ನವದೆಹಲಿ: ಅನೇಕ ವರ್ಷಗಳಿಂದ ಬ್ರಿಟಿಷರ ಆಡಳಿತದಲ್ಲಿದ್ದ ಭಾರತ ಹಲವು ಮಹನೀಯರ ಹೋರಾಟದ ಫಲವಾಗಿ ಕೊನೆಗೂ 1947ರಲ್ಲಿ ಸ್ವಾತಂತ್ರ್ಯ ಪಡೆಯಿತು. ಬ್ರಿಟಿಷ್ ಆಡಳಿತದಲ್ಲಿ ಭಾರತೀಯರು ಹಲವು ಹಕ್ಕುಗಳಿಂದ ವಂಚಿತರಾಗಿ ಗುಲಾಮರಂತೆ ಬದುಕುವ ಪರಿಸ್ಥಿತಿ ಇತ್ತು. ಈಗ ಸನ್ನಿವೇಶ ಬದಲಾಗಿದೆ. ದೇಶದ ಎಲ್ಲೆಂದರಲ್ಲಿ ಓಡಾಡಬಹುದು, ಇಚ್ಛಿಸುವ ರೀತಿ ಬದುಕಬಹುದು. ಆದರೆ ಸ್ವಾತಂತ್ರ್ಯ ಲಭಿಸಿ 76 ವರ್ಷ ಕಳೆದರೂ ದೇಶದ ಕೆಲವು ಸ್ಥಳಗಳಿಗೆ ಭೇಟಿ ನೀಡಲು ಭಾರತೀಯರಿಗೆ ಇನ್ನು ಅವಕಾಶವಿಲ್ಲ. ಇಲ್ಲಿಗೆ ವಿದೇಶಿಗರು ಮಾತ್ರ ತೆರಳಬಹುದು (Indians are not allowed). ಅವು ಯಾವ ಸ್ಥಳಗಳು? ಕಾರಣ ಏನು? ಆ ಸ್ಥಳಗಳ ವೈಶಿಷ್ಟ್ಯಗಳೇನು? ಎನ್ನುವುದರ ವಿವರ ಇಲ್ಲಿದೆ (Viral News).
ಸಕುರಾ ರೊಕಾನ್ ರೆಸ್ಟೋರೆಂಟ್ (Sakura Ryokan Restaurant), ಅಹಮದಾಬಾದ್
ಬಹು ಜನಪ್ರಿಯವಾಗಿರುವ ಈ ರೆಸ್ಟೋರೆಂಟ್‌ನಲ್ಲಿ ಜಪಾನೀಸ್ ಖಾದ್ಯಗಳು ಸಿಗುತ್ತವೆ. ಇದು ಸಾನಂದ್ ರಸ್ತೆಯಲ್ಲಿದೆ. ವರದಿಗಳ ಪ್ರಕಾರ ಕೇವಲ ಜಪಾನಿಗರಿಗೆ ಮಾತ್ರ ಇಲ್ಲಿಗೆ ಪ್ರವೇಶ. ಇದರ ಮಾಲಕ ಭಾರತೀಯ. ಆದರೆ ಕೆಲವು ಭಾರತೀಯರು ಇಲ್ಲಿಗೆ ಬಂದು ಈಶಾನ್ಯ ಪರಿಚಾರಕಿಯನ್ನು ಗೇಲಿ ಮಾಡಿದ ನಂತರ ಭಾರತೀಯರಿಗೆ ನಿಷೇಧ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಫ್ರೀ ಕಸೊಲ್ ಕೆಫೆ (Free Kasol Café), ಹಿಮಾಚಲ ಪ್ರದೇಶ
ಈ ಕೆಫೆಯ ಒಡತಿಯ (Owner) ಜತೆ ಕೆಲವು ಭಾರತೀಯರು ಅನುಚಿತವಾಗಿ ವರ್ತಿಸಿದ್ದ ಕಾರಣ ಇಲ್ಲಿಗೆ ಭಾರತೀಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಇಲ್ಲಿ ಇಸ್ರೇಲ್ ಮೂಲದ ಆಹಾರ ಲಭಿಸುತ್ತದೆ. ಈ ಪ್ರದೇಶವನ್ನು ಮಿನಿ ಇಸ್ರೇಲ್ ಎಂದೇ ಕರೆಯುತ್ತಾರೆ.
ವಿದೇಶಿಗರ ಬೀಚ್ (Foreigners Beach), ಗೋವಾ
ಮೂಲಗಳ ಪ್ರಕಾರ ಗೋವಾದ ಕೆಲವು ಬೀಚ್‌ಗಳು ವಿದೇಶಿಗರಿಗೆಂದೇ ಮೀಸಲಾಗಿವೆ. ಭಾರತೀಯರು ಇಲ್ಲಿಗೆ ಭೇಟಿ ನೀಡುವಂತಿಲ್ಲ. ಇಲ್ಲಿ ವಿದೇಶಿಗರು ಮುಕ್ತವಾಗಿ, ಸ್ವಚ್ಛಂಧವಾಗಿ ತಿರುಗಾಡಬಹುದು. ಭಾರತೀಯ ಸಂಸ್ಕೃತಿ ಭಿನ್ನವಾಗಿರುವುದರಿಂದ ಗೊಂದಲ ಉಂಟಾಗಬಹುದು ಎನ್ನುವ ಕಾರಣಕ್ಕೆ ಇಲ್ಲಿಗೆ ಪ್ರವೇಶ ನಿಷೇಧಿಸಲಾಗಿದೆ.
ಇದನ್ನೂ ಓದಿ: Viral News: ಆನ್‌ಲೈನ್‌ನಲ್ಲಿ ಮಿಲ್ಕ್‌ಶೇಕ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಗ್ಲಾಸ್ ಮೂತ್ರ!
ರೆಡ್ ಲಾಲಿಪಪ್ ಹಾಸ್ಟೆಲ್ (Red Lollipop Hostel), ಚೆನ್ನೈ
ಈ ಹೋಟೆಲ್‌ಗೆ ಭಾರತೀಯರಿಗೆ ಬಿಲ್‌ಕುಲ್ ಪ್ರವೇಶವಿಲ್ಲ. ವಿದೇಶಿ ಪಾಸ್‌ಪೋರ್ಟ್ ಹೊಂದಿದವರು ಮಾತ್ರ ಇಲ್ಲಿಗೆ ಆಗಮಿಸಿ ಉಳಿದುಕೊಳ್ಳಬಹುದು. ವಿದೇಶಿ ಪಾಸ್‌ಪೋರ್ಟ್ ಹೊಂದಿರುವ ಭಾರತೀಯರಿಗೂ ಇಲ್ಲಿಗೆ ಪ್ರವೇಶವಿಲ್ಲ. ಈ ಹೋಟೆಲ್ ತನ್ನ ಅನುಕೂಲಕರ ಸ್ಥಳ, ಕೈಗೆಟುಕುವ ವಸತಿ ದರ, ಉತ್ತಮ ನೈರ್ಮಲ್ಯ ಇತ್ಯಾದಿ ಕಾರಣಗಳಿಂದ ಗೂಗಲ್‌ನಲ್ಲಿ ಹೆಚ್ಚು ರೇಟಿಂಗ್ ಪಡೆದಿದೆ ಮತ್ತು ಕಡಿಮೆ ಬಜೆಟ್ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ.
ಯುಎನ್‌ಒ-ಇನ್ ಹೋಟೆಲ್ (UNO-IN Hotel), ಬೆಂಗಳೂರು
ನಮ್ಮ ಬೆಂಗಳೂರಿನಲ್ಲಿಯೂ ಭಾರತೀಯರಿಗೆ ಪ್ರವೇಶವಿಲ್ಲದ ಸ್ಥಳವಿತ್ತು ಎಂದರೆ ನಂಬುತ್ತೀರಾ? ಹೌದು, 2012ರಲ್ಲಿ ಆರಂಭವಾದ ಯುಎನ್‌ಒ-ಇನ್ ಹೋಟೆಲ್‌ಗೆ ಜಪಾನಿಗರಿಗೆ ಮಾತ್ರ ಪ್ರವೇಶವಿದ್ದ ಕಾಲವೊಂದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸರ್ಕಾರ ಈ ಹೋಟೆಲ್‌ಗೆ ನಿಷೇಧ ಹೇರಿತ್ತು. ಇದೀಗ ಯುಎನ್‌ಒ-ಇನ್ ಹೋಟೆಲ್ ಒಯೊ(OYO) ಸುಪರ್ದಿಯಲ್ಲಿದ್ದು, ಭಾರತೀಯರು ಕೂಡ ಪ್ರವೇಶಿಸಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ