ಸ್ಕಾಟ್ಲೆಂಡ್: ಕೆಲವು ಆಸ್ಪತ್ರೆಗಳಲ್ಲಿ ಮಕ್ಕಳ ಬದಲಾವಣೆ, ಶವ ಬದಲಾವಣೆ ಆದ ಘಟನೆಯ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಸ್ಕಾಟ್ಲೆಂಡ್‌ನ ಈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಗುವನ್ನೇ ಬದಲಿಸಿ ತಾಯಿಗೆ ಕೊಡಲಾಗಿದೆ. 48 ವರ್ಷಗಳ ಹೋರಾಟದ ನಂತರ ಇದೀಗ ತಾಯಿ ತನ್ನ ನಿಜವಾದ ಮಗುವಿನ ದೇಹದ ಭಾಗಗಳನ್ನು (Viral News) ಪಡೆದುಕೊಂಡಿದ್ದಾಳೆ.
ಇದನ್ನೂ ಓದಿ: Viral Video : ರಾಷ್ಟ್ರೀಯ ಹೆದ್ದಾರಿಯಲ್ಲಿ ಬರ್ತ್‌ಡೇ ಆಚರಿಸಿಕೊಂಡ ಯೂಟ್ಯೂಬರ್; ಪೊಲೀಸರಿಂದ ಭರ್ಜರಿ ಗಿಫ್ಟ್!
ಹೌದು. ಲಿಡಿಯಾ ರೇಯ್ಡ್ (74) ಹೆಸರಿನ ಮಹಿಳೆ 48 ವರ್ಷಗಳ ಹಿಂದೆ ಸ್ಕಾಟ್ಲೆಂಡ್‌ನ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಗೇರಿ ಎಂದು ಹೆಸರಿಡಲಾಗಿದ್ದ ಆ ಮಗು ಹುಟ್ಟಿದ ಒಂದೇ ವಾರದಲ್ಲಿ ಸಾವನ್ನಪ್ಪಿತ್ತು. ಮಗುವಿನ ಶವವನ್ನು ಕೇಳಿದಾಗ ಆಸ್ಪತ್ರೆಯವರು ಬೇರೊಂದು ಮಗುವಿನ ಶವವನ್ನು ಕೊಟ್ಟು ಕಳುಹಿಸಿದ್ದರು. ಈ ವಿಚಾರದಲ್ಲಿ ಲಿಡಿಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮಗುವಿನ ಅಂಗಾಂಗಗಳನ್ನು ಕದ್ದು ಸಂಶೋಧನೆಗೆ ಬಳಸಿಕೊಂಡಿರುವ ಸಾಧ್ಯತೆಯಿದೆ ಎಂದು ಲಿಡಿಯಾ ದೂರಿದ್ದರು. ನ್ಯಾಯಾಲಯದ ವತಿಯಿಂದ ಪರಿಶೀಲನೆ ನಡೆಸಿದಾಗ ಅದು ಸತ್ಯವೆಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಮಗುವಿನ ದೇಹದ ಕೆಲ ಅಂಗಾಂಗಳನ್ನು ಸಂಸ್ಕರಿಸಿಟ್ಟುಕೊಂಡು ಸಂಶೋಧನೆಗೆ ಬಳಸುತ್ತಿರುವುದು ಗೊತ್ತಾಗಿದೆ. ಇದೊಂದೇ ಮಗುವಲ್ಲದೆ 1970ರಿಂದ 2000ದವರೆಗೆ ಜನಿಸಿದ ಶಿಶುಗಳ ಒಟ್ಟು 6000 ಅಂಗಾಂಗ ಅಲ್ಲಿದ್ದಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: Viral Post: ಹೆಂಡತಿಯೇ ತಂಗಿ! ಮದುವೆಯಾಗಿ ಆರು ವರ್ಷಗಳ ಬಳಿಕ ಸತ್ಯ ಬಯಲಾದದ್ದು ಹೇಗೆ?
ಇದೀಗ ನ್ಯಾಯಾಲಯ ಲಿಡಿಯಾ ಅವರಿಗೆ ಅವರ ನಿಜವಾದ ಮಗುವಿನ ಅಂಗಾಂಗವನ್ನು ವಾಪಸು ಕೊಡಿಸಿದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಲಿಡಿಯಾ ಈ ವಿಚಾರದಲ್ಲಿ ತೃಪ್ತರಾಗಿದ್ದು, ಶನಿವಾರದಂದು ಮಗನ ಅಂಗಾಂಗಕ್ಕೆ ಅಂತ್ಯಸಂಸ್ಕಾರ ಮಾಡುವುದಾಗಿ ಹೇಳಿದ್ದಾರೆ. ಮಗುವಿನ ಇನ್ನುಳಿದ ದೇಹ ಎಲ್ಲಿದೆ ಎಂದೂ ತಿಳಿದಿಲ್ಲ ಎಂದು ಮರುಗಿದ್ದಾರೆ.