ಆನೇಕಲ್: ಆನೆಕಲ್ಲಿನಲ್ಲಿ ನಾಗರಹಾವಿನ ವರ್ತನೆಯೊಂದು ವಿಸ್ಮಯ ಮೂಡಿಸಿದೆ. ಇದು ಪ್ರತಿದಿನ, ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟವಾದ ಜನನಿಬಿಡ ಪ್ರದೇಶಕ್ಕೆ ಹಾಜರಾಗುತ್ತಿದೆ!
ಬೆಂಗಳೂರು ಹೊರವಯದ ಆನೇಕಲ್ ಪಟ್ಟಣದ ನಾರಾಯಣಪುರ ಸಮೀಪದ ಚಿಕ್ಕಕೆರೆ ಅಂಗಳದಲ್ಲಿ ಈ ಘಟನೆ ನಡೆಯುತ್ತಿದೆ. ಪ್ರತಿದಿನ ಬೆಳಗ್ಗೆ 11 ಗಂಟೆಗೆ ಆಗಮಿಸುವ ಈ ನಾಗರಹಾವು ಹರಳು ಗಿಡದ ರೆಂಬೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಸಂಜೆ 5 ಗಂಟೆಯವರೆಗೂ ಅಲ್ಲಿಯೇ ಇದ್ದು, ಮತ್ತೆ ಅಲ್ಲಿಂದ ತೆರಳುತ್ತದೆ.
ಇದೇ ರೀತಿ ಕಳೆದ ಎರಡು ತಿಂಗಳಿನಿಂದ ಸರಿಯಾದ ಸಮಯಕ್ಕೆ ಹಾವು ಹಾಜರಾಗುತ್ತಿದೆ. ಈ ಗಿಡ ರಸ್ತೆಯ ಬದಿಯಲ್ಲಿದ್ದು, ಇದರ ಪಕ್ಕದಲ್ಲಿಯೇ ನೂರಾರು ಜನ ಪ್ರತಿದಿನ ಓಡಾಡುತ್ತಾರೆ. ಆದರೆ ಅಷ್ಟೆಲ್ಲ ಜನ ಓಡಾಡಿದರೂ, ಎಷ್ಟೇ ಗದ್ದಲ ಮಾಡಿದರೂ ಈ ಹಾವು ಡಿಸ್ಟರ್ಬ್ ಆಗದೆ ಅತ್ತಿತ್ತ ಸರಿಯದೆ ಅಲ್ಲಿಯೇ ಮಲಗಿರುತ್ತದೆ. ಅದು ಎಲ್ಲಿಂದ ಬರುತ್ತಿದೆ, ಎಲ್ಲಿ ಅದರ ನಿವಾಸ ಎಂಬುದು ಗೊತ್ತಾಗಿಲ್ಲ.
ಈ ವಿಸ್ಮಯಕಾರಿ ಹಾವನ್ನು ನೋಡಲೆಂದೇ ಇದೀಗ ಸುತ್ತಮುತ್ತಲ ಊರುಗಳಿಂದ ನೂರಾರು ಸಂಖ್ಯೆಯ ಜನ ಬರುತ್ತಿದ್ದಾರೆ. ಇದು ದೈವ ಶಕ್ತಿಯ ಹಾವೆಂದು ಕೆಲವರು ನಂಬಲಾರಂಭಿಸಿದ್ದು, ಅದಕ್ಕೆ ಹಾಲು ಇಡುತ್ತಿದ್ದಾರೆ, ಆರತಿ ಎತ್ತುತ್ತಿದ್ದಾರೆ. ಹಾವು ಕಾಣಿಸಿಕೊಳ್ಳುತ್ತಿರುವ ಜಾಗದ ಸಮೀಪದಲ್ಲಿ ಹಳೆಯದೊಂದು ಆಶ್ರಮ ಹಾಗೂ ನಾಗರಕಟ್ಟೆಗಳು ಇವೆ.
ಇದನ್ನೂ ಓದಿ | Viral post | 380 ಅಡಿ ಎತ್ತರದ ಜಲಪಾತದ ತುದಿಯಲ್ಲಿ ನೀರ ಮೇಲೆ ನಿಂತ ನೀರೆ!