ಯಾವುದೇ ಕೆಲಸವನ್ನು ಮಾಡುವಾಗ ನಿಷ್ಠೆಯಿಂದ ಮಾಡಬೇಕು. ಆಗ ಅದರಿಂದ ನಮಗೆ ಉತ್ತಮ ಫಲ ಸಿಗುತ್ತದೆ. ಆದರೆ ಕೆಲವರು ಮೈಗಳ್ಳತನದಿಂದ ಸುಳ್ಳು ಹೇಳಿಕೊಂಡು, ಅಥವಾ ಕೆಲಸದ ಸಮಯದಲ್ಲಿ ಬೇರೆ ಕೆಲಸದಲ್ಲಿ ನಿರತರಾಗಿದ್ದುಕೊಂಡು ತಮ್ಮ ಕೆಲಸಕ್ಕೆ ದ್ರೋಹ ಬಗೆಯುತ್ತಿರುತ್ತಾರೆ. ಇದಕ್ಕೆ ಅವರು ತಕ್ಕ ಪ್ರತಿಫಲ ಅನುಭವಿಸುತ್ತಾರೆ ಎಂಬುದಕ್ಕೆ ಇದೊಂದು ವಿಡಿಯೊ ಸಾಕ್ಷಿಯಾಗಿದೆ. ಕೆಲಸದ ಸಮಯದಲ್ಲಿ ಕೋತಿಗಳ ಜೊತೆಗೆ ಆಟವಾಡಿದ ನರ್ಸ್‍ಗಳನ್ನು ಕೆಲಸದಿಂದ ಅಮಾನತು ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸಖತ್ ವೈರಲ್(Viral Video) ಆಗಿದೆ.
Six nurses suspended in UP's Bahraich for playing with monkey while on duty. pic.twitter.com/2Q1irJdBgM
— Raajeev Chopra (@Raajeev_Chopra) July 9, 2024
ಉತ್ತರ ಪ್ರದೇಶದ ಬಹ್ರೈಚ್‍ನ ಮಹರ್ಷಿ ಬಲಾರ್ಕ್ ಆಸ್ಪತ್ರೆಯಲ್ಲಿ ಕೆಲಸದ ಸಮಯದಲ್ಲಿ ರೋಗಿಗಳನ್ನು ನೋಡಿಕೊಳ್ಳುವ ಬದಲು ಆರು ಮಂದಿ ನರ್ಸ್‍ಗಳು ಆಸ್ಪತ್ರೆಯ ಬಳಿ ಬಂದ ಕೋತಿ ಮರಿಯೊಂದಿಗೆ ಆಟವಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಆ ಆರು ಮಂದಿ ನರ್ಸ್‍ಗಳು ಸಿಕ್ಕಿಬಿದ್ದಿದ್ದು, ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಅಂಜಲಿ, ಕಿರಣ್ ಸಿಂಗ್, ಆಂಚಲ್ ಶುಕ್ಲಾ, ಪ್ರಿಯಾ ರಿಚರ್ಡ್, ಪೂನಂ ಪಾಂಡೆ ಮತ್ತು ಸಂಧ್ಯಾ ಸಿಂಗ್ ಎಂದು ಗುರುತಿಸಲಾಗಿದ್ದು, ಮಹರ್ಷಿ ಬಾಲಾರ್ಕ್ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧ್ಯಕ್ಷ ಡಾ.ಎಂ.ಎಂ.ತ್ರಿಪಾಠಿ ಅವರು ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗಕ್ಕೆ ನಿಯೋಜಿಸಲಾದ ಈ ಆರು ಮಂದಿ ನರ್ಸ್‍ಗಳನ್ನು ಜುಲೈ 5 ರಂದು ಅಮಾನತುಗೊಳಿಸಲಾಗಿದೆ ಎಂದು ದೃಢಪಡಿಸಿದರು.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ 5 ವಿಡಿಯೊಗಳು ಇಲ್ಲಿವೆ; ಮಿಸ್ ಮಾಡದೇ ನೋಡಿ!
“ಈ ನರ್ಸ್‍ಗಳು ಕರ್ತವ್ಯದ ಸಮಯದಲ್ಲಿ ಕೋತಿಯೊಂದಿಗೆ ರೀಲ್ಸ್‌ಗಳನ್ನು ಮಾಡಿ ತಮ್ಮ ಕೆಲಸದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ವೈದ್ಯಕೀಯ ಕಾಲೇಜಿನ ಚಿತ್ರಣಕ್ಕೆ ಕಳಂಕ ತರುತ್ತಿದೆ. ಹಾಗಾಗಿ ಘಟನೆಯ ಬಗ್ಗೆ ಐವರು ಸದಸ್ಯರ ಸಮಿತಿ ತನಿಖೆ ನಡೆಸುತ್ತಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೂ ನರ್ಸ್‍ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಮಹಾರಾಜ ಸುಹೇಲ್ದೇವ್ ಆಟೋನೋಮಸ್ ಸ್ಟೇಟ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಸಂಜಯ್ ಖತ್ರಿ ಹೇಳಿದ್ದಾರೆ.