ಆಸ್ಟ್ರೇಲಿಯಾ: ಚಂದ ಕಾಣಬೇಕು ಎಂದು ಏನೇನೋ ಸರ್ಕಸ್ ಮಾಡುವವರನ್ನು ನೋಡಿರುತ್ತೀರಿ. ಹೆಚ್ಚು ಹಣ ಇರುವವರು ಅದಕ್ಕೆಂದೇ ಪ್ಲಾಸ್ಟಿಕ್ ಸರ್ಜರಿಗಳನ್ನೂ ಮಾಡಿಸಿಕೊಂಡುಬಿಡುತ್ತಾರೆ. ಹಾಗೆಯೇ ಆಸ್ಟ್ರೇಲಿಯಾದ ಜ್ಯಾಜ್ಮಿನ್ ಫಾರೆಸ್ಟ್ ಹೆಸರಿನ ಯುವತಿ ಸುಂದರವಾಗಿ ಕಾಣಬೇಕೆಂದೇ ಸಾಕಷ್ಟು ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಅದಕ್ಕೆಂದೇ ಆಕೆ ಬರೋಬ್ಬರಿ ಒಂದು ಲಕ್ಷ ಡಾಲರ್‌ಗೂ ಅಧಿಕ ಹಣ ಸುರಿದಿದ್ದಾಳಂತೆ!
ಜ್ಯಾಜ್ಮಿನ್‌ಗೆ ಚಿಕ್ಕವಳಿದ್ದಾಗಲೇ ಚಂದ ಕಾಣುವ ಬಗ್ಗೆ ಆಸೆ ಹುಟ್ಟಿತ್ತಂತೆ. ಸುಂದರವಾಗಿರುವವರಿಗೆ ಸಮಾಜ ಹೆಚ್ಚಿನ ಬೆಲೆ ಕೊಡುತ್ತದೆ ಎನ್ನುವುದು ಅರ್ಥವಾಗಿತ್ತಂತೆ. ಅದೇ ಕಾರಣಕ್ಕೆ ಆಕೆ ಚೆನ್ನಾಗಿ ಕಾಣಬೇಕೆಂದು ಪಣ ತೊಟ್ಟಿದ್ದಾಳೆ. ತನ್ನ 18ನೇ ವಯಸ್ಸಿನಲ್ಲೇ ಸ್ತನ ಹೆಚ್ಚಾಗಿಸಿಕೊಳ್ಳುವ ಆಪರೇಷನ್ ಮಾಡಿಸಿಕೊಂಡಿದ್ದಾಳೆ. ಅದೇ ವರ್ಷ ಲಿಪ್ ಫಿಲ್ಲರ್ ಆಪರೇಷನ್ ಅನ್ನೂ ಮಾಡಿಸಿಕೊಂಡಿದ್ದಾಳೆ.
ಇದನ್ನೂ ಓದಿ: Viral News : ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಟ್ವೀಟ್; ಕನ್ನಡಿಗರ ಆಕ್ರೋಶಕ್ಕೆ ಡಿಲೀಟ್
ಇದೀಗ 25 ವರ್ಷದವಳಾಗಿರುವ ಜ್ಯಾಜ್ಮಿನ್ ಈಗಾಗಲೇ ಹಲವಾರು ರೀತಿಯ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಜಾ ಲೈನ್ ಸರಿ ಮಾಡಿಸಿಕೊಳ್ಳುವುದು, ಹಣೆ ಚಿಕ್ಕದಾಗಿ ಮಾಡಿಸಿಕೊಳ್ಳುವುದು, ಮೂಗನ್ನು ಚಿಕ್ಕದಾಗಿ ಮಾಡಿಸಿಕೊಳ್ಳುವುದು, ಕೆನ್ನೆ ತುಂಬಿಸಿಕೊಳ್ಳುವುದು ಸೇರಿದಂತೆ ಹಲವಾರು ರೀತಿಯ ಪ್ಲಾಸ್ಟಿಕ್ ಸರ್ಜರಿಗಳನ್ನೂ ಮಾಡಿಸಿಕೊಂಡಿದ್ದಾರೆ.
“ನಾನು ಇದ್ದಂತೇ ಇದ್ದಿದ್ದರೆ ಜನರು ನನಗೆ ಹೆಚ್ಚಿನ ಬೆಲೆ ಕೊಡುತ್ತಿರಲಿಲ್ಲ. ಈ ಪ್ಲಾಸ್ಟಿಕ್ ಸರ್ಜರಿಗಳಿಂದಾಗಿ ನನ್ನ ರೂಪವೇ ಬದಲಾಗಿದೆ. ಅಲ್ಲದೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ನನಗೆ ಹೆಚ್ಚಿನ ಬೆಲೆ ಕೊಡುತ್ತಿದ್ದಾರೆ. ನನಗೂ ಕೂಡ ಹೆಚ್ಚಿನ ಆತ್ಮವಿಶ್ವಾಸ ಬಂದಿದೆ. ಇನ್ನೂ ಹಲವಾರು ಪ್ಲಾಸ್ಟಿಕ್ ಸರ್ಜರಿಗಳನ್ನು ನಾನು ಮಾಡಿಸಿಕೊಳ್ಳಬೇಕಿದೆ. ಅವೆಲ್ಲವೂ ನನ್ನ ಡ್ರೀಮ್ ಪ್ಲಾಸ್ಟಿಕ್ ಸರ್ಜರಿಗಳಾಗಿವೆ” ಎನ್ನುತ್ತಾರೆ ಜ್ಯಾಜ್ಮಿನ್.
ಇದನ್ನೂ ಓದಿ: Viral Video: ಕಾರು-ಫ್ಲೈಟ್ ಬಿಟ್ಟು, ರಾತ್ರಿ ಟ್ರಕ್ನಲ್ಲಿ ಚಂಡಿಗಢಕ್ಕೆ ಹೋದ ರಾಹುಲ್ ಗಾಂಧಿ
ಅಂದ ಹಾಗೆ ಈ ರೀತಿ ಸೌಂದರ್ಯಕ್ಕಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವವರು ಇವರು ಮೊದಲೇನಲ್ಲ. ಈ ರೀತಿ ಹಲವಾರು ಮಂದಿ ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿಕೊಂಡು ಚಂದ ಕಾಣುವ ಪ್ರಯತ್ನ ಮಾಡಿದ್ದಾರೆ.