ಬೆಂಗಳೂರು: ಕರ್ನಾಟಕದ ಕೊಡಗಿನ (Coorg) ಬಳಿಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ತುರ್ತು ಸೂಚನಾ ಫಲಕವೊಂದು (Sign Board) ಇದೀಗ ಅಂತರ್ಜಾಲವನ್ನು (Internet) ನಗೆಗಡಲಿನಲ್ಲಿ (Viral News) ತೇಲಿಸುತ್ತಿದೆ. ಕನ್ನಡದಿಂದ ಇಂಗ್ಲಿಷ್‌ಗೆ ತಪ್ಪಾಗಿ ಅನುವಾದ (Translation) ಮಾಡಿರುವುದರಿಂದ ಉಂಟಾದ ಅವಾಂತರವಿದು. ಮಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ (Mangalore Mysore National Highway) ಹಾದುಹೋಗುವ ಸಂಪಾಜೆಯಲ್ಲಿ (Sampaje) ಈ ಫಲಕವಿದೆ.
ʼಕೊಡಗು ಕನೆಕ್ಟ್’ ಎಂಬ ಹೆಸರಿನ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಸೈನ್‌ಬೋರ್ಡ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಅವಸರವೇ ಅಪಘಾತಕ್ಕೆ ಕಾರಣ” ಹಾಗೂ “Urgent Make An Accident” ಎಂದು ಬರೆಯಲಾಗಿದೆ. ಈ ಇಂಗ್ಲಿಷ್ ವಾಕ್ಯದ ಕನ್ನಡ ಅರ್ಥ ʼತುರ್ತಾಗಿ ಒಂದು ಅಪಘಾತ ಮಾಡಿʼ ಎಂದಾಗುತ್ತದೆ! ಈ ಸೂಚನಾ ಫಲಕವನ್ನು ವಾಹನ ಚಾಲಕರು ಅಕ್ಷರಶಃ ಪಾಲಿಸಲು ಹೋದರೆ ಅನರ್ಥವೇ ಆಗುತ್ತದೆ!
Lost in translation.
— Kodagu Connect (@KodaguConnect) July 2, 2024
Location: Near Sampaje. Along Madikeri to Mangaluru National Highway 275. @NHAI_Official pic.twitter.com/i2k7NLQdaL
ಕಳಪೆ ಇಂಗ್ಲಿಷ್‌ನಲ್ಲಿ ಅನುವಾದ ಮಾಡಲಾಗಿರುವ ಈ ಫಲಕದಲ್ಲಿ ಇಂಗ್ಲಿಷ್ ವಾಕ್ಯ ʼOverspeeding Causes accidents’ ಎಂದು ಇರಬೇಕಾಗಿತ್ತು. ಇಂಟರ್ನೆಟ್ ಬಳಕೆದಾರರು ಇದರ ಬಗ್ಗೆ ಹಾಸ್ಯಮಯ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಸೈನ್‌ಬೋರ್ಡ್‌ಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಸರ್ಕಾರದ ಪ್ರಯತ್ನವನ್ನು ಕೆಲವರು ಪ್ರಶ್ನಿಸಿದ್ದಾರೆ. ಇತರರು ಈ ದೋಷವನ್ನು ತಮಾಷೆಯಾಗಿ, ಸ್ವಾರಸ್ಯಕರವಾಗಿ ತೆಗೆದುಕೊಂಡಿದ್ದಾರೆ.
“ಇದಕ್ಕೂ ಸಹ ಅನುವಾದಕರು ಚಾಟ್‌ಜಿಪಿಟಿ ಬಳಸಿದ್ದಾರೆ” ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. “ಕನ್ನಡವು ಇಂಗ್ಲಿಷ್ ಅಲ್ಲ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. “urgent ನಂತರ ಒಂದು ಅಲ್ಪವಿರಾಮ ಹಾಕಿದರೆ ಅರ್ಥ ಸಂಪೂರ್ಣವಾಗಿ ಬದಲಾಗುತ್ತದೆ” ಎಂದು ಬೇರೊಬ್ಬರು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, “ಇನ್ಶುರೆನ್ಸ್ ಏಜೆಂಟ್ಸ್ ಅನ್ನು ಟ್ಯಾಗ್ ಮಾಡಿ. ಅವರು ಇದನ್ನು ವೇಗವಾಗಿ ಸರಿಪಡಿಸುತ್ತಾರೆ” ಎಂದು ತಮಾಷೆ ಮಾಡಿದ್ದಾರೆ.
ಮಾರ್ಚ್‌ನಲ್ಲಿ, ಕೊಡಗು ಜಿಲ್ಲೆಯ ಒಂದು ಕಡೆಯ ಸ್ಥಳೀಯರು ಗೂಗಲ್‌ನ ನ್ಯಾವಿಗೇಷನ್ ತಪ್ಪಿನ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ತಾತ್ಕಾಲಿಕ ಸೈನ್‌ಬೋರ್ಡ್ ಅನ್ನು ಹಾಕಿದ್ದರು. ʼಗೂಗಲ್ ತಪ್ಪು ಮಾಡಿದೆ. ಈ ರಸ್ತೆ ಕ್ಲಬ್ ಮಹೀಂದ್ರಾ ರೆಸಾರ್ಟ್‌ಗೆ ಹೋಗುವುದಿಲ್ಲ’ ಎಂದು ಫಲಕದಲ್ಲಿತ್ತು. ಗೂಗಲ್ ಮ್ಯಾಪ್‌ನಿಂದಾಗಿ ದಾರಿ ತಪ್ಪಿದ ಪ್ರಯಾಣಿಕರು ಸದಾ ದಾರಿ ಕೇಳುವುದರಿಂದ ಬೇಸತ್ತ ಸ್ಥಳೀಯ ಗ್ರಾಮಸ್ಥರು ಆ ಸೈನ್‌ಬೋರ್ಡ್ ಅನ್ನು ಹಾಕಿದ್ದರು.
ಇದನ್ನೂ ಓದಿ: Viral News: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!