ನವದೆಹಲಿ: ಮಗುವೊಂದು ಹುಟ್ಟಿತೆಂದರೆ ಒಂದು ಮನೆಯಲ್ಲಿ, ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ. ಅದೇ ಅವಳಿ ಜವಳಿ ಮಕ್ಕಳು ಹುಟ್ಟಿತೆಂದರೆ ಆ ಖುಷಿ ಇನ್ನು ಡಬಲ್ ಆಗುತ್ತದೆ. ಕೆಲವೊಂದು ಸಂದರ್ಭದಲ್ಲಿ ತಾಯಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆಗಳು ಬಹಳಷ್ಟು ಸರಿ ನಡೆದಿದೆ. ಇನ್ನೂ ಮುಂದುವರೆದು ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ ಘಟನೆಗಳೂ ನಡೆದಿದ್ದಿದೆ. ಆದರೆ ಇಲ್ಲೊಬ್ಬ ತಾಯಿ ಐದು ಮಕ್ಕಳಿಗೆ(Five babies) ಏಕಕಾಲದಲ್ಲಿ ಜನ್ಮ ನೀಡಿರುವ ಘಟನೆ(Viral News) ವರದಿಯಾಗಿದೆ.
ಈ ಅಪರೂಪದಲ್ಲಿ ಅಪರೂಪವಾದ ಘಟನೆ ನಡೆದಿದ್ದು ಬಿಹಾರದಲ್ಲಿ. ಇಲ್ಲಿನ ಕೃಷ್ಣಗಂಜ್ ಜಿಲ್ಲೆಯ ಪೋತಿಹಾ ತಾಲೂಕಿನಲ್ಲಿರುವ ಖಾಸಗಿ ನರ್ಸಿಂಗ್ ಹೋಂನಲ್ಲಿ ಮಹಿಳೆಗೆ ಹೆರಿಗೆಯಾಗಿದೆ. ಇನ್ನು ಜನಿಸಿದ ಎಲ್ಲಾ ಐದು ಮಕ್ಕಳ ಹೆಣ್ಣು ಮಕ್ಕಳಾಗಿದ್ದು, ಮಹಿಳೆಗೆ ಸುಖ ಪ್ರಸವ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮಕ್ಕಳು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮಕ್ಕಳನ್ನು ವೈದ್ಯರು ನಿಗಾದಲ್ಲಿಟ್ಟಿದ್ದಾರೆ.
ಇನ್ನು 2021ರಲ್ಲಿ ಮೊರಾಕೋದಲ್ಲಿ ಮಹಿಳೆಯೊಬ್ಬಳು ಏಕಕಾಲದಲ್ಲಿ ಒಂಬತ್ತು ಮಕ್ಕಳಿಗೆ ಜನ್ಮ ನೀಡಿ ಇಡೀ ಪ್ರಪಂಚದ ಮಂದಿಯನ್ನು ಬೆಸ್ತು ಬೀಳಿಸಿದ್ದಳು. ಈ ಕುರಿತು ಅಧಿಕೃತವಾಗಿ ತಿಳಿಸಿರುವ ಮೊರಕೊ ಸರ್ಕಾರ, ಇದೊಂದು ಅಪರೂಪದಲ್ಲಿಯೇ ಅಪರೂಪ ಘಟನೆಯಾಗಿದೆ. ಒಂಭತ್ತು ಮಕ್ಕಳು ಕೂಡ ಆರೋಗ್ಯವಾಗಿದ್ದಾವೆ ಎಂದು ತಿಳಿಸಿದ್ದು, ಇದರಲ್ಲಿ ಐದು ಮಕ್ಕಳು ಹೆಣ್ಣಾಗಿದ್ದು, ನಾಲ್ಕು ಮಕ್ಕಳು ಗಂಡಾಗಿದ್ದವು.
ಪಾಕಿಸ್ತಾನದಲ್ಲೂ ಇಂತಹದ್ದೇ ಅಪರೂಪದ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ಒಂದೇ ಹೆರಿಗೆಯಲ್ಲಿ ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಏಪ್ರಿಲ್ 19 ರಂದು ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ಮಹಾತಾಯಿ 6 ಮಕ್ಕಳಿಗೆ ( ಜನ್ಮ ನೀಡಿರುವುದನ್ನ ಪಾಕಿಸ್ತಾನದ ಡಾನ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಆರು ಮಕ್ಕಳಲ್ಲಿ ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ:Crude Bomb: ಚೆಂಡೆಂದು ಭಾವಿಸಿ ಬಾಂಬ್ ಜೊತೆ ಮಕ್ಕಳ ಆಟ; ಪಶ್ಚಿಮ ಬಂಗಾಳದಲ್ಲಿ ಭಾರೀ ಸ್ಫೋಟ
ಹೆಚ್ಚು ಮಕ್ಕಳು ಹುಟ್ಟಲು ಕಾರಣವೇನು?
ವೀರ್ಯವು ಮೊಟ್ಟೆಯೊಂದಿಗೆ ಒಂದುಗೂಡಿದಾಗ ಸಾಮಾನ್ಯವಾಗಿ ಭ್ರೂಣವು ರೂಪುಗೊಳ್ಳುತ್ತದೆ. ಆದರೆ ಕೆಲವೊಮ್ಮೆ ಅವುಗಳನ್ನು ಎರಡಕ್ಕಿಂತ ಹೆಚ್ಚು ಭ್ರೂಣಗಳು ರೂಪುಗೊಂಡಾಗ ಅವಳಿ ಮಕ್ಕಳು ಹುಟ್ಟುತ್ತಾರೆ. ಕೆಲವು ಸಂದರ್ಭಗಳಲ್ಲಿ, ಅಂಡಾಣು ಗರ್ಭಾಶಯವನ್ನು ತಲುಪುವ ಮೊದಲು ಬೇರ್ಪಡುತ್ತದೆ, ಆಗ ಅವಳಿಗಳಿಗೆ ಜನ್ಮ ನೀಡುತ್ತಾರೆ. ಅಥವಾ ವಿಭಿನ್ನ ವೀರ್ಯವು ವಿಭಿನ್ನ ಮೊಟ್ಟೆಗಳೊಂದಿಗೆ ಒಂದಾದಾಗ ಈ ರೀತಿಯ ಅಪರೂಪದ ಘಟನೆ ಸಂಭವಿಸುತ್ತದೆ.ಆ ಸಮಯದಲ್ಲಿಯೇ ಮೊಟ್ಟೆಗಳು ಎರಡಕ್ಕಿಂತ ಹೆಚ್ಚು ವಿಭಜನೆಗೊಂಡು ಗರ್ಭಾಶಯದೊಳಗೆ ಹೋಗುತ್ತವೆ. ಬಹಳ ವಿರಳವಾಗಿ ಅವರು ಆರು ಭಾಗಗಳಾಗಿ ವಿಭಜಿಸುತ್ತವೆ. ಆಗ ಮಾತ್ರ ಒಂದು ಗರ್ಭದಲ್ಲಿ ಆರು ಶಿಶುಗಳು ಜನಿಸುತ್ತವೆ. ಇದು ಅಪರೂಪ ಆದರೆ ತುಂಬಾ ಅಪಾಯಕಾರಿ. ಕೆಲವೊಮ್ಮೆ ತಾಯಿ ಸಾಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಹುಟ್ಟುವುದು ಸಾಮಾನ್ಯವಾಗಿದೆ.