Site icon Vistara News

Viral News: ಹೆಂಡ್ತಿಯ ಅಂತ್ಯಸಂಸ್ಕಾರ ಮುಗ್ಸಿ ಬಂದವನಿಗೆ ಕಾದಿತ್ತು ಬಿಗ್‌ ಶಾಕ್‌! ಸತ್ತವಳು 600 ಕಿ.ಮೀ ದೂರದಲ್ಲಿ ಮತ್ತೆ ಸಿಕ್ಕಿದ್ಳು

Viral News

ಲಕ್ನೋ: ಕೆಲವೊಮ್ಮೆ ಸತ್ತಂತಹ ವ್ಯಕ್ತಿಗಳು(Dead Person) ಮತ್ತೆ ಜೀವಂತ(Alive)ವಾಗಿರುವ ಘಟನೆಗಳನ್ನು ನಾವು ಟಿವಿ(TV)ಯಲ್ಲಿ ನೋಡಿರುತ್ತೇವೆ ಅಥವಾ ದಿನಪತ್ರಿಕೆ(News Paper)ಗಳಲ್ಲಿ ಓದಿರುತ್ತೇವೆ. ಕೆಲವೊಂದು ಸಮಯದಲ್ಲಿ ಮೃತ ವ್ಯಕ್ತಿಯ ದೇಹವನ್ನು ಅಂತಿಮ ಸಂಸ್ಕಾರ(Last Rituals)ಕ್ಕೆಂದು ತೆಗೆದುಕೊಂಡು ಹೋದಾಗ ಅಲ್ಲಿ ಕೆಲವರಿಗೆ ಜೀವ ಮರಳಿ ಬಂದಿರುವಂತಹ ಘಟನೆಗಳು ನಡೆದಿವೆ. ಇದೀಗ ಅಂತಹದ್ದೇ ಒಂದು ಘಟನೆ(Viral News) ಉತ್ತರಪ್ರದೇಶದಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ ಪತ್ನಿಯ ಅಂತ್ಯಸಂಸ್ಕಾರ ಮುಗಿಸಿ ದುಃಖದಲ್ಲಿದ್ದ ಪತಿಗೆ ಬಿಗ್‌ ಶಾಕ್‌ ಕಾದಿತ್ತು. ಸತ್ತ ಪತ್ನಿ 600 ಕಿ.ಮೀ ದೂರದಲ್ಲಿ ಜೀವಂತವಾಗಿ ಪತ್ತೆಯಾಗಿರುವ ಘಟನೆ ಝಾನ್ಸಿಯಲ್ಲಿ ನಡೆದಿದೆ.

ಘಟನೆ ವಿವರ:

ಗೋರಖ್‌ಪುರದ ಬನ್ಸಾಗಾವ್‌ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ರಾಮ್‌ ಸುಮೆರ್‌ (60) ಎಂಬ ವ್ಯಕ್ತಿ ಜೂ.15 ತನ್ನ ಪತ್ನಿ ಪೂಲ್‌ಮತಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್‌ ದೂರು ನೀಡಿದ್ದ. ಇದಾದ ನಾಲ್ಕು ದಿನಕ್ಕೆ ಉರುವಾ ಬಜಾರ್‌ ಪ್ರದೇಶದಲ್ಲಿ ಮಹಿಳೆಯ ಮೃತದೇಹವೊಂದು ಪತ್ತೆಯಾಗಿತ್ತು. ಅದನ್ನು ನೋಡಿದ ಸುಮೇರ್‌ ತನ್ನ ಪತ್ನಿಯ ಮೃತದೇಹ ಎಂದು ಗುರುತಿಸಿದ್ದ. ಬಳಿಕ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಿದ್ದ. ಆ ಮಹಿಳೆಯನ್ನು ಕತ್ತು ಹಿಸುಕಿ ಸಾಯಿಸಲಾಗಿತ್ತು.

ಇನ್ನು ಈ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಪೂಲ್‌ಮತಿಯ ಮೊಬೈಲ್‌ ಫೋನ್‌ ನಂಬರ್‌ ಪರಿಶೀಲನೆ ನಡೆಸಿದ್ದರು. ಪೂಲ್‌ಮತಿಯ ಮೊಬೈಲ್‌ 600 ಕಿಲೋ ಮೀಟರ್‌ ದೂರದಲ್ಲಿರುವ ಝಾನ್ಸಿಯಲ್ಲಿ ಆಕ್ಟಿವ್‌ ಆಗಿರೋದು ಪತ್ತೆ ಆಗಿತ್ತು. ಆ ಫೋನ್‌ ನಂಬರ್‌ ಮತ್ತು ಸುಲ್ತಾನ್‌ಪುರದ ಶುಭಂ ಎಂಬಾತನ ಫೋನ್‌ ನಂಬರ್‌ ನಡುವೆ ನಿರಂತರಸಂಪರ್ಕ ಇರುವುದು ಬಯಲಾಗಿತ್ತು. ಆತನನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ದೊಡ್ಡ ಶಾಕ್‌ ಕಾದಿತ್ತು. ಫೂಲ್‌ಮತಿ ಜೀವಂತವಾಗಿರುವ ಬಗ್ಗೆ ಶುಭಂ ತಿಳಿಸಿದ್ದ. ಅದೂ ಅಲ್ಲದೇ ಆಕೆ ವಾಸವಾಗಿದ್ದ ಸ್ಥಳದ ವಿಳಾಸವನ್ನು ಪೊಲೀಸರಿಗೆ ನೀಡಿದ್ದ.

ಜೂ.15ರಂದು ತನ್ನ ತವರು ಮನೆಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಟಿದ್ದ ಫೂಲ್‌ಮತಿ ಇದ್ದಕ್ಕಿದ್ದಂತೆ ನಾಪತ್ತೆ ಆಗಿದ್ದಳು. ಇದಾದ ಬಳಿಕ ಸುಮೇರ್‌ ಪೊಲೀಸರಿಗೆ ದೂರು ನೀಡಿದ್ದ ಎಂದು ಪೊಲೀಸ್‌ ಅಧಿಕಾರಿ ಜಿತೇಂದ್ರ ಕುಮಾರ್‌ ತೋಮರ್‌ ಹೇಳಿದ್ದಾರೆ. ಇನ್ನು ಫೂಲ್‌ಮತಿ ಜೀವಂತವಾಗಿದ್ದು, ಮೃತಪಟ್ಟ ಮಹಿಳೆ ಯಾರು? ಆಕೆಯನ್ನು ಕೊಲೆಗೈದವರು ಯಾರು ಎಂಬ ಬಗ್ಗೆ ತನಿಖೆ ಮುಂದುವರೆದಿದೆ. ಇನ್ನು ಮೃತದೇಹ ಪತ್ತೆಯಾದ ಸ್ಥಳಗಳಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪೊಲೀಸರು ಹೊಸ ಆಯಾಮದಲ್ಲಿ ಮರು-ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Viral Video: ಸಫಾರಿ ಕೇಂದ್ರದಲ್ಲಿ ಮಾವುತನನ್ನು ಬರ್ಬರವಾಗಿ ತುಳಿದು ಸಾಯಿಸಿದ ಆನೆ

Exit mobile version