Site icon Vistara News

Viral News: ಕಂಪನಿಯಲ್ಲಿ 1 ವರ್ಷ ವೇತನ ಸಹಿತ ರಜೆ ಪಡೆದ ಉದ್ಯೋಗಿ; ಈ ಲಕ್‌ ನಿಮ್ಮದಾಗಬೇಕೆ? ಹೀಗೆ ಮಾಡಿ

Viral News

ಕಂಪನಿಯಲ್ಲಿ ಗರಿಷ್ಠ ಎಂದರೆ ಒಂದೆರಡು ತಿಂಗಳು ರಜೆ (leave) ತೆಗೆಯಬಹುದು. ಅದೂ ಅನಾರೋಗ್ಯದ ನಿಮಿತ್ತ ಮಾತ್ರ. ಆದರೆ ಇಲ್ಲೊಬ್ಬ ಕಂಪನಿಯಿಂದ 365 ದಿನಗಳ ಪಾವತಿ ರಜೆ (Paid Leaves) ಪಡೆದಿದ್ದಾನೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral News) ಆಗಿದ್ದು, ಸಾಕಷ್ಟು ಮಂದಿ ಇಂತಹ ರಜೆ ನಮಗೆ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯಕರ ಕೆಲಸ ಮತ್ತು ಜೀವನದ ಸಮತೋಲನ ಕಾಪಾಡಿಕೊಳ್ಳಲು ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪಾವತಿ ರಜೆಗಳನ್ನು ಒದಗಿಸುತ್ತವೆ. ಇದು ಎಲ್ಲ ಕಂಪನಿಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಆದರೆ ಈ ರಜೆಯನ್ನು ಒಂದು ವರ್ಷದವರೆಗೆ ವಿಸ್ತರಿಸುವ ಅವಕಾಶ ಎಲ್ಲೂ ಇರುವುದಿಲ್ಲ.

ಆದರೆ ಇಲ್ಲೊಬ್ಬ ಮಾತ್ರ 365 ದಿನಗಳ ಅಂದರೆ ವರ್ಷಪೂರ್ತಿ ರಜೆಯನ್ನು ಪಡೆಯುವ ಅವಕಾಶ ಪಡೆದುಕೊಂಡಿದ್ದಾನೆ. ಅದು ಸಂಬಳ ಸಮೇತ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ಆತ ನಿಜವಾಗಲೂ ಅದೃಷ್ಟವಂತ ಎಂದು ಹಲವಾರು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಚೀನಾದ ಶೆನ್‌ಜೆನ್ ಪ್ರದೇಶದ ವ್ಯಕ್ತಿಯೊಬ್ಬ ಕಂಪನಿಯ ಪಾರ್ಟಿಯಲ್ಲಿ ಲಕ್ಕಿ ಡ್ರಾ ಗೆದ್ದ ಅನಂತರ 365 ದಿನಗಳ ವೇತನ ಸಹಿತ ರಜೆಯನ್ನು ಗಳಿಸಿದ್ದಾನೆ.

ಸಂಸ್ಥೆಯಲ್ಲಿ ನಡೆದ ಭಾನುವಾರದ ಭೋಜನಕೂಟದಲ್ಲಿ ಭಾಗವಹಿಸಿದ ಉದ್ಯೋಗಿ ಆ ರಾತ್ರಿ ದೊಡ್ಡ ಸೌಲಭ್ಯವನ್ನು ಪಡೆದನು. 365 ದಿನಗಳವರೆಗೆ ದೀರ್ಘ ರಜೆಯನ್ನು ನೀಡುವ ಚೆಕ್ ಅವರಿಗೆ ಸಿಕ್ಕಿತ್ತು. ಆ ಚೆಕ್‌ನಲ್ಲಿ “365 ದಿನಗಳ ಪಾವತಿಸಿದ ರಜೆ” ಎಂದು ಬರೆಯಲಾಗಿದೆ.

ಇದಕ್ಕೆ ಸಾಕಷ್ಟು ಮಂದಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಕಳೆದ ವರ್ಷದ್ದು. ಆದರೂ ಅದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತರ ಉದ್ಯೋಗಿಗಳು ಆತನ ಬಗ್ಗೆ ಖಂಡಿತ ಅಸೂಯೆ ಪಟ್ಟಿರುತ್ತಾರೆ ಎಂದು ಹೇಳಿದ್ದಾರೆ. ಇನ್ನು ಕೆಲವರು “ನಮಗೆ ಅದು ಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಇಷ್ಟೊಂದು ರಜೆಯೇ ಎಂದು ಈ ಗೆಲುವಿನ ಬಗ್ಗೆ ಭಯ ವ್ಯಕ್ತಪಡಿಸಿದ್ದು, ಇದು ಅಪಾಯಕಾರಿ ಎಂದು ಹೇಳಿದ್ದಾರೆ. ಇದರಿಂದ ಉದ್ಯೋಗಿಗಳ ಉದ್ಯೋಗ ಭವಿಷ್ಯಕ್ಕೆ ಅಪಾಯ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬರು ಕಾಮೆಂಟ್ ನಲ್ಲಿ 366 ನೇ ದಿನ: ಕ್ಷಮಿಸಿ, ಕಡಿಮೆ ಕಾರ್ಯಕ್ಷಮತೆ ಮತ್ತು ಅಸಮರ್ಥತೆಯ ಕಾರಣದಿಂದ ನಿಮ್ಮನ್ನು ವಜಾಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ತಂಡ ಗೆದ್ದ ಸಂತಸದಲ್ಲಿ ಬಣ್ಣದ ಚಿಟ್ಟೆಯಂತೆ ಹಾರಾಡಿ ಸಂಭ್ರಮಿಸಿದ ಹೈದರಾಬಾದ್​ ಮಾಲಕಿ ಕಾವ್ಯಾ ಮಾರನ್

365 ದಿನಗಳ ವೇತನ ಸಹಿತ ರಜೆಯ ಪ್ರಸ್ತಾಪವನ್ನು ಇದು ಹೊಂದಿರಲಿಲ್ಲ. ಇದು ಹೆಚ್ಚಿನದನ್ನು ಹೊಂದಿತ್ತು. ವರದಿಗಳ ಪ್ರಕಾರ ಕಂಪೆನಿಯ ವಿಜೇತ ಉದ್ಯೋಗಿಗೆ ಪಾವತಿಸಿದ ರಜೆ ಮತ್ತು ಇನ್ನೊಂದು ವಿಶಿಷ್ಟ ಕೊಡುಗೆಯ ಬಗ್ಗೆ ಚರ್ಚಿಸಲು ತೀರ್ಮಾನಿಸಿತ್ತು. ಆತ ದೀರ್ಘವಾದ ರಜೆಯನ್ನು ಆನಂದಿಸುತ್ತಾನೋ ಅಥವಾ ಕೆಲಸ ಮಾಡುವ ಮೂಲಕ ಹಣವನ್ನು ಎನ್‌ಕ್ಯಾಶ್ ಮಾಡಲು ಬಯಸುತ್ತಾನೋ ಎಂಬ ಲೆಕ್ಕಾಚಾರ ಇದರಲ್ಲಿತ್ತು ಎನ್ನಲಾಗಿದೆ.

Exit mobile version