Site icon Vistara News

Viral News: 20 ವರ್ಷಗಳ ಹಿಂದೆ ಅಜ್ಜ ಖರೀದಿಸಿದ್ದ ಷೇರು; ಮೊಮ್ಮಗಳು ರಾತ್ರೋರಾತ್ರಿ ಕೋಟ್ಯಧಿಪತಿ!

Viral News

ಇಪ್ಪತ್ತು ವರ್ಷಗಳ ಹಿಂದೆ ಷೇರು ಮಾರುಕಟ್ಟೆಯಲ್ಲಿ ಅಜ್ಜ ಖರೀದಿಸಿದ್ದ ಲಾರ್ಸೆನ್ ಮತ್ತು ಟೂಬ್ರೊ (L&T) ನ 500 ಷೇರುಗಳು (L&T share) ಬೆಂಗಳೂರಿನ ಮಹಿಳೆಯೊಬ್ಬರನ್ನು (bengaluru women) ಕೋಟ್ಯಧೀಶ್ವರರನ್ನಾಗಿ (millionaire women) ಮಾಡಿದೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ. ಪ್ರಿಯಾ ಶರ್ಮಾ ಅವರ ಅಜ್ಜ ಉದ್ಯಮಿಯಾಗಿದ್ದು, ಅವರು ತಮ್ಮ ಗಳಿಕೆಯ ಸ್ವಲ್ಪ ಭಾಗವನ್ನು 2004ರಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬಯಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು.

ಸುರಕ್ಷಿತ ಹೂಡಿಕೆಗಾಗಿ ಅವರು ಬ್ಲೂ-ಚಿಪ್ ನಿರ್ಮಾಣದ ಪ್ರಮುಖ ಲಾರ್ಸೆನ್ ಮತ್ತು ಟೂಬ್ರೊ (L&T) ನ 500 ಷೇರುಗಳನ್ನು ಖರೀದಿ ಮಾಡಿದ್ದರು. ಬಳಿಕ ಅವರು ಅದನ್ನು ಮರೆತೇ ಬಿಟ್ಟಿದ್ದರು. ಅವರ ಮರಣದ ಬಳಿಕವೂ ಯಾರೂ ಇದನ್ನು ಗಮನಿಸಿರಲಿಲ್ಲ. ಸಾಕಷ್ಟು ಸಮಯ ಕಳೆದಿದ್ದು, ಎಲ್ ಆಂಡ್ ಟಿ ಷೇರುಗಳಲ್ಲಿನ ಹೂಡಿಕೆಯ ಮೌಲ್ಯವು ಬೆಳೆಯುತ್ತಲೇ ಇತ್ತು.

ಬೆಂಗಳೂರಿನಲ್ಲಿ ನೆಲೆಸಿದ್ದ ಹೂಡಿಕೆದಾರರ ಮೊಮ್ಮಗಳು ಪ್ರಿಯಾ ಅವರು 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಜ್ಜನ ಕೆಲವು ದಾಖಲೆಗಳನ್ನು ನೋಡುತ್ತಿದ್ದಾಗ ಅಜ್ಜ ಷೇರು ಖರೀದಿ ಮಾಡಿರುವುದು ಗೊತ್ತಾಗಿದೆ. ಆದರೆ ಪ್ರಿಯಾ ಅವರು 500 ಎಲ್ ಆಂಡ್ ಟಿ ಷೇರುಗಳ ವಾರಸುದಾರಿಕೆಯಲ್ಲಿ ಸುಲಭವಾಗಿ ಪಡೆಯಲು ಆಗಿರಲಿಲ್ಲ. ಸ್ಟಾಕ್ ವಿಭಜನೆ ಮತ್ತು ಬೋನಸ್ ಷೇರುಗಳ ಕಾರಣದಿಂದಾಗಿ ಅವರೀಗ 4,500 ಷೇರುಗಳನ್ನು ಈಗ ಸ್ವೀಕರಿಸಿದ್ದಾರೆ. ಇವುಗಳ ಮೌಲ್ಯ 1.72 ಕೋಟಿ ರೂ. ಆಗಿದೆ.


ತನ್ನಲ್ಲಿರುವ ಸಂಪತ್ತನ್ನು ಹೆಚ್ಚಿಸಲು ಕಂಪನಿಯು ತನ್ನ ಬಾಕಿ ಉಳಿದಿರುವ ಷೇರುಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಸ್ಟಾಕ್ ವಿಭಜನೆಯಾಗುತ್ತದೆ. 1:2 ವಿಭಜನೆಯಲ್ಲಿ ಪ್ರತಿ ಷೇರನ್ನು ಎರಡಾಗಿ ವಿಂಗಡಿಸಲಾಗಿದೆ. ಹೂಡಿಕೆಯ ಮೌಲ್ಯವನ್ನು ಬದಲಾಯಿಸದೆ ಷೇರುದಾರರ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ದ್ವಿಗುಣಗೊಳಿಸುತ್ತದೆ.

ಬೋನಸ್ ಷೇರುಗಳು, ಮತ್ತೊಂದೆಡೆ, ಅಸ್ತಿತ್ವದಲ್ಲಿರುವ ಷೇರುದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚುವರಿ ಷೇರುಗಳನ್ನು ನೀಡುತ್ತದೆ. ಇದು ಈಗಾಗಲೇ ಮಾಲೀಕತ್ವದ ಷೇರುಗಳ ಸಂಖ್ಯೆಯನ್ನು ಆಧರಿಸಿವೆ.
ಎಲ್ ಆಂಡ್ ಟಿ ಷೇರುಗಳ ಸಂಖ್ಯೆಯಲ್ಲಿ 500 ರಿಂದ 4,500 ಕ್ಕೆ ಒಂಬತ್ತು ಪಟ್ಟು ಹೆಚ್ಚಳವಾಗಿರುವುದು ಮಾತ್ರವಲ್ಲ ಅವುಗಳ ಮೌಲ್ಯವೂ ಬೆಳೆದಿದೆ. ಷೇರುಗಳ ಮೌಲ್ಯ ಸುಮಾರು 1.72 ಕೋಟಿ ರೂ. ಆಗಿದ್ದು, ರಾತ್ರೋರಾತ್ರಿ ಪ್ರಿಯಾ ಶರ್ಮಾ ಕೋಟ್ಯಧಿಪತಿಯಾಗಿದ್ದಾರೆ. ಆದರೆ ಇದನ್ನು ಪಡೆಯುವುದು ಅಷ್ಟೊಂದು ಸುಲಭವಾಗಿರಲಿಲ್ಲ.

ಬೆಂಗಳೂರಿನಲ್ಲಿ ನೆಲೆಸಿರುವ ಪ್ರಿಯಾ ತಮ್ಮ ಅಜ್ಜನ ದಾಖಲೆಗಳನ್ನು ಪಡೆಯಲು ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಪ್ರಿಯಾ ಅವರ ಅಜ್ಜನ ಉಯಿಲು ಸೇರಿದಂತೆ ಅನೇಕ ದಾಖಲೆಗಳ ಪರಿಶೀಲನೆ ಬಳಿಕವೂ ಸಾಕಷ್ಟು ತೊಡಕುಗಳು ಎದುರಾಗಿತ್ತು.

ಇದನ್ನು ಓದಿ: Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

ಕಾನೂನಿನ ನೆರವು ಪಡೆದುಕೊಂಡ ಪ್ರಿಯಾ ಅವರು ಷೇರು ಪ್ರಮಾಣಪತ್ರದಲ್ಲಿನ ಹೆಸರು ಮತ್ತು ಪ್ರಿಯಾ ಅವರ ಅಜ್ಜನ ಅಧಿಕೃತ ದಾಖಲೆಗಳ ನಡುವಿನ ವ್ಯತ್ಯಾಸವನ್ನು ಸರಿಪಡಿಸಲು ಸಾಕಷ್ಟು ಹೋರಾಟ ಮಾಡಬೇಕಾಯಿತು. ಕೊನೆಗೆ ಸುಮಾರು ಒಂದು ವರ್ಷದ ಸತತ ಪ್ರಯತ್ನದ ಅನಂತರ ಪ್ರಿಯಾ ಅವರು ಎಲ್ ಆಂಡ್ ಟಿ ನಿಂದ ಅಜ್ಜನ ಪ್ರಮಾಣ ಪತ್ರದ ದಾಖಲೆಯನ್ನು ಪಡೆದಳು. ಇದರಿಂದ ಆಕೆ ಈಗ ಕೋಟ್ಯಧಿಪತಿಯಾಗಿದ್ದಾಳೆ.

Exit mobile version