾರ್ ಅವರು ಈಗ ಕರ್ನಾಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಕುಟುಂಬವು ಘಟನೆಯನ್ನು ಪವಾಡ ಎಂದು ಶ್ಲಾಘಿಸಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲು ಆಶಿಸುತ್ತಿದೆ.
ಬ್ರಾರ್ ಅವರ ಮೊಮ್ಮಕ್ಕಳಲ್ಲಿ ಒಬ್ಬರಾದ ಬಲ್ವಾನ್ ಸಿಂಗ್ ಅವರು, 80 ವರ್ಷದ ಬ್ರಾರ್ ಕರ್ನಾಲ್ ಬಳಿಯ ನಿಸಿಂಗ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಇಡೀ ಕಾಲೋನಿಗೆ ಅವರ ಹೆಸರನ್ನು ಇಡಲಾಗಿದೆ. ಕೆಲವು ದಿನಗಳಿಂದ ಬ್ರಾರ್ ಅನಾರೋಗ್ಯ ಪೀಡಿತರಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಪಟಿಯಾಲಾದ ಅವರ ಮನೆಯ ಸಮೀಪವಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.
ನಮ್ಮ ಅಜ್ಜನ ಸಾವಿನ ಬಗ್ಗೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪಟಿಯಾಲದಲ್ಲಿರುವ ನನ್ನ ಸಹೋದರ ನಮಗೆ ಮಾಹಿತಿ ನೀಡಿದರು ಮತ್ತು ಅವರ ಅಂತ್ಯಕ್ರಿಯೆಗಾಗಿ ಆಂಬ್ಯುಲೆನ್ಸ್‌ನಲ್ಲಿ ನಿಸಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದರು. ನಾವು ನಮ್ಮ ಸಂಬಂಧಿಕರು ಮತ್ತುಇತರರು , ಅವರ ನಿಧನಕ್ಕೆ ಸಂತಾಪ ಸೂಚಿಸಲು ಸೇರಿದ್ದೆವು. ಇದಕ್ಕಾಗಿ ಟೆಂಟ್ ಕೂಡ ಹಾಕಿದ್ದೆವು. ದುಃಖಿತರಿಗೆ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ನಾವು ಶವಸಂಸ್ಕಾರಕ್ಕಾಗಿ ಕಟ್ಟಿಗೆಯನ್ನು ಖರೀದಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ಹರಿಯಾಣದ ಕೈತಾಲ್‌ನ ಧಂಡ್ ಗ್ರಾಮದ ಬಳಿ ಇದ್ದಾಗ, ಅದು ರಸ್ತೆ ಗುಂಡಿಗೆ ಇಳಿದಿದೆ. ಆಗ ಬ್ರಾರ್ ತನ್ನ ಕೈಯನ್ನು ಸರಿಸಿದುದನ್ನು ಬಲ್ವಾನ್ ಗಮನಿಸಿದ್ದಾರೆ. ಆಶ್ಚರ್ಯಚಕಿತನಾದ ಅವರು ಹೃದಯ ಬಡಿತವನ್ನು ಪರೀಕ್ಷಿಸಿದ್ದಾರೆ ಮತ್ತು ಕೂಡಲೇ ಹತ್ತಿರದ ಆಸ್ಪತ್ರೆಗೆ ಅವರನ್ನು ಸಾಗಿಸಿದ್ದಾರೆ. ಅಲ್ಲಿನ ವೈದ್ಯರು ಅಜ್ಜ ಬದುಕಿದ್ದಾನೆಂದು ಘೋಷಿಸಿದ್ದಾರೆ. ನಿಜವಾಗಲೂ ಇದು ಪವಾಡವೇ ಸರಿ ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಒಂದೇ ಕೊಟ್ಟಿಗೆಯಲ್ಲಿ ಸಿಕ್ಕಿ ಹಾಕಿಕೊಂಡ ಚಿರತೆ-ಎಮ್ಮೆ; ಮುಂದೆ ನಡೆದಿದ್ದೇ ರೋಚಕ!