ಬೆಂಗಳೂರು: ಪ್ರಾಣಿ (animals), ಪಕ್ಷಿಗಳು (birds) ಮಾಡುವ ಚೇಷ್ಟೆ, ಮಕ್ಕಳ (children’s) ತುಂಟಾಟಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಪಡೆಯುತ್ತವೆ. ಇದೀಗ ಇಂತಹ ವಿಡಿಯೋವೊಂದು (video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral news) ಆಗುತ್ತಿದೆ. ಕಾಗೆಯೊಂದು (Crow) 500 ರೂಪಾಯಿ ಕೊಟ್ಟು ದ್ರಾಕ್ಷಿ (grape) ಹಣ್ಣು ಖರೀದಿ ಮಾಡಿರುವ ವಿಡಿಯೋವೊಂದು ಇನ್ ಸ್ಟಾ ಗ್ರಾಮ್ ನಲ್ಲಿ (instagram) ಹರಿದಾಡುತ್ತಿದ್ದು, ಸಾಕಷ್ಟು ಮಂದಿ ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಮಹಿಳೆಯೊಬ್ಬರಿಗೆ ಕಾಗೆ 500 ರೂಪಾಯಿ ಕೊಟ್ಟು ಅವರು ಕಲ್ಲಂಗಡಿ ಕೊಟ್ಟಾಗ ಹಣ ಕೊಡದೆ ಸತಾಯಿಸಿತು. ಆದರೆ ದ್ರಾಕ್ಷಿ ಹಣ್ಣು ತೋರಿಸಿದಾಗ ನೋಟನ್ನು ಅವರಿಗೆ ಕೊಟ್ಟು ದ್ರಾಕ್ಷಿ ಹಣ್ಣನ್ನು ತೆಗೆದುಕೊಂಡಿತು. ಈ ವಿಡಿಯೋ ಈಗ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದೆ.
ಮೇಲ್ನೋಟಕ್ಕೆ ಈ ಎಲ್ಲ ಪ್ರಕ್ರಿಯೆ ಸರಳವಾಗಿ ನಡೆದಿದೆ ಎಂದು ಭಾಸವಾದರೂ ಇದರ ಅಸಲಿಯತ್ತು ಬೇರೇನೇ ಇದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮರದ ದಿಮ್ಮಿಯ ಮೇಲೆ 500 ರೂಪಾಯಿಯ ನೋಟನ್ನು ಇಟ್ಟು ಯಾವುದೋ ಉದ್ದೇಶಕ್ಕೆಂದು ಹಿಂದಕ್ಕೆ ತಿರುಗಿದ್ದಾರೆ. ಆದರೆ ಅಷ್ಟರಲ್ಲಿ ಎಲ್ಲಿಗೆ ಬಂದ ಕಾಗೆ ನೋಟನ್ನು ಕೊಕ್ಕಿನಲ್ಲಿ ಎತ್ತಿಕೊಂಡು ಹಾರಿಹೋಗಿದೆ.
ಇದನ್ನೂ ಓದಿ: Viral News: ಸೋತರೂ ನಿಲ್ಲದ ಆರ್ಸಿಬಿ ಕ್ರೇಜ್; ಟಿಕೆಟ್ಗಾಗಿ ಸ್ಟೇಡಿಯಂ ಬಳಿ ಮಲಗಿದ ಫ್ಯಾನ್ಸ್
ಸಮಯಕ್ಕೆ ಸರಿಯಾಗಿ ಮಹಿಳೆ ಅದನ್ನು ನೋಡಿದರು. ಕಾಗೆಯ ಹಿಂದೆ ಹೋಗಿ ಕಾಗೆಯಿಂದ ಹಣವನ್ನು ಮರಳಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾಳೆ. ಅದಕ್ಕೆ ಏನೇನೋ ಆಸೆ ತೋರಿಸುತ್ತಾಳೆ. ಆದರೆ ಕಾಗೆ ಮಾತ್ರ ಯಾವುದಕ್ಕೂ ಕ್ಯಾರೇ ಮಾಡುವುದಿಲ್ಲ.
ಕೊನೆಗೆ ಮಹಿಳೆ ಅದಕ್ಕೆ ಕಲ್ಲಂಗಡಿ ಹಣ್ಣನ್ನು ಕಾಗೆಯ ಮುಂದಿರಿಸುತ್ತಾಳೆ. ಆದರೆ ಕಾಗೆ ಮಾತ್ರ ನೋ ಎನ್ನುತ್ತದೆ. ಮುಂದೇನು ಮಾಡುವುದು ಎನ್ನುವ ಯೋಚನೆಯಲ್ಲಿ ಮಹಿಳೆ ಉಪಾಯವಾಗಿ ಕಾಗೆಗೆ ದ್ರಾಕ್ಷಿ ಹಣ್ಣಿನ ಆಸೆ ತೋರಿಸುತ್ತಾಳೆ. ದ್ರಾಕ್ಷಿಯನ್ನು ನೋಡುತ್ತಲೇ ಕಾಗೆ ೫೦೦ ರೂಪಾಯಿ ನೋಟನ್ನು ಅವಳ ಮುಂದೆ ಹಾಕಿ ದ್ರಾಕ್ಷಿಯನ್ನು ತೆಗೆದುಕೊಳ್ಳುತ್ತದೆ.
ತನ್ನ ಹಣ ಕಳೆದೇ ಹೋಯಿತು ಎಂದುಕೊಂಡಿದ್ದ ಮಹಿಳೆಗೆ ಕಾಗೆ 500 ರೂಪಾಯಿ ಹಿಂದಿರುಗಿಸಿದ್ದು ನೋಡಿ ಮಹಿಳೆ ಸಂತೋಷಪಟ್ಟರು.
ಒಟ್ಟಿನಲ್ಲಿ ಕಾಗೆಯ ಈ ತುಂಟಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಸಾಕಷ್ಟು ಮಂದಿ ನೆಟ್ಟಿಗರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಗೆ “ನನ್ನ ಕಾಗೆ ಲೆಟ್ಸ್ ಗೋ ಶಾಪಿಂಗ್” ಎಂದು ಶೀರ್ಷಿಕೆ ನೀಡಲಾಗಿದೆ. ಕೆಲವರು ಕಾಗೆ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದು, ಇನ್ನು ಕೆಲವರು “ಇದು ವ್ಯಾಪಾರ” ಎಂದು ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಸಾಕಷ್ಟು ಮಂದಿ ಹೃದಯ ಮತ್ತು ನಗುವ ಎಮೋಜಿಗಳನ್ನು ಕಳುಹಿಸಿದ್ದಾರೆ.
ಕೋತಿಯ ಚೇಷ್ಟೆ
ವೃಂದಾವನದ ಶ್ರೀ ರಂಗನಾಥ್ ಜಿ ಮಂದಿರದಲ್ಲಿ ಕೋತಿ ಮತ್ತು ಭಕ್ತನ ಇದೇ ರೀತಿಯ ಕ್ಲಿಪ್ ವೊಂದು ಕೆಲವು ತಿಂಗಳ ಹಿಂದೆ ವೈರಲ್ ಆಗಿತ್ತು. ಶ್ರೀ ರಂಗನಾಥ್ ಜೀ ಮಂದಿರಕ್ಕೆ ಬಂದಿದ್ದ ಪ್ರವಾಸಿಗರೊಬ್ಬರಿಂದ ದುಬಾರಿ ಬೆಲೆಯ ಐಫೋನ್ ಅನ್ನು ಕೋತಿಯು ಕದ್ದಿತ್ತು. ಅವರು ಇದರಿಂದ ಆಘಾತಕ್ಕೆ ಒಳಗಾಗಿದ್ದರು. ಹಲವಾರು ಪ್ರಯತ್ನಗಳನ್ನು ಮಾಡಿದ ಬಳಿಕ ಕೋತಿಗೆ ಫ್ರೂಟಿ ಪಾನೀಯವನ್ನು ನೀಡಿ ಫೋನ್ ಅನ್ನು ಮರಳಿ ಪಡೆಯಬೇಕಾಯಿತು ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದರು.
ಈ ಘಟನೆಯ ವಿಡಿಯೋವನ್ನು ವಿಕಾಸ್ ಎಂಬ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಗಮನ ಸೆಳೆಯಿತು.