ತೆಲಂಗಾಣ: ಜನರಿಗೆ ಅನ್ಯಾಯ ಆಗಾದ ಮೊದಲು ಓಡಿ ಹೋಗುವುದು ಪೊಲೀಸರ ಬಳಿಗೆ. ಹಾಗಿರುವಾಗ ಅಂತಹ ಪೊಲೀಸರಿಗೆ ಅನ್ಯಾಯ ಮಾಡಿದರೆ? ಅಂತಹದ್ದೇ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ(Viral News). ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕಾಗಿದ್ದ ಪೊಲೀಸ್ ಅಧಿಕಾರಿಯೇ ಕಟ್ಟಿಕೊಂಡ ಹೆಂಡತಿಗೆ ಅನ್ಯಾಯ ಮಾಡಿದ್ದು, ನ್ಯಾಯ ಒದಗಿಸುವಂತೆ ಪತ್ನಿ ಠಾಣೆ ಎದುರೇ ಧರಣಿ(Protest) ಮಾಡಿದ್ದಾಳೆ. ಸಿದ್ದಿಪೇಟೆ ಜಿಲ್ಲೆಯ ಕೊಮುರವಳ್ಳಿ ಪೊಲೀಸ್ ಠಾಣೆಯ ಎದುರು ಸಬ್ ಇನ್ಸ್ಪೆಕ್ಟರ್(Sub inspector) ಪತ್ನಿ ಧರಣಿ ಕುಳಿತಿರುವುದು ತೆಲುಂಗಾಣದಲ್ಲಿ ಭಾರಿ ಸುದ್ದಿಯಾಗಿದೆ.
ಕರೀಂ ನಗರ ನಿವಾಸಿಯಾಗಿರುವ ಎಸ್‌ಐ ನಾಗರಾಜು ವಿರುದ್ಧ ಆತನ ಪತ್ನಿ ಮಾನಸ ಠಾಣೆಗೆ ದೂರು ನೀಡಿದ್ದು, ನ್ಯಾಯ ಸಿಗುವವರೆಗೆ ಠಾಣೆ ಎದುರೇ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಅಹೋರಾತ್ರಿ ರಾಣೆ ಎದುರು ಧರಣಿ ನಡೆಸಿದ ಮಾನಸ ರಾಜ್ಯದ ಗಮನ ಸೆಳೆದಿದ್ದಾಳೆ. ಎರಡು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಗಂಡನ ವಿರುದ್ಧ ಆರೋಪ ಮಾಡಿರುವ ಮಾನಸ, ನನ್ನಿಬ್ಬರು ಮಕ್ಕಳಿಂದಲೂ ನನ್ನನ್ನು ದೂರವಿಟ್ಟಿದ್ದಾರೆ ಎಂದಿದ್ದಾಳೆ. ಸಾಲದೆನ್ನುವಂತೆ ನಾಗರಾಜ್ ಬೇರೊಬ್ಬ ಮಹಿಳೆಯನ್ನೂ ಮದುವೆ ಆಗಿದ್ದಾರೆ ಎಂದು ಗಂಡನ ವಿರುದ್ಧ ಮಾನಸ ಆರೋಪ ಮಾಡಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಠಾಣೆಯ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು.
ಮಾನಸ ಮತ್ತು ನಾಗರಾಜು ಇಬ್ಬರು ಕರೀಂನಗರ ಜಿಲ್ಲೆಗೆ ಸೇರಿದವರು. ಹತ್ತು ವರ್ಷಗಳ ಹಿಂದೆಯೇ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಎಸ್‌ಐ ನಾಗರಾಜು ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಮಾನಸಗೆ ಕಿರುಕುಳ ನೀಡುತ್ತಿದ್ದ.
ಮೇಲಾಗಿ ವಿಚ್ಛೇದನ ನೀಡುವಂತೆ ಕಿರುಕುಳ ನೀಡುತ್ತಿರುವುದರಿಂದ ಆತ್ಮಹತ್ಯೆಯೊಂದೇ ದಾರಿ ಎಂದು ಮಾನಸ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಿದ್ದಿಪೇಟೆ ಸಿಪಿ, ಚೆರ್ಯಾಲ ಸಿಐ ಹಾಗೂ ಕರೀಂನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾರೂ ಗಮನ ಹರಿಸುತ್ತಿಲ್ಲ. ಎಸ್‌ಐ ನಾಗರಾಜು ಮತ್ತು ಎರಡನೇ ಪತ್ನಿಯಿಂದಾಗಿ ಇಬ್ಬರು ಮಕ್ಕಳು ಅಪಾಯದಲ್ಲಿದ್ದಾರೆ. ಮಕ್ಕಳಿಗೆ ನ್ಯಾಯ ಕೊಡಿಸುವಂತೆ ಕೋಮುರವಳ್ಳಿ ಪೊಲೀಸ್ ಠಾಣೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಎಸ್‌ಐ ನಾಗರಾಜು ರಜೆಯಲ್ಲಿರುವುದಾಗಿ ಠಾಣೆ ಸಿಬ್ಬಂದಿ ಇದೇ ಸಂದರ್ಭದಲ್ಲಿ ತಿಳಿಸಿದರು. ಆದರೂ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಮಾಸನ ಹೇಳಿದ್ದಾರೆ. ನಾಗರಾಜು ಎರಡನೇ ಮದುವೆ ಆಗುವುದರಲ್ಲಿ ಆತನ ಕುಟುಂಬಸ್ಥರ ಕೈವಾಡವೂ ಇದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ: Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್ ಗರಂ
ಇಂತಹದ್ದೇ ಒಂದು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿತ್ತು. ಪತಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಪಿಎಸ್‌ಐ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಸೂಲಿಬೆಲೆ ಪೊಲೀಸ್ ಠಾಣೆ ಪಿಎಸ್ಐ ರಮೇಶ್ ಗುಗ್ಗರಿ ವಿರುದ್ದ ಆತನ ಪತ್ನಿ ದೌರ್ಜನ್ಯ ಆರೋಪ ಮಾಡಿದ್ದು, ಅಪರಿಚಿತರನ್ನು ತಂದೆ, ತಾಯಿ ಎಂದು ಪರಿಚಯಿಸಿ 2021ರಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಮದುವೆಯಾದ ನಂತರ ಪಿಎಸ್‌ಐ ತಂದೆ ತನ್ನ ಮೇಲೆ ಹಲ್ಲೆ ನಡೆಸಿದ್ದು, ಮಾಂಗಲ್ಯ ಕಿತ್ತು ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ನೊಂದ ಮಹಿಳೆ ಆರೋಪ ಮಾಡಿದ್ದಾರೆ. ಇವಿಷ್ಟೇ ಅಲ್ಲದೇ, ಜ್ವರ ಬಂದಾಗ ಯಾವುದೋ ಟ್ಯಾಬ್ಲೇಟ್ ನೀಡಿ ಮನೆಯಲ್ಲಿ ಬಲವಂತವಾಗಿ ಕೂಡಿ ಹಾಕಿ ಗರ್ಭಪಾತ ಮಾಡಿಸಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.