Site icon Vistara News

Viral News : ಬೆಳಗ್ಗೆ ಜಡ್ಜ್, ರಾತ್ರಿ ಪೋರ್ನ್‌ ಸ್ಟಾರ್‌, ಅಮೆರಿಕ ವ್ಯಕ್ತಿಯ ಮೂನ್‌ಲೈಟ್ ವರ್ಕ್!

#image_title

ನ್ಯೂಯಾರ್ಕ್‌: ಸಮಾಜದಲ್ಲಿ ಹಲವಾರು ರೀತಿಯ ವೃತ್ತಿಗಳಿವೆ. ಎಲ್ಲ ಹುದ್ದೆಗೂ ಅದರದ್ದೇ ಆದ ಸ್ಥಾನಮಾನವಿದೆ. ಅದರಲ್ಲೂ ವೈದ್ಯರು, ಶಿಕ್ಷಕರು, ನ್ಯಾಯಾಧೀಶರು, ನ್ಯಾಯಮೂರ್ತಿಗಳು ಎನ್ನುವ ಹುದ್ದೆಗಳಂತೂ ಹೆಚ್ಚು ಗೌರವದ ಹುದ್ದೆಗಳು ಎಂದೇ ಹೇಳಬಹುದು. ಆದರೆ ಹುದ್ದೆಯ ಗೌರವವನ್ನೂ ಲೆಕ್ಕಿಸದೆ ಮತ್ತೊಂದು ಕೆಳಮಟ್ಟದ ಕೆಲಸಕ್ಕೆ ಕೈ ಹಾಕಿದ್ದ ನ್ಯಾಯಾಧೀಶರೊಬ್ಬನನ್ನು ಇದೀಗ ಅಧಿಕಾರಿಗಳು ವಜಾ ಮಾಡಿದ್ದಾರೆ. ಆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral video: ಕಿಡ್ನಾಪರ್‌ ಕೈಯಿಂದ ಚಾಣಾಕ್ಷತೆಯಿಂದ ಪಾರಾದ ಪೋರ! ಸಿಸಿಟಿವಿಯಲ್ಲಿ ದಾಖಲಾಯ್ತು ಘಟನೆ
ನ್ಯೂಯಾರ್ಕ್‌ನ ನಗರ ನ್ಯಾಯಾಲಯಕ್ಕೆ ಗ್ರೆಗೊರಿ ಎ. ಲಾಕ್(33) ಹೆಸರಿನ ನ್ಯಾಯಾಧೀಶರನ್ನು ನೇಮಿಸಲಾಗಿತ್ತು. ಬೆಳಗ್ಗೆ ಹೊತ್ತು ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದ ಈ ಗ್ರೆಗೊರಿ ರಾತ್ರಿ ಹೊತ್ತು ನೀಲಿ ಚಿತ್ರಗಳ ನಟರಾಗುತ್ತಿದ್ದರು. ಓನ್ಲಿಫ್ಯಾನ್ಸ್‌, ಜಸ್ಟ್‌ ಫಾರ್‌ ಫ್ಯಾನ್ಸ್‌ನಂತಹ ಸೈಟ್‌ಗಳಲ್ಲಿ ಸಕ್ರಿಯವಾಗಿದ್ದು, ಅಲ್ಲಿ ಅಶ್ಲೀಲ ಫೋಟೋ, ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದರು.

ಅಂದ ಹಾಗೆ ಗ್ರೆಗೊರಿ ಈ ಅಶ್ಲೀಲ ಸೈಟ್‌ಗಳಿಂದಲೂ ಸಹ ಸಾಕಷ್ಟು ಹಣ ಮಾಡಿಕೊಳ್ಳುತ್ತಿದ್ದರು. ಓನ್ಲಿಫ್ಯಾನ್ಸ್‌ನಲ್ಲಿ ಅಭಿಮಾನಿಗಳಿಂದ ತಿಂಗಳಿಗೆ ತಲಾ 12 ಡಾಲರ್‌ ಸಂಗ್ರಹಿಸುತ್ತಿದ್ದರೆ, ಜಸ್ಟ್‌ ಫಾರ್‌ ಫ್ಯಾನ್ಸ್‌ನಿಂದ ಒಬ್ಬರಿಗೆ 9.99 ಡಾಲರ್‌ ಹಣ ಸಂಗ್ರಹಿಸುತ್ತಿದ್ದರು ಎಂದು ವರದಿಯಿದೆ. ಈ ಸೈಟ್‌ಗಳ ಮಾಹಿತಿ ಹೊಂದಿದ್ದ ಟ್ವಿಟರ್‌ ಖಾತೆಯನ್ನೂ ಬಳಸುತ್ತಿದ್ದ ಅವರು ಅದರಲ್ಲಿ ತಾನು ನ್ಯಾಯಾಧೀಶ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Viral Brain Teasers: ಇಷ್ಟೆಲ್ಲ ಎಲೆಗಳ ಮಧ್ಯೆ ಕಪ್ಪೆಯೊಂದು ಬೆಚ್ಚಗೆ ಕುಳಿತಿದೆ; ಹುಡುಕಿ ನೋಡೋಣ!
ಗ್ರೆಗೊರಿ ಅವರ ಎರಡು ವೃತ್ತಿ ಬಗ್ಗೆ ತಿಳಿದ ನ್ಯೂಯಾರ್ಕ್‌ ಅಧಿಕಾರಿಗಳು ಅವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ವೃತ್ತಿಪರತೆ ಇಲ್ಲದಿರುವುದನ್ನು ಕಾರಣವಾಗಿ ಕೊಡಲಾಗಿದೆ.

Exit mobile version