Site icon Vistara News

Viral Video: ಮೂರು ಅಡಿಯ ಕುಳ್ಳನಿಗೆ ಏಳಡಿ ಎತ್ತರದ ಗರ್ಲ್ ಫ್ರೆಂಡ್! ಇವರ ಪ್ರಣಯದ ವಿಡಿಯೊ ನೋಡಿ!

Viral Video

ಹೊಸದಿಲ್ಲಿ: ನಿಷ್ಕಲ್ಮಶ ಪ್ರೀತಿಗೆ ವಯಸ್ಸು, ಅಂದ ಚಂದ, ಬಡವ-ಶ್ರೀಮಂತ ಎಂಬ ಬೇಧ ಇರೋದಿಲ್ಲ ಅನ್ನೋದನ್ನು ನಾವು ಕೇಳಿರ್ತೀವಿ..ಬಹಳ ಅಪರೂಪ ಅನ್ನುವಂತೆ ಅದನ್ನು ನಾವು ನೋಡಿರ್ತೇವೆ. ಇದೊಂದು ಅಂತಹದ್ದೇ ಅಪರೂಪವಾದ ಜೋಡಿ. ಇವರನ್ನು ನೋಡಿದರೆ ಪ್ರೀತಿ ಹೀಗೂ ಆಗುತ್ತೋ ಅಂತಾ ಅಚ್ಚರಿ ಆಗೋದಂತೂ ಗ್ಯಾರಂಟಿ. ಯಾಕಂದ್ರೆ ಈ ಜೋಡಿಯ ಹೈಟ್‌ ಅಜಗಜಾಂತರ ಅನ್ನುವಂತಿದೆ. ಹೌದು ಮೂರು ಅಡಿಯ ಕುಳ್ಳನಿಗೆ ಏಳು ಅಡಿಯ ಗರ್ಲ್‌ಫ್ರೆಂಡ್‌! ಈ ಕ್ಯೂಟ್‌ ಜೋಡಿ ರೊಮ್ಯಾನ್ಸ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌(Viral Video) ಆಗುತ್ತಿದೆ.

ಸೋಶಿಯಲ್‌ ಮೀಡಿಯಾದ ಸೆನ್ಸೇಶನಲ್‌ ಜೋಡಿಯಾಗಿರುವ ಗ್ಯಾಬ್ರಿಯಲ್‌ ಪಿಮೆಂಟಲ್‌ ಮತ್ತು ಮ್ಯಾರಿ ತೋಮರ್‌ ಅವರ ಡಾನ್ಸಿಂಗ್‌ ವಿಡಿಯೋ ಇದೀಗ ಎಲ್ಲೆಡೆ ಬಹಳ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಕಿಂಗ್‌ ಮತ್ತು ಕ್ವೀನ್‌ ಎಂದೇ ಖ್ಯಾತಿ ಪಡೆದಿರುವ ಗ್ಯಾಬ್ರಿಯಲ್‌ ಮತ್ತು ಮ್ಯಾರಿ ತಮ್ಮ ನಡುವಿನ ಎತ್ತರದ ಅಂತರವಿದ್ದರೂ ಪರಸ್ಪರ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಅಷ್ಟೇ ಅಲ್ಲದೇ ಪರಸ್ಪರ ಫುಲ್‌ ಎಂಜಾಯ್‌ ಮಾಡುತ್ತಿದ್ದಾರೆ. ಇದೀಗ ಈ ಜೋಡಿಯ ಕ್ಯೂಟ್‌ ಡಾನ್ಸ್‌ ವಿಡಿಯೋ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಇವರಿಬ್ಬರು ಪರಸ್ಪರ ತಬ್ಬಿಕೊಂಡು ಡಾನ್ಸ್‌ ಮಾಡುತ್ತಿರುವುದು ಇವರಿಬ್ಬರ ನಡುವಿನ ಬಾಂಧವ್ಯವನ್ನು ತೋರಿಸುತ್ತಿದೆ.

Instagram ನಲ್ಲಿ 23,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಗಳಿಸಿರುವ ಗೇಬ್ರಿಯಲ್ ಮತ್ತು 2 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಮೇರಿ, ಅಭಿಮಾನಿಗಳಿಂದ ಅಗಾಧ ಬೆಂಬಲವನ್ನು ಪಡೆದಿದ್ದಾರೆ. ಅವರು ಹಂಚಿಕೊಂಡ ಇತ್ತೀಚಿನ ವೀಡಿಯೊ ಕೇವಲ ಎರಡು ದಿನಗಳಲ್ಲಿ 2.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇನ್ನು ಸಾವಿರಾರು ಸಂಖ್ಯೆಯಲ್ಲಿ ಲೈಕ್ಸ್‌ ಮತ್ತು ಶೇರ್‌ ಆಗಿದೆ.

ಅನೇಕರು ಇವರ ವಿಶೇಷ ಪ್ರೇಮಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವು ಸಂದೇಹವಾದಿಗಳು ಸಾಮಾಜಿಕ ಮಾಧ್ಯಮದ ಹಿನ್ನೆಲೆಯಲ್ಲಿ ಅವರ ಸಂಬಂಧದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಮೆಚ್ಚುಗೆಯಿಂದ ಹಾಸ್ಯದವರೆಗಿನ ಕಾಮೆಂಟ್‌ಗಳು ಇವರ ಈ ವಿಡಿಯೋಗೆ ಬಂದಿದೆ. ಅನೇಕರು ಇವರದ್ದು ಬಲು ಅಪರೂಪದ ಜೋಡಿ ಎಂದು ಕರೆದಿದ್ದಾರೆ.

ಇನ್ನು ಗುಜರಾತ್‌ನಲ್ಲೂ ಗ್ಯಾಬ್ರಿಯಲ್‌ನಂತಹ ಕುಳ್ಳಗಿನ ವೈದ್ಯರೊಬ್ಬರು ಕೆಲವು ತಿಂಗ ಹಿಂದೆ ಬಹಳ ಸುದ್ದಿಯಾಗಿದ್ದರು.

ಇವರ ಹೆಸರು ಡಾ. ಗಣೇಶ್ ಬರೈಯಾ (Ganesh Baraiya). ಎತ್ತರ ಕೇವಲ 3 ಅಡಿ. ಆದರೆ ಇದು ಅವರ ಕನಸಿಗೆ, ಸಾಧಿಸಬೇಕೆಂಬ ಛಲಕ್ಕೆ ಅಡ್ಡಿಯಾಗಲಿಲ್ಲ. ಅವರು ಇಂದು ವಿಶ್ವದಲ್ಲೇ ಅತ್ಯಂತ ಕುಳ್ಳಗಿನ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷ ಎಂದರೆ ಗಣೇಶ್‌ ಅವರ ತೂಕ ಕೇವಲ 18 ಕೆ.ಜಿ. 2018ರಲ್ಲಿ ಗಣೇಶ್‌ 12ನೇ ತರಗತಿಯ ಪರೀಕ್ಷೆ ತೇರ್ಗಡೆಯಾಗಿದ್ದರು. ಇದರಲ್ಲಿ ಅವರಿಗೆ ಶೇ. 87 ಮತ್ತು ನೀಟ್‌ನಲ್ಲಿ 233 ಅಂಕ ಬಂದಿತ್ತು. ಆದರೆ 3 ಅಡಿ 4 ಇಂಚು ಎತ್ತರದ ಅವರಿಗೆ ಗುಜರಾತ್ ಸರ್ಕಾರವು ಎಂಬಿಬಿಎಸ್ ಪ್ರವೇಶಕ್ಕೆ ಅನುಮತಿ ನಿರಾಕರಿಸಿತ್ತು. ಛಲ ಬಿಡದ ಅವರು ತಮ್ಮ ಶಾಲಾ ಪ್ರಾಂಶುಪಾಲರ ಸಹಾಯವನ್ನು ಪಡೆದು ಜಿಲ್ಲಾಧಿಕಾರಿ, ರಾಜ್ಯ ಶಿಕ್ಷಣ ಸಚಿವರನ್ನು ಸಂಪರ್ಕಿಸಿದರು ಜತೆಗೆ ಗುಜರಾತ್ ಹೈಕೋರ್ಟ್‌ನ ಬಾಗಿಲು ತಟ್ಟಿದರು.

ಇದನ್ನೂ ಓದಿ: Virat Kohli: ಮೊದಲ ಬಾರಿಗೆ ಮಗ ಅಕಾಯ್ ಜತೆ ಕಾಣಿಸಿಕೊಂಡ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Exit mobile version