Site icon Vistara News

Viral News: ಬಿಕಿನಿ ಧರಿಸಿ ಬಸ್‌ ಏರಿದ ಮಹಿಳೆಯಿಂದ ಅಸಭ್ಯ ವರ್ತನೆ: ಬೆಚ್ಚಿಬಿದ್ದ ಪ್ರಯಾಣಿಕರು; ಇಲ್ಲಿದೆ ವಿಡಿಯೊ

Viral News

Viral News

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆಗಳಲ್ಲಿ ಮಹಿಳೆಯರ ವಿರುದ್ಧ ಪುರುಷರು ಅಸಭ್ಯವಾಗಿ ವರ್ತಿಸುವುದು, ಕಿರುಕುಳ ನೀಡುವುದನ್ನು ಕೇಳಿದ್ದೇವೆ, ಓದಿದ್ದೇವೆ. ಆದರೆ ಇಲ್ಲೊಂದು ಇದಕ್ಕೆ ತದ್ವಿರುದ್ಧ ಪ್ರಸಂಗ ನಡೆದಿದೆ. ಬಸ್‌ ಏರಿದ ಮಹಿಳೆಯೊಬ್ಬಳು ಅಸಭ್ಯವಾಗಿ ವರ್ತಿಸಿದ್ದಾಳೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral News).

ಬಿಕಿನಿ ಧರಿಸಿದ್ದ ಈ ಮಹಿಳೆ ದೆಹಲಿಯ ಡಿಟಿಸಿ ಬಸ್‌ಗೆ ಏರಿ ಅಶ್ಲೀಲವಾಗಿ ವರ್ತಿಸಿದ್ದಾಳೆ. ಬಳಿಕ ಪುರುಷರತ್ತ ಅಸಭ್ಯವಾಗಿ ಸನ್ನೆ ಮಾಡಿದ್ದಾಳೆ. ಆಕೆಯ ವರ್ತನೆಯಿಂದ ಬೇಸತ್ತ ಪ್ರಯಾಣಿಕನೊಬ್ಬ ಕುಳಿತಿದ್ದ ಸೀಟಿನಿಂದಲೇ ಎದ್ದು ಆಚೆ ಬರುತ್ತಾನೆ. ಅಲ್ಲದೆ ಆಕೆಯ ಮೈ ಪೂರ್ತಿ ಒದ್ದೆಯಾಗಿರುವುದೂ ವಿಡಿಯೊದಲ್ಲಿ ಕಂಡು ಬಂದಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನ ʼದಿಲ್ಲಿ ಬಸ್‌ʼ (Delhi Buses) ಎಂಬ ಖಾತೆಯಲ್ಲಿ ಈ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಈಗಾಗಲೇ 5 ಲಕ್ಷಕ್ಕಿಂತ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿ ಮಹಿಳೆಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿ ಸಾರಿಗೆ ಕಾರ್ಪೋರೇಷನ್‌ಗೆ ಸೇರಿದ ಬಸ್‌ನಲ್ಲಿ ಈ ಘಟನೆ ನಡೆದಿದೆ. ʼʼಮಹಿಳೆ ಬಸ್ ಏರುತ್ತಿದ್ದಂತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾಳೆ. ಅಲ್ಲದೇ ಇತರ ಪ್ರಯಾಣಿಕರ ಜತೆ ವಾದ ಮಾಡುತ್ತಾಳೆ. ಈಕೆಯ ವರ್ತನೆ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ಅನೇಕರು ಈಕೆಯ ವರ್ತನೆಯಿಂದ ಕಿರಿಕಿರಿಗೊಳಗಾಗಿದ್ದರು. ಇಂತಹ ವರ್ತನೆಗೆ ಕಡಿವಾಣ ಹಾಕಲೇ ಬೇಕಿದೆʼʼ ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.

ಈ ರೀತಿ ಅಸಭ್ಯವಾಗಿ ವರ್ತಿಸಿದ ಮಹಿಳೆ ಯಾರು ಎಂಬುದು ತಿಳಿದು ಬಂದಿಲ್ಲ. ಅಧಿಕಾರಿಗಳು ಈಕೆಯ ಗುರುತನ್ನು ಕೆಲವು ಕಾರಣಗಳಿಗಾಗಿ ಬಹಿರಂಗಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಈ ವಿಡಿಯೊ ವೀಕ್ಷಿಸಿದ ಅನೇಕರು ಇಂತಹ ವರ್ತನೆಗಳನ್ನು ತಡೆಯುವ ಯಾವುದೇ ಕಾನೂನುಗಳು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದವರೆಗೆ ಇಂತಹ ಅಸಹ್ಯ ವರ್ತನೆ ದೆಹಲಿ ಮೆಟ್ರೋದಲ್ಲಿ ಕಂಡು ಬರುತ್ತಿತ್ತು. ಇದೀಗ ಈ ಚಾಳಿ ಡಿಟಿಸಿ ಬಸ್‌ಗೂ ವ್ಯಾಪಿಸಿದೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಪ್ರಯಾಣಿಸುತ್ತಿರುತ್ತಾರೆ. ಈ ವೇಳೆ ಇಂತಹ ವರ್ತನೆ ತೋರುವುದು ಮುಜುಗರ ಉಂಟು ಮಾಡುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ: Viral video: ಫುಟ್‌ರೆಸ್ಟ್‌ ಮೇಲೆ ಮಗು ನಿಲ್ಲಿಸಿಕೊಂಡು ಬೆಂಗಳೂರು ದಂಪತಿ ಬೈಕ್‌ ರೈಡ್‌! ಬೆಚ್ಚಿಬಿದ್ದ ನೆಟಿಜನ್ಸ್

ಈ ಮಧ್ಯೆ ಕೆಲವರು ಆಕೆಯ ಬೆಂಬಲಕ್ಕೂ ಧಾವಿಸಿದ್ದಾರೆ. “ಇದು ಅವಳ ದೇಹ ಮತ್ತು ಅವಳ ಆಯ್ಕೆ. ಅವಳನ್ನು ಒಂಟಿಯಾಗಿ ಬಿಡಿ” ಎಂದು ಒಬ್ಬರು ಹೇಳಿದ್ದಾರೆ. ಆಕೆ ಧರಿಸುವ ಬಟ್ಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ದೇಹವನ್ನು ಪ್ರದರ್ಶಿಸುವಂತಹ, ಪ್ರಚೋದನಕಾರಿ ಬಟ್ಟೆ ಧರಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅವರದ್ದೆ ಮನೆಯಲ್ಲಿ ಹೇಗೆ ಬೇಕಾದರೂ ಇರಲಿ. ಹೊರಗೆ ಬಂದಾಗ ಇತರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಅನೇಕರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಆಕೆಯ ವರ್ತನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Exit mobile version