Site icon Vistara News

Viral News: ಜೈಲ್ ಅಧಿಕಾರಿಗಳ ತಪಾಸಣೆಗೆ ಹೆದರಿ ಮೊಬೈಲ್ ಫೋನ್ ಅನ್ನೇ ನುಂಗಿದ ಕೈದಿ!

#image_title

ಪಾಟ್ನಾ, ಬಿಹಾರ: ಕೆಲವರು ಆಕಸ್ಮಿಕವಾಗಿ ಏನೇನನ್ನೋ ನುಂಗಿ ಒದ್ದಾಡುವ ವಿಚಾರಗಳು ಸುದ್ದಿಯಾಗುತ್ತಿರುತ್ತವೆ. ಆದರೆ ಬಿಹಾರದಲ್ಲಿ ಕೈದಿಯೊಬ್ಬ ಜೈಲಧಿಕಾರಿಗಳ ತಪಾಸಣೆಗೆ ಹೆದರಿ ಮೊಬೈಲ್ ಫೋನ್ ಅನ್ನೇ ನುಂಗಿರುವ ವಿಚಿತ್ರ ಘಟನೆ (Viral News) ನಡೆದಿದೆ.

ಇದನ್ನೂ ಓದಿ: Railway Tracks Stolen: ಬಿಹಾರದಲ್ಲಿ 2 ಕಿ.ಮೀ ಉದ್ದದ ರೈಲು ಹಳಿಗಳನ್ನೇ ಕದ್ದ ದುರುಳರು!
ಬಿಹಾರದ ಗೋಪಾಲ್‌ಗಂಜ್ ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಖೈಶರ್ ಅಲಿ ಹೆಸರಿನ ಕೈದಿ ಜೈಲಿನೊಳಗಿದ್ದುಕೊಂಡೇ ಮೊಬೈಲ್ ಬಳಕೆ ಮಾಡುತ್ತಿದ್ದ. ಶನಿವಾರ ಜೈಲಧಿಕಾರಿಗಳು ತಪಾಸಣೆಗೆ ಬರುವ ವಿಚಾರ ಗೊತ್ತಾದ ಹಿನ್ನೆಲೆ ಆತ ಮೊಬೈಲ್ ಅನ್ನು ಬಚ್ಚಿಡಲು ಸಾಧ್ಯವಾಗದೆ ನುಂಗೇ ಬಿಟ್ಟಿದ್ದಾನೆ. ಭಾನುವಾರ ಆತನಿಗೆ ವಿಪರೀತ ಹೊಟ್ಟೆ ನೋವು ಬಂದಿದ್ದು, ವೈದ್ಯರಿಂದ ತಪಾಸಣೆ ನಡೆಸಿದಾಗ ಆತ ಮೊಬೈಲ್ ನುಂಗಿರುವ ವಿಚಾರ ಬೆಳಕಿಗೆ ಬಂದಿದೆ.

ಕೈದಿಯನ್ನು ಗೋಪಾಲ್‌ಗಂಜ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಎಕ್ಸ್ ರೇ ಮಾಡಿಸಲಾಗಿದೆ. ನಂತರ ಆತನಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವುದನ್ನು ಗಮನಿಸಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ: Viral News: ಹೆರಿಗೆಯಾದ 3 ಗಂಟೆಯಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಂದು ಎಸ್ಸೆಸ್ಸೆಲ್ಸಿ ಸೈನ್ಸ್ ಪೇಪರ್ ಬರೆದ 22 ವರ್ಷದ ವಿದ್ಯಾರ್ಥಿನಿ!
ಖೈಶರ್ ಅಲಿಯನ್ನು 2020ರ ಜನವರಿ 17ರಂದು ಮಾದಕ ದ್ರವ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋಪಾಲ್‌ಗಂಜ್ ಪೊಲೀಸರು ಬಂಧಿಸಿದ್ದರು. ಆತ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾನೆ.

Exit mobile version