Site icon Vistara News

Viral News: ಖಾತೆಯಲ್ಲಿ ಇದ್ದಿದ್ದೇ 17 ರೂ. ಆದ್ರೆ ಹುಂಡಿಗೆ 100 ಕೋಟಿ ರೂ. ಚೆಕ್ ಹಾಕಿದ್ದ ಭಕ್ತ!

Cheque

ವಿಶಾಖಪಟ್ಟಣಂ: ಕೆಲವರಿಗೆ ಜೇಬಿನಲ್ಲಿ ಹತ್ತು ರೂಪಾಯಿ ಇಲ್ಲದಿದ್ದರೆ, ಶೋಕಿಗೇನೂ ಕಡಿಮೆ ಇರುವುದಿಲ್ಲ . ಅದೇ ರೀತಿ ಇಲ್ಲೊಬ್ಬ ತನ್ನ ಬ್ಯಾಂಕ್ ಖಾತೆಯಲ್ಲಿ 17 ರೂಪಾಯಿ ಇಟ್ಟುಕೊಂಡು, ದೇವಸ್ಥಾನದ ಹುಂಡಿಗೆ (Temple Hundi) 100 ಕೋಟಿ ರೂಪಾಯಿ ಚೆಕ್ (Rs 100 crore cheque) ಬರೆದು ಹಾಕಿದ್ದಾನೆ. ಆಂಧ್ರ ಪ್ರದೇಶದ (Andhra Pradesh) ಸೀಮಾಚಲಂನ ಶ್ರೀ ವರಮಹಾಲಕ್ಷ್ಮೀ ನರಸಿಂಹ ಸ್ವಾಮಿ (Varahalakshmi Narasimha Swamy temple) ದೇಗುಲದ ಹುಂಡಿಯಲ್ಲಿ ಈ ಚೆಕ್ ದೊರೆತಿದೆ. ಹುಂಡಿಯಲ್ಲಿ ದೊರೆತ ಈ ಚೆಕ್‌ ಅನ್ನು ದೇವಸ್ಥಾನದ ಮಂಡಳಿಯುವರು ಬ್ಯಾಂಕ್‌ಗೆ ನಗದಿಗೆ ಕಳುಹಿಸಿದಾಗ ಈ ಸತ್ಯ ಬಯಲಾಗಿದೆ(Viral News).

ಬೋಡ್ಡೆಪಳ್ಳಿ ರಾಧಾಕೃಷ್ಣ ಎಂಬವವರು ಸಹಿ ಮಾಡಿರು ಈ ಚೆಕ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಸೇರಿದ ಚೆಕ್‌ನಲ್ಲಿ ಭಕ್ತ ದಿನಾಂಕವನ್ನು ಬರೆದಿಲ್ಲ. ವಿಶಾಖಪಟ್ಟಣಂನಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಭಕ್ತ ಖಾತೆದಾರನಾಗಿದ್ದಾನೆ.

ಹುಂಡಿಯಲ್ಲಿ ಚೆಕ್ ಇರುವುದನ್ನು ಕಂಡ ಅಧಿಕಾರಿಗಳು, ಅದನ್ನು ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಿದ್ದಾರೆ. ಆದರೆ, 100 ಕೋಟಿ ರೂ. ಚೆಕ್ ಕಂಡ ಅಧಿಕಾರಿಗೆ ಅನುಮಾನ ಶುರುವಾಗಿದೆ. ನಿಜವಾಗಲೂ ನೂರು ಕೋಟಿ ರೂ. ಚೆಕ್ ನೀಡಲು ಸಾಧ್ಯವೆ ಎಂಬ ಪ್ರಶ್ನೆ ಮೂಡಿದೆ. ಅವರು ಕೂಡಲೇ ಚೆಕ್‌ ಅಸಲಿಯನ್ನು ಪರೀಕ್ಷಿಸಲು ಹತ್ತಿರದ ಬ್ಯಾಂಕ್ ಶಾಖೆ ಹೋಗಿದ್ದಾರೆ. ಆಗ, ಚೆಕ್ ಬರೆದ ವ್ಯಕ್ತಿಯ ಖಾತೆಯಲ್ಲಿ ಕೇವಲ 17 ರೂಪಾಯಿ ಇರುವುದು ಪತ್ತೆಯಾಗಿದೆ.

ಈ ಸುದ್ದಿಯನ್ನೂ ಓದಿ: ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

100 ಕೋಟಿ ರೂ. ಚೆಕ್ ಕಾಣಿಕೆ ನೀಡಿದ ವ್ಯಕ್ತಿಯನ್ನು ಪತ್ತೆ ಹಚ್ಚುವಂತೆ ಬ್ಯಾಂಕ್‌ಗೆ ಮನವಿ ಪತ್ರ ಬರೆಯಲು ದೇಗುಲದ ಆಡಳಿತ ಮಂಡಳಿ ತೀರ್ಮಾನಿಸಿದೆ. ಒಂದು ವೇಳೆ, ಮೋಸ ಮಾಡುವ ಉದ್ದೇಶದಿಂದಲೇ ಭಕ್ತ 100 ಕೋಟಿ ರೂ. ಚೆಕ್ ಬರೆದಿದ್ದರೆ, ಆತನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version