Site icon Vistara News

Viral Video: ಸಾಧುಗಳಂತೆ ನಟಿಸಿ ಜನರನ್ನು ದೋಚುತ್ತಿದ್ದ ಖದೀಮರು; ಸಾರ್ವಜನಿಕರಿಂದ ಗೂಸಾ! ವಿಡಿಯೋ ಇದೆ

Viral Video

ಲಖನೌ: ಉತ್ತರ ಪ್ರದೇಶ(Uttar Pradesh)ದ ಲಕ್ನೋದಲ್ಲಿ ಸಾಧುಗಳಂತೆ ನಟಿಸಿ ಜನರ ಬೆಲೆಬಾಳುವ ವಸ್ತುಗಳು ಮತ್ತು ಹಣವನ್ನು ದೋಚುತ್ತಿದ್ದ ನಾಲ್ವರು ಯುವಕರನ್ನು ಗ್ರಾಮಸ್ಥರು ಅಮಾನುಷವಾಗಿ ಥಳಿಸಿದ್ದಾರೆ. ನಾಲ್ವರನ್ನು ದೈಹಿಕವಾಗಿ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದ್ದು, ಈ ಘಟನೆಯ ವಿಡಿಯೋದಲ್ಲಿ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.

ವರದಿಗಳ ಪ್ರಕಾರ, ಶುಕ್ರವಾರ ಬೆಳಗ್ಗೆ ಸಾಧುಗಳ ವೇಷ ಧರಿಸಿದ ಪುರುಷರು ಮಹುರಕಲಾ ಗ್ರಾಮದ ಅಂಗಡಿಯೊಂದಕ್ಕೆ ಭೇಟಿ ನೀಡಿದಾಗ ಗಲಾಟೆ ಶುರುವಾಗಿತ್ತು. ಅಂಗಡಿಯವನಿಗೆ ತಿಲಕವನ್ನು ಹಚ್ಚಿ, ಪ್ರಸಾದವನ್ನು ಕೊಡುವ ಮೊದಲು 1,100 ರೂಪಾಯಿಗಳನ್ನು ಕೊಡುವಂತೆ ಮನವೊಲಿಸಿದರು. ಒಮ್ಮೆ ಅಂಗಡಿಯವನು ಪ್ರಜ್ಞಾಹೀನನಾಗಿ ಬಿದ್ದಾಗ, ಖದೀಮರು ಪರಾರಿಯಾಗುವ ಮೊದಲು ಅಂಗಡಿಯಲ್ಲಿದ್ದ ಮೂರು ಗೋಣಿ ಸಾಸಿವೆ ಮತ್ತು ಹಣವನ್ನು ಕದ್ದೊಯ್ದರು.

ಮರುದಿನ ಬೆಳಿಗ್ಗೆ, ಪುರುಷರು ಗಂಗಾಖೇಡಕ್ಕೆ ಬಂದರು, ಅಲ್ಲಿ ಸ್ಥಳೀಯರು ಅವರನ್ನು ಗುರುತಿಸಿದರು. ಅಂಗಡಿಯವರು ಅವರನ್ನು ಗುರುತಿಸಿದ್ದು, ಗ್ರಾಮಸ್ಥರಿಂದ ಸಾರ್ವಜನಿಕವಾಗಿ ಥಳಿಸಿದ್ದಾರೆ. ಅಂಗಡಿಯವರು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ. ಆದರೆ ಅದನ್ನು ಕೇಳದ ಸ್ಥಳೀಯರು ಅವರನ್ನು ಚೆನ್ನಾಗಿ ಧಳಿಸಿದ್ದಾರೆ.

ನಾಲ್ವರ ಬಂಧನ

ಪೊಲೀಸರು ನಾಲ್ವರನ್ನು ಬಂಧಿಸಿ ಕಳವು ಮಾಡಿದ ವಸ್ತುಗಳನ್ನೂ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಮೀರತ್‌ನ ಸಂಸಾಪುರ ಗ್ರಾಮದ ನಿವಾಸಿಗಳಾದ ಆಕಾಶ್, ಅಕ್ಷಯ್, ರಾಕೇಶ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ. ರುದ್ರಾಕ್ಷಿ ಅಥವಾ ಪ್ರಸಾದ ನೀಡಿ ಜನರನ್ನು ವಂಚಿಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: Serial Killer: 9 ಮಹಿಳೆಯರ ಕೊಂದ ಸರಣಿ ಹಂತಕ ಸೆರೆ; ಆತ ಹೇಗೆ ಕೊಲೆ ಮಾಡುತ್ತಿದ್ದ? ವಿಡಿಯೊ ಇಲ್ಲಿದೆ

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಮಕ್ಕಳ ಕಳ್ಳರೆಂದು ಭಾವಿಸಿ ಜನಸಮೂಹವೊಂದು ಹಿಂದೂ ಸಾಧುಗಳನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿತ್ತು. ಬಳಿಕ ಈ ಘಟನೆಯಿಂದಾಗಿ ರಾಜಕೀಯ ಗದ್ದಲ ಭುಗಿಲೆದ್ದಿತ್ತು. ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುಂಪೊಂದು ವಿವಸ್ತ್ರಗೊಳಿಸಿ ಥಳಿಸಿತ್ತು.

Exit mobile version