ಬೆಂಗಳೂರು: ಸಾಮಾಜಿಕ ಜಾಲತಾಣಗಳು ಒಂದು ರೀತಿಯಲ್ಲಿ ಮನೋರಂಜನೆಯ ತಾಣಗಳೂ ಹೌದು. ಹಾಗೆಯೇ ಸುಸ್ತಾದ ಮೆದುಳಿಗೆ ಕೆಲ ಕಾಲ ಶಾಂತವಾಗಿರಿಸಲು ಸಹಕರಿಸುವ ಸ್ಥಳವೂ ಹೌದು. ಅದಕ್ಕೆಂದೇ ಹಲವು ಮೈಂಡ್ ಗೇಮ್‌ಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡು ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಒಂದು ಗೇಮ್ ವೈರಲ್ (Viral News) ಆಗಿದ್ದು, ನಿಮ್ಮ ದೃಷ್ಟಿಗೇ ಸವಾಲನ್ನು ಎಸೆಯುತ್ತಿದೆ.
ಇದನ್ನೂ ಓದಿ: Viral News : ಮಾರ್ಕ್ಸ್ ಕಾರ್ಡ್‌ನಲ್ಲಿ ಶಿಕ್ಷಕರು ಹೀಗಾ ರಿಮಾರ್ಕ್ ಬರೆಯೋದು! ಸಿಟ್ಟಾದ ನೆಟ್ಟಿಗರು
ಇಲ್ಲಿ ಎರಡು ಚಿತ್ರಗಳನ್ನು ಕೊಡಲಾಗಿದೆ. ಎರಡೂ ಚಿತ್ರಗಳು ಒಂದೇ ರೀತಿಯಲ್ಲಿವೆ. ಆದರೆ ಇದರಲ್ಲಿ ಆರು ಸಣ್ಣ ಸಣ್ಣ ವ್ಯತ್ಯಾಸಗಳಿವೆ. ಅವುಗಳನ್ನು ನೀವು ಕಂಡುಹಿಡಿಯಬೇಕು. ಹಾಗೆಂದ ಮಾತ್ರಕ್ಕೆ ಗಂಟೆಯ ಕಾಲ ಕುಳಿತುಕೊಂಡು ಹುಡುಕುವುದಲ್ಲ. ಕೇವಲ 10 ಸೆಕೆಂಡುಗಳಲ್ಲಿ ಎಲ್ಲ ವ್ಯತ್ಯಾಸಗಳನ್ನು ಹುಡುಕಿದರೆ ನೀವು ಸವಾಲನ್ನು ಗೆದ್ದಂತೆ.
ಇಂತದ್ದೊಂದು ಫೋಟೋವನ್ನು ಊಬರ್‌ಫ್ಯಾಕ್ಟ್ಸ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೂಲವಾಗಿ ಈ ಚಿತ್ರವನ್ನು ಜಾರ್ಜ್ಲೆ ದುದಾಸ್ ಹೆಸರಿನ ಲೇಖಕ ತಮ್ಮ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಚಿತ್ರ ಇದೀಗ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಿದ್ದು, ವೈರಲ್ ಆಗಿದೆ. ಅನೇಕರು ಈ ಸವಾಲನ್ನು ಸ್ವೀಕರಿಸಿಕೊಂಡು ಉತ್ತರಗಳನ್ನು ಕೊಡಲಾರಂಭಿಸಿದ್ದಾರೆ. ಇನ್ನೂ ಅನೇಕರು ಈ ರೀತಿಯ ಸವಾಲುಗಳು ತಮಗೆ ಇಷ್ಟವೆಂದೂ ಹೇಳಿಕೊಂಡಿದ್ದಾರೆ.