Site icon Vistara News

Viral News: ಕದಿಯಲು ಬಂದ ಮನೆಯಲ್ಲೇ ನಿದ್ದೆಹೋದ ಕಳ್ಳ; ಪೊಲೀಸರೇ ಎಬ್ಬಿಸಬೇಕಾಯಿತು!

Viral News

ಲಕ್ನೋ: ಸರ್ಕಾರಿ ನೌಕರನೊಬ್ಬನ (government employee) ಮನೆಗೆ (house) ದರೋಡೆ ಮಾಡಲು ಬಂದ ಕಳ್ಳನೊಬ್ಬ (burglars) ಕೂಲಿಂಗ್ ಎಸಿ ಪ್ರಭಾವದಿಂದ ನಿದ್ದೆಗೆ ಜಾರಿದ ಘಟನೆ ಲಕ್ನೋದಲ್ಲಿ (Lucknow) ನಡೆದಿದ್ದು, ಪೊಲೀಸರು ಬಂದ ಬಳಿಕವೇ ಆತನಿಗೆ ಎಚ್ಚರವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral News) ಆಗಿದೆ.

ಕಳ್ಳತನದ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಮನೆಗೆ ಬಂದಾಗ ಬಹಳಷ್ಟು ವಸ್ತುಗಳನ್ನು ಕಳ್ಳರು ಕದ್ದೊಯ್ದಿರುವುದು ತಿಳಿದು ಬಂದಿದೆ. ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾಗ ಆರಾಮವಾಗಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕಂಡು ಅವರು ಬೆಚ್ಚಿಬಿದ್ದರು. ಕಳ್ಳ ಎಚ್ಚರಗೊಂಡಾಗ ಅವನ ಮುಂದೆ ಪೊಲೀಸರು ಕುಳಿತಿರುವುದನ್ನು ಕಂಡು ಅವನೂ ಗಾಬರಿಗೊಂಡಿದ್ದಾನೆ. ಬಳಿಕ ಪೊಲೀಸರಿಗೆ ಸಂಪೂರ್ಣ ಕಥೆಯನ್ನು ವಿವರಿಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದರು.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ವಿಚಿತ್ರ ಘಟನೆ ಇದಾಗಿದೆ. ಕೈಗೆ ಸಿಕ್ಕಿದ್ದನ್ನೆಲ್ಲಾ ದರೋಡೆ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ ಆರಾಮ ಮತ್ತು ತಂಪಾಗಿಸುವ ಎಸಿ ಗಾಳಿಯ ಅಡಿಯಲ್ಲಿ ನಿದ್ದೆಗೆ ಜಾರಿದನು. ಇತರ ದರೋಡೆಕೋರರ ಜೊತೆಯಲ್ಲಿ ಮನೆಗೆ ಪ್ರವೇಶಿಸಿದ ಈತ ಗಾಢವಾದ ನಿದ್ರೆಯಿಂದ ಎಚ್ಚರವಾಗಲೇ ಇಲ್ಲ. ಹೀಗಾಗಿ ಇತರರು ಆತನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.

ವಾರಣಾಸಿಯಲ್ಲಿ ನಿಯೋಜನೆಗೊಂಡಿರುವ ಸರ್ಕಾರಿ ನೌಕರನಿಗೆ ಸೇರಿದ ಇಂದಿರಾನಗರದ ಸೆಕ್ಟರ್ 20ರ ಮನೆಗೆ ಕಳ್ಳರ ತಂಡ ನುಗ್ಗಿದೆ. ಕಳ್ಳರು ಈ ಮನೆಯಿಂದ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಹೋಗಿದ್ದಾರೆ. ರೂಮಿನಲ್ಲಿದ್ದ ಎಸಿಯ ಕೆಳಗೆ ಕಳ್ಳ ಮಲಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾನೆ. ಆದರೆ ಯಾವುದೋ ನಶೆಯಲ್ಲಿದ್ದ ಈತ ಇನ್ವರ್ಟರ್ ಎತ್ತಲು ಹೋಗಿದ್ದಾನೆ. ಆದರೆ ಅದಕ್ಕೂ ಮೊದಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ನಿರ್ಧರಿಸಿದ. ಕೋಣೆಯಲ್ಲಿದ್ದ ಎಸಿ ಸ್ವಿಚ್ ಆನ್ ಮಾಡಿ ಅಲ್ಲೇ ಗಟ್ಟಿಯಾಗಿ ನಿದ್ದೆಗೆ ಜಾರಿದ್ದಾನೆ.


ಇತರ ಕಳ್ಳರು ಆತನನ್ನು ಎಬ್ಬಿಸಲು ಪ್ರಯತ್ನಿಸಿದರೂ ಆತ ಎದ್ದೇಳಲಿಲ್ಲ. ಬೆಳಗ್ಗೆ ಮನೆಯ ಗೇಟ್ ತೆರೆದಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರಾಮವಾಗಿ ಮಲಗಿರುವ ಕಳ್ಳನನ್ನು ನೋಡಿದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: Rupert Murdoch: ಮಾಧ್ಯಮ ಲೋಕದ ದೊರೆಗೆ ಐದನೇ ಮದುವೆ; 93ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರೂಪರ್ಟ್ ಮುರ್ಡೋಕ್

ಪೊಲೀಸರು ಮನೆಗೆ ಬಂದ ಬಳಿಕ ಕಳ್ಳರು ಬಹಳಷ್ಟು ವಸ್ತುಗಳನ್ನು ಕದ್ದೊಯ್ದಿರುವುದು ತಿಳಿದುಬಂದಿದೆ.
ಕಳ್ಳ ಎಚ್ಚರಗೊಂಡಾಗ ಅವನ ಮುಂದೆ ಪೊಲೀಸರು ಕುಳಿತಿರುವುದನ್ನು ಕಂಡು ಆತ ಗಾಬರಿಯಾಗಿದ್ದಾನೆ. ಬಳಿಕ ಆತ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ವಿವರಿಸಿದ್ದು, ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಯುತ್ತಿದ್ದು ಇತರ ಕಳ್ಳರನ್ನು ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಇತರ ಆರೋಪಿಗಳನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version