Site icon Vistara News

Viral Video: ತಿಂಗಳಲ್ಲಿ 35 ಲಕ್ಷ ರೂ. ಗಳಿಸಿದ ಬೆಂಗಳೂರಿನ 22 ವರ್ಷದ ಯುವಕ; ಹೇಗೆ?

Viral Video

ಶಿಕ್ಷಣವನ್ನು ಅರ್ಧದಲ್ಲಿ ಕೈಬಿಟ್ಟು ಕಳೆದ ತಿಂಗಳು ಯೂಟ್ಯೂಬ್ ವಿಡಿಯೊ ಮೂಲಕ 35 ಲಕ್ಷ ರೂ. ಗಳಿಸಿರುವುದಾಗಿ ಬೆಂಗಳೂರಿನ (bengaluru) 22 ವರ್ಷದ ಯುವಕ ಇಶಾನ್ ಶರ್ಮಾ (Ishan Sharma) ಇತ್ತೀಚೆಗೆ ಉದ್ಯಮಿಗಳಾದ ಅಶ್ನೀರ್ ಗ್ರೋವರ್ (Ashneer Grover), ಆಶಿಶ್ ಮೊಹಾಪಾತ್ರ (Asish Mohapatra), ಸಾರ್ಥಕ್ ಅಹುಜಾ (Sarthak Ahuja) ಮತ್ತು ಸಂಜೀವ್ ಬಿಖ್‌ಚಂದಾನಿ (Sanjeev Bikhchandani) ಅವರೊಂದಿಗೆ ಪಾಡ್‌ಕಾಸ್ಟ್ ನಲ್ಲಿ ತಿಳಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಗೋವಾ ಪಿಲಾನಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ನಿಂದ ಹೊರಬಂದು ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಮೊತ್ತದ ಆದಾಯ ಪಡೆಯಲು ಹೇಗೆ ಸಾಧ್ಯವಾಯಿತು ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇಶಾನ್ ಅವರು ಕಳೆದ ತಿಂಗಳು 35 ಲಕ್ಷ ರೂ. ಗಳಿಸಿದ್ದಾರೆ. ಆದರೆ ಅವರು, ಇದು ಸಣ್ಣ ಮೊತ್ತ. ಹೊರಗೆ ಹೋಗಿ ಅಷ್ಟು ಸಣ್ಣ ಮೊತ್ತದಿಂದ ಬಿಸಿನೆಸ್ ಪ್ರಾರಂಭಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.

ಆದರೆ ಅವರ ಈ ಹೇಳಿಕೆಗೆ ಅಶ್ನೀರ್ ಗ್ರೋವರ್, ಆಸಿಶ್ ಮೊಹಾಪಾತ್ರ, ಸಾರ್ಥಕ್ ಅಹುಜಾ ಮತ್ತು ಸಂಜೀವ್ ಬಿಖ್‌ಚಂದಾನಿ ಆಶ್ಚರ್ಯಕರ ಪ್ರತಿಕ್ರಿಯೆ ನೀಡಿದ್ದಾರೆ.

ಅವರು ಇಶಾನ್ ಶರ್ಮಾ ಅವರು ಇಷ್ಟೊಂದು ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಆಗ ಅಶ್ನೀರ್ ಗ್ರೋವರ್, ನಾವು ನಿಮ್ಮ ಕಥೆಯನ್ನು ಕೇಳಬೇಕು ಎಂದು ಆಸಕ್ತಿ ತೋರುತ್ತಾರೆ. ಅಲ್ಲದೇ ತಾವು 22 ವರ್ಷದವರಾಗಿದ್ದಾಗ ಏನನ್ನೂ ಗಳಿಸುತ್ತಿರಲಿಲ್ಲ ಎಂದು ಬಹಿರಂಗಪಡಿಸಿದರು.

Viral Video


ಮತ್ತೊಂದೆಡೆ ಆಶಿಶ್ ಮೊಹಾಪಾತ್ರ ಅವರು ತಿಂಗಳಿಗೆ 35,000 ರೂ. ಪಡೆದಿದ್ದರು ಎಂದು ಹೇಳಿದರೆ ಸಾರ್ಥಕ್ ಅಹುಜಾ ಮತ್ತು ಸಂಜೀವ್ ಬಿಖ್‌ಚಂದಾನಿ ಅವರು ತಿಂಗಳಿಗೆ ಕ್ರಮವಾಗಿ 5,000 ರೂ. ಮತ್ತು 1,500 ರೂ. ಗಳಿಸುತ್ತಿರುವುದಾಗಿ ತಿಳಿಸಿದರು.

ಮಾರ್ಕೆಟಿಂಗ್ ಏಜೆನ್ಸಿ ಮಾರ್ಕಿಟ್‌ಅಪ್ ಅನ್ನು ತನ್ನ ಕಾಲೇಜ್ ಮೇಟ್ ಸರನ್ಶ್ ಆನಂದ್ ಅವರೊಂದಿಗೆ ಸ್ಥಾಪಿಸಿರುವ ಇಶಾನ್ ಶರ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುಮಾರು 2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಮೂಲಕ ಅವರು ಭಾರೀ ಹಣ ಗಳಿಸಿದ್ದಾರೆ.

ಇವರ ಈ ವಿಡಿಯೋ ವೈರಲ್ ಆದ ಬಳಿಕ 80,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇದು ಸಾಕಷ್ಟು ಲೈಕ್ ಗಳನ್ನು ಗಳಿಸಿದೆ.


ಇದಕ್ಕೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, ನಾನು 23 ವರ್ಷ ವಯಸ್ಸಿನವನಾಗಿದ್ದರೂ ಒಂದು ಪೈಸೆಯನ್ನೂ ಗಳಿಸುತ್ತಿಲ್ಲ. ತಂದೆಯ ಮೇಲೆ ಅವಲಂಬಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bike Stunt Video: ಪುಟ್ಟ ಮಗುವನ್ನು ಮುಂದೆ ಕೂರಿಸಿಕೊಂಡು ಬೈಕ್‌ ಸ್ಟಂಟ್‌! ಒದ್ದು ಒಳಗೆ ಹಾಕಿ ಅಂತಿದ್ದಾರೆ ನೆಟ್ಟಿಗರು

ಮತ್ತೊಬ್ಬರು ಕಾಮೆಂಟ್ ನಲ್ಲಿ ತಿಂಗಳಿಗೆ 35 ಲಕ್ಷ ರೂ. ಅನ್ನು ಒಂದು ಸಣ್ಣ ಮೊತ್ತ ಎಂದು ಹೇಳುತ್ತಿದ್ದಾರಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ನನಗೆ ತಿಳಿದಿರುವ ಅತ್ಯಂತ ಶ್ರಮಜೀವಿಗಳಲ್ಲಿ ಅವರು ಒಬ್ಬರು ಎಂದು ಇನ್ನೊಬ್ಬರು ಕಾಮೆಂಟ್ ನಲ್ಲಿ ಹೇಳಿದ್ದಾರೆ.

Exit mobile version