Viral News : ಬಾರ್ಬಿಯಂತೆ ಕಾಣುವುದಕ್ಕಾಗಿ 90 ಲಕ್ಷ ರೂ. ಖರ್ಚು ಮಾಡಿದ ಯುವತಿ! - Vistara News

ವೈರಲ್ ನ್ಯೂಸ್

Viral News : ಬಾರ್ಬಿಯಂತೆ ಕಾಣುವುದಕ್ಕಾಗಿ 90 ಲಕ್ಷ ರೂ. ಖರ್ಚು ಮಾಡಿದ ಯುವತಿ!

ಆಸ್ಟ್ರೇಲಿಯಾದ ಹುಡುಗಿಯೊಬ್ಬಳು ಬಾರ್ಬಿಯಂತೆ ಕಾಣುವುದಕ್ಕಾಗಿ ಹಲವಾರು ಪ್ಲಾಸ್ಟಿಕ್‌ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಈಗ ಇವಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾಳೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಸ್ಟ್ರೇಲಿಯಾ: ಚಂದ ಕಾಣಬೇಕು ಎಂದು ಏನೇನೋ ಸರ್ಕಸ್‌ ಮಾಡುವವರನ್ನು ನೋಡಿರುತ್ತೀರಿ. ಹೆಚ್ಚು ಹಣ ಇರುವವರು ಅದಕ್ಕೆಂದೇ ಪ್ಲಾಸ್ಟಿಕ್‌ ಸರ್ಜರಿಗಳನ್ನೂ ಮಾಡಿಸಿಕೊಂಡುಬಿಡುತ್ತಾರೆ. ಹಾಗೆಯೇ ಆಸ್ಟ್ರೇಲಿಯಾದ ಜ್ಯಾಜ್ಮಿನ್‌ ಫಾರೆಸ್ಟ್‌ ಹೆಸರಿನ ಯುವತಿ ಸುಂದರವಾಗಿ ಕಾಣಬೇಕೆಂದೇ ಸಾಕಷ್ಟು ಪ್ಲಾಸ್ಟಿಕ್‌ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಅದಕ್ಕೆಂದೇ ಆಕೆ ಬರೋಬ್ಬರಿ ಒಂದು ಲಕ್ಷ ಡಾಲರ್‌ಗೂ ಅಧಿಕ ಹಣ ಸುರಿದಿದ್ದಾಳಂತೆ!

ಜ್ಯಾಜ್ಮಿನ್‌ಗೆ ಚಿಕ್ಕವಳಿದ್ದಾಗಲೇ ಚಂದ ಕಾಣುವ ಬಗ್ಗೆ ಆಸೆ ಹುಟ್ಟಿತ್ತಂತೆ. ಸುಂದರವಾಗಿರುವವರಿಗೆ ಸಮಾಜ ಹೆಚ್ಚಿನ ಬೆಲೆ ಕೊಡುತ್ತದೆ ಎನ್ನುವುದು ಅರ್ಥವಾಗಿತ್ತಂತೆ. ಅದೇ ಕಾರಣಕ್ಕೆ ಆಕೆ ಚೆನ್ನಾಗಿ ಕಾಣಬೇಕೆಂದು ಪಣ ತೊಟ್ಟಿದ್ದಾಳೆ. ತನ್ನ 18ನೇ ವಯಸ್ಸಿನಲ್ಲೇ ಸ್ತನ ಹೆಚ್ಚಾಗಿಸಿಕೊಳ್ಳುವ ಆಪರೇಷನ್‌ ಮಾಡಿಸಿಕೊಂಡಿದ್ದಾಳೆ. ಅದೇ ವರ್ಷ ಲಿಪ್‌ ಫಿಲ್ಲರ್‌ ಆಪರೇಷನ್‌ ಅನ್ನೂ ಮಾಡಿಸಿಕೊಂಡಿದ್ದಾಳೆ.

ಇದನ್ನೂ ಓದಿ: Viral News : ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಟ್ವೀಟ್‌; ಕನ್ನಡಿಗರ ಆಕ್ರೋಶಕ್ಕೆ ಡಿಲೀಟ್‌
ಇದೀಗ 25 ವರ್ಷದವಳಾಗಿರುವ ಜ್ಯಾಜ್ಮಿನ್‌ ಈಗಾಗಲೇ ಹಲವಾರು ರೀತಿಯ ಪ್ಲಾಸ್ಟಿಕ್‌ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ. ಜಾ ಲೈನ್‌ ಸರಿ ಮಾಡಿಸಿಕೊಳ್ಳುವುದು, ಹಣೆ ಚಿಕ್ಕದಾಗಿ ಮಾಡಿಸಿಕೊಳ್ಳುವುದು, ಮೂಗನ್ನು ಚಿಕ್ಕದಾಗಿ ಮಾಡಿಸಿಕೊಳ್ಳುವುದು, ಕೆನ್ನೆ ತುಂಬಿಸಿಕೊಳ್ಳುವುದು ಸೇರಿದಂತೆ ಹಲವಾರು ರೀತಿಯ ಪ್ಲಾಸ್ಟಿಕ್‌ ಸರ್ಜರಿಗಳನ್ನೂ ಮಾಡಿಸಿಕೊಂಡಿದ್ದಾರೆ.

“ನಾನು ಇದ್ದಂತೇ ಇದ್ದಿದ್ದರೆ ಜನರು ನನಗೆ ಹೆಚ್ಚಿನ ಬೆಲೆ ಕೊಡುತ್ತಿರಲಿಲ್ಲ. ಈ ಪ್ಲಾಸ್ಟಿಕ್‌ ಸರ್ಜರಿಗಳಿಂದಾಗಿ ನನ್ನ ರೂಪವೇ ಬದಲಾಗಿದೆ. ಅಲ್ಲದೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ನನಗೆ ಹೆಚ್ಚಿನ ಬೆಲೆ ಕೊಡುತ್ತಿದ್ದಾರೆ. ನನಗೂ ಕೂಡ ಹೆಚ್ಚಿನ ಆತ್ಮವಿಶ್ವಾಸ ಬಂದಿದೆ. ಇನ್ನೂ ಹಲವಾರು ಪ್ಲಾಸ್ಟಿಕ್‌ ಸರ್ಜರಿಗಳನ್ನು ನಾನು ಮಾಡಿಸಿಕೊಳ್ಳಬೇಕಿದೆ. ಅವೆಲ್ಲವೂ ನನ್ನ ಡ್ರೀಮ್‌ ಪ್ಲಾಸ್ಟಿಕ್‌ ಸರ್ಜರಿಗಳಾಗಿವೆ” ಎನ್ನುತ್ತಾರೆ ಜ್ಯಾಜ್ಮಿನ್‌.

ಇದನ್ನೂ ಓದಿ: Viral Video: ಕಾರು-ಫ್ಲೈಟ್​​ ಬಿಟ್ಟು, ರಾತ್ರಿ ಟ್ರಕ್​​ನಲ್ಲಿ ಚಂಡಿಗಢಕ್ಕೆ ಹೋದ ರಾಹುಲ್ ಗಾಂಧಿ
ಅಂದ ಹಾಗೆ ಈ ರೀತಿ ಸೌಂದರ್ಯಕ್ಕಾಗಿ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳುವವರು ಇವರು ಮೊದಲೇನಲ್ಲ. ಈ ರೀತಿ ಹಲವಾರು ಮಂದಿ ದೇಹಕ್ಕೆ ಪ್ಲಾಸ್ಟಿಕ್‌ ಸರ್ಜರಿಗಳನ್ನು ಮಾಡಿಸಿಕೊಂಡು ಚಂದ ಕಾಣುವ ಪ್ರಯತ್ನ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Kangana Ranaut: ನನ್ನನ್ನು ಭೇಟಿಯಾಗಲು ಬರುವವರು ಆಧಾರ್‌ ಕಾರ್ಡ್‌ ತನ್ನಿ ಎಂದ ಕಂಗನಾ ರಣಾವತ್;‌ ಏನ್‌ ದೌಲತ್ತು ನೋಡಿ!

Kangana Ranaut: ಮಂಡಿ ಕ್ಷೇತ್ರದಲ್ಲಿ ನನ್ನನ್ನು ಭೇಟಿಯಾಗಲು ಬರುವವರು ಜತೆಗೆ ಆಧಾರ್‌ ಕಾರ್ಡ್‌ ತರಬೇಕು. ನೀವು ಯಾವುದೇ ರೀತಿಯ ತೊಂದರೆ ಅನುಭವಿಸದರಿಲು ನಿಮ್ಮ ಕೆಲಸದ ಕುರಿತು ಪತ್ರದಲ್ಲಿ ಬರೆದುಕೊಂಡು ಬರಬೇಕು ಎಂದು ಕಂಗನಾ ರಣಾವತ್‌ ಅವರು ಹೇಳಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

VISTARANEWS.COM


on

Kangana Ranaut
Koo

ಶಿಮ್ಲಾ: ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಅವರು ಗೆಲುವು ಸಾಧಿಸಿ, ಈಗ ಸಂಸದೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಂಗನಾ ರಣಾವತ್‌ ಅವರು ಈಗ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. “ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಲು ಬರುವಾಗ ಆಧಾರ್‌ ಕಾರ್ಡ್‌ ತರಬೇಕು” ಎಂದು ಅವರು ಹೇಳಿದ್ದು, ಕಾಂಗ್ರೆಸ್‌ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.

“ಹಿಮಾಚಲ ಪ್ರದೇಶಕ್ಕೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಮಂಡಿ ಕ್ಷೇತ್ರದಲ್ಲಿ ನನ್ನನ್ನು ಭೇಟಿಯಾಗಲು ಬರುವವರು ಜತೆಗೆ ಆಧಾರ್‌ ಕಾರ್ಡ್‌ ತರಬೇಕು. ನೀವು ಯಾವುದೇ ರೀತಿಯ ತೊಂದರೆ ಅನುಭವಿಸದರಿಲು ನಿಮ್ಮ ಕೆಲಸದ ಕುರಿತು ಪತ್ರದಲ್ಲಿ ಬರೆದುಕೊಂಡು ಬರಬೇಕು” ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಕಂಗನಾ ರಣಾವತ್‌ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನಾಯಕ, ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದ ವಿಕ್ರಮಾದಿತ್ಯ ಸಿಂಗ್‌ ಅವರು ತಿರುಗೇಟು ನೀಡಿದ್ದು, “ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ. ನನ್ನನ್ನು ಭೇಟಿಯಾಗಲು ಬರುವವರು ಆಧಾರ್‌ ಕಾರ್ಡ್‌ ತರಬೇಕಿಲ್ಲ” ಎಂದಿದ್ದಾರೆ.

“ಜನಪ್ರತಿನಿಧಿಗಳಾದವರು ಜನರನ್ನು ಭೇಟಿ ಮಾಡಲು ಹಿಂಜರಿಯಬಾರದು ಹಾಗೂ ಅದು ಅವರ ಜವಾಬ್ದಾರಿಯಾಗಿದೆ. ರಾಜ್ಯದ ಪ್ರತಿಯೊಬ್ಬರೂ ಜನಪ್ರತಿನಿಧಿಗಳನ್ನು ಭೇಟಿಯಾಗಬಹುದು. ಸಣ್ಣ ಕೆಲಸ ಇರಲಿ, ದೊಡ್ಡ ಕೆಲಸ ಇರಲಿ, ನೀತಿಗಳ ಕುರಿತೇ ಇರಲಿ ಅಥವಾ ವೈಯಕ್ತಿಕ ಕೆಲಸಗೇ ಇರಲಿ, ಪ್ರತಿಯೊಬ್ಬರೂ ಜನಪ್ರತಿನಿಧಿಗಳನ್ನು ಭೇಟಿಯಾಗಬೇಕು ಹಾಗೂ ಅದಕ್ಕೆ ಜನಪ್ರತಿನಿಧಿಗಳು ಮುಕ್ತ ಅವಕಾಶ ನೀಡಬೇಕು” ಎಂದಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕಂಗನಾ ರಣಾವತ್‌ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ 72,088 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ನಟನೆ ತೊರೆಯುವುದಾಗಿ ಕಂಗನಾ ರಣಾವತ್‌ ಈಗಾಗಲೇ ಘೋಷಣೆ ಮಾಡಿದ್ದಾರೆ. ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ ಈ ಘೋಷಣೆ ಮಾಡಿದ್ದರು

“ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

ಇದನ್ನೂ ಓದಿ: Kangana Ranaut: ನಿಮ್ಮೊಳಗೆ ರಾಷ್ಟ್ರೀಯ ಪ್ರಶಸ್ತಿ ಇದೆಯಾ ಎಂದು ಕಂಗನಾಗೆ ಡಬಲ್‌ ಮೀನಿಂಗ್‌ ಪ್ರಶ್ನೆ;ಬಿದ್ದು ಬಿದ್ದು ನಕ್ಕ ಆರ್ ಮಾಧವನ್!

Continue Reading

ವೈರಲ್ ನ್ಯೂಸ್

Viral Video: ʼಡ್ಯೂಟಿ ಮುಗಿದ ಮೇಲೆ ಮನೆ ಬಾʼ ಎಂದು ಕರೆದ ASI; ಆಮೇಲೆ ಆಗಿದ್ದೇ ಬೇರೆ! ಸ್ಪೈಸ್‌ಜೆಟ್‌ ಸಿಬ್ಬಂದಿ ವಿಡಿಯೋ ವೈರಲ್‌

Viral Video: CISF ಅಧಿಕಾರಗಳ ಪ್ರಕಾರ ಸ್ಪೈಸ್‌ ಜೆಟ್‌ ಸಿಬ್ಬಂದಿ ಅನುರಾಧ ರಾಣಿಯನವರು ನಿನ್ನೆ ಸಂಜೆ 4ಗಂಟೆಗೆ ತಮ್ಮ ಸಹದ್ಯೋಗಿಗಳ ಜೊತೆ ವಿಮಾನ ನಿಲ್ದಾಣ ಪ್ರವೇಶಿಸುವಾಗ ಅವರ ಬಳಿ ಇದ್ದ ಅನುಮತಿ ಪತ್ರ ಅವಧಿ ಮೀರಿದ ಕಾರಣ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಗಿರಿರಾಜ್‌ ಪ್ರಸಾದ್‌ ಅವರನ್ನು ತಡೆದಿದ್ದಾರೆ. ಅಲ್ಲದೇ ಅಲ್ಲೇ ಪಕ್ಕದಲ್ಲಿದ್ದ ಸ್ಕ್ರೀನಿಂಗ್‌ ರೂಂ ತೆರಳಿ ತಪಾಸನೆಗೊಳಪಡುವಂತೆ ಅನುರಾಧ ಅವರನ್ನು ಗಿರಿರಾಜ್‌ ಪ್ರಸಾದ್‌ ಹೇಳಿದ್ದರು. ಆ ಸಮಯದಲ್ಲಿ ಅಲ್ಲಿ ಯಾವುದೇ ಮಹಿಳಾ CISF ಅಧಿಕಾರಿಗಳು ಅಲ್ಲಿ ಇರಲಿಲ್ಲ.

VISTARANEWS.COM


on

Viral Video
Koo

ಜೈಪುರ: ಸ್ಪೈಸ್‌ಜೆಟ್‌ನ(SpiceJet) ಮಹಿಳಾ ಸಿಬ್ಬಂದಿ ಎಎಸ್‌ಐಗೆ ಕಪಾಳಮೋಕ್ಷ ಮಾಡಿರುವ ಘಟನೆ ಜೈಪುರ ವಿಮಾನ ನಿಲ್ದಾಣ(Jaipur Airport)ದಲ್ಲಿ ನಡೆದಿದೆ. ಘಟನೆ ಬಳಿಕ ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇನ್ನು ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ?

CISF ಅಧಿಕಾರಗಳ ಪ್ರಕಾರ ಸ್ಪೈಸ್‌ ಜೆಟ್‌ ಸಿಬ್ಬಂದಿ ಅನುರಾಧ ರಾಣಿಯನವರು ನಿನ್ನೆ ಸಂಜೆ 4ಗಂಟೆಗೆ ತಮ್ಮ ಸಹದ್ಯೋಗಿಗಳ ಜೊತೆ ವಿಮಾನ ನಿಲ್ದಾಣ ಪ್ರವೇಶಿಸುವಾಗ ಅವರ ಬಳಿ ಇದ್ದ ಅನುಮತಿ ಪತ್ರ ಅವಧಿ ಮೀರಿದ ಕಾರಣ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಗಿರಿರಾಜ್‌ ಪ್ರಸಾದ್‌ ಅವರನ್ನು ತಡೆದಿದ್ದಾರೆ. ಅಲ್ಲದೇ ಅಲ್ಲೇ ಪಕ್ಕದಲ್ಲಿದ್ದ ಸ್ಕ್ರೀನಿಂಗ್‌ ರೂಂ ತೆರಳಿ ತಪಾಸನೆಗೊಳಪಡುವಂತೆ ಅನುರಾಧ ಅವರನ್ನು ಗಿರಿರಾಜ್‌ ಪ್ರಸಾದ್‌ ಹೇಳಿದ್ದರು. ಆ ಸಮಯದಲ್ಲಿ ಅಲ್ಲಿ ಯಾವುದೇ ಮಹಿಳಾ CISF ಅಧಿಕಾರಿಗಳು ಅಲ್ಲಿ ಇರಲಿಲ್ಲ.

ಆಗ ಗಲಾಟೆ ಶುರುವಾಗಿತ್ತು. ಇಬ್ಬರ ನಡುವೆ ಭಾರೀ ವಾಗ್ವಾದ ನಡೆದಿತ್ತು. ಮಾತಿಗೆ ಮಾತು ಬೆಳೆದು ಕೋಪದ ಭರದಲ್ಲಿ ಅನುರಾಧ ಅವರು ಗಿರಿರಾಜ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಜೈಪುರ ಸ್ಟೇಷನ್‌ ಹೌಸ್‌ ಆಫೀಸರ್‌ ರಾಮ್‌ ಲಾಲ್‌ ಹೇಳಿದ್ದಾರೆ. ಇನ್ನು ಘಟನೆ ಬಗ್ಗೆ ಸ್ಪೈಸ್‌ ಜೆಟ್‌ ವಕ್ತಾರರು ಪ್ರತಿಕ್ರಿಯಿಸಿದ್ದು, ಅನುರಾಧ ರಾಣಿಯವರ ಬಳಿಕ ಅಧಿಕೃತ ಏರ್‌ಪೋರ್ಟ್‌ ಪ್ರವೇಶ ಪತ್ರ ಇತ್ತು. ಎಎಸ್‌ಐ ಗಿರಿರಾಜ್‌ ಅವರು ಅನುರಾಧ ರಾಣಿಯವರ ಜೊತೆ ಅನುಚಿತವಾಗಿ ವರ್ತಿಸಿದ್ದರು. ಅಲ್ಲದೇ ತಮ್ಮ ಡ್ಯೂಟಿ ಟೈಂ ಮುಗಿದ ಮೇಲೆ ತಮ್ಮ ಮನೆಗೆ ಬರುವಂತೆ ಕರೆದಿದ್ದರು ಎಂದು ಆರೋಪಿಸಿದೆ.

ಸ್ಪೈಸ್‌ಜೆಟ್ ತನ್ನ ಮಹಿಳಾ ಉದ್ಯೋಗಿ ವಿರುದ್ಧ ಲೈಂಗಿಕ ಕಿರುಕುಳದ ಈ ಗಂಭೀರ ಪ್ರಕರಣದಲ್ಲಿ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದೆ. ನಾವು ನಮ್ಮ ಉದ್ಯೋಗಿಯ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಮತ್ತು ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ” ಎಂದು ವಕ್ತಾರರು ಸೇರಿಸಿದ್ದಾರೆ.

ಸ್ಪೈಸ್ ಜೆಟ್ (SpiceJet) ವಿಮಾನ (Airlines) ಸಿಬ್ಬಂದಿಯ ಎಡವಟ್ಟಿನಿಂದಾಗಿ 12 ಗಂಟೆಗಳ ಕಾಲ ವಿಮಾನ ಟೇಕ್ ಆಫ್ (Delhi Bangalore Flight) ಆಗದೆ, ಬೆಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ದಿಲ್ಲಿಯಲ್ಲಿಯೇ ವಿಮಾನದೊಳಗೇ ಕೊಳೆಯುವಂತಾಯಿತು. ನಿನ್ನೆ ಸಂಜೆ ಬೆಂಗಳೂರಿಗೆ ಬರಬೇಕಿದ್ದ ವಿಮಾನ, ಕಡೆಗೂ ಬೆಳಿಗ್ಗೆ ಟೇಕ್ ಆಫ್ (Take Off) ಆಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Devanahalli International Airport) ಬಂದಿತ್ತು.

ಇದನ್ನೂ ಓದಿ:Govt Employees: ಸರ್ಕಾರಿ ನೌಕರರ ವಿಮಾ ಪಾಲಿಸಿಗಳ ಮೊತ್ತಕ್ಕೆ ಬೋನಸ್‌ ನೀಡಲು ರಾಜ್ಯ ಸರ್ಕಾರ ಆದೇಶ!

Continue Reading

Latest

Weight Loss: ಈ ವ್ಯಕ್ತಿ 445 ಕೆ.ಜಿ ಇದ್ದರು, ಈಗ 228 ಕೆ.ಜಿಗೆ ಇಳಿದಿದ್ದಾರೆ! ಇವರ ಬದುಕು ಕರುಣಾಜನಕ

Weight Loss: ಸಫೋಲ್ಕ್ ನಿವಾಸಿ ಪಾಲ್ ಮೇಸನ್ ಒಂದು ಕಾಲದಲ್ಲಿ 444.5 ಕೆಜಿ ತೂಕವನ್ನು ಹೊಂದಿದ್ದರು. ಆದರೆ ತೂಕ ಇಳಿಸಿಕೊಂಡು ಈಗ 228 ಕೆಜಿ ತೂಕ ಹೊಂದಿದ್ದಾರೆ. ಆದರೆ ವಿಪರ್ಯಾಸವೆನೆಂದರೆ ಅವರಿಗೆ ತಮ್ಮ ಕಾಲಿನಿಂದ ನಡೆಯಲು ಆಗುತ್ತಿಲ್ಲ, ಅವರು ಕಾಲಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಅವರು ಮತ್ತೆ ಎಂದಿಗೂ ನಡೆಯುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ . ಇವರ ಬದುಕಿನ ಕತೆ ಇಲ್ಲಿದೆ.

VISTARANEWS.COM


on

Koo

ತೂಕ ಹೆಚ್ಚಳ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವಂತಹ ಸಮಸ್ಯೆಯಾಗಿದೆ. ಹಾಗಾಗಿ ಕೆಲವರು ಈ ತೂಕವನ್ನು ಇಳಿಸಲು ಆರೋಗ್ಯಕರ ಮಾರ್ಗಗಳನ್ನು ಅನುಸರಿಸಿದರೆ ಕೆಲವರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳುಂಟಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ಇದು ಜೀವಕ್ಕೂ ಅಪಾಯವಾಗಬಹುದು. ಈ ತೂಕ ಇಳಿಸಿಕೊಳ್ಳಲು ಹೋಗಿ ಅನೇಕರು ಸಾವನಪ್ಪಿರುವುದು ನಮಗೆ ಈಗಾಗಲೇ ತಿಳಿದಿದೆ. ಇದೀಗ ವ್ಯಕ್ತಿಯೊಬ್ಬ ತೂಕ (Weight Loss) ಇಳಿಸಿಕೊಳ್ಳಲು ಹೋಗಿ ತಾನು ನಡೆಯುವ ಶಕ್ತಿಯನ್ನೇ ಕಳೆದುಕೊಂಡಿದ್ದಾನೆ.

Weight Loss

ಸಫೋಲ್ಕ್ ನಿವಾಸಿ ಪಾಲ್ ಮೇಸನ್ ಒಂದು ಕಾಲದಲ್ಲಿ 444.5 ಕೆಜಿ ತೂಕವನ್ನು ಹೊಂದಿದ್ದರು. ಆದರೆ ತೂಕ ಇಳಿಸಿಕೊಂಡು ಈಗ 228 ಕೆಜಿ ತೂಕ ಹೊಂದಿದ್ದಾರೆ. ಆದರೆ ವಿಪರ್ಯಾಸವೆನೆಂದರೆ ಅವರಿಗೆ ತಮ್ಮ ಕಾಲಿನಿಂದ ನಡೆಯಲು ಆಗುತ್ತಿಲ್ಲ, ಅವರು ಕಾಲಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ. ಅವರು ಮತ್ತೆ ಎಂದಿಗೂ ನಡೆಯುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Weight Loss

ಕರೋನವೈರಸ್ ಲಾಕ್‍ಡೌನ್ ನಂತರ ಖಿನ್ನತೆಗೆ ಒಳಗಾದ ಅವರು ಅತಿಯಾಗಿ ಆಹಾರ ಸೇವನೆ ಮಾಡಿ ತಮ್ಮ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಅಲ್ಲದೆ, ಆಗ ಬ್ರಿಟನ್‌ನ ಅತ್ಯಂತ ತೂಕಯುಳ್ಳ ವ್ಯಕ್ತಿ ಜೇಸನ್ ಹೋಲ್ಟನ್ ಅವರ ಸಾವಿನ ಸುದ್ದಿ ಇವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಈ ಮಾನಸಿಕ ಆರೋಗ್ಯ ಸಮಸ್ಯೆಗಳು ಅವರ ತೂಕ ಹೆಚ್ಚಳಕ್ಕೆ ಕಾರಣವಾದವು. ಅಲ್ಲದೇ ಅವರಿಗೆ ಬಾಲ್ಯದಲ್ಲಿರುವಾಗ ಕುಟುಂಬಸ್ಥರು ಅವರ ಮೇಲೆ ಮೌಖಿಕ ಮತ್ತು ದೈಹಿಕ ನಿಂದನೆಗಳನ್ನು ಮಾಡುತ್ತಿದ್ದರು. ಪದೇ ಪದೇ ತಲೆಗೂ ಹೊಡೆಯುತ್ತಿದ್ದರು. ಆರು ವರ್ಷದವನಾಗಿದ್ದಾಗಿನಿಂದ ಮೂರು ವರ್ಷಗಳ ಕಾಲ ಕುಟುಂಬದ ಸದಸ್ಯರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

Weight Loss

2015 ರಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಆದ ನಂತರ, ಪಾಲ್ 120 ಕೆಜಿ ತೂಕ ಕಳೆದುಕೊಂಡರು. ಮತ್ತು ಅವರು ತಮ್ಮ ಹೆಚ್ಚುವರಿ ಚರ್ಮವನ್ನು ಕತ್ತರಿಸಲು ಸರಣಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಲು ಯುಎಸ್‍ಗೆ ಹೋಗಿದ್ದರಂತೆ. ಅಲ್ಲಿ ತಮ್ಮ ಜೀವನ ಸಂಗಾತಿಯನ್ನು ಸಹ ಭೇಟಿಯಾಗಿದ್ದರು. ಆದರೆ ಅವರ ಮಾನಸಿಕ ಆರೋಗ್ಯವು ಹದಗೆಡುತ್ತಲೇ ಇತ್ತು ಎಂದು ಅವರು ತಿಳಿಸಿದ್ದಾರೆ. ಅವರು 40 ವರ್ಷ ಬದುಕುವುದೇ ಹೆಚ್ಚು ಎಂದು ವೈದ್ಯರು ಹೇಳಿದ್ದರಂತೆ. ಆದರೆ ಈಗ ಅವರು 64 ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು ಬದುಕು ಸಾಗಿಸಲು ಸಾಕಷ್ಟು ಪಿಂಚಣಿ ಕೂಡ ಸಿಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ ತನಗೆ ನಡೆದಾಡಲು ಕಷ್ಟವಾದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Weight Loss

ಹಾಗಾಗಿ ತೂಕವನ್ನು ಕಳೆದುಕೊಳ್ಳುವುದು ಸಾಕಷ್ಟು ಕಠಿಣ ಕೆಲಸವಾಗಿದ್ದರೂ ಅದನ್ನು ಆರೋಗ್ಯಕರ ರೀತಿಯಲ್ಲಿ ಇಳಿಸಿಕೊಳ್ಳಲು ಪ್ರಯತ್ನಿಸಿ ಎಂದು ತಜ್ಞರು ತಿಳಿಸುತ್ತಾರೆ. ತಜ್ಞರ ಪ್ರಕಾರ, ಆಹಾರ ಮತ್ತು ವ್ಯಾಯಾಮ ಎರಡರ ಸಮತೋಲನವು ನಿಮ್ಮ ಗುರಿಯನ್ನು ಆರೋಗ್ಯಕರ ರೀತಿಯಲ್ಲಿ ಸಾಧಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ಎಂಟು ಸುಲಭ ಮಾರ್ಗಗಳನ್ನು ಅನುಸರಿಸಿ.

ಇದನ್ನೂ ಓದಿ:ಉಗ್ರರ ದಾಳಿ; ಭಾರತೀಯ ಸೇನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ

ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಆರೋಗ್ಯಕರ, ತಾಜಾ ಮತ್ತು ಕಾಲೋಚಿತ ಆಹಾರವನ್ನು ಸೇವಿಸುವತ್ತ ಗಮನ ಹರಿಸಿ. ಸಾಕಷ್ಟು ಫೈಬರ್ ಮತ್ತು ಪ್ರೋಟೀನ್ ಆಹಾರ ಸೇವಿಸಿ. ಆಹಾರದ ಜೊತೆಗೆ ಪ್ರತಿದಿನ ವಾಕಿಂಗ್, ನಿಯಮಿತವಾಗಿ ವ್ಯಾಯಾಮ ಮಾಡಿ. ಹಾಗೇ ಸಾಕಷ್ಟು ನೀರು ಕುಡಿಯಿರಿ. ಚೆನ್ನಾಗಿ ನಿದ್ರೆ ಮಾಡಿ.

Continue Reading

Latest

Viral News: ಯಾರೋ ಬಿಸಾಡಿದ ಕಸದಿಂದ 56 ಲಕ್ಷ ರೂ. ಸಂಪಾದಿಸಿದ ಯುವಕ!

Viral News: ಪ್ರತಿದಿನ ಒಂದಷ್ಟು ಕಸವನ್ನು ಡಬ್ಬಿಗೆ ಹಾಕುತ್ತೇವೆ.ಆದರೆನಾವು ಎಸೆಯುವ ಕಸ ಇನ್ನೊಬ್ಬರ ಬದುಕಿಗೆ ರಸವಾಗಿರುತ್ತದೆ. ಹೇಗೆ ಎಂಬ ಅನುಮಾನ ನಿಮಗೂ ಕಾಡ್ತಿದೆಯಾ…? ಲಿಯೊನಾರ್ಡೊ ಉರ್ಬಾನೊ ಎಂಬುವವನು ಕಳೆದ ವರ್ಷ ಸಿಡ್ನಿಯಲ್ಲಿ ಕಸದ ರಾಶಿಯ ಮೂಲಕ ಅತ್ಯುಮೂಲ್ಯ ವಸ್ತುಗಳನ್ನು ಸಂಗ್ರಹಿಸಿ 56.20 ಲಕ್ಷ ರೂ. ಗಳಿಸಿದ್ದಾನಂತೆ. ಅಷ್ಟೇ ಅಲ್ಲ ಅವನಿಗೆ ಈ ಕಸದ ರಾಶಿಯಲ್ಲಿ ಫ್ರಿಡ್ಜ್, ವಾರ್ಡ್ರೋಬ್, ಮತ್ತು ಮಂಚಗಳಂತಹ ದೊಡ್ಡ ವಸ್ತುಗಳು ಸೇರಿದಂತೆ ದುಡ್ಡು, ಚಿನ್ನದ ಆಭರಣ ಕೂಡ ಸಿಕ್ಕಿದೆಯಂತೆ. ಇನ್ನು ಮುಂದೆ ಕಸವನ್ನು ಬಿಸಾಡುವಾಗ ಎಚ್ಚರಿಕೆ ವಹಿಸಿ!

VISTARANEWS.COM


on

Viral News
Koo

ಕಸದಿಂದಲೇ ರಸ ಎಂಬ ಮಾತಿದೆ. ಕಸದಿಂದಲೂ ಜೀವನ ನಡೆಸುವವರು ಹಲವರಿದ್ದಾರೆ. ಇದೀಗ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ 30 ವರ್ಷದ ಯುವಕನೊಬ್ಬ ಒಬ್ಬ ಮನುಷ್ಯ ಎಸೆಯುವ ಕಸವು ಇನ್ನೊಬ್ಬ ಮನುಷ್ಯನಿಗೆ ಸಂಪತ್ತನ್ನು ತಂದು ಕೊಡುತ್ತದೆ ಎನ್ನುವುದನ್ನು ಸಾರಿ ಹೇಳಿದ್ದಾನೆ. ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗಿದೆ.

ಲಿಯೊನಾರ್ಡೊ ಉರ್ಬಾನೊ ಕಳೆದ ವರ್ಷ ಸಿಡ್ನಿಯಲ್ಲಿ ಕಸದ ರಾಶಿಯ ಮೂಲಕ ಅತ್ಯುಮೂಲ್ಯ ವಸ್ತುಗಳನ್ನು ಸಂಗ್ರಹಿಸಿ 100,000 ಆಸ್ಟ್ರೇಲಿಯನ್ ಡಾಲರ್ ಅಂದರೆ 56.20 ಲಕ್ಷ ರೂ ಗಳಿಸಿದ್ದಾನೆ. ಅವನಿಗೆ ಕಸದ ರಾಶಿಯಲ್ಲಿ ಚೀಲಗಳು, ಕಾಫಿ ಯಂತ್ರಗಳು, ಚಿನ್ನದ ಆಭರಣಗಳು ಮತ್ತು ನಗದು ಸೇರಿದಂತೆ ಇತರ ವಸ್ತುಗಳು ಸಿಕ್ಕಿವೆ ಎನ್ನಲಾಗಿದೆ. ಪ್ರತಿದಿನ ಈತ ಬೆಳಿಗ್ಗೆ ಉಪಾಹಾರದ ನಂತರ, ತನ್ನ ಬೈಸಿಕಲ್ ಅಥವಾ ಕಾರಿನಲ್ಲಿ ಹೋಗಿ ಸಿಡ್ನಿಯ ಬೀದಿಗಳಲ್ಲಿ ಕಸದ ರಾಶಿಗಾಗಿ ಹುಡುಕುತ್ತಿದ್ದನಂತೆ, ಮತ್ತು ಅದರಿಂದ ಅವನಿಗೆ ಪ್ರತಿದಿನ ವಿಭಿನ್ನ ವಸ್ತುಗಳು ಸಿಗುತ್ತಿದ್ದವು ಎನ್ನಲಾಗಿದೆ. ಕೆಲವೊಮ್ಮೆ ಅಲ್ಲಿ ಫ್ರಿಡ್ಜ್‌, ವಾರ್ಡ್‌ರೋಬ್, ಮತ್ತು ಮಂಚಗಳಂತಹ ದೊಡ್ಡ ವಸ್ತುಗಳು ಇರುತ್ತವೆ ಎಂದು ಅವನು ಹೇಳಿದ್ದಾನೆ.

ಆಸ್ಟ್ರೇಲಿಯಾದಲ್ಲಿ ಜನರು ಸಾಮಾನ್ಯವಾಗಿ ಪೀಠೋಪಕರಣಗಳು ಮತ್ತು ಬೃಹತ್ ಸರಕುಗಳನ್ನು ಬೀದಿಗಳಲ್ಲಿ ಎಸೆಯುತ್ತಾರೆ. ಕಂಪ್ಯೂಟರ್‌ಗಳು, ಡೈಸನ್ ವ್ಯಾಕ್ಯೂಮ್ ಕ್ಲೀನರ್‌ಗಳು ಮತ್ತು ಟೆಲಿವಿಷನ್ ಸೆಟ್‍ಗಳು ಇತರ ವಸ್ತುಗಳು ಇರುತ್ತವೆ. ಕೆಲವು ಶ್ರೀಮಂತ ಕುಟುಂಬದವರು ಕೆಲವೊಂದು ವಸ್ತುಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೂ ಹೊಸದನ್ನು ಖರೀದಿಸಲು ಹಳೆಯದನ್ನು ಕಸಕ್ಕೆ ಎಸೆಯುತ್ತಾರೆ. ಅಂಥವುಗಳನ್ನು ಹುಡುಕಿ ತೆಗೆದು ಮನೆಗೆ ತಂದು ಸ್ವಚ್ಛಗೊಳಿಸಿ ಮತ್ತು ಅದನ್ನು ಸರಿಪಡಿಸಿ ಅದರಲ್ಲಿ ತನಗೆ ಬೇಕಾದನ್ನು ಇಟ್ಟುಕೊಂಡು ಉಳಿದವುಗಳನ್ನು ಫೇಸ್ ಬುಕ್, ಮಾರ್ಕೆಟಿಂಗ್ ಪ್ಲಾಟ್‍ಫಾರ್ಮ್‌ಗಳಲ್ಲಿ ಮಾರಾಟ ಮಾಡುವುದಾಗಿ ಆತ ತಿಳಿಸಿದ್ದಾನೆ.

Viral News

ಅಲ್ಲದೇ ಕೆಲವೊಮ್ಮೆ ಕಸದಲ್ಲಿ ಸಿಕ್ಕಿದ ಬಟ್ಟೆಗಳು ಮತ್ತು ಬ್ಯಾಗ್‌ಗಳ ಜೇಬಿನಲ್ಲಿ ಜನರು ಮರೆತು ಇಟ್ಟ ಹಣವು ಸಿಕ್ಕಿರುವುದಾಗಿ ತಿಳಿಸಿದ್ದಾನೆ. ಉರ್ಬಾನೊ ಅವರು ಇತ್ತೀಚೆಗೆ ಸಣ್ಣ ಚೀಲವನ್ನು ಸುಮಾರು $ 200 ಕ್ಕೆ ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ. ಕೆಲವು ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವ ತನ್ನ ಸ್ನೇಹಿತರನ್ನು ಸಹ ಸಂಪರ್ಕಿಸುವುದಾಗಿ ತಿಳಿಸಿದ್ದಾನೆ.

Viral News

ಕಳೆದ ವರ್ಷ ಅವರಿಗೆ ಕಸದಲ್ಲಿ 50ಕ್ಕೂ ಹೆಚ್ಚು ಟೆಲಿವಿಷನ್ ಸೆಟ್‍ಗಳು, 30 ಫ್ರಿಡ್ಜ್‌ಗಳು, 20ಕ್ಕೂ ಹೆಚ್ಚು ವಾಷಿಂಗ್ ಮಷಿನ್‌ಗಳು, 50 ಕಂಪ್ಯೂಟರ್‌ಗಳು/ಲ್ಯಾಪ್‍ಟಾಟ್‍ಗಳು, 15 ಮಂಚಗಳು, 150ಕ್ಕೂ ಹೆಚ್ಚು ಮಡಿಕೆಗಳು ಮತ್ತು 100ಕ್ಕೂ ಹೆಚ್ಚು ದೀಪಗಳು ಮತ್ತು ಅಲಂಕಾರಿಕ ವರ್ಣಚಿತ್ರಗಳು ಹಾಗೂ $ 849 ಮೌಲ್ಯದ ನಗದು ಕೂಡ ಸಿಕ್ಕಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಗನ ಮದುವೆ ಗಡಿಬಿಡಿಯಲ್ಲಿ ನೀತಾ ಅಂಬಾನಿ ಪಾಪರಾಜಿಗಳಿಗೆ ಹೇಳಿದ್ದೇನು? ವಿಡಿಯೊ ವೈರಲ್

ಉರ್ಬಾನೊ ತನ್ನನ್ನು “ದಿ ತ್ರ್ಯಾಶ್ ಲಾಯರ್” (The Trash Lawyer) ಎಂದು ಕರೆದುಕೊಂಡಿದ್ದಾರೆ. ಏಕೆಂದರೆ ಅವರು ಮುಂದೆ ಬದುಕಲು ಕಸದ ಅವಶ್ಯಕತೆ ಇದೆ ಎಂದು ವಾದಿಸುತ್ತಾರಂತೆ.

Continue Reading
Advertisement
Saina Nehwal
ಕ್ರೀಡೆ17 seconds ago

Saina Nehwal: ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದ ಸೈನಾ ನೆಹ್ವಾಲ್‌

Kangana Ranaut
ದೇಶ12 mins ago

Kangana Ranaut: ನನ್ನನ್ನು ಭೇಟಿಯಾಗಲು ಬರುವವರು ಆಧಾರ್‌ ಕಾರ್ಡ್‌ ತನ್ನಿ ಎಂದ ಕಂಗನಾ ರಣಾವತ್;‌ ಏನ್‌ ದೌಲತ್ತು ನೋಡಿ!

Shiva Rajkumar Starrer 45 Movie Poster Released By Rishab Shetty
ಸ್ಯಾಂಡಲ್ ವುಡ್12 mins ago

Shiva Rajkumar: ಶಿವರಾಜ್‌ಕುಮಾರ್‌ ಅಭಿನಯದ ʻ45ʼ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ!

Anant Radhika Wedding
ವಾಣಿಜ್ಯ15 mins ago

Anant Radhika Wedding: ನಿಶ್ಚಿತಾರ್ಥದಿಂದ ಮದುವೆಯವರೆಗೆ; ಹೀಗಿತ್ತು ಅಂಬಾನಿ ಮಗನ ಮದುವೆಯ ಗತ್ತು!

Fraud Case CCB police arrest fraudster
ಕರ್ನಾಟಕ17 mins ago

Fraud Case : ‌ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್‌ ನಯ ವಂಚಕ; ಡಿಸಿ, ಜಡ್ಜ್‌ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ

Akshay Kumar tests positive for COVID-19 will miss Anant Ambani wedding
ಬಾಲಿವುಡ್35 mins ago

Akshay Kumar:  ಅಕ್ಷಯ್ ಕುಮಾರ್‌ಗೆ ಕೋವಿಡ್‌ ಪಾಸಿಟಿವ್; ಅನಂತ್ ಅಂಬಾನಿ ಮದುವೆಗೆ ಗೈರು!

Anant Radhika Wedding
ವಾಣಿಜ್ಯ37 mins ago

Anant Radhika Wedding: ಮಗನ ಮದುವೆ ಸಂದರ್ಭದಲ್ಲಿ ಕಾಶಿಗೆ ಗೌರವ; ನೀತಾ ಅಂಬಾನಿಯ ಈ ವಿಡಿಯೊ ನೋಡಿ

Arvind Kejriwal
ದೇಶ44 mins ago

Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಶಾಕ್‌! ಜು.25ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Drowned in water
ಕಲಬುರಗಿ56 mins ago

Drowned In Water : ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಇಳಿದಾಗ ಕೊಚ್ಚಿ ಹೋದ ಯುವತಿ

Monsoon session
ಕರ್ನಾಟಕ56 mins ago

Monsoon session: ಜು.15ರಿಂದ ಮುಂಗಾರು ಅಧಿವೇಶನ: ನಾಗೇಂದ್ರ ಬಂಧನಕ್ಕೆ ಇಡಿ ನನ್ನ ಅನುಮತಿ ಪಡೆಯಲೇಬೇಕು ಎಂದ ಸ್ಪೀಕರ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effect
ಮಳೆ23 hours ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ3 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ3 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ3 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ4 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ4 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು4 days ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ5 days ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌