Site icon Vistara News

Viral Video: ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿ; ಮಹಿಳಾ ಪೇದೆಯಿಂದ ರಕ್ಷಣೆ-ರೋಚಕ ವಿಡಿಯೋ ವೈರಲ್‌

ಉತ್ತರಾಖಂಡ: ಕೆಲವೊಮ್ಮೆ ಅದೃಷ್ಟ ನೆಟ್ಟಗಿದ್ದರೆ ಸಾವಿಗೂ ಸವಾಲೆಸೆದು ಬರಬಹುದು ಎಂಬ ಮಾತಿದೆ. ಇನ್ನು ಕೆಲವೊಮ್ಮೆ ಸಾವಿನ ಬಾಯಿಗೆ ಇನ್ನೇನು ತುತ್ತಾಗುತ್ತಿದ್ದೇವೆ ಅನ್ನೋವಾಗಲೇ ಯಾರಾದರೂ ಆಪದ್ಬಾಂಧವರಂತೆ ಬಂದು ಕಾಪಾಡಿ ಬಿಡುತ್ತಾರೆ. ಅಂತಹದ್ದೇ ಒಂದು ಘಟನೆ(Viral Video) ಉತ್ತರಾಖಂಡ(Uttarakhanda)ದಲ್ಲಿ ನಡೆದಿದೆ. ಚಲಿಸುತಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದು, ತಕ್ಷಣ ಅಲ್ಲೇ ಇದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ ಆತನನ್ನು ರಕ್ಷಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ದಲ್ಲಿ ವೈರಲ್‌ ಆಗಿದ್ದು, ಸಿಬ್ಬಂದಿಯ ಶಕ್ತಿ ಸಾಮರ್ಥ್ಯ ಹಾಗೂ ಕರ್ತವ್ಯ ಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?

ಉತ್ತರಾಖಂಡದ ಲಸ್ಕರ್‌ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಕೋಲ್ಕತ್ತಾ-ಜಮ್ಮು ಟವಿ ಎಕ್ಸ್‌ಪ್ರೆಸ್‌ ರೈಲಿಗೆ ಹತ್ತಲು ಹೋಗಿದ್ದ ವ್ಯಕ್ತಿ ಫ್ಲ್ಯಾಟ್‌ಫಾರ್ಮ್‌ ಮತ್ತು ರೈಲಿನ ನಡುವಿನ ಸಂದಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಜಿಆರ್‌ಪಿ ಕಾನ್‌ಸ್ಟೇಬಲ್‌ ಉಮಾ, ಆಪದ್ಬಾಂಧವಳಂತೆ ಬಂದು ಆತನನ್ನು ರಕ್ಷಿಸಿದ್ದಾರೆ. ಇನ್ನು ಈ ಘಟನೆ ಏ.24ರಂದು ನಡೆದಿದ್ದು, ಆಹಾರ ಮತ್ತು ಜ್ಯೂಸ್‌ ತೆಗೆದು ಕೊಳ್ಳಲೆಂದು ಆ ವ್ಯಕ್ತಿ ರೈಲಿನಿಂದ ಇಳಿದಿದ್ದ. ತಕ್ಷಣ ಹೊರಡುತ್ತಿದ್ದನ್ನು ಗಮನಿಸಿದ ಆ ಓಡಿ ಹೋಗಿ ಹತ್ತಿದ್ದಾನೆ ಎನ್ನಲಾಗಿದೆ. ಕೈನಲ್ಲಿ ಆಹಾರ ಪೊಟ್ಟಣಗಳು ಇದ್ದ ಕಾರಣ ಆತನಿಗೆ ಸುಲಭವಾಗಿ ಹತ್ತಲು ಸಾಧ್ಯವಾಗಿಲ್ಲ. ಹೀಗಾಗಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ.

5 ಗಂಟೆ ರೈಲು ವಿಳಂಬ

ಇನ್ನು ಘಟನೆ ಬಳಿಕ ಕೋಲ್ಕತ್ತಾ-ಜಮ್ಮು ಟವಿ ಎಕ್ಸ್‌ಪ್ರೆಸ್‌ ರೈಲು ಐದು ಗಂಟೆ ತಡವಾಗಿ ಲಕ್ಷರ್‌ ರೈಲು ನಿಲ್ದಾಣಕ್ಕೆ ತಲುಪಿದೆ. ಆ ವ್ಯಕ್ತಿ ಕೆಳಗೆ ಬೀಳುತ್ತಿದ್ದನ್ನು ಗಮನಿಸಿದ ಸಹ ಪ್ರಯಾಣಿಕರು ತಕ್ಷಣ ರೈಲಿನ ಚೈನ್‌ ಎಳೆದು ರೈಲನ್ನು ನಿಲ್ಲಿಸಿದ್ದರು. ಜನರಲ್ಲಾ ರೈಲಿನಿಂದ ಕೆಳಗಿಳಿದು ಆ ವ್ಯಕ್ತಿಯ ರಕ್ಷಣೆಗೆ ಮುಂದಾಗಿದ್ದರು. ಇನ್ನು ಆತನಿಗೆ ಯಾವುದೇ ಗಂಭೀರವಾದ ಗಾಯಗಳಾಗಿಲ್ಲ, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಲ್ಲಿ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ.

ಪುಣೆಯಲ್ಲೂ ನಡೆದಿತ್ತು ಇಂತಹದ್ದೇ ಘಟನೆ

ಅದು ಪುಣೆಯ ಸಿವಿಲ್ ಕೋರ್ಟ್ ಎಲಿವೇಟೆಡ್ ನಿಲ್ದಾಣದ ಪ್ಲಾಟ್‌ಫಾರ್ಮ್‌ ಸಂಖ್ಯೆ 2. ಗಂಟೆ ಅಪರಾಹ್ನ 2.22ರ ಸುಮಾರು. ರೈಲ್ವೆ ನಿಲ್ದಾಣದಲ್ಲಿ ಓಡಾಡುತ್ತಿದ್ದ ಸುಮಾರು 2ರಿಂದ 3 ವರ್ಷದ ಬಾಲಕ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಹಳಿಗಳ ಮೇಲೆ ಬಿದ್ದು ಬಿಟ್ಟ. ತಾಯಿ ತನ್ನ ಮಗುವನ್ನು ರಕ್ಷಿಸಲು ಹಳಿಗಳ ಮೇಲೆ ಹಾರಿದರು. ಇನ್ನೇನು ರೈಲು ಬರುವ ಹೊತ್ತು. ಎಲ್ಲರೂ ದಂಗಾಗಿ, ಉಸಿರು ಬಿಗಿ ಹಿಡಿದು ನೋಡುತ್ತಿದ್ದರು. ಯಾರಿಗೆ ಏನು ಮಾಡಬೇಕೆಂದು ತೋಚದ ಕ್ಷಣವದು.

ಇದನ್ನೂ ಓದಿ:Sira News: ಬಿಸಿಲ ಬೇಗೆಗೆ ಮತ್ಸ್ಯಗಳ ಮಾರಣಹೋಮ; ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳ ಸಾವು

ಆಗಲೇ ಆಪತ್ಬಾಂಧವನ ರೂಪದಲ್ಲಿ ನೆರವಿಗೆ ಧಾವಿಸಿದವರು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ವಿಕಾಸ್ ಬಂಗಾರ್. ತಮ್ಮ ಸಮಯೋಚಿತ ಕರ್ತವ್ಯ ಪ್ರಜ್ಞೆಯಿಂದ ನಡೆಯಬಹುದಾದ ಅತಿ ದೊಡ್ಡ ಅವಘಢವನ್ನು ತಪ್ಪಿಸಿ ಅಕ್ಷರಶಃ ಹೀರೋ ಎನಿಸಿಕೊಂಡರು. ಕೂಡಲೇ ಅವರು ತುರ್ತು ರೈಲು ನಿಲುಗಡೆ (Emergency stop plunger-ESP) ಬಟನ್‌ ಒತ್ತಿದರು. ಧಾವಿಸಿ ಬರುತ್ತಿದ್ದ ರೈಲು ನಿಲ್ದಾಣದಿಂದ ಕೇವಲ 30 ಮೀಟರ್ ದೂರದಲ್ಲಿ ಎರಡೂ ಬದಿಗಳಲ್ಲಿ ನಿಂತು ಬಿಟ್ಟಿತು. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟು ಅಮ್ಮ-ಮಗುವಿನ ರಕ್ಷಣೆಗೆ ಧಾವಿಸಿದರು. ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Exit mobile version