Site icon Vistara News

Viral News: ಸಿಂಗಾಪುರ ಏರ್‌ಲೈನ್ಸ್‌ ಪೈಲಟ್‌ ಅಂತಾ ಹೇಳ್ಕೊಂಡು ಪೋಸ್‌ ಕೊಡ್ತಿದ್ದವ ಲಾಕ್‌!

ನವದೆಹಲಿ: ವಿನಾಃಕಾರಣ ಬೂಟಾಟಿಕೆ ಮಾಡೋಕೆ ಹೋಗಿ ಕೆಲವರು ಪೇಚಿಗೆ ಸಿಲುಕುವ ಘಟನೆ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನವದೆಹಲಿ (New delhi) ಯಲ್ಲಿ ನಡೆದಿದೆ. ತನ್ನನ್ನು ತಾನು ಸಿಂಗಾಪುರ ಏರ್‌ಲೈನ್ಸ್‌ (Singalore Airlines) ಪೈಲಟ್‌ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಭೂಪನನ್ನು ಅರೆಸೈನಿಕ ಪಡೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Indira Gandhi International Airport) ದಲ್ಲಿ ಬಂಧಿಸಿದೆ. ಉತ್ತರ ಪ್ರದೇಶ ಮೂಲದ 24 ವರ್ಷದ ಸಂಗೀತ್‌ ಸಿಂಗ್‌ (Sangeeth Sing) ಬಂಧಿತ ಆರೋಪಿಯಾಗಿದ್ದಾನೆ.

ಸಿಂಗಾಪುರ ಪೈಲಟ್‌ ಸಮವಸ್ತ್ರ ಧರಿಸಿ, ಕುತ್ತಿಗೆ ಐಡಿ ಕಾರ್ಡ್‌ ಹಾಕಿಕೊಂಡು ದೆಹಲಿ ಮೆಟ್ರೋದ ಸ್ಕೈವಾಕ್‌ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಸಂಗೀತ್‌, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF) ಕಣ್ಣಿಗೆ ಬಿದ್ದಿದ್ದ. ಈತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನ್ನು ಗಮನಿಸಿದ ಸಿಬ್ಬಂದಿ ಆತನನ್ನು ತಡೆದು ವಿಚಾರಿಸಿದರು. ವಿಚಾರಣೆ ವೇಳೆ ಆತನ ಬಳಿ ಇದ್ದ ಐಡಿ ಕಾರ್ಡ್‌ ನಕಲಿ ಎಂಬುದು ಬಯಲಾಗಿದೆ. ಅಷ್ಟೇ ಅಲ್ಲದೇ ಆತನ ಬಳಿ ಇದ್ದ ಎಲ್ಲಾ ದಾಖಲೆಗಳು ಕೂಡ ನಕಲಿಯಾಗಿದ್ದವು. ತನ್ನನ್ನು ತಾನು ಸಿಂಗಾಪುರ ಏರ್‌ಲೈನ್ಸ್‌ ಸಿಬ್ಬಂದಿ ಎಂಬುದನ್ನು ಬಿಂಬಿಸಿಕೊಳ್ಳಲು ಆನ್‌ಲೈನ್‌ ಆಪ್‌ ಬ್ಯುಸಿನೆಸ್‌ ಕಾರ್ಡ್‌ ಮೇಕರ್‌ ಸಹಾಯದಿಂದ ನಕಲಿ ಐಡಿ ತಯಾರು ಮಾಡಿದ್ದ. ಅಲ್ಲದೇ ದ್ವಾರಕಾದಿಂದ ಸಮವಸ್ತ್ರವನ್ನು ಖರೀದಿ ಮಾಡಿದ್ದ ಎಂಬುದು ವಿಚಾರಣೆ ವೇಳೆ ಬಟಾಬಯಲಾಗಿತ್ತು.

ಇನ್ನು ಸಂಗೀತ್‌ ಸಿಂಗ್‌ 2020ರಲ್ಲಿ ಮುಂಬೈನಲ್ಲಿ ಒಂದು ವರ್ಷದ ಏವಿಯೇಷನ್‌ ಕೋರ್ಸ್‌ ಮಾಡಿದ್ದ. ಬಳಿಕ ತನಗೆ ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಪೈಲಟ್‌ ಆಗಿ ಕೆಲಸ ಸಿಕ್ಕಿದೆ ಎಂದು ತನ್ನ ಕುಟುಂಬಸ್ಥರಿಗೆ ಸುಳ್ಳು ಹೇಳಿ ನಂಬಿಸಿದ್ದ. ಇದೀಗ ಸಂಗೀತ್‌ನನ್ನು ಅರೆಸ್ಟ್‌ ಮಾಡಿರುವ ಪೊಲೀಸರು ಆತನ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 420(ವಂಚನೆ), 468( ವಂಚನೆ ಉದ್ದೇಶದಿಂದ ಪೋರ್ಜರಿ) ಹಾಗೂ 471(ನಕಲಿ ದಾಖಲೆಗಳನ ಬಳಕೆ) ಸೆಕ್ಷನ್‌ಗಳ ಅಡಿಯಲ್ಲಿ ಸಂಗೀತ್‌ ಸಿಂಗ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ.

ಇದನ್ನೂ ಓದಿ: Viral News: ವಾಟರ್‌ ಪ್ಯೂರಿಫೈಯರ್‌ನಿಂದ ನೀರು ಕುಡಿದ ಬುದ್ಧಿವಂತ ಮಂಗ; ವಿಡಿಯೊ ನೀವೂ ನೋಡಿ

ಎರಡು ತಿಂಗಳ ಹಿಂದೆಐೂ ಇಂತಹದ್ದೇ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. ಪಾತೂರ್ ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ 12 ನೇ ತರಗತಿ ಮೊದಲ ಪರೀಕ್ಷೆಯ ಸಮಯದಲ್ಲಿ ಈ ಘಟನೆ ನಡೆದಿತ್ತು. ಪಂಗ್ರಾ ಬಂಡಿ ಮೂಲದ ಅನುಪಮ್ ಮದನ್ ಖಂಡ್ರೆ ಎಂಬಾತ ತನ್ನ ಸಹೋದರಿಯ ಮೋಸಕ್ಕೆ ಸಹಾಯ ಮಾಡಲು ಉತ್ತರ ಪ್ರತಿಗಳನ್ನು ಕಳ್ಳಸಾಗನೆ ಮಾಡಲು ‘ನಕಲಿ’ ಪೊಲೀಸ್ ಆಗಿ ಮಾರ್ಪಟ್ಟಿದ್ದ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡ ಭದ್ರಗೆಗಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿತ್ತು. ತನ್ನ ‘ಹಿರಿಯ ಅಧಿಕಾರಿಗಳನ್ನು’ ನೋಡಿದ ಖಂಡ್ರೆ ಅವರಿಗೆ ಸೆಲ್ಯೂಟ್ ಹೊಡೆದಿದ್ದ. ಆದರೆ ಪೊಲೀಸರಂತೆ ಸೆಲ್ಯೂಟ್ ಹೊಡೆಯಲು ಆತನಿಗೆ ಸಾಧ್ಯವಾಗಿರಲಿಲ್ಲ. ಆತ ತಪ್ಪಾಗಿ ಸೆಲ್ಯೂಟ್​ ಹೊಡೆದಾಗ ಹಿರಿಯ ಅಧಿಕಾರಿಗಳಿಗೆ ಅನುಮಾನ ಹುಟ್ಟು ಹಾಕಿತ್ತು. ಆತನ ಸೆಲ್ಯೂಟ್ ಪ್ರೋಟೋಕಾಲ್​ಗೆ ಅನುಗುಣವಾಗಿರಲಿಲ್ಲ. ಜತೆಗೆ ಸಮವಸ್ತ್ರದ ನಾಮಫಲಕವು ತಪ್ಪಾಗಿತ್ತು. ತಕ್ಷಣವೇ ಅವರು ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದರು.

Exit mobile version