Site icon Vistara News

Viral News : ಮಾರ್ಕ್ಸ್‌ ಕಾರ್ಡ್‌ನಲ್ಲಿ ಶಿಕ್ಷಕರು ಹೀಗಾ ರಿಮಾರ್ಕ್‌ ಬರೆಯೋದು! ಸಿಟ್ಟಾದ ನೆಟ್ಟಿಗರು

#image_title

ಬೆಂಗಳೂರು: ಪ್ರಾಥಮಿಕ ಶಾಲೆಗಳ ಅಂಕ ಪಟ್ಟಿ(ಮಾರ್ಕ್ಸ್‌ ಕಾರ್ಡ್‌) ನಿಮಗೆ ನೆನಪಿರಬಹುದು. ಎಲ್ಲ ವಿಷಯಗಳಿಗೆ ವಿದ್ಯಾರ್ಥಿ ತೆಗೆದುಕೊಂಡ ಅಂಕ ಬರೆಯುವ ಶಿಕ್ಷಕರು ಅದರ ಜತೆ ವಿದ್ಯಾರ್ಥಿಯ ಬಗ್ಗೆ ಒಂದೆರೆಡು ಪದಗಳಲ್ಲಿ ಬರೆದುಕೊಡುತ್ತಿದ್ದರು. ಇದೀಗ ಅದೇ ರೀತಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯ ಅಂಕ ಪಟ್ಟಿಗೆ ಬರೆದ ರಿಮಾರ್ಕ್‌ ಎಲ್ಲೆಡೆ ಭಾರೀ ವೈರಲ್‌ (Viral News) ಆಗಿದೆ.

ಇದನ್ನೂ ಓದಿ: Viral Video: ತರಗತಿಯಲ್ಲೇ ವಿದ್ಯಾರ್ಥಿಗಳ ಹೊಡಿಬಡಿ; ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ ವಿಡಿಯೊ ವೈರಲ್‌
ವಿದ್ಯಾರ್ಥಿನಿಯೊಬ್ಬಳ ಅಂಕಪಟ್ಟಿಯಲ್ಲಿ ಶಿಕ್ಷಕರು ಎಲ್ಲ ವಿಷಯಗಳ ಪರೀಕ್ಷೆಯಲ್ಲಿ ಆಕೆ ತೆಗೆದುಕೊಂಡ ಅಂಕಗಳನ್ನು ಬರೆದಿದ್ದಾರೆ. ಒಟ್ಟು ಎಷ್ಟು ಅಂಕಗಳಿಗೆ ಎಷ್ಟು ಅಂಕ ಬಂದಿವೆ, ಆಕೆ ತರಗತಿಯಲ್ಲಿ ಎಷ್ಟನೇ ಸ್ಥಾನದಲ್ಲಿದ್ದಾಳೆ ಎನ್ನುವ ಎಲ್ಲ ಮಾಹಿತಿ ಅದರಲ್ಲಿದೆ. ಕೊನೆಯಲ್ಲಿ ವಿದ್ಯಾರ್ಥಿನಿಯ ಬಗ್ಗೆ ರಿಮಾರ್ಕ್‌ ಅನ್ನೂ ಕೂಡ ಬರೆಯಲಾಗಿದೆ. ಅಲ್ಲಿ ಶಿಕ್ಷಕರು, “She has passed away” ಎಂದು ಬರೆದಿದ್ದಾರೆ.


ಪಾಸಡ್‌, ಪಾಸಡ್‌ ಔಟ್‌ ಎನ್ನುವ ಪದಗಳು ತೇರ್ಗಡೆಯಾಗಿದ್ದಾರೆ ಎಂದು ಅರ್ಥ ಕೊಡುತ್ತದೆ. ಆದರೆ ಪಾಸಡ್‌ ಅವೇ ಎನ್ನುವ ಪದ ಸಾವನ್ನಪ್ಪಿದ್ದಾರೆ ಎನ್ನುವ ಅರ್ಥ ಕೊಡುತ್ತದೆ. ಹಾಗಾಗಿ ಈ ಅಂಕಪಟ್ಟಿಯಲ್ಲಿರುವ ರಿಮಾರ್ಕ್‌ ಫೋಟೋ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿದೆ. ಇದು 2019ರ ಅಂಕಪಟ್ಟಿಯಾಗಿದ್ದು ಆಗ ಕೂಡ ಫೋಟೋ ಎಲ್ಲೆಡೆ ವೈರಲ್‌ ಆಗಿತ್ತು. ಈಗಲೂ ಮತ್ತೊಮ್ಮೆ ಈ ಅಂಕಪಟ್ಟಿ ಫೋಟೋ ವೈರಲ್‌ ಆಗುತ್ತಿದೆ.

ಬೇಜವಾಬ್ದಾರಿತನದಿಂದ ತಪ್ಪು ಅರ್ಥ ಬರುವ ರಿಮಾರ್ಕ್‌ ಬರೆದ ಶಿಕ್ಷಕರಿಗೆ ನೆಟ್ಟಿಗರು ಬೈಯಲಾರಂಭಿಸಿದ್ದಾರೆ. ಇನ್ನೂ ಕೆಲವರು ಶಿಕ್ಷಕರಿಗೇ ಪಾಠ ಹೇಳಿಕೊಡಬೇಕಾದ ಕಾಲ ಬಂದಿದೆ ಎಂದು ಹೇಳಲಾರಂಭಿಸಿದ್ದಾರೆ.

Exit mobile version