Site icon Vistara News

Viral News | 12 ವರ್ಷದ ಹಿಂದೆ ಚಿಕಿತ್ಸೆ ನೀಡಿ ಬದುಕಿಸಿದ ವೈದ್ಯನನ್ನು ಗುರುತಿಸಿದ ಆನೆ: ಪ್ರಾಣಿಗಳೇ ಗುಣದಲಿ ಮೇಲು!

ಬೆಂಗಳೂರು: ಮನುಷ್ಯ ತುಂಬ ಸ್ವಾರ್ಥಿ. ಇಂದು ಸಹಾಯ ಮಾಡಿದ ವ್ಯಕ್ತಿಯನ್ನು ನಾಳೆಯೇ ಮರೆಯುತ್ತಾನೆ. ಆದರೆ ಪ್ರಾಣಿಗಳು ಹಾಗಲ್ಲ. ಬೇರೆಯವರು ಮಾಡಿದ ಸಹಾಯವನ್ನು ವರ್ಷಗಟ್ಟಲೆ ನೆನಪಿಟ್ಟುಕೊಳ್ಳುವ ಸ್ವಭಾವ ಪ್ರಾಣಿಗಳದ್ದು. ಅದೇ ರೀತಿ ಆನೆಯೊಂದು ಸುಮಾರು 12 ವರ್ಷಗಳ ಹಿಂದೆ ಚಿಕಿತ್ಸೆ ನೀಡಿ ತನ್ನನ್ನು ಬದುಕಿಸಿದ್ದ ವೈದ್ಯನನ್ನು ಗುರುತಿಸಿದ ಫೋಟೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral Video | ಯೋಗಿ ಆದಿತ್ಯನಾಥ್‌ಗೆ ಲವ್‌ ಅಟ್‌ ಫಸ್ಟ್‌ ಸೈಟ್‌! ವೈರಲ್‌ ಆಗ್ತಿದೆ ವಿಡಿಯೊ
ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿಯಾಗಿರುವ ಸುಶಾಂತ್‌ ನಂದ ಅವರು ಆ ಫೋಟೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಆನೆಯೊಂದು ವ್ಯಕ್ತಿಯೊಬ್ಬರ ಕೈಯನ್ನು ಸೊಂಡಿಲಿನಿಂದ ಸ್ಪರ್ಶಿಸುವುದನ್ನು ಕಾಣಬಹುದಾಗಿದೆ. ಈ ಫೋಟೊವನ್ನು ಹಂಚಿಕೊಂಡಿರುವ ಸುಶಾಂತ್‌, “ಆನೆಗಳಿಗೆ ಅತ್ಯಂತ ಬಲಿಷ್ಠ ನೆನಪಿನ ಶಕ್ತಿ ಇರುತ್ತದೆ. 12 ವರ್ಷಗಳ ಹಿಂದೆ ಸಾಯುವ ಸ್ಥಿತಿಯಲ್ಲಿದ್ದ ತನ್ನನ್ನು ಬದುಕಿಸಿದ ಪಶು ವೈದ್ಯನನ್ನು ಆನೆ ಗುರುತಿಸಿದೆ” ಎಂದು ಕ್ಯಾಪ್ಶನ್‌ ಬರೆದಿದ್ದಾರೆ.


ಈ ಫೋಟೊಗೆ ಸಾಮಾಜಿಕ ಜಾಲತಾಣದ ತುಂಬೆಲ್ಲ ಮೆಚ್ಚುಗೆ ವ್ಯಕ್ತವಾಗಿದೆ. “ನಿಜವಾಗಿಯೂ ಪ್ರಾಣಿಗಳೇ ಮನುಷ್ಯನ ನಿಜವಾದ ಸ್ನೇಹಿತರು” ಎಂದು ಜನರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video: ತಟ್ಟಿದ ರೊಟ್ಟಿ ಮೇಲೆ ಎಂಜಲು ಉಗುಳಿ ಬೇಯಿಸುತ್ತಿದ್ದವ ಅರೆಸ್ಟ್​; ಇಂಥ ಗಲೀಜು ಮನಸ್ಥಿತಿಗೆ ಏನೆನ್ನೋಣ?
ʼಡೈಲಿ ಮೇಲ್‌ʼ ವರದಿಯ ಪ್ರಕಾರ ಈ ಆನೆಯ ಹೆಸರು ಪ್ಲಾಯ್‌ ಥಾಂಗ್‌. ಥೈಲ್ಯಾಂಡ್‌ನ ರಯಾಂಗ್‌ನ ಅರಣ್ಯ ಪ್ರದೇಶದಲ್ಲಿರುವ ಈ ಆನೆಗೆ 31 ವರ್ಷ ವಯಸ್ಸು. ಆ ಆನೆ ಗುರುತಿಸಿರುವ ಪಶು ವೈದ್ಯರ ಹೆಸರು ಪತ್ತರ್ಪೋಲ್‌ ಮನಿಯಾನ್.‌ 2009ರ ಸಮಯದಲ್ಲಿ ಪ್ಲಾಯ್‌ ಥಾಂಗ್‌ ಅನಾರೋಗ್ಯದಿಂದ ಬಳಲುತ್ತಿತ್ತು. ಆಗ ಆನೆಯನ್ನು ಕಂಡಿದ್ದ ವೈದ್ಯ ಅದನ್ನು ಬೇರೆಡೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಿದ್ದರು. ಆನೆ ಸಂಪೂರ್ಣವಾಗಿ ಗುಣಮುಖವಾದ ನಂತರ ಅದನ್ನು ಕಾಡಿನೊಳಗೆ ಬಿಡಲಾಗಿತ್ತು. ಇತ್ತೀಚೆಗೆ ವೈದ್ಯರು ಮತ್ತೆ ಕಾಡಿನೊಳಗೆ ಕೆಲಸದ ನಿಮಿತ್ತ ತೆರಳಿದಾಗ ಆನೆ ಕಂಡಿದ್ದು, ಅದು ವೈದ್ಯನನ್ನು ಗುರುತಿಸಿದೆ.

Exit mobile version