Viral News : ಮಾರ್ಕ್ಸ್‌ ಕಾರ್ಡ್‌ನಲ್ಲಿ ಶಿಕ್ಷಕರು ಹೀಗಾ ರಿಮಾರ್ಕ್‌ ಬರೆಯೋದು! ಸಿಟ್ಟಾದ ನೆಟ್ಟಿಗರು - Vistara News

ವೈರಲ್ ನ್ಯೂಸ್

Viral News : ಮಾರ್ಕ್ಸ್‌ ಕಾರ್ಡ್‌ನಲ್ಲಿ ಶಿಕ್ಷಕರು ಹೀಗಾ ರಿಮಾರ್ಕ್‌ ಬರೆಯೋದು! ಸಿಟ್ಟಾದ ನೆಟ್ಟಿಗರು

ಅಂಕಪಟ್ಟಿಯಲ್ಲಿ ಶಿಕ್ಷಕರೇ ತಪ್ಪಾಗಿ ರಿಮಾರ್ಕ್‌ ಬರೆದಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರಾಥಮಿಕ ಶಾಲೆಗಳ ಅಂಕ ಪಟ್ಟಿ(ಮಾರ್ಕ್ಸ್‌ ಕಾರ್ಡ್‌) ನಿಮಗೆ ನೆನಪಿರಬಹುದು. ಎಲ್ಲ ವಿಷಯಗಳಿಗೆ ವಿದ್ಯಾರ್ಥಿ ತೆಗೆದುಕೊಂಡ ಅಂಕ ಬರೆಯುವ ಶಿಕ್ಷಕರು ಅದರ ಜತೆ ವಿದ್ಯಾರ್ಥಿಯ ಬಗ್ಗೆ ಒಂದೆರೆಡು ಪದಗಳಲ್ಲಿ ಬರೆದುಕೊಡುತ್ತಿದ್ದರು. ಇದೀಗ ಅದೇ ರೀತಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯ ಅಂಕ ಪಟ್ಟಿಗೆ ಬರೆದ ರಿಮಾರ್ಕ್‌ ಎಲ್ಲೆಡೆ ಭಾರೀ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral Video: ತರಗತಿಯಲ್ಲೇ ವಿದ್ಯಾರ್ಥಿಗಳ ಹೊಡಿಬಡಿ; ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ ವಿಡಿಯೊ ವೈರಲ್‌
ವಿದ್ಯಾರ್ಥಿನಿಯೊಬ್ಬಳ ಅಂಕಪಟ್ಟಿಯಲ್ಲಿ ಶಿಕ್ಷಕರು ಎಲ್ಲ ವಿಷಯಗಳ ಪರೀಕ್ಷೆಯಲ್ಲಿ ಆಕೆ ತೆಗೆದುಕೊಂಡ ಅಂಕಗಳನ್ನು ಬರೆದಿದ್ದಾರೆ. ಒಟ್ಟು ಎಷ್ಟು ಅಂಕಗಳಿಗೆ ಎಷ್ಟು ಅಂಕ ಬಂದಿವೆ, ಆಕೆ ತರಗತಿಯಲ್ಲಿ ಎಷ್ಟನೇ ಸ್ಥಾನದಲ್ಲಿದ್ದಾಳೆ ಎನ್ನುವ ಎಲ್ಲ ಮಾಹಿತಿ ಅದರಲ್ಲಿದೆ. ಕೊನೆಯಲ್ಲಿ ವಿದ್ಯಾರ್ಥಿನಿಯ ಬಗ್ಗೆ ರಿಮಾರ್ಕ್‌ ಅನ್ನೂ ಕೂಡ ಬರೆಯಲಾಗಿದೆ. ಅಲ್ಲಿ ಶಿಕ್ಷಕರು, “She has passed away” ಎಂದು ಬರೆದಿದ್ದಾರೆ.


ಪಾಸಡ್‌, ಪಾಸಡ್‌ ಔಟ್‌ ಎನ್ನುವ ಪದಗಳು ತೇರ್ಗಡೆಯಾಗಿದ್ದಾರೆ ಎಂದು ಅರ್ಥ ಕೊಡುತ್ತದೆ. ಆದರೆ ಪಾಸಡ್‌ ಅವೇ ಎನ್ನುವ ಪದ ಸಾವನ್ನಪ್ಪಿದ್ದಾರೆ ಎನ್ನುವ ಅರ್ಥ ಕೊಡುತ್ತದೆ. ಹಾಗಾಗಿ ಈ ಅಂಕಪಟ್ಟಿಯಲ್ಲಿರುವ ರಿಮಾರ್ಕ್‌ ಫೋಟೋ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದೆ. ಇದು 2019ರ ಅಂಕಪಟ್ಟಿಯಾಗಿದ್ದು ಆಗ ಕೂಡ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು. ಈಗಲೂ ಮತ್ತೊಮ್ಮೆ ಈ ಅಂಕಪಟ್ಟಿ ಫೋಟೋ ವೈರಲ್‌ ಆಗುತ್ತಿದೆ.

ಬೇಜವಾಬ್ದಾರಿತನದಿಂದ ತಪ್ಪು ಅರ್ಥ ಬರುವ ರಿಮಾರ್ಕ್‌ ಬರೆದ ಶಿಕ್ಷಕರಿಗೆ ನೆಟ್ಟಿಗರು ಬೈಯಲಾರಂಭಿಸಿದ್ದಾರೆ. ಇನ್ನೂ ಕೆಲವರು ಶಿಕ್ಷಕರಿಗೇ ಪಾಠ ಹೇಳಿಕೊಡಬೇಕಾದ ಕಾಲ ಬಂದಿದೆ ಎಂದು ಹೇಳಲಾರಂಭಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಮುಂಬೈ ಪಂದ್ಯದ ಟಾಸ್​ ಕಳ್ಳಾಟ ಬಿಚ್ಚಿಟ್ಟ ಆರ್​ಸಿಬಿ ನಾಯಕ; ವಿಡಿಯೊ ವೈರಲ್​

IPL 2024: ಆರ್​ಸಿಬಿ ತಂಡದ ನಾಯಕ ಫಾಫ್​ ಡು ಪ್ಲೆಸಿಸ್(Faf du Plessis) ಸನ್​ರೈಸರ್ಸ್​ ಹೈದರಾಬಾದ್(​Sunrisers Hyderabad) ಪಂದ್ಯದ ವಿರುದ್ಧದ ಟಾಸ್​ ವೇಳೆ​ ಪ್ಯಾಟ್​ ಕಮಿನ್ಸ್(Pat Cummins)​ ಜತೆ ಮುಂಬೈ ಎದುರಿನ ಪಂದ್ಯದ ಟಾಸ್​ ಕಳ್ಳಾಟದ ಘಟನೆಯನ್ನು ತೆರೆದಿಟ್ಟಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಕಳೆದ ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್(IPL 2024)​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು(MI vs RCB) ಹಾಗೂ ಮುಂಬೈ ಇಂಡಿಯನ್ಸ್​(Mumbai Indians) ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಆದರೆ, ಪಂದ್ಯದ ಬಳಿಕ ಮುಂಬೈ ಗೆಲುವಿಗೆ ಕಾರಣ ಟಾಸ್​ ಫಿಕ್ಸಿಂಗ್​ ಎಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಪಟ್ಟ ಕೆಲ ವಿಡಿಯೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಈ ಘಟನೆಯ ನೈಜ ಕಾರಣವನ್ನು ಆರ್​ಸಿಬಿ ತಂಡದ ನಾಯಕ ಫಾಫ್​ ಡು ಪ್ಲೆಸಿಸ್(Faf du Plessis) ಸನ್​ರೈಸರ್ಸ್​ ಹೈದರಾಬಾದ್(​Sunrisers Hyderabad) ಪಂದ್ಯದ ವಿರುದ್ಧದ ಟಾಸ್​ ವೇಳೆ​ ಪ್ಯಾಟ್​ ಕಮಿನ್ಸ್(Pat Cummins)​ ಜತೆ ಚರ್ಚಿಸಿದ್ದಾರೆ. ಇದರ ವಿಡಿಯೊ ವೈರಲ್ ಆಗಿದ್ದು, ಮತ್ತೆ ಟಾಸ್​ ಫಿಕ್ಸ್​ ಚರ್ಚೆ ಮುನ್ನಲೆಗೆ ಬಂದಿದೆ.

ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಚಿನ್ನಶ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿತ್ತು. ಉಭಯ ತಂಡದ ನಾಯಕರು ಟಾಸ್​ಗೆ ಆಗಮಿಸಿದ ಈ ವೇಳೆ ಪ್ಯಾಟ್​ ಕಮಿನ್ಸ್ ಅವರು ಡು ಪ್ಲೆಸ್​ ಬಳಿಕ​ ಮುಂಬೈ ವಿರುದ್ಧದ ಟಾಸ್​ ಘಟನೆಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಡು ಪ್ಲೆಸಿಸ್​ ಪಾಂಡ್ಯ ಹಿಮ್ಮುಖವಾಗಿ ದೂರಕ್ಕೆ ಟಾಸ್​ ಕಾಯಿನ್​ ಚಿಮ್ಮಿಸಿದರು. ಮ್ಯಾಚ್​ ರೆಫ್ರಿಯಾಗಿದ್ದ ಜಾವಗಲ್​ ಶ್ರೀನಾಥ್(Javagal Srinath)​ ಅವರು ಕಾಯಿನ್​ ತಿರುಗಿಸಿ ಹೆಕ್ಕಿ ಪಾಂಡ್ಯ ಬಳಿ ಏನೋ ಕೇಳಿ ಟಾಸ್​ ಗೆದ್ದಿರುವಂತೆ ಹೇಳಿ ತಕ್ಷಣ ಅಲ್ಲಿಂದ ತೆರಳಿದರು ಎಂದು ಅಂದಿನ ಘಟನೆಯನ್ನು ನಟನೆಯ ಮೂಲಕ ತೋರಿಸಿದರು. ಈ ವಿಡಿಯೊ ವೈರಲ್​ ಆಗಿದ್ದು ನಿಜವಾಗಿಯೂ ಟಾಸ್​ ಫಿಕ್ಸಿಂಗ್​ ನಡೆದಿದೆಯಾ? ಎಂಬ ಚರ್ಚೆ ಮತ್ತೆ ಶುರುವಾಗಿದೆ.

ಚೇಸಿಂಗ್​ಗೆ ಯೋಗ್ಯವಾದ ವಾಂಖೆಡೆ ಸ್ಟೇಡಿಯಂನಲ್ಲಿ ಅಂಪೈರ್​ ಟಾಸ್​ ಕಾಯಿನ್​ ಬದಲಿಸಿ ಮುಂಬೈ ತಂಡಕ್ಕೆ ಸಹಕರಿಸಿದ್ದಾರೆ. ಇಲ್ಲವಾದರೆ ಆರ್​ಸಿಬಿ ಗೆಲ್ಲುತ್ತಿತ್ತು ಎಂದು ಅನೇಕ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಂಬಾನಿ ಮತ್ತು ಐಪಿಎಲ್​ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಹೈದರಾಬಾದ್​ ವಿರುದ್ಧ 25 ರನ್​ ಸೋಲು


ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ತಂಡ ಹೈದರಾಬಾದ್​ ವಿರುದ್ಧ 25 ರನ್​ಗಳ ಸೋಲು ಕಂಡಿತು. ಟಾಸ್​ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಎಸ್​ಆರ್​ಎಚ್​ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆರ್​ಸಿಬಿ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 262 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಪ್ಲೇ ಆಫ್ ಆಸೆ ಇನ್ನೂ ಜೀವಂತ

ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

Continue Reading

ಕ್ರೀಡೆ

IPL 2024: ವಿಮಾನ ಚಲಾಯಿಸಿದ ಯಜುವೇಂದ್ರ ಚಹಲ್; ವಿಡಿಯೊ ವೈರಲ್​

ಕಳೆದ ಗುಜರಾತ್(Gujarat Titans)​ ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಚಹಲ್​ ಅವರು ಐಪಿಎಲ್​ನಲ್ಲಿ 150 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಇದುವರೆಗೆ 151 ಐಪಿಎಲ್​ ಪಂದ್ಯಗಳನ್ನಾಡಿರುವ ಚಹಲ್​ 198 ವಿಕೆಟ್​ ಕಿತ್ತು ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎಂದ ದಾಖಲೆ ಬರೆದಿದ್ದಾರೆ.

VISTARANEWS.COM


on

Koo

ಕೋಲ್ಕತ್ತಾ: ಟೀಮ್​ ಇಂಡಿಯಾದ ಆಟಗಾರ ಯಜುವೇಂದ್ರ ಚಹಲ್(Yuzvendra Chahal)​ ಅವರು ಮೈದಾನದಲ್ಲಿ ಆಗಾಗ ಚೇಷ್ಟೆ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತದೆ. ಅಂಪೈರ್​, ಎದುರಾಳಿ ಆಟಗಾರನ್ನು ತಮ್ಮ ಕುಚೇಷ್ಟೆ(yuzvendra chahal funny videos) ಮೂಲಕ ನಗಿಸುತ್ತಿರುತ್ತಾರೆ. ಇದೀಗ(IPL 2024) ವಿಮಾನದಲ್ಲಿ ಪೈಲೆಟ್​ಗಳ ಜತೆ ಮಾಡಿದ ಚೇಷ್ಟೆಯೊಂದರ ವಿಡಿಯೊ ವೈರಲ್(viral video)​ ಆಗಿದೆ.

ಐಪಿಎಲ್​ನಲ್ಲಿ ಇಂದು ರಾಜಸ್ಥಾನ್(Rajasthan Royals) ತಂಡ ಕೆಕೆಆರ್​ ವಿರುದ್ಧ ಆಡಲಿಳಿದೆ. ಈ ಪಂದ್ಯ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯವನ್ನಾಡಲು ಆಟಗಾರರೊಂದಿಗೆ ಕೋಲ್ಕತ್ತಾಕ್ಕೆ ತೆರಳುವ ವೇಳೆ ಚಹಲ್​ ಅವರು ಪೈಲೆಟ್​ಗಳ ಕೊಠಡಿಗೆ ತೆರಳಿ ಅವರಿಗೆ ಚಮಕ್​ ನೀಡಿದ್ದಾರೆ. ಇಂದು ನನ್ನ ಇಬ್ಬರು ಸಹೋದರ ಪೈಲೆಟ್​ಗಳು ವಿಮಾನ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಪೈಲೆಟ್​ಗಳು ಕೂಡ ಯೋ ಯೋ ಕೈ ಬೆರಳಿನ ಮೂಲಕ ಚಿಯರ್​ ಅಪ್​ ಮಾಡಿದ್ದಾರೆ. ಈ ವಿಡಿಯೊವನ್ನು ರಾಜಸ್ಥಾನ್​ ರಾಯಲ್ಸ್​ ತನ್ನ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡು ‘ಇದು ನಿಮ್ಮ ಕ್ಯಾಪ್ಟನ್ ಹಾಡುಗಾರಿಕೆ’ ಎಂದು ಬರೆದುಕೊಂಡು ಹಿಂದಿ ಸಿನೆಮಾದ ಹಾಡೊಂದನ್ನು ಹಾಕಿದೆ. ಜತೆಗೆ ಚಹಲ್​ ಅವರ ಮುಖದ ಚಿತ್ರವನ್ನು ಎಡಿಟ್​ ಮಾಡಿ ವಿಮಾನ ಚಲಾಯಿಸಿದಂತೆ ತೋರಿಸಿದೆ. ಈ ವಿಡಿಯೊ ವೈರಲ್​ ಆಗಿದೆ.

ಕಳೆದ ಆವೃತ್ತಿಯಲ್ಲಿ ಜೋ ರೂಟ್​ ಅವರ ಟ್ರಾಲಿ ಬ್ಯಾಗ್​ನಲ್ಲಿ ಕುಳಿತು ಜಾಲಿ ರೈಡ್​ ಮಾಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಕಳೆದ ಗುಜರಾತ್(Gujarat Titans)​ ನಡುವಣ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಚಹಲ್​ ಅವರು ಐಪಿಎಲ್​ನಲ್ಲಿ 150 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದರು. ಇದುವರೆಗೆ 151 ಐಪಿಎಲ್​ ಪಂದ್ಯಗಳನ್ನಾಡಿರುವ ಚಹಲ್​ 198 ವಿಕೆಟ್​ ಕಿತ್ತು ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎಂದ ದಾಖಲೆ ಬರೆದಿದ್ದಾರೆ. ಇನ್ನೆರಡು ವಿಕೆಟ್​ ಕಿತ್ತರೆ 200 ವಿಕೆಟ್​ ಪೂರ್ತಿಗೊಳಿಸಲಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಮೈಲಿಗಲ್ಲು ನಿರ್ಮಿಸಲು ಅವಕಾಶವಿದೆ.

ಇದನ್ನೂ ಓದಿ IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರುತ್ತಿರುವ ಚಹಲ್​ಗೆ ಇದೇ ಜೂನ್​ನಲ್ಲಿ ನಡೆಎಯುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡುವ ಅವಕಾಶ ಸಿಗಲಿದೆ ಎಂಬ ಮಾತು ಕೂಡ ಕೇಳಿ ಬಂದಿದೆ. ಚಹಲ್​ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್​, 80 ಟಿ20 ಆಡಿ 96 ವಿಕೆಟ್​ ಕಡೆವಿದ್ದಾರೆ. ಐಪಿಎಲ್​ನಲ್ಲಿ 195* ವಿಕೆಟ್​ ಪಡೆದಿದ್ದಾರೆ. ಇದುವರೆಗೂ ಟೆಸ್ಟ್​ ಕ್ರಿಕೆಟ್​ ಆಡಿಲ್ಲ.

ರಾಜಸ್ಥಾನ್​ ರಾಯಲ್ಸ್(RR vs KKR)​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡಗಳು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಯಾರೇ ಗೆದ್ದರು ಅಗ್ರಸ್ಥಾನ ಪಡೆಯಲಿದ್ದಾರೆ. ಉಭಯ ತಂಡಗಳು ಕೂಡ ಬಲಿಷ್ಠವಾಗಿರುವ ಕಾರಣ ಈ ಪಂದ್ಯವನ್ನು ಹೈವೋಲ್ಟೇಜ್​ ಪಂದ್ಯ ಎಂದು ನಿರೀಕ್ಷೆ ಮಾಡಲಾಗಿದೆ. ರಾಜಸ್ಥಾನ(Rajasthan Royals) ಸದ್ಯ 6 ಪಂದ್ಯಗಳಲ್ಲಿ 5 ಗೆದ್ದಿದ್ದು ಅಗ್ರಸ್ಥಾನದಲ್ಲಿದೆ. ಕೋಲ್ಕತಾ 5ರಲ್ಲಿ 4 ಪಂದ್ಯಗಳಲ್ಲಿ ಜಯಿಸಿ ದ್ವಿತೀಯ ಸ್ಥಾನದಲ್ಲಿದೆ.

Continue Reading

ವೈರಲ್ ನ್ಯೂಸ್

Actor Prakash Rai: “ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ; ನಿರ್ದಿಗಂತಕ್ಕೆ ಹಣದ ಹೊಳೆ!” ಸಿಡಿದೆದ್ದ ಜೆಡಿಎಸ್‌ನಿಂದ ನಟ ಪ್ರಕಾಶ್‌ ರೈಗೆ ಚಾಟಿ

Actor Prakash Rai: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗ ಚಟುವಟಿಕೆಗಳಿಗಾಗಿ ಈ ವರ್ಷ 4.20 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದ್ದು, ಅದರಲ್ಲಿ ಪ್ರಕಾಶ್‌ ರೈ ಅವರ ʼನಿರ್ದಿಗಂತʼ ರಂಗಸಂಸ್ಥೆಗೆ ಸಿಂಹಪಾಲು ನೀಡಲು ಇಲಾಖೆಯ ಜ್ಞಾಪನಪತ್ರದಲ್ಲಿ ಆದೇಶಿಸಲಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.

VISTARANEWS.COM


on

actor prakash Rai
Koo

ಬೆಂಗಳೂರು: ತಮ್ಮ ʼನಿರ್ದಿಗಂತʼ (Nirdigantha) ರಂಗಸಂಸ್ಥೆಗೆ (Theatre Group) ಸರ್ಕಾರದಿಂದ ಭಾರಿ ಹಣ ಅನುದಾನ ಪಡೆಯುತ್ತಿರುವ ನಟ ಪ್ರಕಾಶ್ ರೈ (Actor Prakash rai) ಅವರ ವಿರುದ್ಧ ಜಾತ್ಯತೀತ ಜನತಾ ದಳ (JDS) ಟ್ವೀಟ್‌ (X) ಸಮರ ಶುರುಮಾಡಿದೆ. “ರಂಗಾಯಣಗಳಿಗೆ (Rangayana) ಕೊಡಲು ಸರಕಾರದ ಬಳಿ ಬಿಡಿಗಾಸೂ ಇಲ್ಲದಿದ್ದರೂ, ಕಾಂಗ್ರೆಸ್‌ (Congress) ಪರ ವಕೀಲಿಕೆ ನಡೆಸುತ್ತಿರುವ ಪ್ರಕಾಶ್ ರೈಗೆ ಮಾತ್ರ ಹಣದ ಹೊಳೆ ಹರಿಯುತ್ತಿದೆ” ಎಂದು ಟೀಕಿಸಿದೆ.

ಜೆಡಿಎಸ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ ಪ್ರಕಾಶ್‌ ರೈ ಕುರಿತು ಮಾಡಿದ ಪೋಸ್ಟ್‌ನ ಪೂರ್ಣ ರೂಪ ಹೀಗಿದೆ:

“ರಾಜ್ಯದಲ್ಲಿ @INCKarnataka ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಕಾಶ್‌ ರೈ ಉರುಫ್‌ @prakashraaj ಎಂಬ ಕಲಾವಿದ ದಾರಿ ತಪ್ಪಿದ್ದಾರೆ. ಅದಕ್ಕೆ ಇಲ್ಲಿದೆ ಸಾಕ್ಷ್ಯ… ಕಲಾಸೇವೆ ಬಿಟ್ಟು ಕಾಂಗ್ರೆಸ್ಸಿಗೆ ಪರಿಚಾರಿಕೆ ಮಾಡುತ್ತಿರುವ ಅವರಿಗೆ ತಕ್ಕ ಪ್ರತಿಫಲವೂ ಸಂದಾಯವಾಗುತ್ತಿದೆ. ಸರಕಾರದ ಅನಧಿಕೃತ ವಕ್ತಾರನಾದರೆ ಈ ಪರಿ ಲಾಭವಿದೆಯಾ? Just Asking.. ಅಷ್ಟೇ ಪ್ರಕಾಶ್‌ ರಾಜ್‌ ಅವರೇ..”

“ಮೊರಾರ್ಜಿ ವಸತಿ ಶಾಲೆಗಳಷ್ಟೇ ಅಲ್ಲ… ಸರಕಾರಿ ವಸತಿ ನಿಲಯಗಳಿಗೆ ಹಣ ಕೊಡಲು ಕಾಂಗ್ರೆಸ್‌ ಸರಕಾರಕ್ಕೆ ಕೈ ಬರುತ್ತಿಲ್ಲ. ಅಲ್ಲಿನ ಮಕ್ಕಳಿಗೆ ಒಳ್ಳೇ ಆಹಾರವಿಲ್ಲ… ನೀರೂ ಇಲ್ಲ. ಸರಕಾರಿ ರಂಗಾಯಣಗಳಿಗೆ ಬಿಡಿಗಾಸೂ ಇಲ್ಲ. ಈಚೆಗಷ್ಟೇ ನೀವು ಸ್ಥಾಪಿಸಿದ ‘ನಿರ್ದಿಗಂತʼಕ್ಕೆ ಹಣದ ಹೊಳೆ ಹರಿಸುತ್ತಿದೆ ಸರಕಾರ… ನಿಮ್ಮ ಜೋಳಿಗೆ ಭರ್ತಿ ಆಗುತ್ತಿದೆ… Just Asking.. ಅಷ್ಟೇ ಪ್ರಕಾಶ್‌ ರಾಜ್‌ ಅವರೇ..”

“ಗ್ಯಾರಂಟಿಗಳ ವಿಶೇಷ ತೌಲನಿಕ ಅಧ್ಯಯನಕ್ಕಾಗಿ ಪಾಲಸಿ ಫ್ರಂಟ್ ಎಂಬ ಮಟ್ಟು-ಪಟ್ಟಿನ ಕಳ್ಳಕಂಪನಿಗೆ ಕೋಟಿ ಕೋಟಿ ಸುರಿದಿರುವ ಸರಕಾರ.. ನಿಮ್ಮ ʼನಿರ್ದಿಗಂತʼಕ್ಕೂ ಹಣ ಸುರಿಯುತ್ತಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಕಸ ಹೊಡೆಯೋರು ದಿಕ್ಕಿಲ್ಲ. ಕನ್ನಡ ಭವನದಲ್ಲಿ ಧೂಳು ಕೊಡವೋರು ಗತಿ ಇಲ್ಲ. ಇಲ್ಲಿ ನಿಮ್ಮ ಜೋಳಿಗೆಯಲ್ಲಿ ಭರ್ತಿ ಝಣ ಝಣ ಕಾಂಚಾಣ!! ಹೆಂಗೆ? Just Asking.. ಅಷ್ಟೇ ಪ್ರಕಾಶ್‌ ರಾಜ್‌ ಅವರೇ..”

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗ ಚಟುವಟಿಕೆಗಳಿಗಾಗಿ ಈ ವರ್ಷ 4.20 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದ್ದು, ಅದರಲ್ಲಿ ಪ್ರಕಾಶ್‌ ರೈ ಅವರ ʼನಿರ್ದಿಗಂತʼ ರಂಗಸಂಸ್ಥೆಗೆ ಸಿಂಹಪಾಲು ನೀಡಲು ಇಲಾಖೆಯ ಜ್ಞಾಪನಪತ್ರದಲ್ಲಿ ಆದೇಶಿಸಲಾಗಿದೆ ಎಂದು ಇತ್ತೀಚೆಗೆ ʼದಿ ಫೈಲ್‌ʼ ವರದಿ ಮಾಡಿತ್ತು. ವರದಿಯ ಲಿಂಕ್‌ ಇಲ್ಲಿದೆ: ನಿರ್ದಿಗಂತ

ಇದನ್ನೂ ಓದಿ: Sanatan Dharma: ಪ್ರಕಾಶ್‌ ರೈ ಮತ್ತೊಂದು ವಿವಾದಾತ್ಮಕ ಹೇಳಿಕೆ, ಉದಯನಿಧಿಗೆ ಸಮರ್ಥನೆ, ಟ್ರೋಲ್

Continue Reading

ಕ್ರಿಕೆಟ್

IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

IPL 2024: 16 ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಆರ್​ಸಿಬಿ(Royal Challengers Bengaluru) ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.

VISTARANEWS.COM


on

IPL 2024
Koo

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB) ತಂಡದ ಶೋಚನೀಯ ಪ್ರದರ್ಶನ ಕಂಡು ಭಾರತದ ಟೆನಿಸ್​ ದಿಗ್ಗಜ ಮಹೇಶ್‌ ಭೂಪತಿ(Mahesh Bhupathi) ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ತಂಡವನ್ನು(IPL 2024) ಹೊಸ ಮಾಲಿಕರಿಗೆ ಮಾರಿ ಬಿಡಿ ಎಂದು ಹೇಳಿದ್ದಾರೆ.

“ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಬಿಸಿಸಿಐ ಇತರ ತಂಡಗಳು ಮಾಡಿದ ರೀತಿಯಲ್ಲಿ ಕ್ರೀಡಾ ಫ್ರಾಂಚೈಸಿಯನ್ನು ನಿರ್ಮಿಸಲು ಕಾಳಜಿವಹಿಸುವ ಹೊಸ ಮಾಲೀಕರಿಗೆ ಆರ್​ಸಿಬಿ ತಂಡವನ್ನು ಮಾರಾಟ ಮಾಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಮಹೇಶ್‌ ಭೂಪತಿ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಆರ್​ಸಿಬಿ(Royal Challengers Bengaluru) ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.


ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಇದೀಗ ಸತತ ಸೋಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಮುಗಿದು ಹೋದ ಅಧ್ಯಾಯ ಅಂತ ಅಭಿಮಾನಿಗಳು ವ್ಯಂಗ್ಯವಾಗಿ ಹೇಳತೊಡಗಿದ್ದಾರೆ. ಆರ್​ಸಿಬಿ ಮೇಲೆ ಸ್ವತಃ ಅಭಿಮಾನಿಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ IPL 2024: ವಿಶ್ರಾಂತಿ ಬಯಸಿದ ಗ್ಲೆನ್ ಮ್ಯಾಕ್ಸ್​ವೆಲ್​; ಮುಂದಿನ ಪಂದ್ಯಗಳಿಗೆ ಅಲಭ್ಯ

ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. 

ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ

Continue Reading
Advertisement
Ram Navami
ಧಾರ್ಮಿಕ2 mins ago

Ram Navami: ನಾಳೆ ದೇಶಾದ್ಯಂತ ರಾಮ ನವಮಿ ಸಂಭ್ರಮ; ಈ ದಿನದ ಮಹತ್ವವೇನು ಗೊತ್ತೇ ?

Indian stock market
ವಾಣಿಜ್ಯ6 mins ago

Indian stock market: ಸೆನ್ಸೆಕ್ಸ್ ಕುಸಿತ: ಭಾರತೀಯ ಷೇರು ಮಾರುಕಟ್ಟೆಗೆ ಭಾರಿ ಹೊಡೆತ

Air India
ದೇಶ11 mins ago

Air India: ಕ್ಷಿಪಣಿ ದಾಳಿಗೂ ಮುನ್ನ ಇರಾನ್ ವಾಯು ಪ್ರದೇಶದಲ್ಲಿ ಏರ್​ ಇಂಡಿಯಾ ವಿಮಾನಗಳ ಹಾರಾಟ; ಅಧಿಕಾರಿಗಳು ಹೇಳಿದ್ದೇನು?

Physical Abuse From husband
ಬೆಂಗಳೂರು11 mins ago

Physical Abuse : ಇವನೆಂಥ ಗಂಡ! ಕಾಲ್‌ ಗರ್ಲ್‌ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ

Actor Dwarakish
ಸ್ಯಾಂಡಲ್ ವುಡ್15 mins ago

Actor Dwarakish: ಪತ್ನಿ, ಮಕ್ಕಳಿದ್ದರೂ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು ದ್ವಾರಕೀಶ್​​

Lok Sabha Election 2024 Dr Manjunath joins PM Narendra Modi team Ashwathnarayan reveals BJP vision
Lok Sabha Election 202437 mins ago

Lok Sabha Election 2024: ಮೋದಿ ಟೀಂಗೆ ಡಾ.ಮಂಜುನಾಥ್ ಸೇರ್ಪಡೆ; ಬಿಜೆಪಿ ವಿಷನ್‌ ಬಿಚ್ಚಿಟ್ಟ ಅಶ್ವತ್ಥನಾರಾಯಣ್

Star Saree Fashion
ಫ್ಯಾಷನ್38 mins ago

Star Saree Fashion: ಮಹಿಳೆಯರನ್ನು ಆಕರ್ಷಿಸಿದ ನಟಿ ಅಮೂಲ್ಯ‌ ಹಸಿರು ಸೀರೆಯ ಸೀಕ್ರೆಟ್ ಇದು!

t20 World Cup
ಕ್ರೀಡೆ44 mins ago

T20 World Cup : ವಿಶ್ವ ಕಪ್​ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ನೋ ಚಾನ್ಸ್​; ಆಯ್ಕೆದಾರರ ಇಂಗಿತ ಬಹಿರಂಗ

Donuru Ananya Reddy
ದೇಶ46 mins ago

UPSC Results 2023: ಕೋಚಿಂಗ್‌ ಇಲ್ಲದೆ ಓದಿದ ಅನನ್ಯಾ ರೆಡ್ಡಿಗೆ ಯುಪಿಎಸ್‌ಸಿಯಲ್ಲಿ 3ನೇ ರ‍್ಯಾಂಕ್!

Lok Sabha Election 2024:
ಕರ್ನಾಟಕ47 mins ago

Lok Sabha Election 2024: ಹಾವೇರಿ, ಬಾಗಲಕೋಟೆ ಸೇರಿ ವಿವಿಧೆಡೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 87 ಲಕ್ಷ ರೂ. ಜಪ್ತಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ13 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20241 day ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ4 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ5 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20245 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌