Site icon Vistara News

Viral News: ಅಂಗವೈಕಲ್ಯತೆ ಇದ್ದರೂ ಸ್ವಾಭಿಮಾನದ ಬದುಕು; ಈ ಫುಡ್‌ ಡೆಲಿವರಿ ಏಜೆಂಟ್‌ ವಿಲ್‌ ಪವರ್‌ಗೆ ನೆಟ್ಟಿಗರ ಬಹುಪರಾಕ್‌

viral news

viral news

ಬೆಂಗಳೂರು: ʼಮನಸ್ಸಿದ್ದರೆ ಮಾರ್ಗʼ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಈ ವ್ಯಕ್ತಿ ಈ ಮಾತನ್ನು ನಿಜವಾಗಿಸಿದ್ದಾರೆ. ವಿಶೇಷ ಚೇತನ ವ್ಯಕ್ತಿಯೊಬ್ಬರು ತಮ್ಮ ಅಂಗ ವೈಕಲ್ಯವನ್ನು ಮೆಟ್ಟಿ ನಿಂತು ಫುಡ್‌ ಡೆಲಿವರಿ ಮಾಡುವ ಮಾಡುವ ಮೂಲಕ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಇವರ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಾರಾಯಣ ಕಣ್ಣನ್‌ ಎನ್ನುವವರು ಬರೆದುಕೊಂಡಿದ್ದು, ಸದ್ಯ ಈ ವಿಚಾರ ವೈರಲ್‌ ಆಗಿದೆ. ಅವರ ವಿಲ್‌ ಪವರ್‌ಗೆ ನೆಟ್ಟಿಗರು ಜೈ ಎಂದಿದ್ದು, ಮೆಚ್ಚುಗೆ ಸೂಚಿಸಿದ್ದಾರೆ (Viral News).

ಈ ಝೊಮಾಟೋ ಫುಡ್‌ ಡೆಲಿವರಿ ಏಜೆಂಟ್‌ ನಿಯೋಮೋಷನ್‌ (NeoMotion) ಎಲೆಕ್ಟ್ರಿಕ್‌ ವಾಹನದ ಸಹಾಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾರಾಯಣ ಕಣ್ಣನ್‌ ಇವರ ಬಗ್ಗೆ ಬರೆದುಕೊಂಡಿದ್ದು, ಝೊಮಾಟೋ ಮತ್ತು ಸಿಇಒ ದೀಪಿಂದರ್ ಗೋಯಲ್ ತಮ್ಮ ಕಂಪೆನಿಯಲ್ಲಿ ಇಂತಹ ವಿಶೇಷ ಚೇತನ ವ್ಯಕ್ತಿಯನ್ನು ನೇಮಿಸಿಕೊಂಡ ವಿಚಾರವನ್ನು ಅವರು ಶ್ಲಾಘಿಸಿದ್ದಾರೆ. “ನಾನು ಬಹಳ ಸಮಯದಿಂದ ನೋಡಿದ ಅತ್ಯುತ್ತಮ ವಿಷಯಗಳಲ್ಲಿ ಇದೂ ಒಂದು. ಕಂಪೆನಿ ವಿಶೇಷ ಚೇತನ ವ್ಯಕ್ತಿಗಳಿಗೆ ಅವಕಾಶ ನೀಡುತ್ತಿದೆ. ಆ ಮೂಲಕ ಸ್ವಾಭಿಮಾನದ ಬದುಕು ಒದಗಿಸುತ್ತಿದೆʼʼ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಅನೇಕರು ಝೊಮಾಟೋ ಕಂಪೆನಿಯ ಈ ಮಹತ್ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. “ಇದು ಅದ್ಭುತವಾಗಿದೆ. ಝೊಮಾಟೋ ತನ್ನ ನೀತಿಗಳನ್ನು ವೈವಿಧ್ಯಮಯಗೊಳಿಸಿದೆ. ಇಂತಹ ಉತ್ತಮ ಕಾರ್ಯಕ್ಕಾಗಿ ಸ್ವಸ್ತಿಕ್ ಸೌರವ್ ಮತ್ತು ದೀಪಿಂದರ್ ಗೋಯಲ್ ಅಭಿನಂದನಾರ್ಹರುʼʼ ಎಂದು ಒಬ್ಬರು ತಿಳಿಸಿದ್ದಾರೆ. ʼʼಈ ಫೋಟೊ ನೋಡುವಾಗ ಹೆಮ್ಮೆ ಎನಿಸುತ್ತದೆ. ಇದು ಸ್ವಾಭಿಮಾನ ಮತ್ತು ಧನಾತ್ಮಕ ನಡೆ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಇನ್ನಷ್ಟು ಅತ್ಯುತ್ತಮ ಕಾರ್ಯಗಳನ್ನು ನಿಮ್ಮಿಂದ ನಿರೀಕ್ಷಿಸುತ್ತಿದ್ದೇವೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಝೊಮಾಟೋ ಸಿಇಒ ದೀಪಿಂದರ್ ಗೋಯಲ್ ಈ ಫೋಟೊವನ್ನು ರಿಪೋಸ್ಟ್‌ ಮಾಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ವಿಶೇಷ ಚೇತನರಿಗೆ ವಾಹನ ಒದಗಿಸಲು ವೈದ್ಯಕೀಯ ಉಪಕರಣಗಳ ತಯಾರಕ ನಿಯೋಮೋಷನ್‌ ಕಂಪೆನಿಯೊಂದಿಗೆ ಝೊಮಾಟೋ ಪಾಲುದಾರಿಕೆ ಹೊಂದಿದೆ ಎಂದು ಗೋಯಲ್ ಘೋಷಿಸಿದ್ದರು. ಚೆನ್ನೈಯಲ್ಲಿನ ಆನ್‌ಬೋರ್ಡಿಂಗ್‌ ಡ್ರೈವ್ ಚಿತ್ರಗಳನ್ನು ಹಂಚಿಕೊಂಡಿದ್ದರು.

ಮತ್ತೊಂದು ಪೋಸ್ಟ್‌ನಲ್ಲಿ “ಈ ವಿಶೇಷ ವಿತರಣಾ ವಾಹನಗಳನ್ನು ವಿಶೇಷ ಚೇತನ ಫುಡ್‌ ಡೆಲಿವರಿ ಏಜೆಂಟರ್‌ಗಾಗಿ ಕಸ್ಟಮೈಸ್ ಮಾಡಲಾಗಿದೆ. ಇದು ಹೆಚ್ಚಿನ ಆರಾಮ ಒಗಿಸುತ್ತದೆ ಮತ್ತು ಗ್ರಾಹಕ ಸ್ನೇಹಿಯಾಗಿದೆ. ಅಲ್ಲದೆ ಇವು ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಪರಿಸರ ಸ್ನೇಹಿಯೂ ಆಗಿವೆʼʼ ಎಂದು ತಿಳಿಸಿದ್ದರು.

ಇದನ್ನೂ ಓದಿ: Viral News: ಮದುವೆಯಾಗಿ 2 ವರ್ಷವಾದರೂ ಸರಸವಾಡದ ಗಂಡ; ಪತ್ನಿ ಕಾದು ಕೆಂಡ; ಈಗ ಪೊಲೀಸರ ದಂಡ

2019ರಲ್ಲಿ ರಾಮು ಎಂಬ ಝೊಮಾಟೋ ಉದ್ಯೋಗಿ ಫುಡ್‌ ಡೆಲಿವರಿ ಮಾಡಲು ಕೈಯಿಂದ ಚಾಲಿತ ಟ್ರೈ ಸೈಕಲ್ ಅನ್ನು ಬಳಸುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್ ಆಗಿತ್ತು. ಗೋಯಲ್ ಈ ವಿಡಿಯೊವನ್ನು ಗಮನಿಸಿ ರಾಮು ಅವರಿಗೆ ಝೊಮಾಟೋ ಕಡೆಯಿಂದ ಎಲೆಕ್ಟ್ರಿಕ್ ವಾಹನವನ್ನು ಒದಗಿಸಿದ್ದರು. ಒಟ್ಟಿನಲ್ಲಿ ಝೊಮಾಟೋ ಸಂಸ್ಥೆಯ ಉದ್ಯೋಗಿ ಸ್ನೇಹಿಯಾಗಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version