Site icon Vistara News

ಆರ್ಡರ್‌ ಮಾಡಿದ್ದು ಸೋನಿ ಟಿವಿ, ಆದ್ರೆ ಬಾಕ್ಸ್‌ನಲ್ಲಿ ಇದ್ದದ್ದು ಬೇರೆ! ರಿಟರ್ನ್‌ಗೆ ಸತಾಯಿಸುತ್ತಿರುವ ಫ್ಲಿಪ್‌ಕಾರ್ಟ್!

Viral News, Man orders Sony tv but received other brand from Flipkart

ನವದೆಹಲಿ: ಆರ್ಡರ್ ಮಾಡಿದ್ದೇ ಒಂದು, ಡೆಲಿವರ್ ಆಗಿದ್ದು ಮತ್ತೊಂದೇ ಎಂದಾದರೆ ಗ್ರಾಹಕನ ಪರಿಸ್ಥಿತಿ ಹೇಗಿರಬೇಡ! ಹೌದು, ಗ್ರಾಹಕರೊಬ್ಬರು 1 ಲಕ್ಷ ರೂ. ಮೌಲ್ಯ ಸೋನಿ ಟಿವಿಯನ್ನು (Sony TV) ಪ್ಲಿಫ್‌ಕಾರ್ಟ್ (Flipkart) ಮೂಲಕ ಆರ್ಡರ್ ಮಾಡಿದ್ದರು. ಆದರೆ, ಅವರಿಗೆ ಬೇರೆ ಬ್ರ್ಯಾಂಡಿನ ಕಳಪೆ ಟಿವಿಯನ್ನು ನೀಡಲಾಗಿದೆ! ಆದರೆ, ಈ ವಿಷಯ ಗ್ರಾಹಕನಿಗೆ ಮೊದಲಿಗೆ ಗೊತ್ತಾಗಿಲ್ಲ. ಯಾವಾಗ, ಟಿವಿ ಇನ್‌ಸ್ಟಾಲ್ ಮಾಡಲು ಕೆಲಸಗಾರ ಮನೆಗೆ ಬಂದು ಬಾಕ್ಸ್ ಓಪನ್ ಮಾಡಿದಾಗಲೇ ಸೋನಿ ಟಿವಿಯ ಬದಲಿಗೆ ಥಾಮ್ಸನ್ ಟಿವಿಯನ್ನು(Thomson TV) ನೀಡಿರುವುದು ಗೊತ್ತಾಗಿದೆ. ಈ ಕುರಿತಾದ ಮಾಹಿತಿಯನ್ನು ಎಕ್ಸ್ ವೇದಿಕೆಯಲ್ಲಿ ದಿಟ್ರೂಇಂಡಿಯನ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ರೀತಿಯ ವಂಚನೆಯ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.

ಕಥೆಯು ಬಳಕೆದಾರರ ಆರಂಭಿಕ ಪೋಸ್ಟ್‌ನೊಂದಿಗೆ ಪ್ರಾರಂಭವಾಯಿತು, ಅದರಲ್ಲಿ ಅವರು ಹೇಳಿದರು, “ನಾನು 7 ನೇ ಅಕ್ಟೋಬರ್‌ನಲ್ಲಿ @Flipkart ನಿಂದ Sony ಟಿವಿಯನ್ನು ಖರೀದಿಸಿದೆ, 10 ನೇ ಅಕ್ಟೋಬರ್‌ನಲ್ಲಿ ವಿತರಿಸಲಾಯಿತು ಮತ್ತು ಸೋನಿ ಸ್ಥಾಪನೆಯ ವ್ಯಕ್ತಿ 11 ನೇ ಅಕ್ಟೋಬರ್‌ನಲ್ಲಿ ಬಂದರು, ಅವರು ಟಿವಿಯನ್ನು ಅನ್‌ಬಾಕ್ಸ್ ಮಾಡಿದರು ಮತ್ತು ನಾವು ಆಘಾತಕ್ಕೊಳಗಾಗಿದ್ದೇವೆ. ಸ್ಟಾಂಡ್, ರಿಮೋಟ್ ಮುಂತಾದ ಯಾವುದೇ ಪರಿಕರಗಳಿಲ್ಲದ ಸೋನಿ ಬಾಕ್ಸ್‌ನ ಒಳಗೆ ಥಾಮ್ಸನ್ ಟಿವಿಯನ್ನು ನೋಡಲು.

ನಾನು ಅಕ್ಟೋಬರ್ 7ರಂದು ಫ್ಲಿಪ್‌ಕಾರ್ಟ್‌ನಿಂದ 1 ಲಕ್ಷ ರೂ. ಬೆಲೆಯ ಸೋನಿ ಟಿವಿಯನ್ನು ಖರೀದಿಸಿದೆ. ಅಕ್ಟೋಬರ್ 10ರಂದು ಡೆಲಿವರಿ ನೀಡಲಾಯಿತು. ಸೋನಿ ಟಿವಿ ಫಿಟ್ ಮಾಡಲು ಅಕ್ಟೋಬರ್ 11ರಂದು ವ್ಯಕ್ತಿಯೊಬ್ಬರು ಬಂದರು. ಅವರು ಟಿವಿಯನ್ನು ಅನ್ ಬಾಕ್ಸ್ ಮಾಡಿದಾಗ ನಮಗೆ ಆಘಾತ ಎದುರಾಯಿತು. ಸ್ಟ್ಯಾಂಡ್, ರಿಮೋಟ್ ಮುಂತಾದ ಯಾವುದೇ ಪರಿಕರಗಳು ಇಲ್ಲದೇ ಸೋನಿ ಬಾಕ್ಸ್‌ನೊಳಗೆ ಥಾಮ್ಸನ್ ಟಿವಿಯನ್ನು ನೀಡಲಾಗಿತ್ತು ಎಂದು ಮೋಸ ಹೋದ ಗ್ರಾಹಕರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು ದೂರು ಸಲ್ಲಿಸುವುದು ದೊಡ್ಡ ಸಮಸ್ಯೆಯಾಯಿತು. ಮೇಲಿಂದ ಮೇಲೆ ಇಮೇಜ್ ಅಪ್‌ಲೋಡ್ ಮಾಡುವಂತೆ ಕೇಳುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಗಂಡನನ್ನು ತೊರೆದ ಮಗಳನ್ನು ಭರ್ಜರಿ ಮೆರವಣಿಗೆ ಮೂಲಕ ಮನೆಗೆ ಕರೆ ತಂದ ತಂದೆ!

ಫ್ಲಿಪ್‌ಕಾರ್ಟ್‌ನ ವಿಳಂಬ ನೀತಿಗೆ ರೋಸಿ ಹೋಗಿರುವ ಸಂತ್ರಸ್ತ ಗ್ರಾಹಕರು, ಫ್ಲಿಪ್ ಕಾರ್ಟ್ ನನ್ನ ರಿಟರ್ನ್ ವಿನಂತಿಯನ್ನು ಇನ್ನೂ ಸಕ್ರಿಯಗೊಳಿಸಿಲ್ಲ. ಮೊದಲಿಗೆ ಅವರು ಅಕ್ಟೋಬರ್ 24ರಂದು ದಿನಾಂಕ ನೀಡಿದ್ದರು. 20ರಂದೇ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ತೋರಿಸಿದರು. ಮತ್ತೆ ದಿನಾಂಕವನ್ನು ನವೆಂಬರ್ 1ಕ್ಕೆ ವಿಸ್ತರಿಸಿದರು. ಈಗಲೂ ಅವರು ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ತೋರಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಯಾವುದೇ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಸಂತ್ರಸ್ತ ಗ್ರಾಹಕರು ಐಸಿಸಿ ವರ್ಲ್ಡ್ ಕಪ್ ಪಂದ್ಯಾವಳಿಯನ್ನು ವೀಕ್ಷಿಸಲು ಟಿವಿ ತರಿಸಿದ್ದರು. ಆದರೆ, ಈಗ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಫ್ಲಿಪ್‌ಕಾರ್ಟ್‌ನಿಂದ ವಂಚನೆಯಾಗಿರುವ ಈ ಪೋಸ್ಟ್ ಭಾರೀ ವೈರಲ್ ಆಗಿದೆ. ಆಗ ಎಚ್ಚೆತ್ತುಕೊಂಡ ಫ್ಲಿಪ್‌ಕಾರ್ಟ್ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿದೆ. ರಿಟರ್ನ್ ವಿನಂತಿಯೊಂದಿಗೆ ನಿಮ್ಮ ಅನುಭವಕ್ಕಾಗಿ ನಮ್ಮ ಕ್ಷಮೆಯಾಚಿಸುತ್ತೇವೆ. ನಾವು ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಬಯಸುತ್ತೇವೆ. ದಯವಿಟ್ಟು ನಿಮ್ಮ ಆರ್ಡರ್ ವಿವರಗಳೊಂದಿಗೆ ನಮಗೆ ನೇರ ಸಂದೇಶ ಕಳುಹಿಸಿ. ಇದಿರಂದಾಗಿ ನಿಮ್ಮ ಆರ್ಡರ್ ಮಾಹಿತಿ ಗೌಪ್ಯವಾಗಿ ಉಳಿಯಲಿದೆ ಎಂದು ಫ್ಲಿಪ್‌ಕಾರ್ಟ್ ಟ್ವೀಟ್ ಮಾಡಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version