ಹುಲಿ ಹಸಿದಾಗ ತನಗಿಂತ ಚಿಕ್ಕ ಪ್ರಾಣಿ-ಪಕ್ಷಿಗಳನ್ನು ಬೇಟೆಯಾಡಿ ತಿನ್ನುತ್ತದೆ. ಹಾರುವ ಪಕ್ಷಿಗಳನ್ನು ಬೇಟೆಯಾಡುವುದು ತುಸು ಕಷ್ಟವೇ ಆದರೂ ಜಿಂಕೆ, ಮೊಲ ಇನ್ನಿತರ ಪ್ರಾಣಿಗಳೇ ಅದರ ಆಹಾರವಾಗುತ್ತವೆ. ಹಾಗೇ ಇಲ್ಲೊಂದು ಹುಲಿ ಕೆಸರು ನೀರಿನಲ್ಲಿ ಬಾತುಕೋಳಿಯೊಂದನ್ನು ಹಿಡಿಯಲು ಹೋಗಿತ್ತು. ಆದರೆ ಆ ಬಾತುಕೋಳಿ ಹುಲಿಯೊಂದಿಗೆ ಕಣ್ಣಾ ಮುಚ್ಚಾಲೆ ಆಟವನ್ನೇ ಆಡಿಬಿಟ್ಟಿದೆ. ಇದೊಂದು 10 ಸೆಕೆಂಡ್‌ಗಳ ವಿಡಿಯೋವಾಗಿದ್ದು ಸಖತ್ ಕ್ಯೂಟ್ ಆಗಿದೆ. ಈಗಾಗಲೇ 25 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಪುಟ್ಟ ಬಾತುಕೋಳಿಯ ಬುದ್ಧಿವಂತಿಕೆ ಅಚ್ಚರಿ ಮೂಡಿಸಿದೆ.
ಅದೊಂದು ಕೆಸರು ನೀರಿನ ಹೊಳೆ. ಆ ನೀರಿನಲ್ಲಿ ಒಂದು ಬಾತುಕೋಳಿ ಹೋಗುತ್ತಿತ್ತು. ಹಿಂದಿನಿಂದ ಹುಲಿಯೊಂದು ಹೊಂಚುಹಾಕುತ್ತ ಬರುತ್ತಿತ್ತು. ಬಾತುಕೋಳಿಯನ್ನು ಹಿಡಿಯಲೇಬೇಕು ಎಂದು ಹುಲಿ ಸಾಕಷ್ಟು ಎಚ್ಚರಿಕೆಯಿಂದಲೇ ಹತ್ತಿರ ಬಂದು ಇನ್ನೇನು ದಾಳಿ ಮಾಡಬೇಕು ಎನ್ನುವಷ್ಟರಲ್ಲಿ ಬಾತುಕೋಳಿ ಪಟ್ಟನೆ ನೀರಿನೊಳಗೆ ಮುಳುಗಿಬಿಟ್ಟಿದೆ. ಆಗ ಹುಲಿ ಅತ್ತಿತ್ತ ಹುಡುಕುತ್ತ ತನ್ನ ಬಲಗಡೆ ಹೋದರೆ ಅದರ ಹಿಂಭಾಗದಲ್ಲಿ ಮತ್ತೆ ನೀರಿನಿಂದ ಮೇಲೆ ಬಂದು ಓಡಿ ಹೋಗಿದೆ ಬಾತುಕೋಳಿ..!
ಇದನ್ನೂ ಓದಿ: Sarkaru Vaari Paata : ಸಿನಿಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಮಹೇಶ್ ಬಾಬು
Buitengebieden ಎಂಬ ಟ್ವಿಟರ್ ಅಕೌಂಟ್‌ನಲ್ಲಿ ವಿಡಿಯೋ ಪೋಸ್ಟ್ ಆಗಿದೆ. ನೆಟ್ಟಿಗರು ಬಾತುಕೋಳಿಯ ಸ್ಮಾರ್ಟ್‌ನೆಸ್‌ಗೆ ಫಿದಾ ಆಗಿದ್ದಾರೆ. ಎಷ್ಟು ಆರಾಮಾಗಿ ತಪ್ಪಿಸಿಕೊಂಡಿಬಿಟ್ಟಿತು ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು, ಹುಲಿಗಳಿಗಿಂತ ಬಾತುಕೋಳಿಗಳೇ ಬುದ್ಧಿವಂತರು ಎಂಬುದು ಮತ್ತೊಮ್ಮೆ ಸಾಬೀತಾಯಿತು ಎಂದು ಹೇಳಿದ್ದಾರೆ. ಅಂದಹಾಗೇ, ಇದು ಪ್ರಕೃತಿಯ ಸಹಜ ನಿಯಮ. ದೊಡ್ಡ ಪ್ರಾಣಿಗಳಿಗೆ ಬೇಟೆಯಾಡುವ ಸಾಮರ್ಥ್ಯ ಹೇಗೆ ಇರುತ್ತದೆಯೋ ಹಾಗೇ, ಚಿಕ್ಕಪುಟ್ಟ ಪ್ರಾಣಿ-ಪಕ್ಷಿಗಳಿಗೆ ತಮ್ಮ ಜೀವ ರಕ್ಷಿಸಿಕೊಳ್ಳುವ ಕೌಶಲವೂ ಇದ್ದೇ ಇರುತ್ತದೆ.
ಇದನ್ನೂ ಓದಿ: Viral Video: ಉಸಿರಾಡಲಾಗದೆ ಎಚ್ಚರ ತಪ್ಪಿದ್ದ ನಾಯಿಗೆ ಆತ ಜೀವ ತುಂಬಿದ; ಮನ ಮಿಡಿಯುವ ದೃಶ್ಯ ಇದು