Viral News | 12 ವರ್ಷದ ಹಿಂದೆ ಚಿಕಿತ್ಸೆ ನೀಡಿ ಬದುಕಿಸಿದ ವೈದ್ಯನನ್ನು ಗುರುತಿಸಿದ ಆನೆ: ಪ್ರಾಣಿಗಳೇ ಗುಣದಲಿ ಮೇಲು! - Vistara News

ವೈರಲ್ ನ್ಯೂಸ್

Viral News | 12 ವರ್ಷದ ಹಿಂದೆ ಚಿಕಿತ್ಸೆ ನೀಡಿ ಬದುಕಿಸಿದ ವೈದ್ಯನನ್ನು ಗುರುತಿಸಿದ ಆನೆ: ಪ್ರಾಣಿಗಳೇ ಗುಣದಲಿ ಮೇಲು!

ಆನೆಯೊಂದು ತನಗೆ 12 ವರ್ಷಗಳ ಹಿಂದೆ ಚಿಕಿತ್ಸೆ ನೀಡಿ ರಕ್ಷಿಸಿದ್ದ ಪಶು ವೈದ್ಯನನ್ನು ಗುರುತಿಸಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮನುಷ್ಯ ತುಂಬ ಸ್ವಾರ್ಥಿ. ಇಂದು ಸಹಾಯ ಮಾಡಿದ ವ್ಯಕ್ತಿಯನ್ನು ನಾಳೆಯೇ ಮರೆಯುತ್ತಾನೆ. ಆದರೆ ಪ್ರಾಣಿಗಳು ಹಾಗಲ್ಲ. ಬೇರೆಯವರು ಮಾಡಿದ ಸಹಾಯವನ್ನು ವರ್ಷಗಟ್ಟಲೆ ನೆನಪಿಟ್ಟುಕೊಳ್ಳುವ ಸ್ವಭಾವ ಪ್ರಾಣಿಗಳದ್ದು. ಅದೇ ರೀತಿ ಆನೆಯೊಂದು ಸುಮಾರು 12 ವರ್ಷಗಳ ಹಿಂದೆ ಚಿಕಿತ್ಸೆ ನೀಡಿ ತನ್ನನ್ನು ಬದುಕಿಸಿದ್ದ ವೈದ್ಯನನ್ನು ಗುರುತಿಸಿದ ಫೋಟೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral Video | ಯೋಗಿ ಆದಿತ್ಯನಾಥ್‌ಗೆ ಲವ್‌ ಅಟ್‌ ಫಸ್ಟ್‌ ಸೈಟ್‌! ವೈರಲ್‌ ಆಗ್ತಿದೆ ವಿಡಿಯೊ
ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿಯಾಗಿರುವ ಸುಶಾಂತ್‌ ನಂದ ಅವರು ಆ ಫೋಟೊವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಆನೆಯೊಂದು ವ್ಯಕ್ತಿಯೊಬ್ಬರ ಕೈಯನ್ನು ಸೊಂಡಿಲಿನಿಂದ ಸ್ಪರ್ಶಿಸುವುದನ್ನು ಕಾಣಬಹುದಾಗಿದೆ. ಈ ಫೋಟೊವನ್ನು ಹಂಚಿಕೊಂಡಿರುವ ಸುಶಾಂತ್‌, “ಆನೆಗಳಿಗೆ ಅತ್ಯಂತ ಬಲಿಷ್ಠ ನೆನಪಿನ ಶಕ್ತಿ ಇರುತ್ತದೆ. 12 ವರ್ಷಗಳ ಹಿಂದೆ ಸಾಯುವ ಸ್ಥಿತಿಯಲ್ಲಿದ್ದ ತನ್ನನ್ನು ಬದುಕಿಸಿದ ಪಶು ವೈದ್ಯನನ್ನು ಆನೆ ಗುರುತಿಸಿದೆ” ಎಂದು ಕ್ಯಾಪ್ಶನ್‌ ಬರೆದಿದ್ದಾರೆ.


ಈ ಫೋಟೊಗೆ ಸಾಮಾಜಿಕ ಜಾಲತಾಣದ ತುಂಬೆಲ್ಲ ಮೆಚ್ಚುಗೆ ವ್ಯಕ್ತವಾಗಿದೆ. “ನಿಜವಾಗಿಯೂ ಪ್ರಾಣಿಗಳೇ ಮನುಷ್ಯನ ನಿಜವಾದ ಸ್ನೇಹಿತರು” ಎಂದು ಜನರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ: Viral Video: ತಟ್ಟಿದ ರೊಟ್ಟಿ ಮೇಲೆ ಎಂಜಲು ಉಗುಳಿ ಬೇಯಿಸುತ್ತಿದ್ದವ ಅರೆಸ್ಟ್​; ಇಂಥ ಗಲೀಜು ಮನಸ್ಥಿತಿಗೆ ಏನೆನ್ನೋಣ?
ʼಡೈಲಿ ಮೇಲ್‌ʼ ವರದಿಯ ಪ್ರಕಾರ ಈ ಆನೆಯ ಹೆಸರು ಪ್ಲಾಯ್‌ ಥಾಂಗ್‌. ಥೈಲ್ಯಾಂಡ್‌ನ ರಯಾಂಗ್‌ನ ಅರಣ್ಯ ಪ್ರದೇಶದಲ್ಲಿರುವ ಈ ಆನೆಗೆ 31 ವರ್ಷ ವಯಸ್ಸು. ಆ ಆನೆ ಗುರುತಿಸಿರುವ ಪಶು ವೈದ್ಯರ ಹೆಸರು ಪತ್ತರ್ಪೋಲ್‌ ಮನಿಯಾನ್.‌ 2009ರ ಸಮಯದಲ್ಲಿ ಪ್ಲಾಯ್‌ ಥಾಂಗ್‌ ಅನಾರೋಗ್ಯದಿಂದ ಬಳಲುತ್ತಿತ್ತು. ಆಗ ಆನೆಯನ್ನು ಕಂಡಿದ್ದ ವೈದ್ಯ ಅದನ್ನು ಬೇರೆಡೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಿದ್ದರು. ಆನೆ ಸಂಪೂರ್ಣವಾಗಿ ಗುಣಮುಖವಾದ ನಂತರ ಅದನ್ನು ಕಾಡಿನೊಳಗೆ ಬಿಡಲಾಗಿತ್ತು. ಇತ್ತೀಚೆಗೆ ವೈದ್ಯರು ಮತ್ತೆ ಕಾಡಿನೊಳಗೆ ಕೆಲಸದ ನಿಮಿತ್ತ ತೆರಳಿದಾಗ ಆನೆ ಕಂಡಿದ್ದು, ಅದು ವೈದ್ಯನನ್ನು ಗುರುತಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Janardhan Reddy: ಮಡದಿಗಾಗಿ ಮರವೇರಿ ಮಾವು ಕಿತ್ತುಕೊಟ್ಟ ರೆಡ್ಡಿ: ವಿಡಿಯೊ ವೈರಲ್

Janardhan Reddy: ಮಡದಿಯ ಮಾವಿನ ಕಾಯಿ ತಿನ್ನಬೇಕೆಂಬ ಮನದಾಸೆಯನ್ನು ತೀರಿಸಲು ಶಾಸಕ ಜಿ. ಜನಾರ್ದನರೆಡ್ಡಿ ಅವರು, ಹರಸಾಹಸಪಟ್ಟು ಮಾವಿನ ಮರವೇರಿ ಕಾಯಿಯನ್ನು ಕಿತ್ತುಕೊಟ್ಟಿದ್ದಾರೆ. ಈ ವಿಡಿಯೊ ಸದ್ಯ ಎಲ್ಲೆಡೆ ವೈರಲ್‌ ಆಗಿದೆ.

VISTARANEWS.COM


on

Janardhan Reddy
Koo

ಗಂಗಾವತಿ: ಮಾವು ಎಂದರೆ ಯಾರಿಗೆ ತಾನೆ ಇಷ್ಟವಿರದು ಹೇಳಿ?… ಮಾವಿನ ತೋಟದಲ್ಲಿ ಸಂಚರಿಸುವಾಗ ಹೇಳಿ-ಕೇಳಿ ಮುದ್ದಿನ ಮಡದಿ ಮಾವು ಬೇಕೆಂದು ಪಟ್ಟು ಹಿಡಿದಾಗ ಆಕೆಯ ಆಸೆ ಪೂರೈಸಲು ಎಂಥವರಾದರೂ ಹರಸಾಹಸ ಮಾಡಲೇಬೇಕು. ಇದಕ್ಕೆ ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ (Janardhan Reddy) ಹೊರತಾಗಿಲ್ಲ. ಮಡದಿಯ ಮಾವಿನ ಕಾಯಿ (Mango) ತಿನ್ನಬೇಕೆಂಬ ಮನದಾಸೆಯನ್ನು ತೀರಿಸಲು ಶಾಸಕ ರೆಡ್ಡಿ, ಹರಸಾಹಸಪಟ್ಟು ಮಾವಿನ ಮರವೇರಿ ಕಾಯಿಯನ್ನು ಕಿತ್ತು ಕೊಡುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್ ಆಗಿದೆ.

ಶಾಸಕ ಜಿ. ಜನಾರ್ದನರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಅವರು, ತಮ್ಮ ಮಾವಿನ ತೋಟದಲ್ಲಿ ವಿಹರಿಸುತ್ತಿರುವಾಗ ರೆಡ್ಡಿ, ಮಾವಿನ ಮರವನ್ನು ಪ್ರಯಾಸಪಟ್ಟು ಏರಿ ಕಾಯಿಯೊಂದನ್ನು ಕಿತ್ತು ಪತ್ನಿಯ ಕೈಗಿಡುತ್ತಾರೆ.
ಮರದ ಟೊಂಗೆಗಳ ಮೇಲೆ ಶಾಸಕ ರೆಡ್ಡಿ ಜಾಗ್ರತೆಯಿಂದ ಹೆಜ್ಜೆ ಇಡುತ್ತಾ, ಬ್ಯಾಲೆನ್ಸ್ ಮಾಡಿ ಕಾಯಿ ಕಿತ್ತು, ಮರಳಿ ಮರ ಇಳಿಯುವಾಗ ತಮ್ಮ ಬಾಲ್ಯವನ್ನು ನೆನೆಸಿಕೊಂಡು ಇಳಿಯಲು ಪ್ರಯಾಸ ಪಡುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Nutrition Alert: ಎಳನೀರು ಕುಡಿಯುವುದರಿಂದಲೂ ನಮ್ಮ ದೇಹಕ್ಕೆ ಸೈಡ್‌ ಎಫೆಕ್ಟ್‌ ಇದೆಯೆ?

ಸದ್ಯ ಮಾವಿನ ಹಣ್ಣಿನ ಸೀಸನ್‌ ಆಗಿರುವುದರಿಂದ ತರಹೇವಾರಿ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ನಡುವೆ ಜನಾರ್ದನ ರೆಡ್ಡಿ ಅವರು ಮಡದಿಗಾಗಿ ಮಾವಿನ ಕಾಯಿ ಕಿತ್ತುಕೊಟ್ಟಿರುವ ಹಳೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇದು 2019ರಲ್ಲಿ ರೆಡ್ಡಿ ಅವರ ಮಾವಿನ ತೋಟದಲ್ಲಿ ತೆಗೆದಿರುವ ವಿಡಿಯೊ ಎನ್ನಲಾಗಿದೆ.

Continue Reading

ದೇಶ

ಐಎಎಸ್‌ ಆಫೀಸರ್‌ ಆಗಿರುವ ಮಾಜಿ ಪತ್ನಿಯಿಂದ ನನ್ನ ಮನೆಗೆ ವಿದ್ಯುತ್‌ ಕಟ್; ಇದು ಐಪಿಎಸ್‌ ಆಫೀಸರ್‌ ಅಳಲು!

ತಮಿಳುನಾಡಿನಲ್ಲಿ ಐಎಎಸ್‌ ಅಧಿಕಾರಿಯಾಗಿರುವ ಬೀಲಾ ವೆಂಕಟೇಶನ್‌ ಹಾಗೂ ಐಪಿಎಸ್‌ ಅಧಿಕಾರಿ ರಾಜೇಶ್‌ ದಾಸ್‌ ಅವರು ಮಾಜಿ ಪತಿ-ಪತ್ನಿಯಾಗಿದ್ದು, ಇವರು ವಿಚ್ಛೇದನದ ಬಳಿಕವೂ ಜಗಳ ಮುಂದುವರಿಸಿದ್ದಾರೆ. ಅಧಿಕಾರಿಗಳಿಬ್ಬರ ಜಗಳವು ಬೀದಿಗೆ ಬಂದಿರುವುದೇಕೆ? ಇವರ ಆರೋಪಗಳು ಏನೇನು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Tamil Nadu Officers
Koo

ಚೆನ್ನೈ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇನ್ನು, ಮದುವೆಯಾದ ಬಳಿಕ, ಹೊಂದಾಣಿಕೆಯಾಗದೆ, ಉಂಡು ಮಲಗಿದ ಮೇಲೂ ಜಗಳ ಮುಂದುವರಿಯು ಕಾರಣದಿಂದ ವಿಚ್ಛೇದನ ಪಡೆದವರು ತಮ್ಮ ಮಾಡಿಗೆ ತಾವು ಇರುತ್ತಾರೆ. ಆದರೆ, ತಮಿಳುನಾಡಿನಲ್ಲಿ (Tamil Nadu) ಐಎಎಸ್‌ ಅಧಿಕಾರಿಯಾಗಿರುವ ಬೀಲಾ ವೆಂಕಟೇಶನ್‌ (Beela Venkatesan) ಹಾಗೂ ಐಪಿಎಸ್‌ ಅಧಿಕಾರಿ ರಾಜೇಶ್‌ ದಾಸ್‌ (Rajesh Das) ಅವರು ಮಾಜಿ ಪತಿ-ಪತ್ನಿಯಾಗಿದ್ದು, ಇವರು ವಿಚ್ಛೇದನದ ಬಳಿಕವೂ ಜಗಳ ಮುಂದುವರಿಸಿದ್ದಾರೆ. “ಐಎಎಸ್‌ ಅಧಿಕಾರಿಯಾಗಿರುವ ಮಾಜಿ ಪತ್ನಿಯು ನನ್ನ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾಳೆ” ಎಂಬುದಾಗಿ ರಾಜೇಶ್‌ ದಾಸ್‌ ಆರೋಪಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

“ನಾನು ಮನೆಯಲ್ಲಿ ಇದ್ದಾಗಲೇ ಮೇ 20ರಂದು ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ತಮಿಳುನಾಡು ಉತ್ಪಾದನೆ ಮತ್ತು ವಿತರಣೆ ನಿಗಮದ (TANGEDCO) ಅಧಿಕಾರಿಗಳು ನನ್ನ ಅಭಿಪ್ರಾಯವನ್ನೂ ಪಡೆಯದೆ ವಿದ್ಯುತ್‌ ಕಡಿತಗೊಳಿಸಲಾಗಿದೆ. ನನ್ನ ಮನೆಯ ವಿದ್ಯುತ್‌ ಶುಲ್ಕವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಲಾಗಿದೆ. ವಿದ್ಯುತ್‌ ಕಡಿತಗೊಳಿಸುವ ಕುರಿತು ಕೋರ್ಟ್‌ ಆದೇಶವೂ ಇಲ್ಲ. ಹೀಗಿದ್ದರೂ, ಇಂಧನ ಇಲಾಖೆ ಕಾರ್ಯದರ್ಶಿ ಆಗಿರುವ, ನನ್ನ ಮಾಜಿ ಪತ್ನಿ ಬೀಲಾ ವೆಂಕಟೇಶನ್‌ ಅವರೇ ವಿದ್ಯುತ್‌ ಕಡಿತಗೊಳಿಸಿದ್ದಾರೆ” ಎಂಬುದಾಗಿ ರಾಜೇಶ್‌ ದಾಸ್‌ ಅವರು ಆರೋಪಿಸಿದ್ದಾರೆ.

ವಿಚ್ಛೇದನಕ್ಕೂ ಮೊದಲು ರಾಜೇಶ್‌ ದಾಸ್ ಹಾಗೂ ಬೀಲಾ ವೆಂಕಟೇಶನ್.‌

ಬೀಲಾ ವೆಂಕಟೇಶನ್‌ ಪ್ರತಿಕ್ರಿಯೆ ಏನು?

ರಾಜೇಶ್‌ ದಾಸ್‌ ಅವರ ಆರೋಪಗಳಿಗೆ ಬೀಲಾ ವೆಂಕಟೇಶನ್‌ ಅವರು ಪ್ರತಿಕ್ರಿಯಿಸಿದ್ದು, ಅವರ ಆರೋಪಗಳನ್ನು ನಿರಾಕರಿಸಿದ್ದಾರೆ. “ಕಳೆದ ಮೂರು ತಿಂಗಳಿಂದ ಮನೆಯಲ್ಲಿ ಯಾರೂ ಇಲ್ಲ. ಆದರೆ, ನನ್ನ ಹೆಸರಿನಲ್ಲಿ ವಿದ್ಯುತ್‌ ಬಿಲ್‌ ಬರುತ್ತದೆ, ಆ ಜಾಗವೂ ನನ್ನ ಹೆಸರಲ್ಲೇ ಇದೆ. ಹಾಗಾಗಿ, ನಾನು ಅನವಶ್ಯಕವಾಗಿ ದುಡ್ಡು ವ್ಯಯಿಸಲು ಇಚ್ಛಿಸುವುದಿಲ್ಲ. ರಾಜೇಶ್‌ ದಾಸ್‌ ಅವರೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಕುರಿತು ದಾಖಲೆ ಕೊಡಿ, ನೋಂದಣಿ ಬದಲಾಯಿಸಿಕೊಳ್ಳಿ ಎಂಬುದಾಗಿ ಮನವಿ ಮಾಡಿದರೂ ದಾಖಲೆ ಸಲ್ಲಿಸಿಲ್ಲ. ಅವರು ದಾಖಲೆ ನೀಡದ ಕಾರಣ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಿದ್ದಾರೆ” ಎಂದಿದ್ದಾರೆ.

ತಮಿಳುನಾಡು ಮಾಜಿ ಡಿಜಿಪಿ ಆಗಿರುವ ರಾಜೇಶ್‌ ದಾಸ್‌ ಅವರು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಮಹಿಳಾ ಐಪಿಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಅಧೀನ ನ್ಯಾಯಾಲಯವು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಅವರು ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಇವರ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿತ್ತು. ಆದರೆ, ಇವರ ಬಂಧನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಮೇ 17ರಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಇದನ್ನೂ ಓದಿ: Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Continue Reading

ವೈರಲ್ ನ್ಯೂಸ್

Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

Viral Video:ಬೂದು ಬಣ್ಣದ ಈ ಗಿಳಿ ಜೊತೆಗಿದ್ದ ವ್ಯಕ್ತಿ ಹೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸುವುದನ್ನು ಕಾಣಬಹುದಾಗಿದೆ. ಮೈಕ್‌ ನಲ್ಲಿ ಮಾತನಾಡನಾಡುವ ಗಿಳಿ ವಿವಿಧ ಶಬ್ಧಗಳನ್ನು ಮಾಡುತ್ತದೆ. ಇನ್ನು ಸ್ವತಃ ತಾನೇ ಮೈಕ್‌ ಅನ್ನು ಎಳೆದು ಮಾತನಾಡುವುದು ವಿಶೇಷವಾಗಿ ಗಮನಸೆಳೆಯುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು @birdslover212 ಎಂಬವರು ಶೇರ್‌ ಮಾಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ಈಗ ಪ್ರಾಣಿ-ಪಕ್ಷಿಗಳು ಮನುಷ್ಯರಿಗಿಂತ ಹೆಚ್ಚು ಟ್ಯಾಲೆಂಟೆಡ್‌ ಆಗಿರುತ್ತವೆ. ಸಾಮಾನ್ಯವಾಗಿ ನಾಯಿ, ಬೆಕ್ಕು, ಪಾಂಡಾ ಹೀಗೆ ಕೆಲವು ಪ್ರಾಣಿಗಳು ತಮ್ಮ ವಿಶೇಷ ಕಲೆ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ.ಇದೀಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ. ಈ ವಿಡಿಯೋದಲ್ಲಿ ಗಿಣಿ(Parrot)ಯೊಂದು ಇಂಗ್ಲಿಷ್‌ನಲ್ಲಿ ಮಾತನಾಡೋದು ಮಾತ್ರ ಅಲ್ಲ, ಬೇರೆ ಬೇರೆ ಶಬ್ದಗಳನ್ನು ಮಿಮಿಕ್ರಿಯನ್ನೂ ಮಾಡುವುದನ್ನು ಕಾಣಬಹುದಾಗಿದೆ.

ಬೂದು ಬಣ್ಣದ ಈ ಗಿಳಿ ಜೊತೆಗಿದ್ದ ವ್ಯಕ್ತಿ ಹೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸುವುದನ್ನು ಕಾಣಬಹುದಾಗಿದೆ. ಮೈಕ್‌ ನಲ್ಲಿ ಮಾತನಾಡನಾಡುವ ಗಿಳಿ ವಿವಿಧ ಶಬ್ಧಗಳನ್ನು ಮಾಡುತ್ತದೆ. ಇನ್ನು ಸ್ವತಃ ತಾನೇ ಮೈಕ್‌ ಅನ್ನು ಎಳೆದು ಮಾತನಾಡುವುದು ವಿಶೇಷವಾಗಿ ಗಮನಸೆಳೆಯುತ್ತದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು @birdslover212 ಎಂಬವರು ಶೇರ್‌ ಮಾಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಂಥಾ ಅಮೇಜಿಂಗ್‌ ಸಂಗತಿ ಎಂದು ಬರೆದುಕೊಂಡಿದ್ದಾರೆ.

ಈ ಗಿಣಿಯ ವಿಶೇಷತೆ ಏನು?

ಕಾಗೆ, ರಾವೆನ್‌ ಮತ್ತು ಜೇ ಹಕ್ಕಿಗಳಂತೆ ಬುದ್ಧಿವಂತ ಪಕ್ಷಿ ಆಫ್ರಿಕಾದ ಬೂದು ಬಣ್ಣದ ಗಿಳಿ. ಇದರ ವೈಜ್ಞಾನಿಕ ಹೆಸರು ಪಿಟ್ಟಾಕಸ್‌ ಎರಿಥಕಸ್‌ (95112005 61118605). ಆಫ್ರಿಕಾದಲ್ಲಿರುವ ಈ ಗಿಳಿ ಮಾತ್ರ ಬೂದು ಬಣ್ಣದಲ್ಲಿರುತ್ತದೆ. ಇದರಲ್ಲಿ ಈವರೆಗೆ ಎರಡು ತಳಿಗಳನ್ನು ಗುರುತಿಸಲಾಗಿದೆ. ಅವೆಂದರೆ ಕಾಂಗೊ ಆಫ್ರಿಕನ್‌ ಗ್ರೇ ಮತ್ತು
ಟಮ್‌ನೆ ಅಪ್ರಿಕನ್‌ ಗ್ರೇ. ಇದರ ದೇಹವು ಬೂದು ಬಣ್ಣದ ಗರಿಗಳಿಂದ ಅವೃತವಾಗಿರುತ್ತದೆ. ಇದರ ರೆಕ್ಕೆಗಳೂ ಕಪ್ಪು
ಮಿಶ್ರಿತ ಬೂದು ಬಣ್ಣದಲ್ಲಿ ಇರುತ್ತವೆ. ಬಾಲದ ಪುಕ್ಕಗಳು ಕೆಂಪು ಬಣ್ಣದಲ್ಲಿರುತ್ತವೆ. ಬಾಗಿದ ಕೊಕ್ಕು, ಹಳದಿ ಬಣ್ಣದ
ಕಣ್ಣಾಲಿಗಳನ್ನು ಹೊಂದಿರುತ್ತದೆ. ಆಫ್ರಿಕಾ ದೇಶಗಳ ಅರಣ್ಯಗಳು, ಹುಲ್ಲುಗಾವಲು, ಕೃಷಿ ಭೂಮಿ ಪ್ರದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಇದನ್ನೂ ಓದಿ: Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

ಸಾಮಾನ್ಯವಾಗಿ ಈ ಗಿಳಿಗಳು ಮಾನವ ದ್ವನಿಯನ್ನು ಅನುಕರಿಸಬಲ್ಲವು. ಈ ಗಿಳಿ ಕೂಡಾ ಸಣ್ಣಪದ ಹಾಗೂ ಸರಳ
ವಾಕ್ಕಗಳನ್ನು ನುಡಿಯಬಲ್ಲದು. ಇದು ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಇತರೆ ಪಕ್ಷಿಗಳಿಗೆ ಹೋಲಿಸಿದರೆ ಇದರ ಜೀವಿತಾವಧಿ ಸುದೀರ್ಘವಾಗಿರುತ್ತದೆ. ತಳಿಗಳಲ್ಲಿ ಅತಿ ಚಾಣಾಕ್ಷ ಪಕ್ಷಿ ಎಂದು ಇದನ್ನು ಪರಿಗಣಿಸಲಾಗಿದೆ. ಮನುಷ್ಯರ ಮಾತುಗಳನ್ನು ಅರ್ಥಮಾಡಿಕೊಳ್ಳುವ, ದ್ವನಿಯನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ.ಕೆಲವು
ಗಿಳಿಗಳು ವಸ್ತುಗಳನ್ನು ಗುರುತಿಸುವ, ವಿವರಿಸುವ ಹಾಗೂ ಎಣಿಸುವ ಸಾಮರ್ಥ್ಯವನ್ನೂ ಹೊಂದಿರುವುದು ವಿಶೇಷ.

Continue Reading

ವೈರಲ್ ನ್ಯೂಸ್

Viral Video: ಮದುವೆಗೆ ಬಂದ ಮಾಜಿ ಪ್ರಿಯಕರ; ಆಮೇಲೆ ನಡೆದಿದ್ದೇ ಬೇರೆ- ಸಿನಿಮಾ ಸ್ಟೈಲ್‌ನಲ್ಲಿ ಟ್ವಿಸ್ಟ್‌ ಎಂದ ನೆಟ್ಟಿಗರು

Viral Video: ನೂತನ ಜೋಡಿ ಜೊತೆಗೆ ಫೋಟೋ ತೆಗೆಸಿಕೊಳ್ಳಲೆಂದು ವೇದಿಕೆಗೆ ಬಂದಿದ ಮಾಜಿ ಪ್ರಿಯಕರ ಏಕಾಏಕಿ ವರನ ಮೇಲೆ ಹಲ್ಲೆ ನಡೆಸುತ್ತಾನೆ. ಮೂಖಾಮೂತಿ ನೋಡದೇ ವರನನ್ನು ಚಚ್ಚಿದ ಆ ಯುವಕನನ್ನು ಕಂಡು ಒಂದು ಕ್ಷಣಕ್ಕೆ ಎಲ್ಲರು ಗರ ಬಡಿದಂತೆ ನಿಂತಿದ್ದರು. ತಕ್ಷಣ ವಧು ಹಾಗೂ ಸಂಬಂಧಿಕರು ವರನನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ.

VISTARANEWS.COM


on

Viral Video
Koo

ರಾಜಸ್ಥಾನ: ಸಾಮಾನ್ಯವಾಗಿ ಟಿವಿ ಸೀರಿಯಲ್‌ಗಳಲ್ಲಿ ತ್ರಿಕೋನ ಪ್ರೇಮಕಥೆಗಳು, ಇನ್ನೇನು ತಾಳಿ ಕಟ್ಟಬೇಕೆನ್ನುವ ವೇಳೆ ಮಾಜಿ ಪ್ರೇಯಸಿಯೋ ಅಥವಾ ಪ್ರಿಯಕರನೋ ಬಂದು ಮದುವೆ ನಿಲ್ಲಿಸೋದು ಹೀಗೆ ಚಿತ್ರ ವಿಚಿತ್ರ ಹೈಡ್ರಾಮಾಗಳನ್ನು ನೋಡಿರ್ತೇವೆ. ಇಂತಹದ್ದೇ ಒಂದು ಘಟನೆ ಇದೀಗ ರಾಜಸ್ಥಾನ(Rajasthan)ದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಮದುವೆಗೆ ಹೋಗಿ ದಾಂಧಲೆ ಎಬ್ಬಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌(Viral Video) ಆಗಿದ್ದು, ಹಲವು ರೀತಿಯಲ್ಲಿ ಕಮೆಂಟ್‌ಗಳು ಬಂದಿವೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ಘರ್‌ ಕೇ ಕಲೇಶ್‌ ಎಂಬ ಸೋಶಿಯಲ್‌ ಮೀಡಿಯಾ ಹ್ಯಾಂಡ್ಲರ್‌ ಈ ವಿಡಿಯೋ ಶೇರ್‌ ಮಾಡಿದ್ದು, ಮದುವೆಯಲ್ಲಿ ಬಾಲಿವುಡ್‌ ಸಿನಿಮಾದಂತಹ ಟ್ವಿಸ್ಟ್‌ ಎಂದು ಬರೆದುಕೊಂಡಿದ್ದಾರೆ. ನೂತನ ಜೋಡಿ ಜೊತೆಗೆ ಫೋಟೋ ತೆಗೆಸಿಕೊಳ್ಳಲೆಂದು ವೇದಿಕೆಗೆ ಬಂದಿದ ಮಾಜಿ ಪ್ರಿಯಕರ ಏಕಾಏಕಿ ವರನ ಮೇಲೆ ಹಲ್ಲೆ ನಡೆಸುತ್ತಾನೆ. ಮೂಖಾಮೂತಿ ನೋಡದೇ ವರನನ್ನು ಚಚ್ಚಿದ ಆ ಯುವಕನನ್ನು ಕಂಡು ಒಂದು ಕ್ಷಣಕ್ಕೆ ಎಲ್ಲರು ಗರ ಬಡಿದಂತೆ ನಿಂತಿದ್ದರು. ತಕ್ಷಣ ವಧು ಹಾಗೂ ಸಂಬಂಧಿಕರು ವರನನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ.

ಈ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಬಾಯ್‌ಫ್ರೆಂಡ್‌ ಮತ್ತು ವರನ ನಡುವೆ ಕಬೀರ್‌ ಸಿಂಗ್‌ನಂತಹ ಜಗಳ ರಾಜಸ್ಥಾನ ಬಿಲ್ವಾರಾದಲ್ಲಿ ಮದುವೆ ವೇದಿಕೆಯಲ್ಲಿ ನಡೆದಿದೆ ಎಂಬ ಬರಹದೊಂದಿಗೆ ಈ ವಿಡಿಯೋ ಶೇರ್‌ ಮಾಡಲಾಗಿದೆ. ಕೆಲವರು ಆ ವ್ಯಕ್ತಿಯನ್ನು ಹೇಡಿ ಎಂದು ಕಮೆಂಟ್‌ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ರೀತಿಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಮದುವೆ ಮಂಟಪದಲ್ಲೇ ವರನಿಗಾಗಿ ಇಬ್ಬರು ಯುವತಿಯರ ನಡುವೆ ಮಾರಾಮಾರಿ ನಡೆದಿದ್ದು, ಈ ಫೈಟ್‌ ಯಾವ WWFಗೂ ಕಡಿಮೆಯಿಲ್ಲ. ಈ ವೈರಲ್‌(Viral Video) ಆಗಿರುವ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡಿದ್ದರು.

ಅನಿತಾ ಸುರೇಶ್‌ ಶರ್ಮಾ ಎಂಬ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದು, ಇಬ್ಬರು ಯುವತಿಯರು ವೇದಿಕೆಯಲ್ಲೇ ಯುವಕನಿಗಾಗಿ ಹೊಡೆದಾಟ ನಡೆಸಿದ್ದಾರೆ. ಇಲ್ಲಿ ಮಧು ಮತ್ತು ವರನ ಪ್ರೇಯಸಿ ನಡುವೆ ಮಾರಾಮಾರಿ ನಡೆದಿದೆ. ಒಬ್ಬರನೊಬ್ಬರು ಬೈದಾಡಿಕೊಂಡು ಇಬ್ಬರು ಜುಟ್ಟು ಹಿಡಿ ಹೊಡೆದಾಟ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಯುವಕ ಇನ್ನೇನು ತಾಳಿ ಕಟ್ಟಬೇಕೆನ್ನುವ ಹೊತ್ತಲ್ಲಿ ಮದುವೆ ಮಂಟಪಕ್ಕೆ ಬಂದಿದ್ದ ಆತನ ಪ್ರೇಯಸಿ ತಕರಾರು ಮಾಡಿದ್ದಾಳೆ. ಆಗ ವೇದಿಕೆಯಲ್ಲಿದ್ದ ವಧು ಕೂಡ ಆಕೆಯ ಜೊತೆ ಜಗಳಕ್ಕಿಳಿದಿದ್ದಾಳೆ. ಇನ್ನು ಇಬ್ಬರು ಯುವತಿಯರೂ ಕೆಂಪು ಬಣ್ಣ ಮದುವೆ ಲೆಹಂಗಾ ತೊಟ್ಟಿದ್ದು, ಎಲ್ಲರೆದುರೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ನಡುವಲ್ಲಿದ್ದ ವರ ಇಬ್ಬರನ್ನೂ ತಡೆಯಲು ಪ್ರಯತ್ನಿಸಿದ್ದನಾದರೂ ಯುವತಿಯರಿಬ್ಬರು ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಇನ್ನು ಮದುವೆ ಆಗಮಿಸಿದ ಅತಿಥಿಗಳಲ್ಲಿ ಒಬ್ಬರು ಈ ಘಟನೆ ವಿಡಿಯೋ ಮಾಡಿದ್ದು, ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಐದು ದಿನಗಳ ಹಿಂದೆ ಇನ್‌ಸ್ಟಾ ಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, 1ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದೆ.

ಇದನ್ನೂ ಓದಿ: Viral Video: ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಈತ ಏಕಾಂಗಿಯಾಗಿ ಹೇಗೆ ನಂದಿಸಿದ ನೋಡಿ!

Continue Reading
Advertisement
Mobile
ದೇಶ11 mins ago

ಪರೀಕ್ಷೆಗೆ ಓದುವುದು ಬಿಟ್ಟು ಮೊಬೈಲ್‌ನಲ್ಲೇ ತಲ್ಲೀನ; 22 ವರ್ಷದ ಮಗಳನ್ನೇ ಕೊಂದ ತಾಯಿ

Rameshwaram Cafe Blast
ಕರ್ನಾಟಕ15 mins ago

Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಹುಬ್ಬಳ್ಳಿಯಲ್ಲಿ ಇಬ್ಬರು ಎನ್‌ಐಎ ವಶಕ್ಕೆ

LPL 2024
ಪ್ರಮುಖ ಸುದ್ದಿ36 mins ago

LPL 2024 : ಐಪಿಎಲ್ ಎಫೆಕ್ಟ್​, ಸಿಕ್ಕಾಪಟ್ಟೆ ದುಡ್ಡು ಬಾಚಿದ ಮಹೀಶ್ ಪತಿರಾನಾ

Porsche
ಸಂಪಾದಕೀಯ38 mins ago

ವಿಸ್ತಾರ ಸಂಪಾದಕೀಯ: ಸಬಲರ ಎದುರು ದುರ್ಬಲ ಕಾನೂನು; ಅಮಾಯಕರ ಜೀವಕ್ಕೆ ಬೆಲೆಯೇ ಇಲ್ಲ

Hajj pilgrimage
ಬೆಂಗಳೂರು45 mins ago

Hajj Pilgrimage: ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ ಸಿದ್ದರಾಮಯ್ಯ; ಹಜ್ ಭವನ ನಿರ್ಮಾಣಕ್ಕೆ ಅನುದಾನ

IPL 2024
ಕ್ರೀಡೆ58 mins ago

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

Robert Vadra
ದೇಶ1 hour ago

Robert Vadra: ಸ್ವಂತ ಬಲದಿಂದ ರಾಜಕೀಯಕ್ಕೆ ಬರುವೆ, ಗಾಂಧಿ ಹೆಸರು ಬಳಸಲ್ಲ; ರಾಬರ್ಟ್‌ ವಾದ್ರಾ ಶಪಥ!

IPL 2024
ಕ್ರೀಡೆ2 hours ago

IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

Talking Digital Safety for Teens programme by Meta in Bengaluru
ಕರ್ನಾಟಕ2 hours ago

Meta: ಮೆಟಾದಿಂದ ಯುವ ಜನರಿಗೆ ಡಿಜಿಟಲ್ ಸುರಕ್ಷಾ ಪಾಠ

MLC Election North East Graduates Constituency Election Prohibitory order imposed in Vijayanagar district from June 1
ವಿಜಯನಗರ2 hours ago

MLC Election: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ: ವಿಜಯನಗರ ಜಿಲ್ಲೆಯಲ್ಲಿ ಜೂ.1ರಿಂದ ನಿಷೇಧಾಜ್ಞೆ ಜಾರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು11 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು13 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌