Site icon Vistara News

Viral News: 6 ಮಂದಿ ಕಾಮುಕರಿಗೆ ಒಬ್ಬಳೇ ಹುಡುಗಿ ಹೆಂಗೆ ಹೊಡೀತಾಳೆ ನೋಡಿ! ಹೆಣ್ಮಕ್ಕಳೇ ಸ್ಟ್ರಾಂಗು ಗುರು!

viral video

ಹೆಣ್ಮಕ್ಕಳನ್ನು ಚುಡಾಯಿಸುವುದು, ಲೈಂಗಿಕ ಕಿರುಕುಳ ನೀಡುವುದು, ದೌರ್ಜನ್ಯ ನಡೆಸುವುದು ಪ್ರತಿನಿತ್ಯವೂ ನಡೆಯುತ್ತದೆ. ಕೋಟ್ಯಂತರ ಹೆಣ್ಮಕ್ಕಳು ಇವೆಲ್ಲವನ್ನೂ ಅವುಡುಗಚ್ಚಿಕೊಂಡು ಸಹಿಸಿಕೊಂಡು ಕಣ್ಣೀರು ಹಾಕುತ್ತಾರೆ. ಆದರೆ, ಇದರ ನಡುವೆಯೇ ಕೆಲವು ಹೆಣ್ಮಕ್ಕಳು ಇವುಗಳನ್ನು ದಿಟ್ಟವಾಗಿ ಎದುರಿಸಿ ಕಾಮುಕರಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿರುವ ವಿಡಿಯೊವೊಂದು ಇದಕ್ಕೆ ಇದಕ್ಕೆ ಸಾಕ್ಷಿಯಾಗಿದೆ. ಯುವತಿಯೊಬ್ಬಳು ಒಬ್ಬಂಟಿಯಾಗಿ ಆರು ಜನ ಕಾಮುಕರಿಗೆ ಮರೆಯಲಾಗದ ಪಾಠ ಕಲಿಸಿದ್ದಾಳೆ!

ವಿಡಿಯೊದಲ್ಲಿ ಕಾಣುವಂತೆ ಖಾಲಿ ರಸ್ತೆಯಲ್ಲಿ ಯುವತಿಯೊಬ್ಬಳು ಬರುವಾಗ ಆರು ಜನ ಪುಂಡರು ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ. ಈ ವೇಳೆ ಯುವತಿ ಒಬ್ಬಳೇ ಆರು ಜನರ ವಿರುದ್ಧ ಫೈಟ್‌ ಮಾಡುವ ಮೂಲಕ ಎಲ್ಲರನ್ನು ಹೊಡೆದು ಕೆಳಗೆ ಬೀಳಿಸಿದ್ದಾಳೆ.

25 ಸೆಕೆಂಡ್ಸ್‌ ಇರುವ ವಿಡಿಯೊದಲ್ಲಿ ಯುವತಿ ಆರು ಜನ ಹುಡುಗರ ಜೊತೆ ಒಬ್ಬಳೇ ಫೈಟ್‌ ಮಾಡಿದ್ದಾಳೆ. ಮಾರ್ಷಲ್‌ ಆರ್ಟ್ಸ್‌ ತರಬೇತಿ ಹೊಂದಿರುವ ಯುವತಿ ಒಬ್ಬರಾದ ಮೇಲೆ ಒಬ್ಬರಂತೆ ಆರು ಜನರಿಗೂ ಕಾಲಿನಲ್ಲಿಯೇ ಸರಿಯಾಗಿ ಕಿಕ್‌ ಮಾಡಿ ಬೆವರಿಳಿಸಿದ್ದಾಳೆ. ವಿಡಿಯೊ ನೋಡಿದ ನೆಟ್ಟಿಗರು ಯುವತಿಯ ಧೈರ್ಯಕ್ಕೆ ಶಹಭಾಷ್‌ ಎಂದಿದ್ದಾರೆ.

ಈವರೆಗೂ ಈ ವಿಡಿಯೊವನ್ನು 3.5 ಮಿಲಿಯನ್‌ ಜನರು ವೀಕ್ಷಣೆ ಮಾಡಿದ್ದು, 9 ಸಾವಿರಕ್ಕೂ ಅಧಿಕ ಜನ ಶೇರ್‌ ಮಾಡಿದ್ದಾರೆ. ಹಲವರು ಯುವತಿಯ ಗಟ್ಟಿತನವನ್ನು ಮೆಚ್ಚಿ ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. ನೆಟ್ಟಿಗರೊಬ್ಬರು ಯುವತಿಯರ ಜೊತೆಗೆ ಇಂತಹ ಆಟ ಬೇಡ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ಮಹಿಳೆಯರು ಹೀಗೇ ಇರಬೇಕು ಎಂದು ಹೇಳುವ ಬದಲು ನಿಮ್ಮ ಮಗನಿಗೆ ಬುದ್ದಿ ಮಾತುಗಳನ್ನು ಕಲಿಸಿ ಎಂದು ಕಮೆಂಟ್‌ ಮಾಡಿದ್ದಾರೆ.

Exit mobile version