ರಜೆ ಮುಗಿಸಿ ಮನೆಗೆ ಹಿಂತಿರುಗಿದ ಕುಟುಂಬವೊಂದು ಅನಾರೋಗ್ಯಕ್ಕೆ ಈಡಾಗಿದ್ದು ಕೂದಲು ಉದುರುವ ವಿಚಿತ್ರ ಸಮಸ್ಯೆಯನ್ನು (Hair Loss problem) ಎದುರಿಸುತ್ತಿತ್ತು. ಗಂಡ, ಹೆಂಡತಿ ಮತ್ತು ಚಿಕ್ಕ ಮಗುವಿನ ಕೂದಲು ಕೂಡ ಉದುರಲಾರಂಭಿಸಿತ್ತು. ಇದಕ್ಕೆ ಕಾರಣ ಏನಿರಬಹುದು ಎಂದು ಹುಡುಕಲು ಹೊರಟವರು ಸಿಸಿಟಿವಿ ದೃಶ್ಯಗಳನ್ನು (cctv footage) ನೋಡಿ ದಂಗಾದರು. ಈ ಸುದ್ದಿ ಇದೀಗ ವೈರಲ್ (Viral News) ಆಗಿದೆ.
ಮಗುವಿನೊಂದಿಗೆ ಗಂಡ, ಹೆಂಡತಿ ರಜೆ ಮುಗಿಸಿ ಮನೆಗೆ ಬಂದ ಮೇಲೆ ವಿಚಿತ್ರ ತೊಂದರೆಗಳನ್ನು ಎದುರಿಸಿದರು. ಎಲ್ಲರೂ ಅನಾರೋಗ್ಯಕ್ಕೆ ಒಳಗಾದರು. ಇಷ್ಟು ಮಾತ್ರವಲ್ಲ ಮನೆಯೊಳಗೆ ವಿಚಿತ್ರ ವಾಸನೆಯಿಂದ ಅವರು ಗಾಬರಿಗೊಂಡರು. ಇದರೊಂದಿಗೆ ಮನೆಯವರೆಲ್ಲರ ಕೂದಲು ಉದುರುವಿಕೆ ಪ್ರಾರಂಭವಾಯಿತು. ಮನೆಯನ್ನು ಸಂಪೂರ್ಣ ಹುಡುಕಾಡಿದರೂ ಅವರಿಗೆ ಏನೂ ಸಿಗಲಿಲ್ಲ. ಅಂತಿಮವಾಗಿ ಬಾಗಿಲಿನ ಬಳಿ ಹಿಡನ್ ಕೆಮೆರಾವನ್ನು ಅಳವಡಿಸಿದರು. ಬಳಿಕ ಅದರಲ್ಲಿ ಅವರಿಗೆ ನೆರೆಯ ನಿವಾಸಿಗಳ ಅನುಮಾನಾಸ್ಪದ ಚಟುವಟಿಕೆ ಕಂಡು ಬಂತು.
ಅಮೆರಿಕದ ಫ್ಲೋರಿಡಾದ ಉಮರ್ ಮತ್ತು ಸಮೀರಾ ದಂಪತಿ ಮಗುವಿನೊಂದಿಗೆ ರಜೆಯಿಂದ ಹಿಂದಿರುಗಿದಾಗ ಈ ಸಸ್ಯೆ ಪ್ರಾರಂಭವಾಗಿತ್ತು. ಎಲ್ಲಿ, ಏನು ತಪ್ಪಾಗಿದೆ ಎಂದು ಅವರು ಹುಡುಕಲು ಪ್ರಾರಂಭಿಸಿದಾಗ ಭಿನ್ನವಾದ ವಿಚಿತ್ರ ಎನಿಸುವ ವಾಸನೆಯನ್ನು ಪತ್ತೆಹಚ್ಚಿದರು. ಈ ವಾಸನೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದರು.
ಗುಪ್ತ ಕೆಮೆರಾವನ್ನು ಅಳವಡಿಸಿ ವಾಸನೆಯನ್ನು ತೊಡೆದುಹಾಕಲು ಪ್ರಯತ್ನಿಸತೊಡಗಿದ ದಂಪತಿ ಮನೆಯ ಪ್ರತಿಯೊಂದು ಕಿಟಕಿಗಳನ್ನೂ ತೆರೆದರು. ಈ ಸಮಯದಲ್ಲಿ ಅವರ ಚಿಕ್ಕ ಮಗಳ ಆರೋಗ್ಯವು ಕ್ಷೀಣಿಸಿತು. ಅವಳು ನಿರಂತರವಾಗಿ ಅಳಲು ಶುರು ಮಾಡಿದಳು. ತಿನ್ನಲು ನಿರಾಕರಿಸಿದಳು.
ಉಮರ್ ಮತ್ತು ಸಮೀರಾ ಅವರಿಗೂ ತಲೆನೋವು ಕಾಣಿಸಿಕೊಂಡಿತು. ಮಗಳ ತಲೆಯಿಂದ ಗಮನಾರ್ಹ ಪ್ರಮಾಣದ ಕೂದಲನ್ನು ಕಳೆದುಕೊಂಡಿರುವುದನ್ನು ಉಮರ್ ಗಮನಿಸಿದರು. ಬಳಿಕ ಉಮರ್ ಅವರ ಕೂದಲು ಉದುರುವಿಕೆ ಪ್ರಾರಂಭವಾಯಿತು. ಮೂವರೂ ಹಾಸಿಗೆಯಲ್ಲೇ ಕಳೆಯುವಷ್ಟರ ಮಟ್ಟಿಗೆ ಅವರ ಪರಿಸ್ಥಿತಿ ಹದಗೆಟ್ಟಿತು. ಹೀಗಾಗಿ ಅವರು ವೈದ್ಯಕೀಯ ಸಹಾಯವನ್ನು ಕೋರಿದರು ಮತ್ತು ಮನೆ ಮಾಲೀಕರಿಗೆ ಮಾಹಿತಿ ನೀಡಿದರು. ಆದರೆ ಯಾವುದೇ ಪರಿಹಾರ ಸಿಗಲಿಲ್ಲ.
ಬಳಿಕ ಬಾಗಿಲ ಬಳಿ ಅಳವಡಿಸಿದ್ದ ಕೆಮೆರಾವನ್ನು ಪರೀಕ್ಷಿಸಿದಾಗ ನೆರೆಹೊರೆಯವರಾದ 36 ವರ್ಷದ ಚೀನೀ ಪ್ರಜೆ ಲಿ ಬಾಗಿಲಿನ ಮೂಲಕ ದ್ರವ ಪದಾರ್ಥವನ್ನು ಎಸೆಯುತ್ತಿರುವುದನ್ನು ಕಂಡು ಬಂತು.
ಈ ವಸ್ತುವು ಮೆಥಡೋನ್, ಹೈಡ್ರೊಕೊಡೋನ್ ಮತ್ತು ಮತ್ತೊಂದು ಗುರುತಿಸಲಾಗದ ವಿಷಕಾರಿ ಅಂಶವನ್ನು ಒಳಗೊಂಡಿತ್ತು. ಉಮರ್ ಮನೆಯಿಂದ ಬರುವ ಶಬ್ದಗಳ ಕಿರಿಕಿರಿಯಿಂದಾಗಿ ಅವರನ್ನು ಅಲ್ಲಿಂದ ಓಡಿಸಲು ಹೀಗೆ ಮಾಡಿರುವುದಾಗಿ ಲೀ ಹೇಳಿದ್ದಾನೆ.
ಇದನ್ನೂ ಓದಿ: Viral Video: ಬೀದಿ ನಾಯಿ ದಾಳಿಯಿಂದ ಮಗುವನ್ನು ರಕ್ಷಿಸಿದ ಸಾಕು ನಾಯಿ! ಅಪರೂಪದ ವಿಡಿಯೊ
ಬಳಿಕ ಲಿಯನ್ನು ಅಮೆರಿಕದಿಂದ ಚೀನಾಕ್ಕೆ ಗಡೀಪಾರು ಮಾಡಲಾಯಿತು. ಲಿ ಅಮೆರಿಕಕ್ಕೆ ಹಿಂತಿರುಗಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ನ್ಯಾಯಾಲಯ ನೀಡಿದೆ.