ಪ್ಯಾರಿಸ್: ಪ್ರಸಕ್ತ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್(paris olympics) ಈಗಾಗಲೇ ಹಲವು ವಿವಾದಗಳಿಂದ ಸುದ್ದಿಯಾಗಿದೆ. ಈ ಮಧ್ಯೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್(Emmanuel Macron) ಮತ್ತು ಕ್ರೀಡಾ ಸಚಿವೆ ಅಮೆಲಿ ಔಡಿಯಾ-ಕ್ಯಾಸ್ಟೆರಾ(Amelie Oudea-Castera) ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿದ ಫೋಟೊಗಳು ವೈರಲ್(Viral News) ಆಗಿತ್ತು. ಇವರ ಈ ವರ್ತನೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಇಲ್ಲಿನ ನೆಟ್ಟಿಗರು ಈ ಘಟನೆ ಬಗ್ಗೆ ಸಮಥಿಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಎಮ್ಯಾನುಯೆಲ್ ಮತ್ತು ಅಮೆಲಿ ಔಡಿಯಾ-ಕ್ಯಾಸ್ಟೆರಾ ಪರಸ್ಪರ ಚುಂಬಿಸಿದ್ದ ಫೋಟೊ 2 ದಿನಗಳ ಹಿಂದೆ ವೈರಲ್ ಆಗಿತ್ತು. ಮಾಜಿ ಟೆನಿಸ್ ಆಟಗಾರ್ತಿಯಾಗಿರುವ ಕ್ಯಾಸ್ಟೆರಾ ಅವರು ಎಮ್ಯಾನುಯೆಲ್ ಅವರನ್ನು ಬಿಗಿದಪ್ಪಿಕೊಂಡು ಚುಂಚಿಸುತ್ತಿರುವುದನ್ನು ಫೋಟೊದಲ್ಲಿ ಕಂಡು ಬಂದಿತ್ತು. ಇವರಿಬ್ಬರು ಚುಂಬಿಸುತ್ತಿರುವುದನ್ನು ನೋಡಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಕ್ ನಗುತ್ತಿರುವ ಫೋಟೊ ಕೂಡ ವೈರಲ್ ಆಗಿತ್ತು.
ಮ್ಯಾಕ್ರನ್ ಅವರನ್ನು ಕ್ಯಾಸ್ಟೆರಾ ತಮ್ಮ ತೋಳುಗಳಿಂದ ಬಿಗಿಯಾಗಿ ಹಿಡಿದುಕೊಂಡು ಮೈಮರೆತು ಚುಂಬಿಸುತ್ತಿರುವ ಫೋಟೊವನ್ನು ಹಲವು ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇದು ನಾಚಿಕೆಗೇಡಿನ ಕೃತ್ಯ ಎಂದು ಹೇಳಿದ್ದರು. ಆದರೆ ಇದೀಗ ಫ್ರಾನ್ಸ್‌ನ ನೆಟ್ಟಿಗರು ಇದರಲ್ಲಿ ಯಾವುದೇ ನಾಚಿಕೆಗೇಡಿನ ಸಂಗತಿಯಿಲ್ಲ. ಇದು ಫ್ರಾನ್ಸ್‌ನ ಸಂಸ್ಕೃತಿಯ ಒಂದು ಭಾಗ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಳೆದ ಭಾರಿ ಮ್ಯಾಕ್ರಾನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೊತೆಗೂಡಿ ಚಹಾ ಸೇವಿಸಿದ್ದರು. ಜೈಪುರದ ಹವಾ ಮಹಲ್ ಬಳಿಯ ಅಂಗಡಿಯಲ್ಲಿ ಮ್ಯಾಕ್ರಾನ್ ಮತ್ತು ಮೋದಿ ಕುಲ್ಹಾಡ್ ಚಹಾ ಸೇವಿಸಿದ್ದರು. ಮೋದಿ ಅದಕ್ಕೆ ತಮ್ಮ ಫೋನ್‌ನಲ್ಲಿ ಯುಪಿಐ ಬಳಸಿ ಚಹಾಕ್ಕೆ ಹಣ ಪಾವತಿಸಿದ್ದರು. ಮ್ಯಾಕ್ರಾನ್ ಇದನ್ನು ಆಶ್ಚರ್ಯಚಕಿತರಾಗಿ ವೀಕ್ಷಿಸಿದರು. ಅಂಗಡಿ ಮಾಲೀಕರು ತಮ್ಮ ಫೋನ್‌ನಲ್ಲಿ ಪಾವತಿಯ ದೃಢೀಕರಣ ಪಡೆದಿದ್ದನ್ನು ಸಹ ಮೋದಿ ತಮಗೆ ತೋರಿಸಿದರು ಎಂದು ಮ್ಯಾಕ್ರಾನ್ ಬಳಿಕ ಸ್ಮರಿಸಿದ್ದರು.
ಇದನ್ನೂ ಓದಿ Paris Olympics: ಆರ್ಚರಿ ಪ್ರೀ ಕ್ವಾರ್ಟರ್‌ನಲ್ಲಿ ನಾಳೆ ಭಾರತದ ದೀಪಿಕಾ ಕುಮಾರಿ-ಭಜನ್ ಕೌರ್ ಕಣಕ್ಕೆ
ಭಾರತದಿಂದ UPI ಅನ್ನು ಅಳವಡಿಸಿಕೊಳ್ಳಲು ಫ್ರಾನ್ಸ್ ಬಲವಾದ ಆಸಕ್ತಿಯನ್ನು ತೋರಿಸಿದೆ. ಜುಲೈನಲ್ಲಿ ಮೋದಿಯವರು ಫ್ರಾನ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಐಫೆಲ್ ಟವರ್‌ನಿಂದ ಪ್ರಾರಂಭವಾಗುವ ಯುಪಿಐ ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದರು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎನ್‌ಸಿಪಿಐ) ಅಂತಾರಾಷ್ಟ್ರೀಯ ಅಂಗವು ಯುಪಿಐ ಮತ್ತು ರುಪೇ ಸ್ವೀಕರಿಸಲು ಫ್ರಾನ್ಸ್‌ನ ಲೈರಾ ನೆಟ್‌ವರ್ಕ್‌ನೊಂದಿಗೆ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿತ್ತು.